ಕಲಾಪ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ
ನಮ್ಮ ರಾಜ್ಯದ ವಿಧಾನಸಭೆಯ ಕಲಾಪಗಳನ್ನು ಚಿತ್ರೀಕರಣ ಮಾಡಿ, ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡುವ ಸಂಪ್ರದಾಯ ಬೆಳೆದು ಬಂದಿದೆ. ಈ ಒಂದು ಸೌಲಭ್ಯದಿಂದಾಗಿ, ತಾವು ಮತ ಚಲಾಯಿಸಿ, ಆರಿಸಿ, ಅಧಿಕಾರ ಕೊಟ್ಟು ವಿಧಾನ ಸಭೆಯಲ್ಲಿ ಕೂರಿಸಿದ ರಾಜಕೀಯ ನಾಯಕರು ನಮ್ಮ ರಾಜ್ಯದ ಹಿತಾಸಕ್ತಿಿಯನ್ನು ಕಾಪಾಡಲು ಯಾವ ರೀತಿ ವರ್ತಿಸುತ್ತಾಾರೆ ಎಂದು ಜನಸಾಮಾನ್ಯರು ದೃಶ್ಯ ಮಾಧ್ಯಮದಲ್ಲಿ ನೋಡುವ ಅವಕಾಶ ಇತ್ತು. ಈಗ ಹೊರಬಂದಿರುವ ಆದೇಶವು ವಿಧಾನಸಭೆಯ ಕಲಾಪಗಳನ್ನು ನೇರಪ್ರಸಾರ ಮಾಡದಂತೆ ಸುದ್ದಿ ಮಾಧ್ಯಮಗಳನ್ನು ನಿರ್ಬಂಧಿಸುತ್ತಿಿದೆ.
ಪ್ರಜಾಪ್ರಭುತ್ವದ ಆಶಯಕ್ಕೆೆ ವಿರುದ್ಧ ಎನಿಸುವ ಈ ಆದೇಶವನ್ನು ಒಮ್ಮಿಿಂದೊಮ್ಮೆೆಗೇ ಜಾರಿ ಮಾಡಿರು ರೀತಿ, ಸಹಜವಾಗಿಯೇ ಮಾಧ್ಯಮಗಳ, ಮಾಧ್ಯಮ ಸ್ವಾಾತಂತ್ರ್ಯಕ್ಕೆೆ ಬೆಲೆ ಕೊಡುವ ಪ್ರಾಾಜ್ಞರ ಮತ್ತು ಜನಸಾಮಾನ್ಯರ ಹುಬ್ಬೇರುವಂತೆ ಮಾಡಿದೆ. ‘ಸರಕಾರದ ಕೆಲಸ ದೇವರ ಕೆಲಸ’ ಎಂಬ ಸದಾಶಯದ ಫಲಕವನ್ನು ಹೊತ್ತ ವಿಧಾನಸಭೆಯೆಂಬ, ಪವಿತ್ರ ಮಹಲಿನಲ್ಲಿ ನಡೆಯುವ ಜನಪ್ರತಿನಿಧಿಗಳ ಕಲಾಪಗಳನ್ನು ನೇರಪ್ರಸಾರ ಮಾಡುವುದು ಅಪರಾಧ ಸ್ವರೂಪಿ ಚಟುವಟಿಕೆಯೆ? ತಾವು ವಿಧಾನಸಭೆಯ ಕಲಾಪಗಳಲ್ಲಿ ಆಡುವ ಮಾತು, ತೋರುವ ವರ್ತನೆಗಳನ್ನು ರಾಜ್ಯದ ಜನರು ದೃಶ್ಯರೂಪದಲ್ಲಿ ನೋಡಬಾರದು ಎಂದು ಜನಪ್ರತಿನಿಧಿಗಳಿಗೆ ಏಕೆ ಅನಿಸಬೇಕು? ಮಸೂದೆಯೊಂದರ ಕುರಿತು ನಡೆಯಬಹುದಾದ ಸಕಾರಾತ್ಮಕ ಚರ್ಚೆ, ವಾದಗಳನ್ನು ರಾಜ್ಯದ ಜನತೆ ನೋಡಿದರೆ, ಅದರಿಂದ ಅಪಾಯ ಉಂಟೆ? ವಿಧಾನ ಸಭೆ ಸಚಿವಾಲಯವು ಹೊರಡಿಸಿರುವು ಈ ಆದೇಶದ ಆಶಯವನ್ನು ಗಮನಿಸಿದರೆ, ಇಂತಹ ಹಲವು ಪ್ರಶ್ನೆೆಗಳು ಉದ್ಭವಿಸುತ್ತವೆ.
