ಶಾಲಾ-ಕಾಲೇಜು ಪರೀಕ್ಷೆೆ ಸಮಯ ಹತ್ತಿಿರ ಬರುತ್ತಿಿದ್ದಂತೆ, ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಗಮನ ಹರಿಸುತ್ತಿಿಲ್ಲ. ಹಾಗಾಗಿ ಉತ್ತರ ಪತ್ರಿಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈ ಕ್ಷೇತ್ರದ ಸಂಘಟನೆಗಳ ಮುಖಂಡರು ಪ್ರಕಟಿಸುತ್ತಾಾರೆ. ಇದರಿಂದ ಗಾಬರಿಗೊಳ್ಳುವವರು ವಿದ್ಯಾಾರ್ಥಿಗಳು ಮತ್ತು ಅವರ ಪೋಷಕರು.
ಪರೀಕ್ಷೆೆ ಬರುತ್ತಿಿರುವ ವೇಳೆಯಲ್ಲಿ ಪ್ರತಿಭಟಿಸುವವರ ಮನೋಭಾವ ಒಂದು ರೀತಿಯ ಬ್ಲ್ಯಾಾಕ್‌ಮೇಲ್ ತಂತ್ರ ಎಂಬ ಮಾತುಗಳು ಕೇಳಿಬರುತ್ತವೆ. ಮೌಲ್ಯಮಾಪನ ಕೆಲಸಕ್ಕೆೆ ಹಾಜರಾಗದಿದ್ದರೆ ‘ಎಸ್ಮಾಾ’ ಜಾರಿಗೊಳಿಸಲೂ ಹಿಂದೆ ಮುಂದೆ ನೋಡುವುದಿಲ್ಲ ಎಂಬ ಎಚ್ಚರಿಕೆಯನ್ನು ಶಿಕ್ಷಣ ಸಚಿವರು ನೀಡಿದರೂ ಇದೊಂದು ‘ಔಪಚಾರಿಕ ವ್ರತ’ ಎಂಬಂತೆ ಭಾವಿಸುತ್ತಾಾರೆ ಶಿಕ್ಷಕರು. ನಂತರ ಹೇಗೋ ಒಂದು ರೀತಿಯ ಸಮಾಧಾನಕ್ಕೆೆ ತೃಪ್ತಿಿಗೊಂಡವರಂತೆ ಮೌಲ್ಯಮಾಪನ ಕಾರ್ಯ ಆರಂಭವಾಗುತ್ತದೆ. ಅಲ್ಲಿಗೆ ನಿಟ್ಟುಸಿರು ಬಿಡುವವರು ವಿದ್ಯಾಾರ್ಥಿಗಳಿಗಿಂತ ಅವರ ಪೋಷಕರು. ಇನ್ನು ಮುಂದಿನ ಶೈಕ್ಷಣಿಕ ವರ್ಷದ ತನಕ ಬಹುತೇಕ ಪರಿಸ್ಥಿಿತಿ ನದಿಯ ತಿಳಿನೀರಿನಂತೆ ಇರುತ್ತದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ, ಪ್ರಾಾಥಮಿಕ ಮತ್ತು ಪ್ರೌೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಒಂದು ಪ್ರಮುಖ ವಿಚಾರವನ್ನು ಪ್ರಸ್ತಾಾಪಿಸಿದ್ದಾಾರೆ. ತಮ್ಮ ಸಮಸ್ಯೆೆಯ ಪರಿಹಾರಕ್ಕೆೆ ಶಿಕ್ಷಕರು ಬೀದಿಗಿಳಿದು ಧರಣಿ ಇಲ್ಲವೇ ಪ್ರತಿಭಟನೆ ಮಾಡಬಾರದು. ಒಂದು ವೇಳೆ ಇಂತಹ ಸ್ಥಿಿತಿ ನಿರ್ಮಾಣವಾದರೆ ಸಂಬಂಧಿತ ರಾಜ್ಯ ಇಲ್ಲವೇ ದೇಶ ಎಂದಿಗೂ ಅಭಿವೃದ್ಧಿಿಯಾಗದು ಎಂದಿದ್ದಾಾರೆ.
