Friday, 22nd November 2024

ಪರಿಸರ ಸ್ನೇಹಿ ಕಟ್ಟಡ ಇಂದಿನ ಅನಿವಾರ್ಯ

ಅಮೆರಿಕ ಚುನಾವಣೆಯಲ್ಲಿ ಭಾರತದ ವಿಷಯ ಬಹುಮುಖ್ಯ ಪಾತ್ರ ವಹಿಸಿದೆ. ಇತ್ತೀಚೆಗೆ ಟ್ರಂಪ್ ನಮ್ಮ ದೇಶದ ಬಗ್ಗೆ ನುಡಿ ದಿರುವ ಮಾತುಗಳು ಅಸಮಾಧಾನಕ್ಕೆ ಕಾರಣವಾಗಿದ್ದರೂ ಅವಲೋಕನ ಮುಖ್ಯ.

ಚೀನಾ – ರಷ್ಯಾ – ಭಾರತ ದೇಶಗಳು ಹೊಲಸು ಎಂದು ನುಡಿದಿರುವ ಟ್ರಂಪ್ ಮಾತಿನಿಂದಾಗಿ ಭಾರತೀಯರಿಗೆ ಬೇಸರ ಉಂಟಾ ಗಿದೆ. ಆದರೆ ಒಂದು ದೇಶದ ಅಧ್ಯಕ್ಷ ನಮ್ಮ ದೇಶವನ್ನು ಟೀಕಿಸಿದಾಗ ಅಸಮಾಧಾನಗೊಳ್ಳುವುದಕ್ಕಿಂತ ಅಂಥ ಸಮಸ್ಯೆಗಳ
ನಿರ್ಮೂಲನೆ ಬಗ್ಗೆ ಗಮನಹರಿಸುವುದು ಉತ್ತಮ ಬೆಳವಣಿಗೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭವಾಗಬೇಕಿದೆ. ಇತ್ತೀಚೆಗೆ ಅಂತಹದೊಂದು ಉತ್ತಮ ಬೆಳವಣಿಗೆಯೊಂದು ಆರಂಭಗೊಳ್ಳುತ್ತಿದೆ.

ದೇಶದಲ್ಲಿ ಇನ್ನು ಮುಂದೆ ನಿರ್ಮಾಣವಾಗುವ ಹೊಸ ಕಟ್ಟಡಗಳನ್ನು ಕಡ್ಡಾಯವಾಗಿ ಹಸಿರು ಮತ್ತು ಪರಿಸರ ಸ್ನೇಹಿಯಾಗಿಸುವ ಪ್ರಯತ್ನ ಆರಂಭಗೊಂಡಿದೆ. ಈ ಬೆಳವಣಿಗೆ ಸ್ವಚ್ಛತೆಗೆ ಸಹಕಾರಿಯಾಗಲಿದೆ. ತೆರಿಗೆ ಪ್ರೋತ್ಸಾಹ ಮತ್ತು ಇನ್ನಿತರ ಕ್ರಮಗಳ ಮೂಲಕ ಹಸಿರು ಕಟ್ಟಡಗಳನ್ನು ಉತ್ತೇಜಿಸುವಂತೆ ಸರಕಾರಗಳು, ಹಣಕಾಸು ಆಯೋಗಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಸೂಚಿಸಿದ್ದಾರೆ.

ಇಂಧನ ದಕ್ಷತೆ ಮತ್ತು ನೀರಿನ ಸಂರಕ್ಷಣೆ ಉತ್ತೇಜಿಸುವ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ಕಟ್ಟಡಗಳು
ಮಾತ್ರವಲ್ಲ, ಈಗಿರುವ ಕಟ್ಟಡಗಳನ್ನೂ ಸಹ ಪರಿಸರ ಸ್ನೇಹಿಯನ್ನಾಗಿಸಬೇಕು. ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆಯನ್ನು
ತಗ್ಗಿಸಲು ಪ್ರಪಂಚದಾದ್ಯಂತದ ಹಲವು ದೇಶಗಳು ತೆಗೆದುಕೊಂಡಿರುವ ಕಠಿಣ ಕ್ರಮಗಳನ್ನು ಅನುಸರಿಸಬೇಕು. ನಾವು ಪ್ರಕೃತಿ ಯನ್ನು ನೋಡಿಕೊಂಡರೆ, ಪ್ರಕೃತಿಯು ಮಾನವಕುಲವನ್ನು ನೋಡಿಕೊಳ್ಳುತ್ತದೆ.

ಇಂದು ಬಳಸಲಾಗುವ ನಿರ್ಮಾಣ ಸಾಮಗ್ರಿಗಳು ಸುಸ್ಥಿರ ಮತ್ತು ಪರಿಸರ ಸ್ನೇಹಿಯಾಗಿರಬೇಕು ಎಂದು ಕರೆ ನೀಡಿದ್ದಾರೆ. ಪ್ರಸ್ತುತ
ಸಂದರ್ಭದಲ್ಲಿ ಇಂಥ ಪರಿಸರಸ್ನೇಹಿ ಕಟ್ಟಡಗಳ ನಿರ್ಮಾಣ ಇಂದಿನ ಅಗತ್ಯ ಮತ್ತು ಅನಿವಾರ್ಯ.