ಹಿಂಡಲಗಾ ಜೈಲಿನಲ್ಲಿದ್ದ ಕೈದಿಯೊಬ್ಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಆ ನಿಟ್ಟಿನಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಪೊಲೀಸರಿಂದ ತೀವ್ರ ತನಿಖೆ ನಡೆಯುತ್ತಿದೆ.
ಈ ಪ್ರಕರಣದಲ್ಲಿ ಜಯೇಶ್ ಪೂಜಾರಿ ಒಬ್ಬನಿಂದಲೇ ಕೃತ್ಯವೆಸಗಲು ಸಾಧ್ಯವಿಲ್ಲ. ಈತನ ಹಿಂದೆ ಹಿಂದೆ ಯಾರಿದ್ದಾರೆ, ಹಿನ್ನೆಲೆ ಏನು ಹಾಗೂ ಯಾರು ಮಾರ್ಗದರ್ಶನ ನೀಡಿದ್ದಾರೆ ಎಂಬುದು ಮುಖ್ಯವಾಗಿದ್ದು, ಅದನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡ ಬೇಕಿದೆ. ಜೈಲಿನೊಳಗೆ ಹಿರಿಯ ಅಧಿಕಾರಿಗಳನ್ನು ಬಿಟ್ಟರೆ ಅನ್ಯರಿಗೆ ಮೊಬೈಲ್ ಅಥವಾ ಎಲೆಕ್ಟ್ರಾನಿಕ್ ಪರಿಕರ ಒಯ್ಯಲು ಅವಕಾಶವಿಲ್ಲ.
ಹೀಗಾಗಿ, ಕೈದಿ ಜಯೇಶ್ ಪೂಜಾರಿ ಕೈಗೆ ಮೊಬೈಲ್ ಫೋನ್ ಕೊಟ್ಟಿದ್ದು ಯಾರು? ಜೈಲಿ ನೊಳಗೆ ಮೊಬೈಲ್ ಫೋನ್ ಹೋಗಿದ್ದು ಹೇಗೆ? ಕರೆಗೆ ಬಳಸಿದ್ದ ಸಿಮ್ ಯಾರ ಹೆಸರಲ್ಲಿದೆ? ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ.
ಜೈಲಿನೊಳಗೆ ಕೈದಿಗಳು ಮೊಬೈಲ್ ಹೊಂದಿರುವುದು ಇದೇ ಮೊದಲಲ್ಲ. ೨೦೧೯ರ -.೧೯ರಂದು ಇಬ್ಬರು ಡಿಸಿಪಿಗಳು, ಎಸಿಪಿಗಳು, ತಲಾ ಎಂಟು ಮಂದಿ ಇನ್ಸ್ಪೆಕ್ಟರ್ ಹಾಗೂ ಪಿಎಸ್ ಐಗಳು ಮತ್ತು ೫೫ ಸಿಬ್ಬಂದಿಯ ತಂಡ ವಿಶೇಷ ಪರಿಶೀಲನೆ ನಡೆಸಿತ್ತು. ಆಗ
ವೇಳೆ ಮೊಬೈಲ್ ಫೋನ್ ದೊರೆತ ಬಗ್ಗೆ ಪರಿಶೀಲನಾ ತಂಡ ಖಚಿತಪಡಿಸಿತ್ತು. ೨೦೨೧ರಲ್ಲಿಯೂ ಬೇರೊಂದು ಜೈಲಿನಲ್ಲಿ ಆರೋಪಿಯೊಬ್ಬ ಜೈಲಿನೊಳಗಿಂದಲೇ ಸೆಲಿ ಕ್ಲಿಕ್ಕಿಸಿ ಫೇಸ್ಬುಕ್ಗೆ ಹಾಕಿಕೊಂಡ ಬಗ್ಗೆ ಸುದ್ದಿಯಾಗಿತ್ತು.
ಹಾಗಾದರೆ ಆ ಕೈದಿಗಳಿಗೆ ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಮೊಬೈಲ್ ಪೂರೈಸಲು ಸಾಧ್ಯವಿಲ್ಲ. ಹೀಗಾಗಿ ಜೈಲಿನ ಸಿಬ್ಬಂದಿಯನ್ನೂ ತನಿಖೆಗೊಳಪಡಿಸಬೇಕಿದೆ. ಅಲ್ಲದೆ, ಜೈಲಿನಲ್ಲಿ ಮದ್ಯ, ಗಾಂಜಾ ಪೂರೈಕೆಯಾಗುತ್ತಿದೆ ಎಂಬ ವರದಿಗಳೂ ಆಗಾಗ ಮಾಧ್ಯಮ ಗಳಲ್ಲಿ ಪ್ರಕಟಗೊಳ್ಳುತ್ತವೆ. ಕೈದಿಗಳನ್ನು ಭೇಟಿಯಾಗಲು ಬರುವವರು ತಪಾಸಣೆಗೊಳಪಡಬೇಕು. ಆದರೆ ಬಹುತೇಕ ಜೈಲುಗಳಲ್ಲಿ ತಪಾಸಣೆ ಮಾಡುವ ಸಿಬ್ಬಂದಿಗೆ ಲಂಚ ನೀಡಿ ತಪಾಸಣೆಗೊಳಪಡದೇ ಇಂತಹ ಎಲೆಕ್ಟ್ರಾನಿಕ್ ಪರಿಕರಗಳನ್ನು ಪೂರೈಸುತ್ತಿದ್ದಾರೆ ಎನ್ನಲಾಗಿದೆ. ಆದ್ದರಿಂದ ಜೈಲಿನಲ್ಲಿನಲ್ಲಿರುವ ಕೈದಿಗಳನ್ನು ಭೇಟಿಯಾಗಲು ಬಂದವರನ್ನು ಕಡ್ಡಾಯವಾಗಿ ತಪಾಸಣೆ ಗೊಳಪಡಿಸುವ ವ್ಯವಸ್ಥೆ ಜಾರಿಗೊಳಿಸಬೇಕಿದೆ.
Read E-Paper click here