Sunday, 15th December 2024

ಕಡೆಗಣಿಸಲಾಗದ ನಾಯಕ

Siddaramayya

ವಿಧಾನಸಭೆಯ ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾ ಮಯ್ಯನವರದು ರಾಜ್ಯ ರಾಜಕೀಯದಲ್ಲಿ ಕಡೆಗಣಿಸಲಾಗದ ವ್ಯಕ್ತಿತ್ವ ಎಂಬುದು ಪದೇ ಪದೇ ಸಾಬೀತಾಗಿದೆ.

ಹಿಂದುಳಿದ ವರ್ಗಗಳ ನಾಯಕನಾಗಿ ಸ್ವಸಾಮರ್ಥ್ಯದಿಂದಲೇ ತಳಹಂತ ದಿಂದ ಮೇಲಕ್ಕೇರಿದವರು ಅವರು. 1983ರಲ್ಲಿ ಭಾರತೀಯ ಲೋಕದಳ ದಿಂದ ತಮ್ಮ ಚುನಾವಣಾ ರಾಜಕೀಯದ ಯಾತ್ರೆಯನ್ನು ಆರಂಭಿಸಿದ ಅವರು, ಬಳಿಕ ಜನತಾ ಪರಿವಾರದಲ್ಲಿ ಗುರುತಿಸಿಕೊಂಡು ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಜತೆ ರಾಜಕೀಯ ಗರಡಿಯಲ್ಲಿ ಪಳಗಿ ಸ್ವತಂತ್ರ ವ್ಯಕ್ತಿತ್ವದ ನಾಯಕನಾಗಿ ಬೆಳೆದರು.

ಹಿಂದುಳಿದ ವರ್ಗಗಳ ಏಳಿಗೆಯನ್ನೇ ಸದಾ ಚಿಂತಿಸುತ್ತ, ಆ ನಿಟ್ಟಿನಲ್ಲೇ ವಿವಿಧ ಕಾರ‍್ಯಕ್ರಮಗಳನ್ನು ರೂಪಿಸಿ ತಮ್ಮ ಅಧಿಕಾರಾವಧಿಯಲ್ಲಿ ಜಾರಿ ಗೊಳಿಸಿದ ನೇತಾರರು ಸಿದ್ಧರಾಮಯ್ಯನವರು. ಯಾವುದೇ ಪಕ್ಷವನ್ನು ಸೇರಿದರೂ ಅಲ್ಲಿ ತಮ್ಮದೇ ಛಾಪು ಮೂಡಿಸಿ, ಸ್ವತಂತ್ರ ಹೆಜ್ಜೆಗಳನ್ನು ಇಡುವವರು ಎಂದೇ ಖ್ಯಾತಿ ಪಡೆದ ನಾಯಕರು ಸಿದ್ದರಾಮಯ್ಯನವರು. ಅವರು ಕಾಂಗ್ರೆಸ್ ಸೇರಿ ಮುಖ್ಯಮಂತ್ರಿ ಯಾದಾಗಲೂ ದಿಟ್ಟ ನಿರ್ಧಾರಗಳಿಂದ ಸರಕಾರವನ್ನು ಮುನ್ನಡೆಸಿದ ಅನುಭವ ಹೊಂದಿದವರು.

ಇದೀಗ ಸಿದ್ದರಾಮಯ್ಯನವರ ಅಭಿಮಾನಿಗಳು ಮತ್ತು ಬೆಂಬಲಿಗರು ಸೇರಿಕೊಂಡು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿದ್ದರಾಮೋತ್ಸವ ಆಯೋಜಿಸುವ ಮೂಲಕ ತಾವು ಪ್ರತಿನಿಽಸುವ ಪಕ್ಷವೂ ಸೇರಿದಂತೆ ರಾಜ್ಯದ ಜನತೆಗೆ ತಮ್ಮ ಪ್ರಾಬಲ್ಯದ ಝಲಕ್ ಅನ್ನು ತೋರಿಸಲು ಹೊರಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದ ರಾಜಕಾರಣದಲ್ಲಿ ವ್ಯಕ್ತಿ ಕೇಂದ್ರಿತ ಪ್ರಾಬಲ್ಯ ಹೊಂದಿರುವವರು ಇಬ್ಬರೇ ಕಾಣ ಸಿಗುತ್ತಾರೆ.

ಒಬ್ಬರು- ರಾಜ್ಯ ಬಿಜೆಪಿಯ ವರಿಷ್ಠರಾದ ಬಿ.ಎಸ್ ಯಡಿಯೂರಪ್ಪ; ಮತ್ತೊಬ್ಬರು ಕಾಂಗ್ರೆಸ್ ಪಕ್ಷವನ್ನೇ ತಮ್ಮ ಇಚ್ಛೆಗೆ ತಕ್ಕಂತೆ ಕುಣಿಸುತ್ತಿರುವ ಸಿದ್ದರಾಮಯ್ಯನವರು. ಪಕ್ಷದ ಬ್ಯಾನರ್ ಅಡಿಯಲ್ಲೇ ಸಿದ್ದರಾಮೋತ್ಸವವನ್ನು ಆಚರಿಸಿಕೊಳ್ಳಲು ಸಜ್ಜಾಗಿರುವ ಽಮಂತ ನಾಯಕನ ಬೆನ್ನಿಗೆ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ನಿಂತಿದೆ. ಒಳಗೊಳಗೆ ಗೊಣಗಾಟ, ಅಸಮಾಧಾನದ ಹೊಗೆಯೇ ನಿದ್ದರೂ ತಳಮಟ್ಟದಲ್ಲಿ ಸಿದ್ದರಾಮಯ್ಯನವರ ಜನ ಬೆಂಬಲದ ಮುಂದೆ ಅವೆಲ್ಲವೂ ನಗಣ್ಯವಾಗಿವೆ.

ಸಿದ್ದರಾಮಯ್ಯನವರ ಗಟ್ಟಿತನದ ಮುಂದೆ ಹೈಕಮಾಂಡ್ ಕೂಡ ಮಂಡಿಯೂರಿದ ನಿದರ್ಶನಗಳು ಸಾಕಷ್ಟಿವೆ. ಹೈಕಮಾಂಡ್ ಪ್ರತಿನಿಽಯಾಗಿ ಸ್ವತಃ ರಾಹುಲ್ ಗಾಂಽ ಸಿದ್ದರಾಮೋತ್ಸವದಲ್ಲಿ ಭಾಗವಹಿಸಲು ಮುಂದಾಗಿರುವುದು ಸಿದ್ದರಾಮಯ್ಯನವರ ರಾಜಕೀಯ ಶಕ್ತಿಯ ಪ್ರತಿಫಲನ ಎಂದರೆ ತಪ್ಪಾಗಲಾರದು