ವಿಧಾನಸಭೆಯ ಕಲಾಪಗಳನ್ನು ಪ್ರಸಾರ ಮಾಡುವ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದು ಎಂದರೆ, ಅದು ಪರೋಕ್ಷವಾಗಿ ಅಭಿವ್ಯಕ್ತಿಿ ಸ್ವಾಾತಂತ್ರ್ಯದ ದಮನ ಎನಿಸುತ್ತದೆ. ಇನ್ನು ಮುಂದೆ ಸರಕಾರದ ಅಂಗಸಂಸ್ಥೆೆಗಳು ಚಿತ್ರಿಿಸುವ ದೃಶ್ಯಗಳನ್ನು ಮತ್ತು ಚಿತ್ರಗಳನ್ನು ಮಾತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು ಮತ್ತು ಆ ತುಣುಕುಗಳನ್ನು ಮಾಧ್ಯಮಗಳು ತಮ್ಮ ವಾಹಿನಿಗಳಲ್ಲಿ ಪ್ರಸಾರಮಾಡಬಹುದು ಎಂಬರ್ಥದ ಈ ಆದೇಶ ಸೂಚಿಸುವುದಾದರೂ ಏನನ್ನು? ಸರಕಾರದ ಅಂಗಸಂಸ್ಥೆೆಗಳು ಅನುಮತಿ ನೀಡಿದ್ದನ್ನು ಮಾತ್ರ ಪ್ರಸಾರ ಮಾಡಬಹುದು ಎಂದಲ್ಲವೆ? 1975ರಲ್ಲಿ ದೇಶದಾದ್ಯಂತ ಜಾರಿಯಲ್ಲಿದ್ದ ಕರಾಳ ತುರ್ತುಪರಿಸ್ಥಿಿತಿಯಲ್ಲೂ, ಇದೇ ರೀತಿಯ ಮಾಧ್ಯಮ ಸೆನ್ಸಾಾರ್ ಜಾರಿಗೆ ಬಂದಿತ್ತು.
ಅಂದು ಸರಕಾರ ಅನುಮತಿ ನೀಡಿದ ಸುದ್ದಿಯನ್ನು ಮಾತ್ರ ಪ್ರಕಟಿಸಬಹುದಾಗಿತ್ತು. ಆ ಮೂಲಕ ಅಭಿವ್ಯಕ್ತಿಿ ಸ್ವಾಾತಂತ್ರ್ಯವನ್ನು ದಮನಗೊಳಿಸಲಾಗಿತ್ತು. ಆ ಕರಾಳ ಶಾಸನವನ್ನು ವಿರೋಧಿಸಿದ ಹಲವರು ಇಂದು ಅಧಿಕಾರದಲ್ಲಿದ್ದಾಾರೆ. ಅವರ ಸಮ್ಮತಿಯೊಂದಿಗೆ, ಇಂದು ವಿಧಾನಸಭೆ ಕಲಾಪಗಳ ನೇರ ಪ್ರಸಾರಕ್ಕೆೆ ಸೆನ್ಸಾಾರ್ ವಿಧಿಸಿದ್ದು ವಿಪರ್ಯಾಸ ಮತ್ತು ಪ್ರಜಾಪ್ರಭುತ್ವದ ಅಣಕ. ವಿಧಾನಸಭೆಯ ನೇರ ಪ್ರಸಾರ ನಡೆದರೆ, ಜನರಿಂದ ಆಯ್ಕೆೆಗೊಂಡ ಜನಪ್ರತಿನಿಧಿಗಳು ಕೆಲವು ಸಂದರ್ಭಗಳಲ್ಲಿ ನಡೆಸಬಹುದಾದ ಚಿತ್ರವಿಚಿತ್ರ ಭಾವ-ಭಂಗಿ ಮತ್ತು ವರ್ತನೆಗಳ ವಿವರಗಳು ಜನಸಾಮಾನ್ಯರ ಮನೆಯಲ್ಲಿರುವ ಟಿವಿಗಳಲ್ಲಿ ಪ್ರಸಾರಗೊಳ್ಳಬಹುದು ಎಂಬ ಆತಂಕವೇ ಇಂತಹ ಮಾಧ್ಯಮ ನಿರ್ಬಂಧಕ್ಕೆೆ ಹೇತುವಾಯಿತೆ? ಈ ಹಿನ್ನೆೆಲೆಯಲ್ಲಿ ಚಿಂತನೆ ನಡೆಸಿ, ಈ ರೀತಿಯ ಸೆನ್ಸಾಾರ್‌ಗೆ ಅವಕಾಶ ನೀಡುವ ಈ ಶಾಸನವನ್ನು ವಿಧಾನಸಭೆ ಸಚಿವಾಲಯ ಹಿಂಪಡೆಯುವ ಅಗತ್ಯವಿದೆ.