Sunday, 15th December 2024

ಜಾಗತಿಕ ಹಸಿವು ಸೂಚ್ಯಂಕ; ನೆರೆ ರಾಷ್ಟ್ರಗಳಿಗಿಂತಲೂ ಭಾರತ ಹಿಂದೆ!

ಕಳೆದ ವರ್ಷ ಒಂದು ಘಟನೆ ನಡೆಯಿತು. ಇಟಾಲಿಯನ್ ಫೋಟೊಗ್ರಾಾಫರ್‌ನೊಬ್ಬ ಭಾರತದ ಬಡತನವನ್ನು ಅಣಕಿಸುವ ರೀತಿಯಲ್ಲಿ ಫೋಟೊ ಒಂದನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿಿದ್ದ. ಭಾರತದಲ್ಲಿ ಹಸಿವಿನ ಸಮಸ್ಯೆೆ ಯಾವ ಮಟ್ಟಿಿಗಿದೆ ಎಂಬುದನ್ನು ಬಿಂಬಿಸುವುದಕ್ಕಾಾಗಿ ಹಾಗೆ ಮಾಡಿದ್ದ. ಇದರ ಬಗ್ಗೆೆ ಹಲವಾರು ಚರ್ಚೆಗಳಾದವು.

ವಿಚಾರ ಸಂಕಿರಣಗಳು ನಡೆದವು. ಕೆಲವರು, ಆ ಫೋಟೊಗ್ರಾಾಫರ್ ತೆಗೆದದ್ದು ಸರಿಯಾಗಿದೆ. ಭಾರತವನ್ನು ಹಸಿವುಮುಕ್ತ, ಬಡತನ ಮುಕ್ತ ಮಾಡುತ್ತೇವೆಂದು ಅಧಿಕಾರಕ್ಕೆೆ ಬಂದ ಸರಕಾರಗಳು ಇಷ್ಟು ವರ್ಷಗಳಲ್ಲಿ ಮಾಡಿದ್ದಾಾದರೂ ಏನು? ದೇಶದಲ್ಲಿ ಪ್ರತಿದಿನ ಸುಮಾರು 194 ಮಂದಿ ಹಸಿವಿನಿಂದ ಸಾಯುತ್ತಿಿದ್ದಾಾರೆ. ಹಸಿವಿನ ನೈಜ ಚಿತ್ರಣ ಆ ವಿದೇಶಿ ಫೋಟೊಗ್ರಾಾಫರ್ ತೋರಿಸಿ ಕೊಟ್ಟಿಿದ್ದಾಾನೆ ಎಂದು ಬೆಂಬಲಿಸಿದರೆ, ಇನ್ನು ಹಲವರು, ಇದು ದೇಶದ ಮಾನ-ಮಾರ್ಯಾದೆಯ ಪ್ರಶ್ನೆೆ.

ಹಾಗಾಗಿ ಅವನು ಕ್ಷಮೆಯಾಚಿಸುವಂತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಆ ಫೋಟೊಗ್ರಾಾಫರ್ ಕೊನೆಗೆ ಕ್ಷಮೆಯಾಚಿಸಬೇಕಾಯಿತು. ಹಾಗಂತ ಭಾರತದಲ್ಲಿನ ಹಸಿವು ನಿಂತಿತೆ? ಇಲ್ಲ. ಈ ವರ್ಷದ ‘ಗ್ಲೋೋಬಲ್ ಹಂಗರ್ ಇಂಡೆಕ್‌ಸ್‌’ ಪಟ್ಟಿಿ ಬಿಡುಗಡೆ ಮಾಡಿದೆ. ಒಟ್ಟು 117 ದೇಶಗಳಲ್ಲಿ ಭಾರತ 102ನೇ ಸ್ಥಾಾನ ಪಡೆದುಕೊಂಡಿದೆ. 2015ರಲ್ಲಿ ಭಾರತ 93ನೇ ಸ್ಥಾಾನ ಪಡೆದುಕೊಂಡಿದ್ದರೆ, 2018ರಲ್ಲಿ 103ನೇ ಸ್ಥಾಾನ ಪಡೆದುಕೊಂಡಿತ್ತು.

ವಿವಿಧ ದೇಶಗಳಲ್ಲಿನ ಹಸಿವಿನ ಪ್ರಮಾಣ ತೋರಿಸುವ ಪಟ್ಟಿಿಯಲ್ಲಿ ಭಾರತ ತೀರಾ ಹಿಂದುಳಿದಿರುವುದು ವಿಷಾದದ ಸಂಗತಿ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ನಮ್ಮ ನೆರೆ ರಾಷ್ಟ್ರಗಳಾದ ಶ್ರೀಲಂಕಾ, ಪಾಕಿಸ್ತಾಾನ, ಬಾಂಗ್ಲಾಾದೇಶ, ಅಫ್ಘಾಾನಿಸ್ತಾಾನ ಭಾರತಕ್ಕಿಿಂತ ಎಷ್ಟೋೋ ಉತ್ತಮ ಸ್ಥಿಿತಿಯಲ್ಲಿವೆ ಎಂಬುದು ಅಚ್ಚರಿಯಾದರೂ ಸತ್ಯ. ದಕ್ಷಿಿಣ ಏಷ್ಯಾಾ ಮತ್ತು ಬ್ರಿಿಕ್‌ಸ್‌ ದೇಶಗಳಲ್ಲೇ ಅತ್ಯಂತ ಹೆಚ್ಚು ಜನರು ಹಸಿವಿನಿಂದ ನರಳುತ್ತಿಿರುವುದು ಭಾರತದಲ್ಲೇ ಎಂಬುದು ಬೇಸರದ ಸಂಗತಿ.

