Saturday, 14th December 2024

ಪ್ರತಿನಿಧಿಗಳು ಹೊಣೆಯರಿಯಲಿ

ಕರ್ನಾಟಕದಲ್ಲಿ ಈಗಾಗಲೇ ವಿಧಾನಸಭಾ ಕಾವು ದೊಡ್ಡ ಪ್ರಮಾಣದಲ್ಲಿ ಹತ್ತಿದೆ. ಬಹುತೇಕ ಶಾಸಕರು ಇದೀಗ ತಮ್ಮ ತಮ್ಮ ಕ್ಷೇತ್ರಗಳಲ್ಲಿಯೇ ವಾಸ್ತವ್ಯ ಹೂಡಿ, ಮುಂದಿನ ಚುನಾವಣಾ ತಯಾರಿ ನಡೆಸಿಕೊಂಡಿದ್ದಾರೆ. ಈ ನಡುವೆ ರಾಜ್ಯದಲ್ಲಿ ಜಂಟಿ ಅಧಿವೇಶನ ಹಾಗೂ ಮುಂದಿನ ವಾರ ಬಜೆಟ್ ಅಧಿವೇಶನ ನಡೆಯಲಿದೆ.

ಜನಪ್ರತಿನಿಧಿಯಾಗಿ ಆಯ್ಕೆಯಾಗಿ ವಿಧಾನಸಭೆಗೆ ಬರಲು ಚುನಾವಣೆಗಳು ಎಷ್ಟು ಮುಖ್ಯವೋ, ಗೆದ್ದ ಬಳಿಕ ಕೊನೆಕ್ಷಣದವರೆಗೆ ಜನಪ್ರತಿನಿಧಿಯಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುವುದು ಅಷ್ಟೇ ಮುಖ್ಯ. ಆದರೆ ಈ ಬಾರಿಯ ಅಧಿವೇಶನವನ್ನು ಗಮನಿಸಿದರೆ, ಬಹುತೇಕ ಶಾಸಕರು, ಶಾಸಕಾಂಗದ ಪ್ರಮುಖ ಅಂಶವಾಗಿರು ವಾಗುವ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಿ, ಚರ್ಚೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎನ್ನುವುದನ್ನೇ ಮರೆತಿರುವಂತಿದೆ. ಸಾಮಾನ್ಯವಾಗಿ ರಾಜ್ಯಪಾಲರ ಭಾಷಣಕ್ಕೆ ಯಾವ ಶಾಸಕರೂ ಗೈರಾ ಗುವುದಿಲ್ಲ.

ಆದರೆ ಈ ಬಾರಿ ಮಾತ್ರ, ಪ್ರಜಾಯಾತ್ರೆಯ ನೆಪದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರ ಸ್ವಾಮಿ ಸೇರಿದಂತೆ ಅನೇಕರು ಗೈರಾ ಗಿದ್ದರು. ಈ ಮೂಲಕ, ತಮಗೆ ಕಲಾಪಕ್ಕಿಂತ ಚುನಾವಣೆಯೇ ಮುಖ್ಯ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ. ಹಾಗೇ ನೋಡಿದರೆ, ಕುಮಾರಸ್ವಾಮಿ ಅವರು ಬೆಳಗಾವಿಯಲ್ಲಿ ನಡೆದ ಅಧಿವೇಶನಕ್ಕೂ ಗೈರಾಗಿದ್ದರು. ಹಿರಿಯ ನಾಯಕರೇ ಈ ರೀತಿ ಗೈರಾದರೆ, ಹೊಸದಾಗಿ ಆಯ್ಕೆ ಶಾಸಕರು ಸಹಜ ವಾಗಿಯೇ, ಕಲಾಪಗಳತ್ತ ವಿಮುಖರಾಗುತ್ತಾರೆ. ಆದ್ದರಿಂದ ರಾಜಕೀಯವಾಗಿ ಎಷ್ಟೇ ಒತ್ತಡಗಳಿದ್ದರೂ, ಕಲಾಪಗಳಲ್ಲಿ ಭಾಗವಹಿಸುವುದನ್ನು ಶಾಸಕರೆಲ್ಲವೂ ರೂಢಿಸಿಕೊಳ್ಳಬೇಕು.

ಹಾಗೇ ನೋಡಿದರೆ, ಈ ಬಾರಿ ಚುನಾವಣೆಯ ಕಾರಣಕ್ಕೆ, ಅಧಿವೇಶನವನ್ನು ಕೇವಲ 15 ದಿನದ ಮಟ್ಟಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಆದ್ದರಿಂದ
ಶಾಸಕರು, ಈ ೧೫ದಿನಗಳಾದರೂ ಸದನದ ಚರ್ಚೆಯಲ್ಲಿ ಭಾಗವಹಿಸಿ, ತಮ್ಮಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇರುವ ಕೊನೆಯ ಅವಕಾಶವನ್ನು
ಬಳಸಿಕೊಳ್ಳಬೇಕಿತ್ತು. ಆದರೆ ಈ ಜವಾಬ್ದಾರಿಯನ್ನು ಮಾಡದೇ, ಕಲಾಪಗಳಿಗೆ ಗೈರಾಗುವ ಮೂಲಕ ಕೆಟ್ಟ ಸಂದೇಶವನ್ನು ರವಾನಿಸಿದ್ದಾರೆ. ಶುಕ್ರವಾರ
ಮಂಡನೆಯಾಗುವ ಬಜೆಟ್ ಸಮಯದಲ್ಲಾದರೂ, ಶಾಸಕರೆಲ್ಲರೂ ಭಾಗವಹಿಸಿ ತಮ್ಮ ಇರುವಿಕೆಯನ್ನು ಸದನದ ಮೂಲಕ ತಮ್ಮ ಕ್ಷೇತ್ರದ ಜನತೆಗೆ
ರವಾನಿಸಬೇಕು.