ಪ್ರಸ್ತುತ ಕರೋನಾ ಸಾವಿನ ಸರಣಿ ಮುಂದುವರಿಯುತ್ತಿರುವ ಇಂದಿನ ಸಂದರ್ಭದಲ್ಲಿ ವೈದ್ಯಕೀಯ ಸೇವೆಯ ಮಹತ್ವ ಹೆಚ್ಚುತ್ತಿದೆ.
ಇವರ ಪೈಕಿ ಕೇವಲ 168 ವೈದ್ಯರ ಕುಟುಂಬಗಳು ಮಾತ್ರ ಕೇಂದ್ರ ಸರಕಾರದ 50 ಲಕ್ಷ ರು. ವಿಮೆ ಪಡೆದುಕೊಂಡಿದ್ದಾರೆ ಎನ್ನಲಾ ಗಿದೆ. ಕಳೆದ ವರ್ಷ ಸುಮಾರು 22ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಈ ವಿಮಾ ಯೋಜನೆ ಘೋಷಿಸಲಾಗಿತ್ತು. ಸಾಂಕ್ರಾಮಿಕ ಕಾಯಿಲೆಗೆ ತುತ್ತಾದ ಪ್ರತಿ ಐದು ವೈದ್ಯರಲ್ಲಿ ಒಬ್ಬರ ಕುಟುಂಬಕ್ಕೆ ಮಾತ್ರ ವಿಮೆ ಹಣ ದೊರೆತಿರುವುದು ವೈದ್ಯಕೀಯ ಸಿಬ್ಬಂದಿಗಳ ಬಲಿದಾನಕ್ಕೆ ಸಲ್ಲಿಸುವ ಅಪಮಾನ.
ವೈದ್ಯರನ್ನು ಹೊರತುಪಡಿಸಿ 238 ಆರೋಗ್ಯ ಸಿಬ್ಬಂದಿ, 137 ಆರೋಗ್ಯ ಕಾರ್ಯಕರ್ತರು ಮಾತ್ರವೇ ವಿಮೆ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಂಕಿ ಅಂಶಗಳು ಸೂಚಿಸುತ್ತವೆ. ಪ್ರತಿ ಸಾವಿಗೂ ವಿಮೆಯೇ ಪರಿಹಾರ ವಲ್ಲದಿದ್ದರೂ, ಜನರ ಒಳಿತಿಗಾಗಿ ಪ್ರಾಣದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸಿದ ವೈದ್ಯಕೀಯ ಸಿಬ್ಬಂದಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡುವುದು ಒಂದು ಆದ್ಯತೆ ಆಗಬೇಕು. ಆಗ ಮಾತ್ರ ವೈದ್ಯಕೀಯ ಸಿಬ್ಬಂದಿಗಳ ಬಲಿದಾನಕ್ಕೊಂದು ಸಾರ್ಥಕತೆ.