Saturday, 14th December 2024

ಭ್ರಷ್ಟರಿಗೆ ತಕ್ಕ ಶಿಕ್ಷೆಯಾಗಲಿ

lokayukta raid

ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಭ್ರಷ್ಟ ಅಧಿಕಾರಿಗಳ ಮತ್ತು ನೌಕರರ ಮೇಲೆ ಸೋಮವಾರ ಲೋಕಾಯುಕ್ತ ದಾಳಿ ನಡೆದಿದೆ. ಈ ದಾಳಿಯಲ್ಲಿ ನೌಕರರ ಮನೆಯಲ್ಲಿ ಲಕ್ಷಾಂತರ ರುಪಾಯಿ, ಚಿನ್ನಾಭರಣ ದೊರೆತಿದೆ. ಅಧಿಕಾರಿಗಳ ಬಳಿ ಇರುವ ಹಣ, ಆಸ್ತಿಪಾಸ್ತಿಯನ್ನು ಮಾಧ್ಯಮಗಳಲ್ಲಿ ನೋಡಿದ ಜನತೆ ದಂಗಾಗಿದ್ದಾರೆ. ಲೋಕಾಯುಕ್ತ ಬಲವರ್ಧನೆಯ ನಂತರ ಕಾರ್ಯ ಚುರುಕುಗೊಂಡಿದ್ದು, ಸೋಮವಾರ ನಡೆಸಿದ ದಾಳಿಯೂ ಶ್ಲಾಘನೀಯ. ಆದರೆ ಈ ದಾಳಿಯಲ್ಲಿ ಸಿಕ್ಕ ಎಷ್ಟು ಜನರಿಗೆ ಶಿಕ್ಷೆಯಾಗುತ್ತದೆ ಎಂಬುದು ಪ್ರಶ್ನೆ.

ಯಾಕೆಂದರೆ ಕಳೆದ ೪೦ ವರ್ಷಗಳಿಂದಲೂ ಈ ಬಗೆಯ ಅನೇಕ ದಾಳಿಗಳನ್ನು ಜನರಿಗೆ ನೋಡಿ ಸಾಕಾಗಿದೆ. ದಾಳಿಯಾದ ಯಾವ ಒಬ್ಬ ಅಽಕಾರಿಯನ್ನೂ ಈವರೆಗೆ ವಜಾ ಮಾಡಿಲ್ಲ, ಜೈಲಿಗೆ ಹಾಕಿಲ್ಲ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ಇಂತಹ ದಾಳಿಗಳಲ್ಲಿ ಸಿಕ್ಕ ಅಽಕಾರಿಗಳು ಲಂಚ ನೀಡಿ ಪುನಃ ಅದೇ ಕೆಲಸಕ್ಕೆ ಹಾಜರಾಗಿರುವ ಉದಾಹರಣೆಗಳು ಇವೆ. ಇಲ್ಲವೇ, ನ್ಯಾಯಾಲಯದಲ್ಲಿ ಸಾಕ್ಷಿ ಕೊರತೆಯಿಂದ ಪ್ರಕರಣವೇ ಬಿದ್ದು ಹೋಗಿವೆ, ಹಾಗಾದರೆ ಈ ಸಿನಿಮೀಯ ರೀತಿ ದಾಳಿ ಏಕೆ? ಅವುಗಳನ್ನು ನಮ್ಮ ಮಾಧ್ಯಮಗಳು ವೈಭವೀಕರಿಸುವುದು ಏಕೆ? ಎಂಬುದೇ ಅರ್ಥವಾಗುತ್ತಿಲ್ಲ.

ಹಾಗೊಂದು ವೇಳೆ ಈ ಹಿಂದೆ ಹೀಗೆ ಎಸಿಬಿ, ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆಯಾಗಿದ್ದರೆ ಅವರ ಪಟ್ಟಿ, ಅವರಿಗಾದ ಶಿಕ್ಷೆ
ಯನ್ನು ಪ್ರಕಟಿಸಬೇಕಿತ್ತು. ಆದರೆ ಅಂತಹ ಯಾವುದೇ ಶಿಕ್ಷೆಯಾದ ಉದಾಹರಣೆಗಳು ಇಲ್ಲ. ಇದೆಲ್ಲವನ್ನೂ ನೋಡಿದರೆ ಇದೊಂದು ಬೃಹನಾಟಕ ದಂತೆ ಕಾಣುತ್ತದೆ. ತಪ್ಪಿತಸ್ಥ ಅಽಕಾರಿಗಳಿಗೆ ತಕ್ಕ ಶಿಕ್ಷೆಯಾದರೆ ಮಾತ್ರ ಇಂತಹ ದಾಳಿಗಳಿಗೆ ಮಹತ್ವ ಬರುತ್ತದೆ. ಇಲ್ಲವಾದಲ್ಲಿ ಇಂತಹ ದಾಳಿಗಳಿಗೆ ಯಾವ ಅಧಿಕಾರಿಗಳೂ ಹೆದರುವುದಿಲ್ಲ, ಭ್ರಷ್ಟಾಚಾರಕ್ಕೆ ಪೂರ್ಣವಿರಾಮವೇ ಇಲ್ಲದಂತಾಗುತ್ತದೆ. ಈಗ ರಾಜ್ಯದ ಜನತೆಯ ಮುಂದೆ ಹಿಂದಿನ ಪ್ರಕ
ರಣಗಳಂತೆಯೇ ಈ ದಾಳಿ ಪ್ರಕರಣಗಳು ಕೂಡ ಕಣ್ಮರೆಯಾ ಗುತ್ತದೆಯೋ ಅಥವಾ ಆರೋಪಿಗಳಿಗೆ ಶಿಕ್ಷೆಯಾಗುವ, ಸೇವೆಯಿಂದ ಅಮಾನತು
ಮಾಡುವಂತಹ ಯಾವುದೇ ಕಠಿಣ ಕ್ರಮ ಗಳಾಗುತ್ತವೆಯೋ ಎಂಬ ಅನುಮಾನವಿದೆ. ಈ ಅನುಮಾನಗಳನ್ನು ಬಗೆಹರಿಸಿ, ಭ್ರಷ್ಟಾಚಾರಿಗಳ
ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ.