ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆಗಿ ಬಹುತೇಕ ನೇಮಕವಾಗಿದ್ದು, ಅಧಿಕೃತ ಘೋಷಣೆ ಯೊಂದೇ ಬಾಕಿ ಇದೆ ಎನ್ನಲಾಗಿದೆ. ಟಿ೨೦ ವಿಶ್ವಕಪ್ ಮುಕ್ತಾಯದೊಂದಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಮುಗಿಯಲಿದ್ದು, ಇದಾದ ಬಳಿಕ ಗಂಭೀರ್ ಅಧಿಕಾರ ಸ್ವೀಕರಿಸುವುದು ಖಚಿತ ಎಂದು ಹೇಳಲಾಗುತ್ತಿದೆ. ಭಾರತ ತಂಡದ ಮಾಜಿ ಕ್ರಿಕೆಟಿಗರಾಗಿರುವ ಗಂಭೀರ್, ೨೦೦೭ರಲ್ಲಿ ಟಿ೨೦ ಹಾಗೂ ೨೦೧೧ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು.
ಟೀಂ ಇಂಡಿಯಾ ಪರ ೧೪೭ ಏಕದಿನ, ೫೮ ಟೆ ಹಾಗೂ ೩೭ ಟಿ೨೦ ಪಂದ್ಯಗಳಲ್ಲಿ ಆಡಿರುವ ಅವರು, ಕ್ರಮವಾಗಿ ೫,೨೩೮ ರನ್, ೪,೧೫೪ ರನ್ ಹಾಗೂ ೯೩೨ ರನ್ ಕಲೆ ಹಾಕಿದ್ದಾರೆ. ೧೫೪ ಐಪಿಎಲ್ ಪಂದ್ಯಗಳಿಂದ ೪,೨೧೮ ರನ್ ಗಳಿಸಿದ್ದಾರೆ. ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡವು ಗಂಭಿರ್ ನಾಯಕತ್ವದಲ್ಲಿ ೨೦೧೨ ಹಾಗೂ ೨೦೧೪ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಕಳೆದ ಎರಡು ಆವೃತ್ತಿಗಳಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಅವರು, ಮತ್ತೆ ಕೆಕೆಆರ್ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದರು. ಗಂಭೀರ್ ಅವರು ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನವೇ, ತಮ್ಮ ತಂಡದ ನಾಯಕ ಮೇ ೨೬ರಂದು ನಡೆಯುವ ಫೈನಲ್ ಪಂದ್ಯವ ವೇಳೆ ಟಾಸ್ಗೆ ಸಿದ್ಧರಾಗಿರಬೇಕು ಎಂದು ಹೇಳಿದ್ದರು.
ಅದರಂತೆ ಕೆಕೆಆರ್ ಫೈನಲ್ ಪ್ರವೇಶಿಸಿ ಕಪ್ ಕೂಡ ಗೆದ್ದಿತು. ಗಂಭೀರ್ ತಂಡವನ್ನು ಸಿದ್ಧಪಡಿಸಿದ ರೀತಿ ಮತ್ತು ಕಪ್ ಗೆಲ್ಲಲೇಬೇಕೆಂದು ಪಣ ತೊಟ್ಟಿದೆಲ್ಲ ಫಲ ನೀಡಿದೆ. ಅವರ ಈ ಸಾಧನೆ ಮತ್ತು ಹಠವನ್ನು ಸೂಕ್ಷ ವಾಗಿ ಗಮನಿಸಿದ ಬಿಸಿಸಿಐ ಭಾರತ ತಂಡ ಕೋಚ್ ಹುz ನೀಡುವ ಯೋಜನೆಯಲ್ಲಿದೆ. ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ ೨೦೨೭ರ ಡಿಸೆಂಬರ್ ೩೧ಕ್ಕೆ ಮುಕ್ತಾಯಗೊಳ್ಳುತ್ತದೆ. ೨೦೨೭ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್ಗೆ ಸಿಗಲಿದೆ. ಹಾಗಾಗಿ ಗಂಭೀರ್ ಮುಂದೆ ಸಾಕಷ್ಟು ಸವಾಲುಗಳು ಇವೆ. ಆ ಸವಾಲುಗಳನ್ನೆಲ್ಲ ಅವರು ಜಯಿಸಲಿ.