ಭಾರತ ಬಹಳಷ್ಟು ದೇಶಭಕ್ತರನ್ನು ಹೊಂದಿರುವುದು ದೇಶದ ಪಾಲಿಗೆ ಹೆಮ್ಮೆಯ ಸಂಗತಿ. ಕೆಲವರು ಸೈನ್ಯಸೇರುವ ಮೂಲಕ ತಮ್ಮನ್ನು ದೇಶಸೇವೆಗೆ ಸಮರ್ಪಿಸಿಕೊಂಡಿದ್ದರೆ, ಮತ್ತೆ ಕೆಲವರು ದೇಶವನ್ನು ಗೌರವಿಸುವ ಮೂಲಕ ಆಂತರಿಕವಾಗಿಯೂ ದೇಶಭಕ್ತಿ ಹೊಂದಿದ್ದಾರೆ.
ದೇಶ ಮತ್ತು ದೇಶ ಸೇವೆ ಎಂಬ ಪದವೇ ಪ್ರತಿಯೊಬ್ಬ ಭಾರತೀಯರಲ್ಲಿ ಪುಳಕಗೊಳಿಸುವ ಅಗಾಧ ಶಕ್ತಿಯನ್ನೊಳಗೊಂಡಿದೆ. ಆದರೆ ನಾವು ಸ್ವಾತಂತ್ರ್ಯ ದಿನಾಚರಣೆಯ ಹೊರತಾಗಿ ಮತ್ತೊಮ್ಮೆ ಜಾಗೃತವಾಗುವುದು ವೀರಸೈನಿಕರ ಬಲಿದಾನದ ಸಂದರ್ಭ ಗಳಲ್ಲಿ ಎಂಬುದು ವಿಪರ್ಯಾಸ.
ಭಾರತೀಯ ಸೈನಿಕರು ಸಾಧನೆಗಳನ್ನು ತೋರಿದ ಪ್ರತಿ ಸಂದರ್ಭದಲ್ಲಿಯೂ ವಿಜಯೋತ್ಸವ, ಸಂಭ್ರಮಾಚರಣೆಗಳನ್ನು ಆಚರಿಸುವ ಮೂಲಕ ದೇಶದ ಸೈನಿಕರಿಗೆ, ಸೇನೆ ಗೌರವ ಸೂಚಿಸಬೇಕಿರುವುದು ಬಹುಮುಖ್ಯ ಸಂಗತಿ. ಇದೀಗ ಭಾರತೀಯ ಸೈನಿಕರು ಉಗ್ರರ ನಿಗ್ರಹದಲ್ಲಿ ಬಹಳಷ್ಟು ಸಾಧನೆ ತೋರಿದ್ದಾರೆ. ಈ ಘಟನೆ ಕೇವಲ ಸೈನಿಕರಿಗೆ ಮಾತ್ರವಲ್ಲ, ದೇಶದಲ್ಲಿ
ಆಂತರಿಕವಾಗಿಯೂ ಸಂಭ್ರಮಾಚರಣೆಗಳನ್ನು ಆಚರಿಸುವ ಮೂಲಕ ಸೈನಿಕರ ಶೌರ್ಯಕ್ಕೆ ಮತ್ತಷ್ಟು ಬೆಂಬಲ ಸೂಚಿಸ ಬೇಕಾದ್ದು ಮುಖ್ಯ.
ಪ್ರಸ್ತುತ ಭಾರತೀಯ ಸೈನಿಕ ಪಡೆಗಳು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್ ಸಜಾದ್
ಅ-ನಿ ಎಂಬವನನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್ – ಎ – ತೋಯ್ಬಾ ಉಗ್ರ ಜಹಾಂಗೀರ್ ಅಹ್ಮದ್ ಎಂಬಾತನನ್ನು ಹತ್ಯೆಗೈಯಲಾಗಿದ್ದು, ಅಮೆರಿಕ ನಿರ್ಮಿತ ಎಂ4-ರೈ-ಲ್ ಮತ್ತು ಮದ್ದು ಗುಂಡುಗಳನ್ನು ವಶಪಡಿಸಲಾಗಿತ್ತು.
ಅಫಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ಸೇನಾಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕನಿಷ್ಠ 18 ತಾಲಿಬಾನ್ ಉಗ್ರರು ಹತರಾಗಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿದಾಗ ಉಗ್ರರ ಅಟ್ಟಹಾಸವನ್ನು ನಿರಂತರವಾಗಿ ದಮನಿಸುವಲ್ಲಿ ಭಾರತೀಯ ಭದ್ರತಾ ಪಡೆಗಳು ಯಶಸ್ವಿಯಾಗಿದೆ. ಈ ಬೆಳವಣಿಗೆ ಸೈನಿಕರಿಗೆ ಮಾತ್ರವಲ್ಲ, ಭಾರತೀಯರೆಲ್ಲರಿಗೂ
ಮಹತ್ವದ ಸಂಗತಿ.