ಸುದೀರ್ಘ ವಿಶ್ರಾಂತಿಯ ಬಳಿಕ ರಾಜ್ಯ ವಿಧಾನಮಂಡಲ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗಿದೆ. ಮೊದಲ ದಿನ ಸಂತಾಪ ಸೂಚನೆ ಮುಗಿದು, ಎರಡನೇ ದಿನ ಗಂಭೀರ ಚರ್ಚೆಗಳು ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ ರಾಜ್ಯದಲ್ಲಿ ಮಳೆ ಹಾನಿ ಹಾಗೂ ಅತಿವೃಷ್ಟಿ ಹಿನ್ನೆಲೆಯಲ್ಲಿ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡಿಸಿದ್ದು, ಇದಕ್ಕೆ ಸ್ಪೀಕರ್ ಕಾಗೇರಿ ಅವರು ಅನುಮತಿ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಸಕರಿಗೂ ಮಾತನಾಡಲು
ಸುಧೀರ್ಘ ಸಮಯ ಸಿಕ್ಕಂತಾಗಿದೆ. ವಿಧಾನ ಮಂಡಲ ಅಧಿವೇಶನವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಟಾಪಟಿಗೆ ಸೀಮಿತವಾದರೆ ಅದರಿಂದ ಯಾವ ಪ್ರಯೋಜನ ವೂ ಇಲ್ಲ.
ಉತ್ತಮ ಶಾಸನ ರಚಿಸುವುದು ಸದನದ ಕಲಾಪದ ಪ್ರಮುಖ ಭಾಗ. ಇದರ ಜತೆಗೆ ಹಲವು ಸಮಸ್ಯೆಗೆ ಪರಿವಾರ ಕಂಡುಕೊಳ್ಳಲು ಅರ್ಥಪೂರ್ಣ ಚರ್ಚೆಯೂ ನಡೆಯಬೇಕು. ರಾಜ್ಯದಲ್ಲಿ ಈ ಬಾರಿ ಸುರಿದ ಭಾರಿ ಮಳೆಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ ಒದಗಿಸಬೇಕಿದೆ. ಸಾವಿರಾರು ಕೋಟಿ ರು. ಮೂಲಸೌಕರ್ಯ ನಷ್ಟವಾಗಿದೆ. ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಪರಿಹಾರ, ಪುನರ್ವಸತಿಗೆ ಸರಕಾರ ಕ್ರಮ ಕೈಗೊಳ್ಳಲು ಎಚ್ಚರಿಸುವ ಕಾರ್ಯ ಸದನದಗಬೇಕು.
ಬೆಂಗಳೂರಿನಲ್ಲೂ ಮಳೆಯಿಂದಾಗಿ ದೊಡ್ಡ ಅವಾಂತರವಾಗಿದ್ದು, ಐಟಿ ಸಿಟಿಯ ಬ್ರ್ಯಾಂಡ್ ಇಮೇಜ್‌ಗೆ ಧಕ್ಕೆಯಾಗಿದೆ. ಇದರ ಬಗ್ಗೆ ರಾಜಕೀಯ ಟೀಕೆ ಮಾಡುವ ಬದಲು ಬೆಂಗಳೂರಿನ ಖ್ಯಾತಿ ಉಳಿಸಿಕೊಳ್ಳಲು ಏನೆಲ್ಲ ಕ್ರಮ ಅವಶ್ಯಕವೆಂದು ಪಕ್ಷಭೇದ ಮರೆತು ಚರ್ಚೆಯಾದರೆ ಅದು ಔಚಿತ್ಯಪೂರ್ಣವಾಗಲಿದೆ. ಹಿಂದಿನ ಅಧಿವೇಶನದ ಸಂದರ್ಭದಲ್ಲಿ ಹಿಜಾಬ್, ಕೇಸರಿ ಶಾಲಿನ ವಿವಾದ ಭಾರಿ ಸದ್ದು ಮಾಡಿತ್ತು. ಅದು ವಿಧಾನ ಮಂಡಲದಲ್ಲೂ ಪ್ರತಿಧ್ವನಿಸಿತ್ತು. ಟೀಕೆ, ಟಿಪ್ಪಣಿಗಳ ಸುರಿಮಳೆಯಿಂದಾಗ
ಅನೇಕ ಜನಪರ ವಿಚಾರದ ಚರ್ಚೆಗೆ ಅವಕಾಶವಾಗಿರಲಿಲ್ಲ. ಈ ಬಾರಿಯೂ ಹಾಗಾಗದಿರಲಿ. ಅರ್ಥಪೂರ್ಣ ಚರ್ಚೆ ನಡೆದು ರಾಜ್ಯದ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸವಾಗಲಿ.