ಜಗತ್ತಿನ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತವೇ ನಂಬರ್ ಒನ್ ದೇಶ ಎಂಬ ಖ್ಯಾತಿ(?)ಗೆ ಪಾತ್ರ ವಾಗಿದೆ. ಈವರೆಗೆ ಜಾಗತಿಕ ಜನಸಂಖೆಯ ಶೇ.೧೯, ಶೇ.೧೮ರ ಪಾಲನ್ನು ಅನುಕ್ರಮವಾಗಿ ಹೊಂದಿದ್ದ ಎರಡೂ ದೇಶಗಳು ಶೇಕಡಾವಾರು ಪ್ರಮಾಣದಲ್ಲಿ ಸಮನಾಯಿತು.
ಜನ ಸಂಖ್ಯೆಯ ವಿಚಾರದಲ್ಲಿ ಭಾರತವೇ ವಿಶ್ವಕ್ಕೆಲ್ಲ ದೊರೆ ಎಂಬುದಕ್ಕೆ ಹೆಮ್ಮೆ ಪಡಬೇಕೇ, ಹೀಗೆ ಅನಿಯಂತ್ರಿತ ವಾಗಿ ಬೆಳೆಯುತ್ತಿರುವ ಜನಸಂಖ್ಯೆ ದುಷ್ಕರಿಣಾಮಗಳ ಬಗ್ಗೆ ವ್ಯಥೆಪಡಬೇಕೇ ಗೊತ್ತಾಗುತ್ತಿಲ್ಲ. ಏಕೆಂದರೆ ಭೂಮಿ ಮೇಲಣ ಸಂಪನ್ಮೂಲಗಳು ಸೀಮಿತ. ಆದರೆ ಜನಸಂಖ್ಯೆ ಗುಣಾ ಕಾರ ಮಾದರಿಯಲ್ಲಿ ಹೆಚ್ಚುತ್ತಲೇ ಹೋಗುತ್ತಿದೆ. ಮುಂದುವರಿದ ದೇಶಗಳು ಇದನ್ನು ಹೇಗೋ ತಡೆಯಬಲ್ಲವಾದರೂ ಈಗಷ್ಟೇ ಪ್ರಗತಿಯ ದಾಪುಗಾಲಿಟ್ಟು ಹೊರಟಿರುವ ಈವರೆಗಿನ ‘ಬಡದೇಶ’ ಭಾರತಕ್ಕೆ ಸಂಪನ್ಮೂಲ ಕೊರತೆ, ಶಿಕ್ಷಣ, ಆರೋಗ್ಯ ಮುಂತಾದ ಸೇವೆಗಳ ಅಲಭ್ಯತೆ, ಅಪೌಷ್ಟಿಕತೆ ಮುಂತಾದವು ಗಳು ಸಂಕಷ್ಟವನ್ನೇ ತಂದೊಡ್ಡುತ್ತದೆ.
ಬಹುದೊಡ್ಡ ಸಮುದಾಯ ಸೌಲಭ್ಯ ವಂಚಿತ ಜೀವನ ನಡೆಸಬೇಕಾದ ಸ್ಥಿತಿ ಬರಲಿದೆ. ಈ ಬಗೆಗಿನ ಅರಿವು ಮೂಡಿಸಲೆಂದೇ ೧೯೮೯ರಿಂದ ವಿಶ್ವ ಸಂಸ್ಥೆ ‘ಜನಸಂಖ್ಯಾ ದಿನ’ ಆಚರಣೆಗೆ ಮುಂದಾಗಿದೆ. ಗಮನಾರ್ಹ ಸಂಗತಿ ಯೆಂದರೆ, ಈ ರೀತಿ ಜನಪ್ರಮಾಣ ಹೆಚ್ಚಳವು ಜಗತ್ತಿನ ಕೇವಲ ಒಂಬತ್ತು ದೇಶಗಳಲ್ಲಿ ಕೇಂದ್ರೀಕೃತವಾಗುತ್ತಿದೆ. ಚೀನಾದಲ್ಲಿ ಈಗಾಗಲೇ ಜನಸಂಖ್ಯೆ ನಿಯಂತ್ರಣ ಕ್ರಮಗಳು ಕಠಿಣವಾಗಿ ಜಾರಿಯಲ್ಲಿವೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಜಗತ್ತಿನಲ್ಲಿ ಜನರ ಜೀವಿತಾವಧಿ ವಿಸ್ತರಿಸುತ್ತಿದ್ದು, ಒಟ್ಟಾರೆ ಸರಾಸರಿ ಜನಸಂಖ್ಯೆ ವೃದ್ಧರಾಗುತ್ತಿದ್ದಾರೆ.
