ರಾಜ್ಯದ ಅಭಿವೃದ್ಧಿಯಲ್ಲಿ ಧಾರ್ಮಿಕ ಕ್ಷೇತ್ರವೂ ಬಹುಮುಖ್ಯ. ಆದರೆ ಇತ್ತೀಚೆಗೆ ಧಾರ್ಮಿಕ ವಲಯವನ್ನು ಕಡೆಗಣಿಸಲಾಗು ತ್ತಿದೆಯೇ ಅನ್ನುವ ಸ್ಥಿತಿ ನಿರ್ಮಾಣವಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ನಡೆ ಕಾರಣ. ಖಾಸಗಿ ದೇವಸ್ಥಾನಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದ ಧಾರ್ಮಿಕ ದತ್ತಿ ಇಲಾಖೆ, ತಾತ್ಕಾಲಿಕವಾಗಿ ಆದೇಶವನ್ನು ತಡೆಹಿಡಿಯಲು ಸೂಚನೆ ನೀಡಿದೆ. ದೇವಾಲಯಗಳ ಅಭಿವೃದ್ಧಿಗೆ ಸಹಕಾರ ನೀಡುವು ದನ್ನು ಹೊರತುಪಡಿಸಿ, ಇರುವ ದೇವಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಹೊರಟ ನಡೆ ಸಮರ್ಪಕವಲ್ಲ. ಆಂಧ್ರಪ್ರದೇಶ ದಲ್ಲಿ ಧಾರ್ಮಿಕ ಕಾರ್ಯ ಗಳಿಗೆ ದೊರೆಯುತ್ತಿರುವ ಆದ್ಯತೆಯನ್ನು ಗಮನಿಸಿದಾಗ ಕರ್ನಾಟಕದಲ್ಲಿ ಧಾರ್ಮಿಕ ಕ್ಷೇತ್ರ ಕಡೆಗಣನೆ ಗೊಳಗಾಗುತ್ತಿದೆಯೇ ಎನ್ನುವ ಸ್ಥಿತಿ ಕಂಡುಬರುತ್ತಿದೆ.
ಹಿಂದೂ ಧರ್ಮದ ಉತ್ತೇಜನದ ಕಾರಣಕ್ಕಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ೫೦೦
ದೇವಸ್ಥಾನಗಳನ್ನು ನಿರ್ಮಿಸಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ನಿರ್ಧರಿಸಿದೆ. ಈ ನಿರ್ಣಯ ಟ್ರಸ್ಟ್‌ಗೆ ಸಂಬಂಧಿ ಸಿದ್ದದಾದರೂ, ಸರಕಾರದಿಂದ ದೊರೆಯುತ್ತಿರುವ ಸ್ಪಂದನೆ ಪೂರಕವಾಗಿದೆ.
ಈಗಾಗಲೇ ಆಂಧ್ರ ಮತ್ತು ತೆಲಂಗಾಣದಲ್ಲಿ ನಿರ್ಮಾಣವಾಗಿ ನಿತ್ಯ ಪೂಜೆ ನಡೆಯುತ್ತಿರುವ ದೇವಸ್ಥಾನಗಳಲ್ಲಿ ‘ಶ್ರೀನಿವಾಸ ಕಲ್ಯಾಣಂ ಯೋಜನೆ’ ಅಡಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸೇವೆ ಹಮ್ಮಿಕೊಳ್ಳಲು ಕೂಡ ಟಿಟಿಡಿ ಚಿಂತನೆ ನಡೆಸಿದೆ. ಇದರೊಂದಿಗೆ 500 ಮಂದಿರಗಳಿರುವ ಸುತ್ತಲಿನ ಗ್ರಾಮಗಳಲ್ಲಿ ಧರ್ಮ ರಥಗಳ ಉತ್ಸವ ನಡೆಸಿ ಧಾರ್ಮಿಕ ಜಾಗೃತಿಗೂ ರೂಪು ರೇಷೆ ಸಿದ್ಧಪಡಿಸಲಾಗಿದೆ.
ರಾಜ್ಯವೂ ಸಹ ಅನೇಕ ಮಹತ್ವದ ಧಾರ್ಮಿಕ ಸ್ಥಳಗಳನ್ನು ಹೊಂದಿದ್ದು, ಸರಕಾರದಿಂದ ಪೂರಕ ಸಹಕಾರ ದೊರೆಯುವುದು ಮುಖ್ಯವೇ ಹೊರತು, ಅವುಗಳ ಮೇಲೆ ನಿಯಂತ್ರಣ ಸಾಧಿಸುವ ನಡೆ ಸರಿಯಲ್ಲ.