ಕರೋನಾ ವಿಚಾರದಲ್ಲಿ ಮೌನವಹಿಸಿದ್ದ ರಾಜ್ಯ ಸರಕಾರ ಕಡೆಗೂ ತಾನು ಕೈಗೊಂಡಿರುವ ಕ್ರಮಗಳ ಬಗ್ಗೆ ಸೋಮವಾರ ಸ್ಪಷ್ಟಪಡಿಸಿದೆ.
ತಮಿಳುನಾಡು ಹಾಗೂ ಕೇರಳದಲ್ಲಿ ವೈದ್ಯಕೀಯ ವ್ಯವಸ್ಥೆಗಳು ಉತ್ತಮ ರೀತಿಯಲ್ಲಿದ್ದು, ರಾಜ್ಯದಲ್ಲಿ ಬಹಳಷ್ಟು ಸಮಸ್ಯೆ ಗಳಿರುವುದಾಗಿ ಆರೋಪ ಕೇಳಿಬಂದಿತ್ತು. ಅಲ್ಲದೆ ಮಹಾರಾಷ್ಟ್ರಕ್ಕೂ ಹೆಚ್ಚಿನ ರೀತಿಯಲ್ಲಿ ಬೆಂಗಳೂರು ಸೋಂಕಿನ ತೀವ್ರತೆಯಲ್ಲಿ ವೇಗ ಪಡೆಯುತ್ತಿದೆ ಎಂಬ ಮಾತು ಕೇಳಿಬಂದಿದ್ದವು. ಈ ಎಲ್ಲದರ ಕುರಿತಾಗಿ ಸೋಮವಾರ ಸುದ್ದಿಗೋಷ್ಠಿ ನಡೆಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ.
ಇಂದು ಸಂಜೆಯಿಂದ 14ದಿನಗಳ ಕಾಲ ರಾಜ್ಯದಲ್ಲಿ ಕರ್ಫ್ಯೂ (ಜನತಾ ಲಾಕ್‌ಡೌನ್) ಘೋಷಿಸಲಾಗಿದೆ. ಪರಿಸ್ಥಿತಿ ಹತೋಟಿಗೆ ಬಾರದಿದ್ದಲ್ಲಿ ಮತ್ತೆ ಕರ್ಫ್ಯೂ ಮುಂದುವರಿಸುವುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ. ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗಾಗಿ ಜನರಿಗೆ ವಿನಾಯಿತಿ ನೀಡಲಾಗಿದೆ. ಉಳಿದ ಸಮಯದಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಜನತೆ ಸರಕಾರ ಸೂಚಿಸಿ ರುವ ಅನಗತ್ಯವಾಗಿ ಹೊರಬಾರದೆ 14 ದಿನಗಳ ಕರ್ಫ್ಯೂ ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ. ಆಕ್ಸಿಜನ್ ಸಮಸ್ಯೆ
ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ.
18ರಿಂದ 35 ವಯಸ್ಸಿನವರಿಗೆ ಉಚಿತ ವ್ಯಾಕ್ಸೀನ್ ನೀಡಲಾಗುವುದು. ಈ ಬಗ್ಗೆ ಆರೋಗ್ಯ ಇಲಾಖೆ ರೂಪುರೇಷೆಗಳನ್ನು ಪ್ರಕಟಿ ಸುವುದಾಗಿ ಸಿಎಂ ತಿಳಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 14 ದಿನಗಳ ಕರ್ಫ್ಯೂ ಜಾರಿಯಲ್ಲಿರುವುದುದರಿಂದ ಜನರು ಅನಗತ್ಯ ಓಡಾಡುವಂತಿಲ್ಲ. ಗೂಡ್ಸ್ ಸಂಚಾರ ಹೊರತುಪಡಿಸಿ, ಜನ ಸಂಚಾರಕ್ಕೆ ಕಡಿವಾಣಹಾಕಲಾಗಿದೆ. ಈ ದಿಢೀರ್ ಕರ್ಫ್ಯೂ ಜಾರಿ ಯಿಂದಾಗಿ ಒಂದಷ್ಟು ಸಮಸ್ಯೆಗಳುಂಟಾದರೂ, ತಜ್ಞರ ಪ್ರಕಾರ ಪ್ರಸ್ತುತ ಅನಿವಾರ್ಯ.
ಆದ್ದರಿಂದ ಅದನ್ನು ಪಾಲಿಸುವ ಹೊಣೆ ಪ್ರತಿಯೊಬ್ಬರದ್ದು. ಆದರೆ ಅದೇರೀತಿ ಸರಕಾರ ಚಿಕಿತ್ಸೆ ವಿಚಾರದಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಒಗಿಸಬೇಕಾದ ಜವಾಬ್ದಾರಿ ಕಂಡುಬರುತ್ತಿದೆ.