Saturday, 14th December 2024

ಕೈಗಾರಿಕೆಗಳ ಮಾಲಿನ್ಯ ನಿಯಂತ್ರಿಸಿ

Blast

ಬೆಂಗಳೂರು ನಗರದಲ್ಲಿರುವ ಕೆಮಿಕಲ್ ಫ್ಯಾಕ್ಟರಿಗಳು, ಬ್ಯಾಟರಿ ತಯಾರಿಕಾ ಘಟಕಗಳು, ವಿವಿಧ ಕಾರ್ಖಾನೆಗಳು ತ್ಯಾಜ್ಯವನ್ನು ಸಂಸ್ಕರಿಸದೆ ಹಾಗೆಯೇ ಬಿಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರುಗಳ ಮಹಾಪೂರವೇ ಹರಿದು ಬರುತ್ತಿವೆ.

ಕಾರ್ಖಾನೆಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ಕೈಗಾರಿಕಾ ಘಟಕಗಳಿಂದ ರಾಸಾಯನಿಕ ತ್ಯಾಜ್ಯ ಹರಿಯುವ ಪ್ರಮಾಣ ಹೆಚ್ಚಿದೆ. ಸಂಸ್ಕರಣೆ ಮಾಡದೆ ನೇರವಾಗಿ ಚರಂಡಿ ಹಾಗೂ ರಾಜಕಾಲುವೆಗೆ ಹರಿಯ ಬಿಡಲಾಗುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ದುರ್ವಾಸನೆಯಿಂದ ಸಂಕಷ್ಟ ಪಡುತ್ತಿದ್ದಾರೆ.

ಜತೆಗೆ ಕೆರೆಗಳಿಗೆ ಮಾಲಿನ್ಯ ನೀರು ಹರಿಯುತ್ತಿರುವುದರಿಂದ ಜಲ ಮೂಲಗಳು ಕಲುಷಿತಗೊಳ್ಳುತ್ತಿವೆ. ಬಹಳಷ್ಟು ಕೈಗಾರಿಕೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳೇ ಇಲ್ಲ. ಇದ್ದ ಕೆಲವು ಕೈಗಾರಿಕೆಗಳಲ್ಲೂ ಅವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ತ್ಯಾಜ್ಯವನ್ನು ಶುದ್ಧಿಕರಿಸದೇ ಹಾಗೆಯೇ ಬಿಡಲಾಗುತ್ತಿದೆ.

ಇದು ಹತ್ತಿರದ ಕರೆಗಳಿಗೆ ಸೇರಿ, ಕೆರೆಗಳು ತ್ಯಾಜ್ಯಮಯವಾಗಿವೆ. ಕೆರೆಯ ಹತ್ತಿರ ಹೋಗಬೇಕಾದರೆ ಮೂಗು ಮುಚ್ಚಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಗಳಿಂದ ಹರಿ ಬಿಡುತ್ತಿರುವ ಲೋಹ ಮಿಶ್ರಿತ ರಾಸಾಯನಿಕ ನೀರಿನಿಂದ ಪ್ರತಿದಿನ ಸಾವಿರಾರು ಜಲಚರಗಳು ಸಾಯುತ್ತಿವೆ. ಹೀಗೆ ಕೆರೆಗಳಲ್ಲಿ ರಾಸಾಯನಿಕ ತುಂಬುತ್ತಿರುವುದರಿಂದ ಕೊಳವೆ ಬಾವಿಗಳಲ್ಲಿ ಕೂಡ ರಾಸಾಯನಿಕ ಮಿಶ್ರಿತ ನೀರು ಬರುತ್ತಿದೆ. ಕೈಗಾರಿಕಾ ತ್ಯಾಜ್ಯದ ಜತೆಗೆ ದೊಡ್ಡ ಹೋಟೆಲ್‌ಗಳು, ಮಾಂಸದ ತ್ಯಾಜ್ಯ, ಅವೈeನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿರು ವಲ್ಲಿ ಬ್ಯಾಟರಿ ಕಂಪನಿಗಳು ಮುಂಚೂಣಿಯಲ್ಲಿವೆ.

ಬ್ಯಾಟರಿಗಳ ಲೋಹಗಳು ಮತ್ತು ಸಲ್ಯೂರಿಕ್ ಆಮ್ಲವನ್ನು ಹೊಂದಿರುವ ತ್ಯಾಜ್ಯವನ್ನು ಎಸೆಯು ತ್ತಾರೆ. ಸೀಸದ ಮಿಶ್ರ ಲೋಹವನ್ನು ಹೊರ ತೆಗೆಯಲು ಕುದಿಸುವಾಗ, ಚಿಮಣಿಯಿಂದ ಹೊಗೆಯು ೨ ಕಿಲೋ ಮೀಟರ್‌ವರೆಗೆ ಹರಡಿ ಗಾಳಿಯನ್ನು ಕಲುಷಿತಗೊಳಿಸುತ್ತದೆ. ಸೀಸವು ವಿಷಕಾರಿಯಾಗಿದ್ದು, ಬೆಳೆಗಳ ಮೇಲೆ ಪರಿಣಾಮ ಬೀರುತ್ತಿರುವುದು ಪತ್ತೆಯಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೋವಿಡ್ ಪೂರ್ವದಲ್ಲಿ ದಾಳಿ ಮಾಡುವ ಮೂಲಕ ಕೈಗಾರಿಕೆಗಳನ್ನು ಎಚ್ಚರಿಸುತ್ತಿದ್ದರು.

ಇದರಿಂದ ಕೈಗಾರಿಕಾ ಮಾಲೀಕರೂ ಎಚ್ಚರಿಕೆಯಿಂದ ಇರುತ್ತಿದ್ದರು. ಕೋವಿಡ್ ನಂತರ ತಪಾ ಸಣೆಯೇ ಮಾಡಿಲ್ಲದ ಕಾರಣ ತ್ಯಾಜ್ಯದ ಸಮಸ್ಯೆ ದುಪ್ಪಟ್ಟಾಗಿದೆ. ಆದ್ದರಿಂದ ಅಧಿಕಾರಿಗಳು ಮತ್ತೆ ಎಚ್ಚೆತ್ತು ಕೈಗಾರಿಕೆಗಳನ್ನು ಹತೋಟಿಗೆ ತೆಗೆದುಕೊಳ್ಳಬೇಕಿದೆ.