Sunday, 15th December 2024

ಸರಳ ಆಚರಣೆಯಲ್ಲ ಸುರಕ್ಷತೆಯ ಅನುಸರಣೆ

ಇಡೀ ವಿಶ್ವದಲ್ಲಿ ಮಹತ್ವ ಪಡೆದುಕೊಂಡಿರುವ ನಾಡಿನ ಪ್ರಮುಖ ಆಚರಣೆ ಮೈಸೂರು ದಸರಾ. ಆದರೆ ಈ ಬಾರಿ ಕರೋನಾ ಸಂಕಷ್ಟದಿಂದಾಗಿ ಆಚರಣೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂಬುದು ಬಹುತೇಕರ ಭಾವನೆ. ಆದರೆ ಇದನ್ನು ಸರಳ ಆಚರಣೆ ಎಂಬುದಾಗಿ ಭಾವಿಸುವುದು ಸಮಂಜಸವಲ್ಲ. ಕರೋನಾ ಮಹಾಮಾರಿಯಿಂದ ಸಂಭವಿಸಬಹುದಾದ ತೊಂದರೆ ಯಿಂದ ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ಸರಕಾರ ಕೈಗೊಂಡಿರುವ ಮಹತ್ವದ ನಿರ್ಣಯ.

ಇದು ಕೇವಲ ಮೈಸೂರು ದಸರಾ ಆಚರಣೆಗೆ ಮಾತ್ರವೇ ಸೀಮಿತವಾಗಿಲ್ಲ. ನಾಡಿನ ನಾನಾ ಭಾಗಗಳಲ್ಲಿ ಈವರೆಗೆ ಆಚರಿಸಿ ಕೊಂಡು ಬಂದಿರುವ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿಯೂ ಇದೇ ರೀತಿಯ ಸುರಕ್ಷತೆ ಮುಂದುವರಿದಿದೆ. ಮೈಸೂರು ದಸರಾ ಅದ್ಧೂರಿಯ ಕಾರಣದಿಂದಾಗಿ ಹಾಗೂ ಅರಸರ ಕಾಲದ ಆಳ್ವಿಕೆಯ ಪರಂಪರೆಯ ಕಾರಣದಿಂದಾಗಿ ಜಗತ್ತಿನಾದ್ಯಂತ ಗಮನ ಸೆಳೆದಿದ್ದರೂ, ಮತ್ತಷ್ಟು ಸ್ಥಳಗಳು ಧಾರ್ಮಿಕವಾಗಿ ಪ್ರಾಮುಖ್ಯತೆ ಪಡೆದುಕೊಂಡಿವೆ.

ಅವುಗಳೆಂದರೆ, ಶೃಂಗೇರಿ ಶಾರದಾ ಪೀಠ, ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ, ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ, ಶಿರಸಿ ಮಾರಿಕಾಂಬಾ ದೇವಿ ಶರನ್ನವ ರಾತ್ರಿ ಉತ್ಸವ, ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲಿ ಶರನ್ನವರಾತ್ರಿ ಉತ್ಸವ ಸೇರಿ ದಂತೆ ಮತ್ತಷ್ಟು ಸೇರಿವೆ. ಈ ಎಲ್ಲ ಕ್ಷೇತ್ರಗಳಲ್ಲಿಯೂ ಈ ಬಾರಿ ಸುರಕ್ಷತೆಯ ದೃಷ್ಟಿಯಿಂದ ಸರಳ ಆಚರಣೆಗೆ ನಿರ್ಧರಿಸಲಾಗಿದ್ದು, ಸರಕಾರ ಸೂಚಿಸಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

ಮೈಸೂರು ದಸರಾ ನಂತರ ರಾಜ್ಯದಲ್ಲಿ ಜನಪ್ರಿಯತೆಗಳಿಸಿರುವ ಮಂಗಳೂರು ದಸರಾವನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಮಂಡಳಿಯವರು ಈ ಬಾರಿ ನಮ್ಮ ‘ದಸರಾ- ನಮ್ಮ ಸುರಕ್ಷೆ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲು
ನಿರ್ಧರಿಸಿದ್ದಾರೆ. ಆದ್ದರಿಂದ ಈ ಬಾರಿಯ ದಸರಾ ಆಚರಣೆಯನ್ನು ನಾವೇಲ್ಲರೂ ಸರಳ ಆಚರಣೆ ಎಂಬುದಾಗಿ ಕರೆಯಲ್ಪಡು ವುದಕ್ಕಿಂತಲೂ ಸುರಕ್ಷತೆಗೆ ನೀಡಿರುವ ಆದ್ಯತೆ ಎಂಬುದಾಗಿ ಭಾವಿಸುವುದು ಸೂಕ್ತ.