ಭಾರತದಲ್ಲಿ ಹಸಿವು ಮತ್ತು ಅಪೌಷ್ಟಿಿಕತೆ ಪ್ರಮಾಣ ಹೆಚ್ಚಿಿದೆ. ಇಲ್ಲಿನ ಅತಿಯಾದ ಜನಸಂಖ್ಯೆೆ, ನಿರುದ್ಯೋೋಗ, ಅನಕ್ಷರತೆ, ಕೃಷಿಯನ್ನೇ ಹೆಚ್ಚು ಅವಲಂಬಿಸಿರುವುದು ಕಾರಣವಾಗಿದೆಯಾದರೂ, ಅದಕ್ಕಿಿಂತ ಹೆಚ್ಚಾಾಗಿ ಕೇಂದ್ರ ಸರಕಾರ ದೇಶದಲ್ಲಿನ ಜನರನ್ನು ಹಸಿವು ಮುಕ್ತರನ್ನಾಾಗಿ ಮಾಡುವಲ್ಲಿ ಸಮರ್ಥವಾಗಿ, ಪರಿಣಾಮಕಾರಿಯಾಗಿ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿದೆಯೆಂದೇ ಹೇಳಬಹುದು. ದೇಶದ ಆರ್ಥಿಕತೆ, ಮಾಹಿತಿ ತಂತ್ರಜ್ಞಾಾನದಲ್ಲಿ ಜಾಗತಿಕವಾಗಿ ಬೆಳೆಯುತ್ತಿಿದೆ, ನಾವು ಚಂದ್ರ ಮಂಗಳ ಗ್ರಹಕ್ಕೆೆ ಉಪಗ್ರಹ ಕಳಿಸಿದ್ದೇವೆ, ಆಫ್ರಿಿಕಾದ ಮತ್ತು ನೆರೆ ರಾಷ್ಟ್ರಗಳಿಗೆ ಮಿಲಿಯನ್ ಡಾಲರ್‌ನಷ್ಟು ಅಲ್ಲಿನ ಮೂಲಭೂತ ಸೌಲಭ್ಯಕ್ಕಾಾಗಿ ಸಹಾಯ ಮಾಡುತ್ತೇವೆ .

ಆದರೆ ದೀಪದ ಕೆಳಗೆ ಕತ್ತಲೆ ಎಂಬಂತೆ ಇಲ್ಲಿನ ಬಡತನ, ಹಸಿವು ಅಪೌಷ್ಟಿಿಕತೆಯ ನಿರ್ಮೂಲನೆಗೆ ಸರಕಾರಗಳು ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಾಗದಿರುವುದು ವಿಪರ್ಯಾಾಸ. ಅಪೌಷ್ಟಿಿಕತೆ, ಹಸಿವಿನ ಪ್ರಮಾಣ ವರ್ಷ ವರ್ಷವೂ ಹೆಚ್ಚಾಾಗುತ್ತಿಿದೆ ಹೊರತು ಕಡಿಮೆಯಾಗುತ್ತಿಿಲ್ಲ ಎಂಬುದು ಸೂಚ್ಯಂಕವನ್ನು ನೋಡಿದರೆ ಗೊತ್ತಾಾಗುತ್ತದೆ. ಹಾಗೆಂದು ಬಡತನ, ಹಸಿವು ನಿವಾರಣೆಗೆ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗಿದೆ. ಆದರೆ ಸೂಕ್ತ ಫಲ ಸಿಕ್ಕಿಿಲ್ಲ. ನಾವು ಎಷ್ಟೇ ಪ್ರಗತಿ ಸಾಧಿಸಿದರೂ, ಎಲ್ಲ ಜನರಿಗೆ ಎರಡು ಹೊತ್ತಿಿನ ಊಟ ಒದಗಿಸದಿದ್ದರೆ ಏನು ಪ್ರಯೋಜನ? ಈ ವರದಿಯ ಬಳಿಕವಾದರೂ ಸರಕಾರ ಎಚ್ಚೆೆತ್ತುಕೊಂಡು, ಈ ನಿಟ್ಟಿಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಬಾಕ್‌ಸ್‌: ನಾವು ಎಷ್ಟೇ ಪ್ರಗತಿ ಸಾಧಿಸಿದರೂ, ಎಲ್ಲ ಜನರಿಗೆ ಎರಡು ಹೊತ್ತಿಿನ ಊಟ ಒದಗಿಸದಿದ್ದರೆ ಏನು ಪ್ರಯೋಜನ?

*: ದೆಹಲಿಯಲ್ಲಿ ಮತ್ತೆೆ ಸಮ-ಬೆಸ ವಾಹನ ಸಂಚಾರ ಅಂತೆ?
*: ನಮ್ಮ ಸಂಚಾರ ಆನಂದ ಸಾಗರ ಅಂತ ಕೇಜ್ರಿಿವಾಲು ಹಾಡ್ಲಿಿಕತ್ತಿಿದ್ದು ಅದ್ಕೆೆ ಕಣ್ಲಾ.