ರಾಜ್ಯ ಸರಕಾರದ ಪ್ರತಿ ನೇಮಕ ಪ್ರಕ್ರಿಯೆಯಲ್ಲೂ ಒಂದಿಲ್ಲೊಂದು ಆರೋಪಗಳು ಕೇಳಿಬರುತ್ತಲೇ ಇವೆ. ಇತ್ತೀಚೆಗೆ ನಡೆದ 545 ಪಿಎಸ್ಐ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲೂ ಭಾರಿ ಅಕ್ರಮ ನಡೆದಿದ್ದು, ಇದರಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ವಂಚಿತ ರಾಗಿದ್ದಾರೆ ಎನ್ನಲಾಗಿದೆ.
ಕಡು ಬಡತನದಲ್ಲೂ ವರ್ಷಾನುಗಟ್ಟಲೇ ಓದಿ ಪರೀಕ್ಷೆಗೆ ಸಿದ್ಧವಾಗಿರುವ ಆಕಾಂಕ್ಷಿಗಳು ಭ್ರಷ್ಟ್ರರ ಕೈಚಳಕದಿಂದಾಗಿ ಹುದ್ದೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಸರಕಾರವು ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಅಕ್ರಮ ಮಾರ್ಗದ ಮೂಲಕ ಆಯ್ಕೆಯಾ ಗಿರುವ ಅಭ್ಯರ್ಥಿಗಳಿಗೆ ಕಠಿಣ ಶಿಕ್ಷೆ ನೀಡಬೇಕಿದೆ. ಅಲ್ಲಿಯವರೆಗೂ ಪಿಎಸ್ಐ ಹುದ್ದೆಗೆ ನೇಮಕವಾಗಿರುವವರ ತಾತ್ಕಾಲಿಕ ಪಟ್ಟಿ ರದ್ದು ಪಡಿಸಿ, ಮರುಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು. ಈ ಹಿಂದೆ ಇಂತಹ ಅಕ್ರಮದ ವಾಸನೆ ಬಂದಾಗಲೆಲ್ಲ ಮರು ಪರೀಕ್ಷೆ ನಡೆಸ ಲಾಗಿದೆ. ಆದರೆ ಅದಕ್ಕೆ ವರ್ಷಾನುಗಟ್ಟಲೇ ಸಮಯ ವ್ಯರ್ಥ್ಯವಾಗಿದ್ದರಿಂದ ಸಾವಿರಾರು ಆಕಾಂಕ್ಷಿಗಳು ವಂಚಿತರಾಗಿರುವ ಉದಾಹರಣೆ ಗಳೂ ಇವೆ.
ಹೀಗಾಗಿ ಪರೀಕ್ಷೆ ದಿನಾಂಕವನ್ನು ಶೀಘ್ರವೇ ಬಿಡುಗಡೆ ಮಾಡಬೇಕಿದೆ. ಪರೀಕ್ಷಾ ಕೇಂದ್ರ ದಲ್ಲಿ ನೋಂದಣಿ ಸಂಖ್ಯೆಯನ್ನು ಅಕ್ಕಪಕ್ಕದ ಹಾಕಿಕೊಡುತ್ತಿದ್ದಾರೆ ಎಂಬ ಅನುಮಾನವನ್ನು ಆಕಾಂಕ್ಷಿಗಳು ವ್ಯಕ್ತಪಡಿಸಿದ್ದು, ಅದನ್ನು ತಡೆಯಲು ಇನ್ನು ಮುಂದೆ ಪರೀಕ್ಷಾ ಕೇಂದ್ರಗಳ ಸುತ್ತ ಸಿಸಿಟಿವಿ ಕ್ಯಾಮೆರಾ ಹಾಗೂ ಜಾಮರ್ ಗಳನ್ನು ಅಳವಡಿಸುವ ಮೂಲಕ ಅಕ್ರಮ ದಾರಿಯಿಂದ ಉನ್ನತ ಹುದ್ದೆಗಳನ್ನು ಅಲಂಕರಿಸು ವವರಿಗೆ ಕಡಿವಾಣ ಹಾಕಬೇಕಿದೆ. ಅಲ್ಲದೇ, ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಂಡ 30 ದಿನಗಳೊಳಗೆ ಆರ್ಟಿಐ ಅಡಿ ನಕಲಿ ಉತ್ತರ
ಪತ್ರಿಕೆಗಳನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಬೇಕಿದೆ.
ಅನೇಕ ಅಭ್ಯರ್ಥಿಗಳು ಸ್ಥಳೀಯ ಕೇಂದ್ರಗಳಲ್ಲೇ ಪರೀಕ್ಷೆ ಬರೆಯುವುದರಿಂದ ಅಕ್ರಮಕ್ಕೆ ದಾರಿ ಮಾಡಿಕೊಟ್ಟಂತಾಗುತ್ತಿದೆ. ಹೀಗಾಗಿ ಅಭ್ಯರ್ಥಿಗಳು ಸ್ಥಳೀಯ ಕೇಂದ್ರಗಳ ಪರೀಕ್ಷೆ ಬರೆಯುವುದಕ್ಕೆ ಕಡಿವಾಣ ಹಾಕಬೇಕಿದೆ. ಇಲಾಖೆಯಲ್ಲಿರುವ ಪ್ರಭಾವಿಗಳ ಮಕ್ಕಳನ್ನು ಪಿಎಸ್ಐ ಹುದ್ದೆಗೆ ನೇಮಕ ಮಾಡಲು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಹೀಗಾಗಿ ಇಲಾಖೆ ಯಲ್ಲಿ ಇರುವ ಅಂತಹವರನ್ನು ಕಂಡು ಹಿಡಿದು ಅವರಿಗೂ ಶಿಕ್ಷೆ ನೀಡುವ ಮೂಲಕ ಪಾರದರ್ಶಕ ನೇಮಕ ಪ್ರಕ್ರಿಯೆ ನಡೆಸಬೇಕಿದೆ.