Thursday, 19th September 2024

ಬೆಲೆ ಏರಿಕೆಗೆ ಬೀಳಲೇಬೇಕಿದೆ ಬ್ರೇಕ್

ಕರೋನಾದ ಹೊಡೆತದಿಂದ ತತ್ತರಿಸಿರುವ ಬೆನ್ನಲ್ಲೇ, ಇದೀಗ ಇಡೀ ದೇಶದಲ್ಲಿ ಬೆಲೆ ಏರಿಕೆಯ ಬಿಸಿ ಹೆಚ್ಚಾಗು ತ್ತಿದೆ. ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ, ಎಲ್‌ಪಿಜಿ ಗ್ಯಾಸ್‌ನಿಂದ ಹಿಡಿದು ಪ್ರತಿಯೊಂದು ವಸ್ತುವಿನ ಬೆಲೆಯೂ ಗಗನಕ್ಕೆ ಏರಿಕೆಯಾಗಿದೆ. ಬುಧವಾರವೂ ಎಲ್‌ಪಿಜಿ ಬೆಲೆಯಲ್ಲಿ ೧೫ ರುಪಾಯಿ ಏರಿಕೆಯಾಗುವ ಮೂಲಕ ದೇಶದ ಕೆಲ ನಗರಗಳಲ್ಲಿ ಸಾವಿರ ರು.ಗೆ ಅಡುಗೆ ಗ್ಯಾಸ್ ಬಂದು ನಿಂತಿದೆ.

ಒಂದೆಡೆ ಕರೋನಾ ನೆಪದಲ್ಲಿ ಲಕ್ಷಾಂತರ ಮಂದಿಗೆ ಆರ್ಥಿಕ ಹೊಡೆತ ಬಿದ್ದಿದೆ. ಇದಕ್ಕೆ ತದ್ವಿರುದ್ಧ ಎನ್ನುವಂತೆ, ದಿನ ಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದರಲ್ಲಿಯೂ ಡಿಸೇಲ್ ಹಾಗೂ ಮನೆ ಬಳಕೆ ಎಲ್‌ಪಿಜಿ ಗ್ಯಾಸ್‌ನಲ್ಲಿನ ಏರಿಕೆ ಇತರ ವಸ್ತುಗಳ ಮೇಲೆಯೂ ಬಾರಿ ಪರಿಣಾಮ ಬೀರುವುದರಿಂದ, ಮಧ್ಯಮ ವರ್ಗದ ಜನರಿಗೆ ಬಾರಿ ಸಮಸ್ಯೆಯಾಗುತ್ತದೆ. ಆಡಳಿತ ನಡೆಸುವವರು, ಬೆಲೆ ಏರಿಕೆಗೆ ವಿವಿಧ ಕಾರಣ ನೀಡಬಹುದು. ದೇಶದ ಅಭಿವೃದ್ಧಿಗೆ ಸಬ್ಸಿಡಿ ಮಾರಕವಾಗಲಿದೆ. ಇದರಿಂದ ದೇಶದ ಆರ್ಥಿಕತೆಯ ಮೇಲೆ ಬಾರಿ ಪರಿಣಾಮ ಬೀರುತ್ತದೆ ಎನ್ನುವ ಮಾತನ್ನು ಹೇಳಬಹುದು.

ಆದರೆ ಈ ರೀತಿ ನಿತ್ಯ ಬೆಲೆ ಏರಿಕೆ ನಿಯಂತ್ರಣಕ್ಕೆ ರಾಜ್ಯ ಅಥವಾ ಕೇಂದ್ರ ಸರಕಾರ ಅಗತ್ಯ ಕ್ರಮವಹಿಸದೇ ಹೋದರೆ, ಜನರ ಮೇಲೆ ಬಾರಿ ಪರಿಣಾಮ ಬೀರ ಲಿದೆ. ಇದಿಷ್ಟೇ ಅಲ್ಲದೇ ಕಟ್ಟಡ ಕಾಮಗಾರಿಯ ಕಚ್ಚಾ ಸಾಮಗ್ರಿಗಳ ಮೇಲಿನ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದು, ಕಟ್ಟಡ ಕಾರ್ಮಿಕರಿಗೆ ಹಾಗೂ ಮಾಲೀಕರಿಗೆ ನುಂಗಲಾರದ ತುತ್ತಾಗಿದೆ. ಈ ಎಲ್ಲ ವಿಷಯದಲ್ಲಿ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇದರೊಂದಿಗೆ ಪ್ರತಿಪಕ್ಷಗಳು, ಈ ವಿಷಯ ವನ್ನು ಕೇವಲ ರಾಜಕೀಯಕ್ಕೆ ಬಳಸಿಕೊಳ್ಳದೇ, ತಾರ್ತಿಕ ಅಂತ್ಯ ಕಾಣುವಂತೆ ನೋಡಿಕೊಳ್ಳಬೇಕಿದೆ

Leave a Reply

Your email address will not be published. Required fields are marked *