Saturday, 14th December 2024

ಹುಬ್ಬಳ್ಳಿ ದಾಂಧಲೆ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಮಸೀದಿಯ ಚಿತ್ರದ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರವಂದನ್ನು ಎಡಿಟ್ ಮಾಡಿ ಯುವಕನೊಬ್ಬ ಸ್ಟೇಟಸ್ ಹಾಕಿಕೊಂಡಿದ್ದಕ್ಕೆ ಹಳೇ
ಹುಬ್ಬಳ್ಳಿ ಪೊಲೀಸ್ ಠಾಣೆ ಸಮೀಪದಲ್ಲಿಯೇ ಶನಿವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದಾರೆ. ಘಟನೆ ವೇಳೆ ಸಮೀಪದ ಆಸ್ಪತ್ರೆ ಮೇಲೂ ದಾಳಿ ಯಾಗಿದೆ.

ಪೊಲೀಸ್ ವಾಹನಗಳೂ ಜಖಂಗೊಂಡಿದ್ದು, ಇನ್ಸ್ ಪೆಕ್ಟರ್ ಸೇರಿದಂತೆ 12 ಪೊಲೀ ಸರು ಗಾಯಗೊಂಡಿದ್ದಾರೆ. ನಿಜಕ್ಕೂ ಇದು ಸರಕಾ ರದ ವ್ಯವಸ್ಥೆಗೇ ಸವಾಲೊಡ್ಡುವ ಕೃತ್ಯ. ಈ ಹಿಂದೆ ಬೆಂಗಳೂರಿನಲ್ಲಿ ಕಿಡಿಗೇಡಿ ಯುವಕನೊಬ್ಬ ಒಂದು ಧರ್ಮಗುರುವಿನ ಬಗ್ಗೆ ಪ್ರಚೋದ  ನಾತ್ಮಕಪೋ ಹಾಕಿದ್ದ ಪರಿಣಾಮ, ಶಾಸಕರೊಬ್ಬರ ಮನೆ, ಡಿಜೆ ಹಳ್ಳಿ ಪೊಲೀಸ್ ಠಾಣೆಯೇ ಬೆಂಕಿಗೆ ಆಹುತಿಯಾಗಿತ್ತು. ಅದೇ ಮಾದರಿಯಲ್ಲಿಯೇ ಹುಬ್ಬಳಿಯ ಘಟನೆಯೂ ನಡೆದಿದೆ. ಈ ಹಿಂದೆ ಇಂತಹ ಘಟನೆಗಳನ್ನು ಕೇರಳ, ಕಾಶ್ಮೀರ, ಪಶ್ಚಿಮ ಬಂಗಾಳ, ಬಿಹಾರದಲ್ಲಿ ಕೇಳುತ್ತಿದ್ದೇವು. ಇದೀಗ ರಾಜ್ಯದಲ್ಲೇ ಇಂತಹ ಘಟನೆಗಳು ಪದೇ ಪದೆ ನಡೆಯುತ್ತಿರುವುದನ್ನು ನೋಡಿದರೆ ಶಾಂತಿಪ್ರಿಯ ಕರ್ನಾಟಕವೂ ಆ ರಾಜ್ಯ ಗಳ ದಾರಿ ಹಿಡಿಯುತ್ತಿರುವಂತಿದೆ.

ಧರ್ಮ ಧರ್ಮಗಳ ಮಧ್ಯೆ ಸಾಮರಸ್ಯ ಮೂಡಿಸಬೇಕಾದ ಸಾಮಾಜಿಕ ಜಾಲತಾಣಗಳು ಇಂತಹ ಕುಕೃತ್ಯಗಳಿಗೆ ಬಳಕೆಯಾಗುತ್ತಿರುವುದು ಅಪಾಯಕಾರಿ. ಅನೇಕರಿಗೆ ಸೋಶಿಯಲ್ ಮೀಡಿಯಾ ಎಂಬುದು ಹಿಂಸೆ ಹರಡುವ ಟೂಲ್ ಕಿಟ್ ಆಗಿಬಿಟ್ಟಿದೆ. ಸೋಷಿಯಲ್ ಮಿಡಿಯಾ ಮೂಲಕ ಸಮಾಜದ ಶಾಂತಿ ಹಾಳು ಮಾಡುತ್ತಿರುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಿದೆ. ವಿವಿಧ ಸಂಘಟನೆಯ ಮುಖಂಡರು, ರಾಜಕಾರಣಿಗಳು ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನವನ್ನು ಮಾಡುವ ಬದಲು ಸಮಾಜದಲ್ಲಿ ಶಾಂತಿ ಮೂಡಿಸುವ ಪ್ರಯತ್ನ ಮಾಡಬೇಕು. ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ
40ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

ಇದರಲ್ಲಿ ಕೃತ್ಯದಲ್ಲಿ ಭಾಗಿಯಾದವರೆಷ್ಟೋ, ಭಾಗಿಯಾಗದವರೆಷ್ಟೋ ಎಂಬುದರ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಲು ವಿಶೇಷ ಪೊಲೀಸ್ ತಂಡ ರಚಿಸಿ, ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಕರ್ನಾಟಕದ ಶಾಂತಿ, ಸಾಮರಸ್ಯ ಹಾಳು ಮಾಡುವ ದುಷ್ಟ ಪ್ರಯತ್ನಗಳು ಇಲ್ಲಿಗೇ ಕೊನೆಯಾಗುವಂತಾಗಲಿ.