Sunday, 15th December 2024

ಕರ್ತವ್ಯಕ್ಕೆ ಡಂಗೂರ ಬೇಡ

ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರಕಾರಗಳು ಬಂದರೂ ವಿವಿಧ ಫಲಾನು ಭವಿಗಳ ಸಮಾವೇಶಗಳನ್ನು ನಡೆಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿವೆ. ಸರಕಾರದ ಯೋಜನೆಗಳ ಫಲವನ್ನು ಪಡೆದ ಜನರನ್ನು ತಮ್ಮ ಪಕ್ಷದ ಸಭೆಗಳಲ್ಲಿ ತುಂಬಿಸಿ ಕೊಂಡು ಪ್ರಚಾರ ಪಡೆಯುವ ಮಾರ್ಗವಿದು.

ಇತ್ತೀಚೆಗಂತೂ ಇಂತಹ ಕಾರ್ಯಕ್ರಮಗಳು ರೇಜಿಗೆ ಹುಟ್ಟಿಸುವ ಮಟ್ಟಿಗೆ ಬಂದು ನಿಂತಿವೆ. ಹಕ್ಕು ಪತ್ರ ವಿತರಣೆಯ ಹೆಸರಿನಲ್ಲಿ, ಫಲಾನುಭವಿಗಳ ಹೆಸರಲ್ಲಿ, ಚೆಕ್ ವಿತರಣೆ ಎಂದು ಹೀಗೆ ಸಮಾ ವೇಶಗಳ ಸಾಲೇ ನಡೆಯುತ್ತಿವೆ. ಫಲಾನುಭವಿಗಳಿಗೆ ಯಾವುದೇ ಪಕ್ಷದ ಖಜಾನೆಯಿಂದ ಹಣವನ್ನು ನೀಡಿ ಸವಲತ್ತು ಕೊಟ್ಟಿರುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕಿದೆ. ಜನತೆ ಕಟ್ಟು ವ ತೆರಿಗೆಯ ಪಾಲಿನದು ಎಂಬುದು ಮೊದಲು ನೆನಪಿರಲಿ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಬಹುತೇಕ ಎಲ್ಲ ಸರಕಾರಗಳಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಸ್ಕಾಲರ್ ಶೀಪ್ ಕೊಡುವುದು, ನಾನಾ
ವರ್ಗ ದವರಿಗೆ ಸಾಲ ಸೌಲಭ್ಯವನ್ನು ಕೊಡುವುದು, ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಅನೇಕ ಯೋಜನೆಗಳನ್ನು ಕಲ್ಪಿಸಿಕೊಡುವುದು ವಿಶೇಷವಾಗಿ ಪಿಂಚಣಿ ಯೋಜನೆಗಳು, ನಿವೇಶನಗಳನ್ನು ಮತ್ತು ಮನೆಗಳನ್ನು ನೀಡುವುದು ಇವೆಲ್ಲವೂ ಸರ್ವೆ ಸಾಮಾನ್ಯ.

ಇದೆಲ್ಲವೂ ಸರಕಾರದ ಕರ್ತವ್ಯ, ಆಡಳಿತದ ಭಾಗ. ಆದರೆ ಇದಕ್ಕಾಗಿ ತುತ್ತೂರಿ ಬಾರಿಸುತ್ತ ಇಂತಹ ಜನರನ್ನು ಸೇರಿಸಿ ನೀವೆಲ್ಲ ‘ನಮ್ಮ ಹಂಗಿನ ವರು’ ಎಂದು ಸಮಾವೇಶಗಳಲ್ಲಿ ತಮ್ಮ ನಾಯಕತ್ವವನ್ನು ಬಿಂಬಿಸಿಕೊಳ್ಳುತ್ತ ತಮ್ಮ ಮನೆಯ ಖಜಾನೆಯಿಂದ ಸೌಲಭ್ಯ ಕೊಟ್ಟವರಂತೆ ವಿಜೃಂಭಿ ಸುವ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಅಗ್ಗದ ಪ್ರಚಾರ ಸರಕಾರದ ಪ್ರತಿದಿನದ ಕಾರ್ಯಕ್ರಮವಾಗಿದೆ. ಸರ್ಕಾರವಿರುವುದು ಜನರಿಗೆ ನೆರವು ನೀಡಲು, ಸೌಲಭ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲು.

ಸರ್ಕಾರವೆಂದರೆ ಜನ ಮತ್ತು ಆಡಳಿತ ವ್ಯವಸ್ಥೆ ನಡುವೆ ಇರುವ ಸೇತುವೆ. ಪಿಂಚಣಿ ನೀಡಿದವರನ್ನು, ಸ್ಕಾಲರ್ ಶೀಪ್ ಪಡೆದವರನ್ನು, ಸಾಲ ಪಡೆದವರನ್ನು, ಮನೆ ಪಡೆದವರನ್ನು, ಬಿಸಿಲಿನಲ್ಲಿ ಕೂಡಿಸಿ ತಾಸುಗಟ್ಟಲೆ ಪುಕ್ಕಟೆ ಭಾಷಣಗಳನ್ನು ಮಾಡುವ ಈ ಕೀಳು ಮಟ್ಟದ ಪ್ರಚಾರದ ವೈಖರಿ
ನಿಲ್ಲಲ್ಲೇ ಬೇಕು. ಸರಕಾರವೆಂದ ಮೇಲೆ ಖಜಾನೆಯ ಹಣ ನಾನಾ  ಜನೆಗಳಿಗೆ ವಿನಿಯೋಗಿಸಲೇ ಬೇಕು. ಇದಕ್ಕೆ ಡಂಗೂರು ಬೇಕಾಗಿಲ್ಲ. ಯಾವುದೆ ಪಕ್ಷದ, ಯಾವುದೇ ನಾಯಕನ ಕಿಸೆಯ ಹಣವಲ್ಲ, ನೆನಪಿರಲಿ.

Read E-Paper click here