Thursday, 12th December 2024

ಒಲಂಪಿಕ್ಸ್‌’ಗಿಂತಲೂ ಸುರಕ್ಷತೆಯೇ ಮುಖ್ಯ

ಜಾಗತಿಕ ಕ್ರೀಡಾಕೂಟಗಳು ದೇಶ – ವಿದೇಶಗಳ ನಡುವಿನ ಸ್ಪರ್ಧೆಯಾದರೂ, ಸಾಮರಸ್ಯದ ಪ್ರತೀಕ. ಕೆಲವೊಮ್ಮೆ ಪ್ರತಿಷ್ಠೆ ಯಾಗಿಯೂ ಕಂಡು ಬರುವುದುಂಟು. ಈ ಕ್ರೀಡಾಕೂಟಗಳು ಬದುಕಿಗೆ ಅವಶ್ಯಕತೆಯೇ ಹೊರತು ಅನಿವಾರ್ಯವಲ್ಲ.

ಪ್ರಸ್ತುತ ಜಪಾನ್‌ನ ಶೇ.80ರಷ್ಟು ಜನರು ಇದೇ ರೀತಿಯಾಗಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಿರುವ ಕಾರಣ ಒಲಪಿಂಕ್ಸ್. ಈ ಕ್ರೀಡಾಕೂಟ ನಡೆಸಬೇಕೋ, ಬೇಡವೋ ಎಂಬುದು ಚರ್ಚಾರ್ಹ ಸಂಗತಿ. ಕರೋನಾ ಸಂಕಷ್ಟದ ಕಾರಣ 2020ನೇ ಸಾಲಿನಿಂದ
ಂ z q ಲ ಟಿ g ಟೋಕಿಯೋ ಒಲಪಿಂಕ್ಸ್‌ನ್ನು ಜುಲೈ 23ರಿಂದ ಆಗಸ್ಟ್ 8ರವರೆಗೆ ನಡೆಸುವ ಬಗ್ಗೆ ಮಾಧ್ಯಮವೊಂದು ಸಮೀಕ್ಷೆ ನಡೆಸಿ ವರದಿ ಪ್ರಕಟಿಸಿದೆ.

ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಹೆಚ್ಚಿನ ಪ್ರಮಾಣದ ಜನರು, ಒಲಂಪಿಕ್ಸ್ ಆಯೋಜನೆಯನ್ನು ನಿರಾಕರಿಸಿದ್ದಾರೆ. ಶೇ.43 ರಷ್ಟು ಜನ ರದ್ದುಪಡಿಸುವಂತೆ ಆಗ್ರಹಿಸಿದ್ದರೆ, ಶೇ.40ರಷ್ಟು ಜನರು ಮುಂದೂಡುವಂತೆ ಕೋರಿದ್ದಾರೆ. ಹೊರದೇಶ ಗಳಿಂದ ಕ್ರೀಡಾಪಟುಗಳನ್ನು ಆಹ್ವಾನಿಸಿ ಅವರಿಗೆ ಸೂಕ್ತ ರಕ್ಷಣೆ ಒದಗಿಸುವುದು ಕಷ್ಟವಾಗಲಿದೆ ಎಂಬುದು ಜನತೆಯ ವಿರೋಧಕ್ಕಿರುವ ಪ್ರಮುಖ ಕಾರಣ.

ತನ್ನ ದೇಶದಲ್ಲಿ ನಡೆಯುವ ಜಾಗತಿಕ ಮಟ್ಟದ ಕ್ರೀಡಾಕೂಟವನ್ನು ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಜನರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿರುವುದು ಮಾದರಿ ನಡೆ. ಜಪಾನ್‌ನ ವೈದ್ಯಕೀಯ ಕ್ಷೇತ್ರದ ತಜ್ಞರ ಅಭಿಪ್ರಾಯವೂ ಜನಾಭಿಪ್ರಾಯವನ್ನೇ ಹೋಲುತ್ತಿದೆ. ಪ್ರಸ್ತುತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗಿರುವ ಇಂಥ ಸ್ಥಿತಿಯಲ್ಲಿ ಒಲಪಿಂಕ್ಸ್ ನಡೆಸಿ ವೈದ್ಯಕೀಯ ಕ್ಷೇತ್ರದ ಮೇಲೆ ಮತ್ತಷ್ಟು ಒತ್ತಡವೇರುವುದು ಸರಿಯಲ್ಲ ಎಂದು ವೈದ್ಯಕೀಯ ತಜ್ಞರು ಸಲಹೆ ನೀಡಿದ್ದಾರೆ.

ಜಪಾನ್‌ನ ಒಟ್ಟಾರೆ ಶೇ.87.7 ನಾಗರಿಕರ ಅಭಿಪ್ರಾಯ ಒಲಂಪಿಕ್ಸ್ ನಡೆಸುವುದನ್ನು ವಿರೋಧಿಸುತ್ತಿದೆ. ಜಪಾನ್‌ನ ಜನರು ಜಾಗತಿಕ ಕ್ರೀಡಾಕೂಟಕ್ಕಿಂತಲೂ ಆರೋಗ್ಯ ಸುರಕ್ಷತೆಯೇ ಮುಖ್ಯ ಎಂಬ ದೃಢ ನಿರ್ಧಾರಕ್ಕೆ ಬದ್ಧವಾಗಿರುವುದನ್ನು ಗಮನಿಸಿ ದಾಗ, ಈ ನಡೆ ಇತರ ದೇಶಗಳಿಗೂ ಮಾದರಿ ಅನಿಸುತ್ತದೆ.