ಭಾರತದ ಪ್ರಜಾತಂತ್ರ ವ್ಯವಸ್ಥೆ ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಆಧರಿಸಿದೆ. ಸಂವಿಧಾನಾತ್ಮಕವಾಗಿ ಕೇಂದ್ರ ಸರಕಾರಕ್ಕೆ ಹೆಚ್ಚಿನ ಅಧಿಕಾರವಿದ್ದರೂ, ರಾಜ್ಯಗಳ ಸ್ಥಾನಮಾನವನ್ನು ಕಡೆಗಣಿಸುವುದಿಲ್ಲ.
ರಾಜ್ಯಗಳಲ್ಲಿ ಪ್ರತ್ಯೇಕವಾದ ಸರಕಾರಗಳು ಆಡಳಿತ ಮಾಡುತ್ತವೆ. ಸಾಂವಿ ಧಾನಿಕ ಬಿಕ್ಕಟ್ಟು ತಲೆದೋರಿದಾಗ ಮಾತ್ರ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಬಹುದು ಮತ್ತು ರಾಜ್ಯಗಳ ಆಡಳಿತವನ್ನು ಸಾಂವಿಧಾನಿಕ ಹಾದಿಗೆ ಮರಳಿಸುವ ಆಯ್ಕೆಯನ್ನು ಹೊಂದಿರುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿ ನಿಂದಲೂ ಈ ಒಕ್ಕೂಟ ಗಣತಂತ್ರದ ವ್ಯವಸ್ಥೆ ಲೋಪವಿಲ್ಲದೆ ಮುಂದು ವರಿದು ಕೊಂಡು ಬಂದಿದೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವು ರಾಜ್ಯಗಳು ಕೇಂದ್ರದ ಅಧಿಕಾರ ವನ್ನು, ಆಡಳಿತವನ್ನು ಪ್ರಶ್ನಿಸುವ ಅಥವಾ ಧಿಕ್ಕರಿಸುವ ಧಾರ್ಷ್ಟ್ಯವನ್ನು ಪ್ರದರ್ಶಿಸುತ್ತಿವೆಯೇನೋ ಎಂಬ ಅನುಮಾನ ಬರುವಷ್ಟರ ಮಟ್ಟಿಗೆ ನಡವಳಿಕೆಯನ್ನು ಬೆಳೆಸಿಕೊಂಡಿವೆ ಎಂದರೆ ತಪ್ಪಾಗಲಾರದು.
ಕಳೆದ 8 ವರ್ಷಗಳಲ್ಲಿ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರ ದಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಜಕೀಯವಾಗಿ ಬಿಜೆಪಿ ಕಡುವಿರೋಧಿಗಳೆಂದು ಗುರುತಿಸಿಕೊಂಡವರು ಒಕ್ಕೂಟ ವ್ಯವಸ್ಥೆ ಯನ್ನು ಉಲ್ಲಂಘಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರವೃತ್ತಿಯನ್ನು ಹೀಗೆಯೇ ಬೆಳೆಯಗೊಟ್ಟರೆ ಒಟ್ಟಾರೆಯಾಗಿ ದೇಶದ ಹಿತಾಸಕ್ತಿಗೆ ಇದು ಮಾರಕವಾಗ ಬಹುದು.
ಒಂದೆರಡು ನಿದರ್ಶನಗಳನ್ನು ಉಲ್ಲೇಖಿಸುವುದಾದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾ ಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಇಂತಹ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿರುವುದು ಸುಳ್ಳಲ್ಲ. ಜನಾದೇಶ ಪಡೆದು ಕೇಂದ್ರದಲ್ಲಿ ಪ್ರಧಾನ ಮಂತ್ರಿಯಾಗಿ ಯಶಸ್ವಿ ಆಡಳಿತ ನಡೆಸುತ್ತಿರುವ ವ್ಯಕ್ತಿಯೊಬ್ಬರು ರಾಜ್ಯಕ್ಕೆ ಭೇಟಿ ನೀಡುವಾಗ ಆ
ರಾಜ್ಯದ ಮುಖ್ಯಮಂತ್ರಿ ಬೇರೆ ಪಕ್ಷದವನಾಗಿದ್ದರೂ ಪ್ರಧಾನಿಯನ್ನು ಸ್ವಾಗತಿಸುವುದು ಮತ್ತು ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಶಿಷ್ಟಾಚಾರ ಮತ್ತು ಸಾಂವಿಧಾನಿಕ ಬಾಧ್ಯತೆಯಾಗಿರುತ್ತದೆ.
ಆದರೆ ಕೆಸಿಆರ್ ಇತ್ತೀಚೆಗೆ ಹಲವು ಬಾರಿ ಪ್ರಧಾನಿ ಮೋದಿ ಅವರ ಭೇಟಿಯನ್ನು ತಪ್ಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೇಂದ್ರ ಸರಕಾರ ಕರೆದ ಸಭೆಗಳಲ್ಲೂ ಭಾಗವಹಿಸುತ್ತಿಲ್ಲ. ಭಾನುವಾರ ಪ್ರಧಾನಿ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಸಭೆಗೂ ಕೆಸಿಆರ್ ಮತ್ತು ನಿತೀಶ್ ಕುಮಾರ್ ಗೈರುಹಾಜರಾಗಿದ್ದಾರೆ. ನೀತಿ ಆಯೋಗದ ಸಭೆ ಬಿಜೆಪಿ ಸಭೆಯಲ್ಲ. ಅದಕ್ಕೆ ಹಾಜರಾಗಿ
ತಮ್ಮ ವಿಚಾರಗಳನ್ನು ಮಂಡಿಸುವುದು ಆಯಾ ರಾಜ್ಯಗಳ ಮುಖ್ಯಮಂತ್ರಿ ಅಥವಾ ಅವರು ನಿಯೋಜಿಸಿದ ವ್ಯಕ್ತಿಯ ಕರ್ತವ್ಯ ವಾಗಿರುತ್ತದೆ.
ಅಂತಹ ಕರ್ತವ್ಯ ಲೋಪವನ್ನು ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಪದೇ ಪದೇ ಪ್ರದರ್ಶಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.