ಕಿತ್ತಳೆ ವ್ಯಾಪಾರಿಯಾಗಿ ಅಕ್ಷರ ದಾಸೋಹದ ಮೂಲಕ ಅತ್ಯುನ್ನತ ಸೇವೆ ಮಾಡಿದ ಹಾಜಬ್ಬಗೆ ಪದ್ಮಶ್ರೀ ಘೋಷಣೆ ಮಾಡಿದಾಗಲೇ ಆ
ಪ್ರಶಸ್ತಿಗೊಂದು ತೂಕ ಬಂದಿತ್ತು. ಇದೀಗ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಪ್ರಶಸ್ತಿ ಸ್ವೀಕಾರ ಮಾಡುವಾಗಲೂ ಅವರು ಸರಳತೆ ಮೆರೆದಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಅವರು, ನಾನೊಬ್ಬ ದೇಶದ ಸಾಮಾನ್ಯ ಪ್ರಜೆ. ನನ್ನ ಕಾರ್ಯ ಮೆಚ್ಚಿ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ವಿನಮ್ರತೆಯಿಂದ ನುಡಿದಿದ್ದಾರೆ. ಕಿತ್ತಳೆ ವ್ಯಾಪಾರ ಮಾಡುತ್ತಿದ್ದ ಅವರು ಶಿಕ್ಷಣದಿಂದ ವಂಚಿತರಾದ ಬಗ್ಗೆ ಬೇಸರವಿತ್ತು. ಈ ಬೇಸರ ಮತ್ತು ಶಿಕ್ಷಣ ವಂಚನೆಯಾ ದದ್ದರಿಂದ ಆಗುವ ಮುಜುಗರ ಅವರನ್ನು ಶಾಲೆಯನ್ನು ತೆರೆಯುವಂತೆ ಮಾಡಿತ್ತು. ಅವರು ನಂತರ ಶಾಲೆಯನ್ನು ಆರಂಭಿಸಿ, ಅಲ್ಲಿ ಸುಮಾರು 20 ಮಕ್ಕಳು ವಿದ್ಯಾಭ್ಯಾಸ ಶುರು ಮಾಡಿದ್ದರು.
ನಂತರ ಆ ಶಾಲೆಯಲ್ಲಿ 170 ಜನ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಣ್ಣು ಮಾರಿ ಬಂದ ಹಣದಿಂದ ಅವರು ಶಾಲೆಯ ಅಭಿವೃದ್ಧಿಗೆ ಬಳಕೆ ಮಾಡುವ ಮೂಲಕ ಗಮನ ಸೆಳೆದಿ ದ್ದರು. ಪ್ರಶಸ್ತಿ ಸ್ವೀಕಾರ ಮಾಡುವಾಗಲೂ ಸರಳತೆ ಮೆರೆದ ಅವರು, ಬರಿಗಾಲಿನಲ್ಲಿ ಪ್ರಶಸ್ತಿ ಸ್ವೀಕಾರ ಮಾಡಲು ತೆರಳಿದ್ದರು. ‘ನಾನು ರಾಷ್ಟ್ರಪತಿ ಭವನದಲ್ಲಿ ಉಳಿದು ಕೊಳ್ಳಲು ಯೋಗ್ಯತೆ ಇಲ್ಲದ ಮನುಷ್ಯ. ಸರಕಾರ ನನ್ನಂತಹ ವ್ಯಕ್ತಿಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿದೆ.
ಇದರಲ್ಲಿ ಮಾಧ್ಯಮದ ಪಾತ್ರವೂ ಬಹಳ ದೊಡ್ಡದಿದೆ. ಎಲ್ಲರೂ ಸೇರಿ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ ಎಂದಿದ್ದಾರೆ. ಬರಿಗಾಲ ಪ್ರಶಸ್ತಿ ಸ್ವೀಕರಿಸಲು ಬಂದ ಹಾಜಬ್ಬ ಅವರ ಸರಳತೆ ಕಂಡು ಇಲ್ಲಿದ್ದವರೆ ಅರೆಕ್ಷಣ ಅಚ್ಚರಿಗೊಳದಾದರು. ನಡು ಬಗ್ಗಿಸಿ ಕೈಮುಗಿದು ಕೊಂಡೇ ಬಂದ ಅವರು ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದರು. ಹಾಜಬ್ಬನವರ ಸರಳತೆ ಕಂಡು ರಾಷ್ಟ್ರಪತಿಗಳೂ ಕೂಡ ಅಚ್ಚರಿಗೊ ಳಗಾದರು. ಇಂತಹವರಿಗೆ ದೊರೆಯುವ ಪ್ರಶಸ್ತಿಯ ಮೌಲ್ಯವೂ ಹೆಚ್ಚಾಗುತ್ತದೆ.