ಭಾರತೀಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪಿಎಸ್‌ಐ ಮರು ಪರೀಕ್ಷೆ ನಡೆಯುತ್ತಿರುವುದು ನಿಜಕ್ಕೂ ವಿಷಾದಕರ. ದಿವ್ಯಾ ಹಾಗರಗಿ ಮಾಡಿರುವ ಈ ಪ್ರಕರಣದಿಂದ ಕರ್ನಾಟಕವೇ ತಲೆತಗ್ಗಿಸುವಂತಾಗಿದೆ.
ಭಾರತೀಯ ಪರಂಪರೆಯಲ್ಲಿ ಹೆಣ್ಣಿಗೆ ನೀಡಿದ ಸರಸ್ವತಿ ಶಾರದೆ ಎಂದೆಲ್ಲ ಸಂಬೋಧಿ ಸುವುದಿದೆ. ಆದರೆ ಸರಸ್ವತಿಯ ಜಾಗದಲ್ಲಿರ ಬೇಕಾದ ಹೆಣ್ಣೊಬ್ಬಳು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡುತ್ತಾಳೆಂದರೆ ಅದರಷ್ಟು ದುರಂತ ಇನ್ನೊಂದಿಲ್ಲ. ಮೊಬೈಲ್ ಕರೆಯೊಂದನ್ನು ಇಟ್ಟುಕೊಂಡು ಈ ಅಕ್ರಮವನ್ನು ಮಾಡಿ ಪುಣೆಯಲ್ಲಿ ಮಾಯವಾಗಿದ್ದ ಈಕೆಯನ್ನು ಸಿಐಡಿ ಬಂಧಿಸುವಲ್ಲಿ ಯಶಸ್ವಿ ಯಾಗುತ್ತದೆಯೆಂದರೆ ಸಿಐಡಿಗಳನ್ನು ಪ್ರಶಂಸೆ ಮಾಡಲೇಬೇಕು.
ಹೆಣ್ಣು ಎಲ್ಲಾ ಕ್ಷೇತ್ರದಲ್ಲಿಯೂ ಇದ್ದಾಳೆ, ಗಂಡಿನಷ್ಟೇ ಸಾಮರ್ಥ್ಯ ಹೆಣ್ಣಿಗೂ ಇದೆ ಎಂದು ಹೇಳುತ್ತಾ ಹೆಣ್ಣಿನ ಬಗ್ಗೆ ಗೌರವವನ್ನು ತೋರುತ್ತಿರುವವರಿಗೆ ಈಕೆಯ ಪ್ರಕರಣ ಮುಖ ಮುಚ್ಚುವಂತೆ ಮಾಡಿ, ಕರ್ನಾಟಕದ ಹೆಣ್ಣೊಬ್ಬಳು ಹೀಗೂ ಮೋಸ ಮಾಡಿಯಾಳು ಎನ್ನುವುದನ್ನು ತೋರಿಸಿಕೊಟ್ಟಂತಿದೆ ಈ ಪ್ರಕರಣ. ಏನೇ ಹೇಳಿ, ತಂತ್ರಜ್ಞಾನ ಬೆಳೆದಂತೆಲ್ಲಾ ದೇಶ ಬೆಳೆಯುತ್ತದೆ ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಮಾತು ಇಲ್ಲಿ ಸತ್ಯವಾಗುತ್ತಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ತಂತ್ರಜ್ಞಾನದಿಂದ ದೇಶ ಬೆಳವಣಿಗೆಯಾಗುತ್ತಿರುವುದರ ಜತೆಗೆ ಸುಭದ್ರವೂ ಆಗುತ್ತಿದೆ ಎನ್ನು
ವುದಕ್ಕೆ ಇದೇ ಸಾಕ್ಷಿ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂದು ವರ್ಣಬೇಧ ಮಾಡುತ್ತಿದ್ದಾಗ ಮಾತೊಂದಿತ್ತು. ವೈಶ್ಯರು (ವ್ಯಾಪಾರಿ ಗಳು) ಮೋಸ ಮಾಡುವುದು ತಪ್ಪಲ್ಲ. ಅದು ಅವರ ಧರ್ಮದ ಒಂದು ಭಾಗವಾಗುತ್ತದೆಯೆಂದು. ಆದರೆ ದಿವ್ಯಾ ಹಾಗರಗಿಯಂತಹ ಕಪಟಿಯನ್ನು ತನ್ನ ಬಳಿ ಅಡಗಿಸಿಟ್ಟೂ ಮೋಸ ಮಾಡಬಹುದೆಂದು ಸುರೇಶ್ ಕಾಟೇಗಾಂವ್ ಎನ್ನುವ ಉದ್ಯಮಿ ತೋರಿಸಿಕೊಟ್ಟಿದ್ದಾನೆ. ಆಕೆ ಅವನೊಟ್ಟಿಗೆ ಸಂಬಂಧವನ್ನು ಇಟ್ಟುಕೊಂಡಿದ್ದರ ಬಗ್ಗೆ ನಿಖರವಾದ ಮಾಹಿತಿಯನ್ನು ಸಿಐಡಿಗಳು ತನಿಖೆಯ ಕೇಳುವ ಅನಿವರ್ಯತೆ ಯಿದೆ.
ಆಕೆಯ ಕೃತ್ಯ ಸರಕಾರಕ್ಕೆ ತಿಳಿಯುತ್ತಿದ್ದಂತೆ ಆಕೆ ಸುರೇಶ್ ಕಾಟೇಗಾಂವ್‌ನ ಬಳಿ ಆಶ್ರಯ ಪಡೆಯುತ್ತಾಳೆಂದರೆ ಆತನೂ ಸ್ಕ್ಯಾಮ್ ಮಾಡುವಲ್ಲಿ ಸಹಕರಿಸಿರಬಹುದೇ ಎನ್ನುವ ಪ್ರಶ್ನೆಗಳು ಏಳುತ್ತದೆ. ಅದೇನೇ ಆದರೂ ಒಂದು ಮಾತನ್ನು ಸಮಾಜ ಅರಿಯಬೇಕಿದೆ… ಸತ್ಯ
ಯಾವತ್ತಾದರೂ ಹೊರಬರಲೇಬೇಕು,ಬಂದೇ ಬರುತ್ತಿದೆ.