Thursday, 12th December 2024

ನಿಜವಾದ ನಾಯಕರ ಸ್ಮರಣೆ ಮುಖ್ಯ

ಕರೋನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದಲ್ಲಿ ರಾಜ್ಯೋತ್ಸವವನ್ನು ಸರಳವಾಗಿ ಹಾಗೂ ಮಾರ್ಗಸೂಚಿಗಳ ಅನ್ವಯ ಆಚರಿಸಲಾಗಿದೆ.

ರಾಜ್ಯೋತ್ಸವ ಎಷ್ಟು ಅದ್ಧೂರಿಯಾಗಿ ಆಚರಿಸಲಾಗಿದೆ ಎಂಬುದಕ್ಕಿಂತಲೂ ಆಶಯಗಳು ಮುಖ್ಯ. ಕನ್ನಡದ ಬಹಳಷ್ಟು ಚಳವಳಿಗಳಿಗೆ ಹಾಗೂ ಭಾಷೆಯ ಉಳಿವಿಗೆ ಚಿತ್ರೋದ್ಯಮ ಕೊಡುಗೆಯೂ ಮಹತ್ತರವಾಗಿದೆ. ಆದರೆ ಇಂದು ಚಿತ್ರೋದ್ಯಮದ ನಾಯಕ ನಟರಿಗೆ ದೊರೆತಿರುವ ಮನ್ನಣೆ, ಜನಪ್ರಿಯತೆ, ಗೌರವ, ನಿಜವಾದ ಕನ್ನಡ ಕಾಳಜಿಯ ನಾಯಕರಿಗೆ ದೊರೆಯದಿರುವುದು
ವಿಪರ್ಯಾಸ. ಕರ್ನಾಟಕ ಏಕೀಕರಣ ಗೊಂಡು ಆರೂವರೆ ದಶಕ ಕಳೆದರೂ ಸಹ ಇಂದಿಗೂ ಕನ್ನಡ ಅನೇಕ ರೀತಿಯ ಸಮಸ್ಯೆ ಗಳನ್ನು ಎದುರಿಸುತ್ತಿದೆ.

ಕನ್ನಡಿಗರ ಜಾಗೃತಿಗಾಗಿ ರಚನೆಗೊಂಡಿರುವ ಅನೇಕ ವರದಿಗಳು ಅನುಷ್ಠಾನಗೊಳ್ಳದೆ ಉಳಿದಿವೆ. ಚಿತ್ರರಂಗದ ಕೆಲವು ನಾಯಕ ನಟರುಗಳಿಗೆ ಸ್ಮಾರಕಗಳನ್ನು ನಿರ್ಮಿಸಲಾಗಿದೆ ಹೊರತು,  ಕರ್ನಾಟಕ ಏಕೀಕರಣಕ್ಕೆ, ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಡಿದ ಕನ್ನಡದ ನಿಜವಾದ ನಾಯಕರ ಬಗ್ಗೆೆ ಕಡೆಗಣಿಸಲಾಗಿರುವುದು ವಿಪರ್ಯಾಸ.

ಕರ್ನಾಟಕ ಏಕೀಕರಣದ ರೂವಾರಿ ಹುಯಿಲಗೋಳ ನಾರಾಯಣರಾಯರ ಸ್ಮಾರಕ ನಿರ್ಮಿಸಬೇಕೆಂಬ ಬೇಡಿಕೆ ಇಂದಿಗೂ ಈಡೇರಿಲ್ಲ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆ ರಚಿಸುವ ಮೂಲಕ ಕರ್ನಾಟಕ ಏಕೀಕರಣಕ್ಕೆ ಭದ್ರ ಬುನಾದಿ ಹಾಕಿದ ಸಾಹಿತಿ ಹುಯಿಲಗೋಳ ನಾರಾಯಣ ರಾಯರ ಕೊಡುಗೆ ಮಹತ್ವದ್ದು. ಈ ಕಾರಣದಿಂದಾಗಿಯೇ ಅವರ ಮನೆ
ಯನ್ನು ಸ್ಮಾರಕವನ್ನಾಗಿಸುವುದು ಕನ್ನಡದ ಹೋರಾಟಗಾರರಿಗೆ, ಸಾಹಿತಿಗಳಿಗೆ ಸಲ್ಲಿಸುವ ಗೌರವ ಎಂಬುದಾಗಿ ಭಾವಿಸಲಾಗು ತ್ತದೆ. ಆದರೆ ಇಂದು ಸ್ಮಾರಕಗಳ ನಿರ್ಮಾಣದ ವಿಚಾರದಲ್ಲಿ ಚಿತ್ರನಟರುಗಳಿಗೆ ದೊರೆಯುತ್ತಿರುವ ಮನ್ನಣೆ, ಆದ್ಯತೆ ಕನ್ನಡದ ಹೋರಾಟಗಾರರಿಗೆ, ಸಾಹಿತಿಗಳಿಗೆ ದೊರೆಯದಿರುವುದು ದುರಂತ.