Tuesday, 17th September 2024

ಶರಣಾಗತಿ ಮೇಲ್ಪಂಕ್ತಿಯಾಗಲಿ

ಛತ್ತೀಸ್‌ಗಢದ ದಾಂತೇವಾಡದಲ್ಲಿ ಮೂವರು ಮಹಿಳೆಯರು ಸೇರಿದಂತೆ ೧೮ ನಕ್ಸಲೀಯರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗತರಾಗಿರುವ ಸುದ್ದಿ ಬಂದಿದೆ. ಮುಖ್ಯವಾಹಿನಿಯಲ್ಲಿ ತಾವೂ ಒಬ್ಬರಾಗಬೇಕು ಎಂಬ ತವಕವೇ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಇದು ನಿಜಕ್ಕೂ ಸಮಾಧಾನ ತರುವ ವಿಷಯ. ನಕ್ಸಲರು/ಮಾವೋವಾದಿಗಳು, ಬಂಡು ಕೋರರು, ಭಯೋತ್ಪಾದಕರು ಹೀಗೆ ಸಮಾಜವು ಯಾರನ್ನೆಲ್ಲ ತಲ್ಲಣದ ಕಣ್ಣುಗಳಿಂದ ನೋಡುತ್ತದೆ ಯೋ ಅವರೂ ಮನುಷ್ಯರೇ; ಯಾವುದೋ ದುಷ್ಪ್ರಭಾವ, ಸಾಂದರ್ಭಿಕ ದೌರ್ಬಲ್ಯ, ಒತ್ತಡ, ಅನಿವಾರ್ಯತೆಗಳ ಬಿಗಿ ಮುಷ್ಟಿಯಲ್ಲಿ ಸಿಲುಕಿ ಇಂಥವರು ವಾಮಮಾರ್ಗವನ್ನು ತುಳಿದಿರುತ್ತಾರೆ.

ಆಳುಗ ವಲಯದ ಕೆಲವೊಂದು ಸ್ವಾರ್ಥಸಾಧಕರೂ ತಂತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕೋಸ್ಕರ ಇಂಥವರನ್ನು ಬೆಳೆಸುತ್ತಾ ಬರುವುದಿದೆ ಮತ್ತು ತಮ್ಮ ಎದುರಾಳಿಗಳ ಸ್ಥೈರ್ಯವನ್ನು ಕುಗ್ಗಿಸಲು ಇವರನ್ನು ಬೇಡದ ಕಾರ್ಯಗಳಿಗೆ ಬಳಸಿಕೊಳ್ಳುವುದಿದೆ. ತಾವು ಹಿಡಿದಿರು ವುದು ತಪ್ಪುದಾರಿ ಎಂದು ಗೊತ್ತಿದ್ದರೂ, ವಿದ್ಯಾರ್ಹತೆಯ ಕೊರತೆ ಯಿಂದಲೋ, ಕೆಲಸದ ಅವಕಾಶಗಳ ಅಲಭ್ಯತೆಯಿಂದಲೋ ಜೀವನೋ ಪಾಯಕ್ಕೊಂದು ಮಾರ್ಗ ಕಂಡುಕೊಳ್ಳಲಾಗದೆ ಕೆಲವರು ಇಂಥ ಸಮಾಜ ವಿರೋಧಿ ಪಾಳಯಗಳನ್ನು ಸೇರಿಕೊಳ್ಳುವುದಿದೆ.

ಆದರೆ, ಈ ನಡೆಯಿಂದಾಗಿ ತಮ್ಮ ಸಮಸ್ಯೆ ಪರಿಹಾರ ಗೊಳ್ಳುವುದರ ಬದಲು ಇನ್ನೂ ಹೆಚ್ಚಾಗುತ್ತಿದೆ ಎಂಬುದು ಅರಿವಾಗುವಷ್ಟರಲ್ಲಿ ಕಾಲ ಮಿಂಚಿರು ತ್ತದೆ ಮತ್ತು ಸಮಾಜದ ಮುಖ್ಯವಾಹಿನಿಗೆ ಮರಳಲಾಗದಷ್ಟರ ಮಟ್ಟಿಗೆ ಅವರು ದೂರ ಸರಿದಿರುತ್ತಾರೆ. ಕಾರಣವೇನೇ ಇರಲಿ, ಛತ್ತೀಸ್‌ಗಢದಲ್ಲಿನ ನಕ್ಸಲರ ಈ ಗುಂಪು ಶಸಾಸಗಳನ್ನು ಕೆಳಗಿಟ್ಟು ಮುಖ್ಯವಾಹಿನಿಗೆ ಸೇರಲು ಬಯಸಿರುವುದು ಉತ್ತಮ ಬೆಳವಣಿಗೆ. ಇದು ಇಂಥದೇ ಗುಂಪುಗಳಾಗಿ ಅಸ್ತಿತ್ವ ಕಂಡು ಕೊಂಡಿರುವ ಮಿಕ್ಕವರಿಗೂ ಮೇಲ್ಪಂಕ್ತಿಯಾಗಲಿ ಮತ್ತು ಅವರೂ ಹೀಗೆ ಸರಿದಾರಿಯನ್ನು ಹಿಡಿಯುವುದಕ್ಕೆ ಇದು ಮುನ್ನುಡಿಯಾಗಲಿ. ಸಮಾಜದ ಮಡಿಲಿಗೆ ಮರುಸೇರ್ಪಡೆಗೊಳ್ಳಲು ಇಂಥ ಯಾರಾದರೂ ಬಯಸಿದಲ್ಲಿ ಹಾಗೂ ತಮ್ಮಿಂದಾದ ಘೋರ ಅಪಚಾರ ಗಳಿಗೆ ಈ ನೆಲದ ಕಾನೂನು ವಿಧಿಸುವ ಶಿಕ್ಷೆಯನ್ನು ಅನುಭವಿಸಲು ಅವರು ಒಪ್ಪಿದಲ್ಲಿ, ಅವರ ತಪ್ಪುಗಳನ್ನು ಮನ್ನಿಸಿ ಮುಖ್ಯವಾಹಿನಿಗೆ ಸೇರಿಸಿಕೊಳ್ಳು ವಂತಾಗಬೇಕು.

ಏಕೆಂದರೆ, ಓರ್ವ ಕಳ್ಳನಾಗಿದ್ದ ವಾಲ್ಮೀಕಿಯು ನಾರದರ ಮಾರ್ಗದರ್ಶನದಿಂದಾಗಿ ತರುವಾಯದಲ್ಲಿ ಋಷಿಯಾದ ಮತ್ತು ಬುದ್ಧ ತುಂಬಿದ ಅರಿವಿ
ನಿಂದಾಗಿ ದರೋಡೆಕೋರ ಅಂಗುಲಿಮಾಲಾ ಸಜ್ಜನನಾದ ನೆಲವಿದು.

Leave a Reply

Your email address will not be published. Required fields are marked *