Thursday, 12th December 2024

ಸಣ್ಣ ಕೈಗಾರಿಕೆ ವಸ್ತುಗಳ ಬಳಕೆಗೆ ಆದ್ಯತೆ ಅಗತ್ಯವಿದೆ

ದೇಶದಲ್ಲಿ ಕರೋನಾ ಸಂಕಷ್ಟದಿಂದಾಗಿ ಅಪಾರ ಪ್ರಮಾಣದ ಆರ್ಥಿಕ ಸಮಸ್ಯೆ ಎದುರಿಸಿದೆ. ಇದಕ್ಕೆ ಕರ್ನಾಟಕವೂ ಹೊರತಾ ಗಿಲ್ಲ. ಇಂಥ ಸಂದರ್ಭದಲ್ಲಿಯೂ ಭಾರತವು ಹೂಡಿಕೆದಾರರ ಪ್ರಶಸ್ತ ಸ್ಥಳವಾಗಿ ಗುರುತಿಸಿಕೊಂಡಿದೆ.

2019-20ರಲ್ಲಿ ಭಾರತದಲ್ಲಿ ಎಫ್ಡಿಐ ಒಳಹರಿವು 74 ಬಿಲಿಯನ್ ಡಾಲರ್ ಆಗಿತ್ತು. ಇದೀಗ ಶೇ.20ರಷ್ಟು ಏರಿಕೆಯಾಗಿದೆ. ಏಪ್ರಿಲ್- ಜುಲೈ ನಡುವಿನ ಅವಧಿಯಲ್ಲಿ ಭಾರತವು 20 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆಯನ್ನು ಆಕರ್ಷಿಸಿದೆ. ಹಿಂದೆಂದಿ
ಗಿಂತಲೂ ಇಂದು ಭಾರತವು ಹೂಡಿಕೆದಾರರಿಗೆ ಉತ್ತಮ ಸ್ಥಳವಾಗಿ ಕಂಗೊಳಿಸುತ್ತಿದೆ. ಇದಕ್ಕೆ ಕೆಲವು ದೇಶಗಳಿಗೆ ಚೀನಾದ ಮೇಲಿ ರುವ ಅಸಮಾಧಾನವೂ ಕಾರಣವಾಗಿರಬಹುದು. ಆದರೆ ಇಂದು ಹಲವು ದೇಶಗಳ ಪಾಲಿಗೆ ಭಾರತವು ವ್ಯವಹಾರಿಕ ಸಹಭಾ ಗಿತ್ವಕ್ಕೆ ಪ್ರಮುಖ ದೇಶವಾಗಿ ಮಹತ್ವವನ್ನು ಸಾಧಿಸಿದೆ.

ಇದೇ ಸಂದರ್ಭದಲ್ಲಿ ಕಾಣಬಹುದಾದ ಮತ್ತೊಂದು ಬೇಸರದ ಸಂಗತಿ ಎಂದರೆ ಈ ಬಾರಿ ದೇಶೀಯ ಕಂಪನಿಗಳ ವಿದೇಶಿ ಹೂಡಿಕೆ ಪ್ರಮಾಣ ಕ್ಷೀಣಿಸಿರುವುದು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ದೇಶೀಯ ಕಂಪನಿಗಳ ಅಂತಾರಾಷ್ಟ್ರೀಯ ಹೂಡಿಕೆ ವ್ಯವಹಾರಗಳು ಶೇ.79ರ ಕುಸಿತ ಕಂಡಿದೆ. ವಿಶ್ವದ ಪ್ರಸಿದ್ಧ ಆರ್ಥಿಕ ಸಂಶೋಧನಾ ಸಂಸ್ಥೆಯೊಂದು ಈ ಪ್ರಮಾಣವನ್ನು ನಿಕೃಷ್ಟ ಮಟ್ಟದ ಕುಸಿತ ಎಂಬುದಾಗಿ ತನ್ನ ಸಂಶೋಧನೆಯಲ್ಲಿ ತಿಳಿಸಿದೆ. ಒಂದೆಡೆ ವಿದೇಶಿ ಹೂಡಿಕೆ ಆಕರ್ಷಿಸುತ್ತಿದ್ದರೆ, ಮತ್ತೊಂದೆಡೆ ದೇಶಿಯ ಕಂಪನಿಗಳ ವಿದೇಶಿ ಹೂಡಿಕೆ ಪ್ರಮಾಣ ಕ್ಷೀಣಿಸುತ್ತಿದೆ. ಇಂಥ ಸಂದರ್ಭದಲ್ಲಿ ವಿವಿಧ ರಾಜ್ಯಗಳ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಿತಿ ಬೇರೆಯದ್ದೇ ರೀತಿಯಿದೆ. ಸಣ್ಣ ಕೈಗಾರಿಕೆಗಳು ಉಳಿಯಬೇಕು ಎಂದರೆ ಸರಕಾರವು ಉತ್ತೇಜನ ಕಾರಿ ಪ್ಯಾಕೇಜ್ ನೀಡುವುದರ ಜತೆಗೆ ಶೇ.25ರಷ್ಟು ಉತ್ಪನ್ನಗಳನ್ನು ಖರೀದಿಸಲು ಮುಂದಾಗಬೇಕು ಎಂಬುದು ಸಣ್ಣ ಕೈಗಾರಿಕಾ ವಲಯದ ಬೇಡಿಕೆ. ಇದರ ಜತೆಗೆ ಜನತೆಯಿಂದಲೂ ಸಹ ದೇಶಿಯ ಕೈಗಾರಿಕೆಗಳು, ರಾಜ್ಯದ ಸಣ್ಣ ಕೈಗಾರಿಕೆಗಳ ಬಳಕೆ ಹೆಚ್ಚಾಗ ಬೇಕು. ಆಗ ಮಾತ್ರವೇ ಸಣ್ಣ ಕೈಗಾರಿಕೆಗಳ ಉಳಿವು ಸಾಧ್ಯ.