Thursday, 12th December 2024

ವರ್ಕ್ ಫ್ರಂ ಹೋಮ್ ರದ್ದು ಮಾಡಲು ಆತುರ ಬೇಡ

ಕರೋನಾ ಮಹಾಮಾರಿಯ ಕಾರಣದಿಂದಾಗಿ ಸಣ್ಣ, ಮಧ್ಯಮ ಹಾಗೂ ಪ್ರತಿಷ್ಠಿತ ದೊಡ್ಡ ಐಟಿ-ಬಿಟಿ ಕಂಪನಿಗಳು ತಮ್ಮೆ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಒದಗಿಸಿಕೊಟ್ಟು ಒಂದೂವರೆ ವರ್ಷವೇ ಕಳೆದಿದೆ. ಪ್ರಸ್ತುತ ದಿನಗಳಲ್ಲಿ ಕರೋನಾ ಸೋಂಕು ಹರಡುವಿಕೆ ಕ್ಷೀಣಿಸುತ್ತಿರುವ ಹಾಗೂ ಅನೇಕ ಮಂದಿ ಲಸಿಕೆಯನ್ನು ತೆಗೆದುಕೊಂಡಿರುವ ಕಾರಣದಿಂದ ಬಹುತೇಕ ಕಂಪನಿಗಳು ಕಚೇರಿಯಿಂದ ಕೆಲಸ ಮಾಡಲು ಉದ್ಯೋಗಿಗಳನ್ನು ಕರೆಸಿಕೊಳ್ಳಲು
ಮುಂದಾಗಿವೆ.

ಆದರೆ, ದೇಶಾದ್ಯಂತ ಇನ್ನೂ 12ಕೋಟಿ ಜನರು ಎರಡನೇ ಲಸಿಕೆ ತೆಗೆದುಕೊಂಡಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೆ, ಕರೋನಾದ ಮೂರನೇ ಅಲೆಯ ನಿರೀಕ್ಷೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿ ದ್ದಾರೆ. ಇಂತಹ ಸಂದರ್ಭ ದಲ್ಲಿ ಮನೆಯಿಂದಲೇ ಸುಸೂತ್ರವಾಗಿ ಕೆಲಸ ನಡೆಯುತ್ತಿರುವಾಗ ಅನವಶ್ಯಕವಾಗಿ
ಉದ್ಯೋಗಿಗಳನ್ನು ಕರೆಸಿಕೊಳ್ಳಲು ಮುಂದಾಗುವುದು ಎಷ್ಟು ಸರಿ? ಈ ನಿರ್ಧಾರವು ಕರೋನಾ ಹರಡುವಿಕೆಗೆ ಕಾರಣವಾಗುವುದ ರಲ್ಲಿ ಯಾವುದೇ ಸಂದೇಹವಿಲ್ಲ. ಅಷ್ಟೇ ಅಲ್ಲದೆ ಹಲವರು ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ಬರುವುದರಿಂದ ಜನದಟ್ಟಣೆ, ವಾಯುಮಾಲಿನ್ಯ, ಸಂಚಾರ ದಟ್ಟಣೆಯಂತಹ ಹಲವಾರು ಸಮಸ್ಯೆಗಳು ತಲೆದೋರುತ್ತವೆ. ಈಗಾಗಲೇ ದೆಹಲಿಯಲ್ಲಿ ಜನದಟ್ಟಣೆ, ವಾಯುಮಾಲಿನ್ಯದ ಪರಿಣಾಮ ವನ್ನು ಕಾಣುತ್ತಿದ್ದೇವೆ.

ಪ್ರಸ್ತುತ ಬೆಂಗಳೂರಿನ ವಾತಾವರಣವು ತಕ್ಕಮಟ್ಟಿಗೆ ಸುಧಾರಣೆಯಾಗಿದೆ. ಆದಕಾರಣ ಕಂಪನಿಗಳು ಆತುರದ ನಿರ್ಧಾರ ತೆಗೆದು ಕೊಳ್ಳದೆ, ಅತಿ ಅವಶ್ಯ ವಿರುವವರನ್ನು ಮಾತ್ರ ಕಚೇರಿಗಳಿಗೆ ಆಹ್ವಾನಿಸಿ ಇತರರಿಗೆ ಇನ್ನೂ ಕೆಲವು ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಒದಗಿಸಿಕೊಟ್ಟರೆ ಸಮಾಜಕ್ಕೆ, ಕಂಪನಿಗಳಿಗೆ ಹಾಗೂ ಉದ್ಯೋಗಿಗಳಿಗೆ ಹಲವು ಅನುಕೂಲಗಳಾಗುತ್ತವೆ. ಅಲ್ಲದೆ, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಅನೇಕರು ೨ನೇ ಲಸಿಕೆ ಹಾಕಿಸಿಕೊಳ್ಳಲು ಉದಾಸೀನತೆ ತೋರಿದ್ದಾರೆ ಎನ್ನಲಾಗಿದೆ.

ಅಂಥವರನ್ನು ಆಯಾ ಕಂಪನಿ ಗಳೇ ಗುರುತಿಸಿ, ಲಸಿಕೆ ಹಾಕಿಸಿಕೊಳ್ಳುವಂತೆ ಷರತ್ತು ವಿಧಿಸಬೇಕು. ಇಲ್ಲವಾ ದಲ್ಲಿ ಇಷ್ಟು ಕರೋನಾ ತೊಲಗಿಸಲು ತಪಸ್ಸಿನಂತೆ
ಮಾಡಿರುವ ಎಲ್ಲ ಪ್ರಯತ್ನಗಳೂ ವಿ-ಲವಾಗುತ್ತವೆ. ಆರೋಗ್ಯ ಸಮಾಜದ ಗುರಿ ಕೇವಲ ಸರಕಾರದ ಕೆಲಸವಲ್ಲ, ಅದು ಎಲ್ಲರ ಕರ್ತವ್ಯ ಎಂಬುದನ್ನು ಪ್ರತಿ ಯೊಬ್ಬರೂ ಅರಿತುಕೊಳ್ಳಬೇಕು