ಸರಕಾರ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರವು ಎಲ್ಲ ಕಚೇರಿಗಳಲ್ಲಿ ನಗದು ಘೋಷಣೆ ವಹಿಯನ್ನು ನಿರ್ವಹಿಸ ಬೇಕು ಎಂಬ ಆದೇಶ ಹೊರಡಿಸಿರುವುದು ಸ್ವಾಗತಾರ್ಹ.
ಆದರೆ ಈ ಆದೇಶ ಪಾಲನೆ ಎಷ್ಟರ ಮಟ್ಟಿಗೆ ಆಗುತ್ತದೆ ಮತ್ತು ಇದರಿಂದ ಭ್ರಷ್ಟಾಚಾರವನ್ನು ಎಷ್ಟರ ಮಟ್ಟಿಗೆ ತಡೆಯಬಹುದು ಎಂಬುದೇ ಪ್ರಶ್ನಾರ್ಹ. ಫಲಾನುಭವಿ ಮತ್ತು ಅಧಿಕಾರಿಗಳ ನಡುವೆ ವ್ಯವಹಾರ ಕುದುರದೇ ಇದ್ದಾಗಲೇ ಭ್ರಷ್ಟಾಚಾರ ಪ್ರಕರಣ ಬಯಲಿಗೆ ಬರುವುದು. ಇಷ್ಟು ದಿನ ಯಾರಾದರೊಬ್ಬರು ದೂರು ಕೊಟ್ಟಾಗಲೇ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಭ್ರಷ್ಟಾಚಾರಿ ವಿರುದ್ಧ ದಾಳಿ ಎಸಗಿ, ಕ್ರಮ ಕೈಗೊಂಡಿದ್ದಾರೆ. ಯಾರೂ ದೂರು ಕೊಡದೇ ಹೋದರೆ ಎಲ್ಲವೂ ಸಲೀಸಾಗೇ ನಡೆದು ಹೋಗುತ್ತದೆ. ಅಷ್ಟಕ್ಕೂ ದುಡ್ಡು ತೆಗೆದುಕೊಳ್ಳು ವವರೆಲ್ಲರೂ ಕಚೇರಿಯಲ್ಲೇ, ನಗದು ರೂಪದಲ್ಲೇ ಪಡೆಯುತ್ತಾರೆ ಎನ್ನಲಾ ಗುವುದಿಲ್ಲ.
ಪ್ರತಿ ಕಚೇರಿಗಳಲ್ಲೂ ಲಂಚದ ಹಣ ಪಡೆದು, ಸಂಗ್ರಹಿಸಿಟ್ಟು ಕೊಳ್ಳಲು ಏಜೆಂಟ್‌ರನ್ನೇ ನೇಮಕ ಮಾಡಲಾಗಿದೆ. ಇನ್ಮುಂದೆ ಅಂತಹ ಏಜೆಂಟರೇ ಅಽಕಾರಿಗಳ ಬಳಿ ಇರುವ ನಗದು ಹಣದ ಜವಾಬ್ದಾರರಾಗುವ ಸಾಧ್ಯತೆ ಇದೆ. ಅಲ್ಲದೇ, ಲಂಚದ ಹಣವು ಆಭರಣಗಳ ರೂಪಕ್ಕೂ ಪರಿವರ್ತನೆಯಾಗುವ ಅಪಾಯವಿದೆ. ಕಚೇರಿಯಲ್ಲಿ ವ್ಯವಹಾರ ಕುದುರಿಸಿ, ಕಚೇರಿಯಿಂದ ಆಚೆಗೆ ವ್ಯವಹಾರ ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ಸರಕಾರದ ಇಂತಹ ಆದೇಶಗಳಿಂದ ಭ್ರಷ್ಟಾ ಚಾರ ನಿಯಂತ್ರಣಕ್ಕೆ ಬರುತ್ತದೆ ಎಂಬ ನಂಬಿಕೆ ಇಲ್ಲ. ಆದ್ದರಿಂದ ಮೊದಲು ಸರಕಾರಿ ಕಚೇರಿಗಳಲ್ಲಿ ಸೃಷ್ಟಿ ಯಾಗಿರುವ ಏಜೆಂಟ್‌ರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ.
ಆದಾಯಕ್ಕಿಂತ ಅಽಕ ಆಸ್ತಿ ಹೊಂದಿದ ಅಽಕಾರಿಗಳು ಬಂಧನವಾದ ೨-೩ ದಿನಗಳಲ್ಲೇ ಮತ್ತೆ ಕರ್ತವ್ಯಕ್ಕೆ ಹಾಜರಾಗುವುದನ್ನು ತಪ್ಪಿಸಬೇಕಿದೆ. ಅಲ್ಲದೆ, ಪರರ ದುಡ್ಡು ಪಾಷಾಣಕ್ಕೆ ಸಮ ಎಂಬುದನ್ನು ನೌಕರರಿಗೆ ತಮ್ಮ ತರಬೇತಿ ಅವಽಯಲ್ಲೇ ಅರ್ಥ ಮಾಡಿಸಬೇಕು. ನೌಕರರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾ ರದ ಯೋಜನೆ, ಸೌಲಭ್ಯಗಳನ್ನು ಭ್ರಷ್ಟಾಚಾರ ರಹಿತವಾಗಿ ತಲುಪಿಸುವ ಜವಾಬ್ದಾರಿ ಹೊತ್ತು ಕೆಲಸ ಮಾಡುವಂತೆ ಅವರ ಮನಸ್ಥಿತಿ ಸಿದ್ಧಗೊಳಿಸಬೇಕು. ಇಲ್ಲವಾದಲ್ಲಿ ಸರಕಾರ ಇಂತಹ ಎಷ್ಟೇ ಕಠಿಣ ಕಾನೂನು, ಆದೇಶಗಳನ್ನು ಜಾರಿಗೊಳಿಸಿದರೂ ಪ್ರಯೋಜನವಾಗುವುದಿಲ್ಲ