ಇತ್ತೀಚೆಗೆ ಭಾರತದ ಬಗ್ಗೆ ಬಹಳಷ್ಟು ದೇಶಗಳು ಗೌರವ ಭಾವನೆ ಹೊಂದುತ್ತಿವೆ. ಇಂಗ್ಲೆೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ದೀಪಾವಳಿಗೆ ಭಾರತೀಯರಿಗೆ ಶುಭ ಹಾರೈಸಿರುವುದು ಒಂದೆಡೆಯಾದರೆ, ಮತ್ತೊೊಂದೆಡೆ ಅಮೆರಿಕದ ನೂತನ ಅಧ್ಯಕ್ಷ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇದರಿಂದ ಭಾರತದ ಮಹತ್ವ ತಿಳಿಯಬಹುದಾಗಿದೆ.
ಅಮೆರಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬೈಡನ್ ತಮ್ಮ ದೇಶದಲ್ಲಿ ಕರೋನಾ ನಿಯಂತ್ರಿಸಲು ಹಾಗೂ ಹಳಿತಪ್ಪಿದ ಆರ್ಥಿಕ ಪರಿಸ್ಥಿತಿ ಮೇಲೆತ್ತಲು ಹೆಚ್ಚಿನ ಗಮನ ಕೊಡಲಾಗುವುದು. ಕರೋನಾ ನಿಯಂತ್ರಿ ಸಲು ವಿಜ್ಞಾನಿಗಳು ಮತ್ತು ತಜ್ಞರ ಗುಂಪನ್ನು ಪರಿವರ್ತನಾ ಸಲಹೆಗಾರರನ್ನು ನೇಮಿಸಲಾಗುವುದು. ಮೊಟ್ಟ ಮೊದಲಿಗೆ ತಮ್ಮ ಕೆಲಸವನ್ನು ಕೋವಿಡ್ ನಿಯಂತ್ರಣದ ಮೂಲಕ ಆರಂಭಿಸಲಾಗುವುದು. ನಂತರ ಆರ್ಥಿಕತೆಯನ್ನು ಸರಿಪಡಿಸಲು ಸಾಧ್ಯವಿರುವ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದ್ದಾರೆ.
ಗೆಲುವಿನ ನಂತರ ತಮ್ಮ ದೇಶಕ್ಕೆ ಈ ಭರವಸೆಯನ್ನು ನೀಡುವುದರ ಜತೆಯಲ್ಲಿಯೇ ಭಾರತಕ್ಕೂ ಸಹ ಸಿಹಿ ಸುದ್ದಿಯೊಂದನ್ನು ಘೋಷಿಸಿದ್ದಾರೆ. ಭಾರತದ 5 ಲಕ್ಷ ಜನರು ಸೇರಿದಂತೆ ಸುಮಾರು 1.10 ಕೋಟಿ ವಲಸಿಗರಿಗೆ ಪೌರತ್ವ ನೀಡುವ ಬಗ್ಗೆೆ ಮಾರ್ಗದರ್ಶಿ ಸೂತ್ರ ರೂಪಿಸಲು ಮುಂದಾಗಿದ್ದಾರೆ. ಬೈಡನ್ ಅವರ ಪ್ರಚಾರ ಕಾರ್ಯ ತಂಡವು ಬಿಡುಗಡೆ ಮಾಡಿರುವ ನೀತಿ ನಿರೂಪಣಾ ದಾಖಲೆಗಳಂತೆ, ಪ್ರತಿ ವರ್ಷ ಕನಿಷ್ಠ 95 ಸಾವಿರ ವಲಸಿಗರು ಅಮೆರಿಕದಲ್ಲಿ ಪ್ರವೇಶ ಪಡೆಯುವ ಬಗ್ಗೆೆಯೂ ಕಾರ್ಯಕ್ರಮ
ರೂಪಿಸಲಿದ್ದಾರೆ. ಒಬಾಮಾ ಅಧ್ಯಕ್ಷರಾಗಿದ್ದಾಗ ಜಾರಿಗೆ ತಂದಿದ್ದ ಕೆಲವು ಕಾನೂನುಗಳನ್ನು ಟ್ರಂಪ್ ಆಡಳಿತ ರದ್ದುಗೊಳಿಸಿತ್ತು. ಅವುಗಳಲ್ಲಿ ಉತ್ತಮ ಕೆಲವನ್ನು ಮತ್ತೆ ಜಾರಿಗೊಳಿಸಲು ಮುಂದಾಗಿದ್ದಾರೆ. ಈ ಹಿಂದೆ ಟ್ರಂಪ್ ಸಹ ಭಾರತದ ಬಗ್ಗೆ ಅಭಿಮಾನ ಹೊಂದಿದ್ದರು. ಆದರೆ ಚುನಾವಣೆಯ ಕಡೆ ಗಳಿಗೆಯಲ್ಲಿ ಭಾರತದ ಸ್ವಚ್ಛತೆ ಬಗ್ಗೆ ಟೀಕಿಸಿ ಅಸಮಾಧಾನಕ್ಕೆ ಕಾರಣವಾಗಿದ್ದರು.
ಇದೀಗ ಜೊ ಬೈಡನ್ ಗೆದ್ದ ತಕ್ಷಣ ಭಾರತಕ್ಕೆ ಸಿಹಿ ಸುದ್ದಿ ಘೋಷಿಸುವ ಮೂಲಕ ತಮ್ಮ ಗೆಲುವಿನಲ್ಲಿ ಭಾರತೀಯ ಮೂಲದವರ
ಪಾತ್ರವೂ ಮುಖ್ಯವಾಗಿದೆ ಎಂಬ ಅಭಿಪ್ರಾಯವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಭಾರತದ ಬಗ್ಗೆೆ ಅಮೆರಿಕ ಹಾಗೂ ಇಂಗ್ಲೆೆಂಡ್ ದೇಶಗಳು ಉತ್ತಮ ಭಾವನೆ ಹೊಂದಿರುವುದು ಉತ್ತಮ ಸಂಗತಿ.