ಕೆಲವು ತಿಂಗಳುಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊೊಂಡಿದ್ದ ಹಿರಿಯ ಪತ್ರಕರ್ತರೊಬ್ಬರು ಇದೇ ಅಭಿಪ್ರಾಾಯ ಬರುವಂತೆ ಮಾತನಾಡಿದ್ದರು. ದೇಶವೊಂದರ ಪ್ರಗತಿ ಕೇವಲ ಆರ್ಥಿಕತೆಯ ಬೆಳವಣಿಗೆಯಲ್ಲ. ಜತೆಗೆ ಅಲ್ಲಿನ ಕಲೆ, ಸಂಸ್ಕೃತಿ ಹಾಗೂ ಶೈಕ್ಷಣಿಕ ಗುಣಮಟ್ಟದ ಮೇಲೆಯೂ ಅವಲಂಬಿತವಾಗಿರುತ್ತದೆ ಎಂಬುದು ವಿಚಾರವಂತರ ಅಭಿಪ್ರಾಾಯವಾಗಿರುತ್ತದೆ. ನಮ್ಮ ನಡೆ, ನುಡಿ ಕೌಟುಂಬಿಕ ಹಿನ್ನೆೆಲೆಯೊಂದಿಗೆ ಗುಣಮಟ್ಟದ ಶಿಕ್ಷಣದ ಮೇಲೆಯೇ ಅವಲಂಬಿತವಾಗಿರುತ್ತದೆ. ಅದಕ್ಕಾಾಗಿ ನಮ್ಮ ದೇಶ ಗುರುವಿಗೂ ಉತ್ತಮ ಸ್ಥಾಾನ ನೀಡಿದೆ. ಮಾತೃ ದೇವೋಭವ, ಪಿತೃ ದೇವೋಭವ ಜತೆಗೆ ಆಚಾರ್ಯ ದೇವೋಭವ ಸೇರಿಸಲಾಗಿದೆ. ಶಿಕ್ಷಕರ ಮೇಲಿನ ಗೌರವ, ಪ್ರೀತಿಯಿಂದಾಗಿ ಡಾ.ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವುದು.
ನಮ್ಮ ಸರಕಾರ ಶೈಕ್ಷಣಿಕ ಕ್ಷೇತ್ರದಲ್ಲಿರುವ ಮೂಲ ಸೌಕರ್ಯಗಳ ಕೊರತೆಯನ್ನು ಎಷ್ಟರಮಟ್ಟಿಿಗೆ ನಿವಾರಿಸಿದೆ ಎಂದು ಕೇಳಬೇಕಾಗಿದೆ. ಶಿಕ್ಷಕರಿಗೆ ಬೋಧನೆಯ ಜತೆಗೆ ಇತರ ಕೆಲಸಗಳನ್ನು ಹೆಗಲಿಗೆ ಹಾಕಿದೆ. ನಾರ್ವೆ ಮತ್ತು ಸ್ವೀಡನ್‌ನಲ್ಲಿ ಅತ್ಯಧಿಕ ಸಂಬಳ ಪಡೆಯುವವರು ಶಿಕ್ಷಕರು. ಅತಿ ಹೆಚ್ಚು ಗೌರವ ಸಂಪಾದಿಸುವರೂ ಅವರೇ ಆಗಿರುತ್ತಾಾರೆ. ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಾಗ ಕೈಗೊಂಡ ಕೆಲವು ಕ್ರಮಗಳು ಇಂದಿಗೂ ಸ್ಮರಣೀಯ. ಶಿಕ್ಷಣ ಸಚಿವರು ಮತ್ತು ಶಿಕ್ಷಕರು ಒಂದೇ ನಾಣ್ಯದ ಎರಡು ಮುಖವಾಗಿ ಕೆಲಸ ಮಾಡಿದಾಗ ಮಾತ್ರ ನಮ್ಮ ದೇಶದ ಪ್ರಗತಿ ಬೆಳವಣಿಗೆಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಆಶಿಸಬಹುದು.