ಮೈಸೂರು ಮಹಾನಗರಪಾಲಿಕೆಯಲ್ಲಿ ಬಿಜೆಪಿ ಮೇಯರ್ ಆಯ್ಕೆಯೊಂದಿಗೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮರೆಯುವುದಕ್ಕೆ ಆರಂಭಿಸಿದೆ ಎನ್ನಬಹುದು. ಬಿಜೆಪಿ ಉತ್ತರ ಕರ್ನಾಟಕ ಹೊರತುಪಡಿಸಿ ಬೆಂಗಳೂರು ನಗರದಲ್ಲಿ ಮಾತ್ರವೇ ತನ್ನ ಪ್ರಾವಲ್ಯ ಮೆರೆದಿತ್ತು.
ಹಳೇ ಮೈಸೂರು ಭಾಗದಲ್ಲಿ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಲ್ಲಲ್ಲಿ ಒಂದೊಂದು ಸ್ಥಾನ ಪಡೆದುಕೊಳ್ಳುವ ಮೂಲಕ ಖಾತೆ ತೆರೆದಿತ್ತು. ಮೈಸೂರು ಹೊರತುಪಡಿಸಿ ಹಾಸನದಲ್ಲಿ ಪ್ರೀತಂ ಗೌಡ ಮತ್ತು ಮಂಡ್ಯ ಜಿಲ್ಲೆಯಲ್ಲಿ ಉಪಚುನಾವಣೆಯಲ್ಲಿ ನಾರಾಯಣ ಗೌಡ ಗೆಲುವು ಸಾಧಿಸುವ ಮೂಲಕ ಬಿಜೆಪಿಯ ಹೊಸ ಅಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ತೆರೆದಿದ್ದರು.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಈವರೆಗೆ ಹಿಡಿಯಲು ಸಾಧ್ಯವಾಗಿರ ಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ನ ಹೊಂದಾಣಿಕೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೇ ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಕಳೆದ ಬಾರಿ ಜೆಡಿಎಸ್ ಮೇಯರ್ ಆಯ್ಕೆ ಆಗುವ ಮೂಲಕ ಅಚ್ಚರಿಯ ಫಲಿತಾಂಶ ಮೂಡಿ ಬಂದಿತ್ತು.
ಇದು ಸಿದ್ದರಾಮಯ್ಯ ಅವರ ರಾಜಕೀಯ ವೈಫಲ್ಯ ಎಂಬ ಟೀಕೆಗಳು ವ್ಯಕ್ತವಾಗಿದ್ದು, ಅವರಿಗೆ ಹಿನ್ನಡೆ ಯನ್ನುಂಟು ಮಾಡಿದ ಜೆಡಿಎಸ್ ಮೇಯರ್ ಪಟ್ಟು ಪಡೆದು ಕೊಂಡಿತ್ತು. ಆದರೆ., ಅಚ್ಚರಿಯ ಬೆಳವಣಿಗೆಯಲ್ಲಿ ಮೇಯರ್ ರಾಜೀನಾಮೆ ನೀಡಿ ಮರಳಿ ಮೇಯರ್ ಚುನಾವಣೆ ನಡೆದಿದ್ದು, ಈಗ ಜೆಡಿಎಸ್ ಬೆಂಬಲ ಪಡೆದಿರುವ ಬಿಜೆಪಿ ಮೇಯರ್ ಸ್ಥಾನವನ್ನು ಅಲಂಕರಿಸಿದೆ. ಆ ಮೂಲಕ ಬಿಜೆಪಿ ಮೈಸೂರು ಭಾಗದಲ್ಲಿ ತನ್ನ ಖಾತೆ ತೆರೆದಿದೆ.
ಈ ಗೆಲುವು ಇದೀಗ ತಾನೇ ಸಿಎಂ ಸ್ಥಾನ ವಹಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರಿಗೂ ಒಂದು ರೀತಿಯಲ್ಲಿ ನೆಮ್ಮದಿ ತಂದಿದ್ದು, ಮುಂದೆ ನಡೆಯುತ್ತಿರುವ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳ ಚುನಾವಣೆ ಮೇಲೆ ಪರಿಣಾಮ ಬೀರುವುದು ಖಚಿತ ಎನ್ನಬಹುದು.