Sunday, 8th September 2024

ರಾತ್ರಿ ಕರ್ಫ್ಯೂ ತೆರವು: ಹೆಚ್ಚಲಿ ಜನರ ಜವಾಬ್ದಾರಿ

ರಾಜ್ಯದಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ ತೆರವಾಗುತ್ತದೆ. ಕಳೆದ ವಾರವೇ ವಾರಾಂತ್ಯದ ಕರ್ಫ್ಯೂ ಕೂಡ ತೆರವುಗೊಂಡಿತ್ತು. ಜನರ ಜೀವನದ ದೃಷ್ಟಿಯಿಂದ ಸರಕಾರದ ಈ ನಿರ್ಧಾರ ಸ್ವಾಗತಾರ್ಹವಾದರೂ ಜೀವದ ದೃಷ್ಟಿಯಿಂದ ಸರಿಯಲ್ಲ. ಕಳೆದ ಮೂರು ದಿನಗಳಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವುದನ್ನು ನೋಡಿದರೆ ಭಯವಾಗುತ್ತದೆ. ಆದರೆ ಈ ಬಾರಿ ಕರೋನಾ ಸೋಂಕು ಪ್ರಾಣಹಾನಿಗೆ ಕಾರಣವಾಗಿಲ್ಲ ಎಂಬ ಕಾರಣಕ್ಕೆ ಸರಕಾರ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ತೆರವಿಗೆ ನಿರ್ಧಾರ ತೆಗೆದುಕೊಂಡಿದೆ.

ಕೋವಿಡ್ ಸಾಂಕ್ರಾಮಿಕವನ್ನು ನಿಗ್ರಹದಲ್ಲಿ ಇರಿಸಿಕೊಂಡೇ ವಾಣಿಜ್ಯ ಚಟುವಟಿಕೆಗಳು ಹಾಗೂ ಮನುಷ್ಯನ ಇತರ ದೈನಂದಿನ ಚಟುವಟಿಕೆಗಳು ಸಾಗುವಂತೆ ಮಾಡಬೇಕು ಎಂಬ ನಿರ್ಧಾರ ಸರಕಾರದ ನಿರ್ಧಾರ ವ್ಯಾಪಾರಿಗಳ ಸಮುದಾಯಕ್ಕೆ ಸಮಾಧಾನ ತಂದಿದೆ. ಆದರೆ ಜನರು ಮತ್ತು ವ್ಯಾಪಾರಿಗಳು ಇನ್ಮುಂದೆ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕಾದ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಕಾಯಿಲೆ ನಿಗ್ರಹ ಕಾರ್ಯ ತಂತ್ರವು ಆರ್ಥಿಕ ಚಟುವಟಿಕೆಗಳಿಗೆ ತಡೆ ಒಡ್ಡಬಾರದಂತೆ ನೋಡಿಕೊಳ್ಳಬೇಕಾದರೆ ತಮ್ಮ ವ್ಯಾಪಾರದ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು.

ಹೆಚ್ಚು ಗ್ರಾಹಕರು ಸೇರುವ ಸ್ಥಳಗಳಲ್ಲಿ ಮಾಸ್ಕ್ ಹಾಕುವಂತೆ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸ ಬೇಕು. ಪ್ರತಿ ಅಂಗಡಿಗಳಲ್ಲೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಸರಕಾರ ಕೂಡ ಕೋವಿಡ್ ಪ್ರಕರಣ ಗಳನ್ನು ಮರೆಮಾಚಲು ಪರೀಕ್ಷೆಗಳ ಸಂಖ್ಯೆ ಕಡಿಮೆ ಮಾಡಬಾರದು. ನಿತ್ಯ ಪರೀಕ್ಷೆಗಳ ಬಂದ ಪಾಸಿಟಿವ್ ಪ್ರಕರಣಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಇತ್ತೀಚೆಗೆ ಯಾರೂ ಭಯಭೀತರಾಗುತ್ತಿಲ್ಲ ಎಂಬುದು ತಜ್ಞರೇ ಹೇಳಿದ್ದಾರೆ.

ಹೀಗಾಗಿ ಸರಕಾರವು ಕೋವಿಡ್ ಪತ್ತೆಯಾದವರಿಗೆ ಸೂಕ್ತ ಚಿಕಿತ್ಸೆ ಒದಗಿಸ ಬೇಕು. ಅದಕ್ಕೆ ಬೇಕಾದ ವೈದ್ಯಕೀಯ ಸೌಕರ್ಯ ಎಡೆ ಲಭ್ಯವಾಗುವಂತೆ ನೋಡಿ ಕೊಳ್ಳಬೇಕು. ಕರೋನಾದ ಅಂತ್ಯ ಕಾಲ ಸಮೀಪಿಸುತ್ತಿದ್ದು, ಈಗ ಸರಕಾರ ಮತ್ತು ಜನರ ಜವಾಬ್ದಾರಿ ಬಹಳಷ್ಟಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳ ಬೇಕಿದೆ.

error: Content is protected !!