೨೦೫೦ರ ಹೊತ್ತಿಗೆ, ಜಗತ್ತಿನ ಆರರಲ್ಲಿ ಒಬ್ಬ ವ್ಯಕ್ತಿ(೧೬%)ಯ ವಯೋಮಾನ ೬೫ಕ್ಕಿಂತ ಅಧಿಕ ಆಗಿರಲಿದೆ. ೮೦ಕ್ಕೂ ಅಽಕ ವಯಸ್ಸಾದ ವ್ಯಕ್ತಿಗಳ ಸಂಖ್ಯೆ
ಈಗಿರುವುದಕ್ಕಿಂತ ಮೂರು ಪಟ್ಟು ಎನ್ನುತ್ತದೆ ವಿಶ್ವಸಂಸ್ಥೆಯ ಅಂದಾಜು. ಭಾರತದಲ್ಲಿ ಕೇಂದ್ರ ಬಜೆಟ್ ಸಹ ಪರಿಣಾಮಕಾರಿ ಆರೋಗ್ಯ ಸೇವೆಯಿಂದ
ಸಾವು ಮುಂದೂಡಿಕೆ ಯಾಗುತ್ತಿದೆ ಎಂದಿದೆ. ಕೆಲ ದೇಶಗಳಲ್ಲಿ ಜನಸಂಖ್ಯೆ ಏರಿಳಿತಕ್ಕೆ ವಲಸೆಯೂ ಕಾರಣವಾಗುತ್ತದೆ. ಆದರೆ ಸಂತಾನೋತ್ಪತ್ತಿ
ಪ್ರಮಾಣ ಕಡಿಮೆಯಾಗುತ್ತಿದೆ. ಭಾರತದಲ್ಲಿ ಸದ್ಯದ ಮಟ್ಟಿಗೆ ಯುವಕರ ಸಂಖ್ಯೆ ಹೆಚ್ಚಿದ್ದರೂ ಮುಂದಿನ ದಶಕಗಳಲ್ಲಿ ನಿವೃತ್ತರ ಸಂಖ್ಯೆ ಹೆಚ್ಚಲಿದೆ.
ಇದಕ್ಕಾಗಿ ನಿವೃತ್ತಿ ವಯಸ್ಸನ್ನು ೭೦ಕ್ಕೆ ಏರಿಸುವ ಪ್ರಸ್ತಾಪವನ್ನೂ ಆರ್ಥಿಕ ತಜ್ಞರು ಮಾಡಿzರೆ. ಜನನ ಪ್ರಮಾಣ ಕುಸಿತ ಜನಸಂಖ್ಯಾ ಅಸಮಾನತೆ,
ಆ ಮೂಲಕ ಅಭಿವೃದ್ಧಿ ಅಸಮಾನತೆಗೂ ಕಾರಣ ಆಗಲಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಆರ್ಥಿಕತೆಯ ಮೇಲಿನ ಹಿಡಿತ, ಜೀವನ ವೆಚ್ಚ ನಿಯಂತ್ರಣ,
ಶಿಕ್ಷಣ, ಆರೋಗ್ಯ ಸೇವೆ ದುಬಾರಿಯಾಗದಂತೆ ಎಚ್ಚರ ವಹಿಸಬೇಕಿದೆ.