Thursday, 12th December 2024

ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಶೈತ್ಯಾಗೃಹಗಳ ಅಗತ್ಯ

ದೇಶದ ಹಲವೆಡೆ ಟೊಮೇಟೊ ಬೆಲೆ ಗಗನಕ್ಕೇರಿದೆ. ಕೊಪ್ಪಳದಲ್ಲೇ ಕೆ.ಜಿ.ಗೆ ೧೫೦ ರುಪಾಯಿಗೂ ಅಧಿಕ ಬೆಲೆಯಲ್ಲಿ ಟೊಮೇಟೊ
ಮಾರಾಟವಾಗಿದೆ. ಟೊಮೇಟೊ ಉತ್ಪಾದನೆ ಕಡಿಮೆಯಾಗಿರುವುದೇ ಬೆಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಲು ಕಾರಣ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.೦.೪ರಷ್ಟು ಟೊಮೇಟೊ ಉತ್ಪಾದನೆ ಕಡಿಮೆಯಾಗಿದೆ. ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್ ಮತ್ತು ಒಡಿಶಾ ದಲ್ಲಿ ಪ್ರತಿ ವರ್ಷ ಶೇ.೫೧.೫ ರಷ್ಟು ಟೊಮೇಟೊ ಉತ್ಪಾದನೆಯಾಗುತ್ತದೆ. ಆದರೆ ಈ ಬಾರಿ ಗುಜರಾತ್‌ನಲ್ಲೇ ಉತ್ಪಾದನೆ ಶೇ.೨೩.೯ರಷ್ಟು ಕುಸಿದಿದ್ದು, ತಮಿಳುನಾಡು ಮತ್ತು ಛತ್ತೀಸಗಡದಲ್ಲಿ ಉತ್ಪಾದನೆ ಶೇ.೨೦ ರಷ್ಟು ಕುಸಿದಿದೆ. ಹೀಗಾಗಿ ಟೊಮೇಟೊ ಬೆಲೆ ದಿಢೀರ್ ಏರಿಕೆಯಾಗಿದೆ.

ಮುಂಗಾರು ಮಳೆಯಲ್ಲಿ ಆಗಿರುವ ವ್ಯತ್ಯಾಸದ ಪರಿಣಾಮದಿಂದಾಗಿ ಮತ್ತು ಸರಕು ಸಾಗಣೆ ಹಾಗೂ ದಾಸ್ತಾನು ವ್ಯವಸ್ಥೆ ಇಲ್ಲದಿರುವುದು ಕೂಡ ಟೊಮೇಟೊ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ನಮ್ಮ ದೇಶದಲ್ಲಿ ಬೇರೆ ಬೇರೆ ಹವಾಗುಣ ಇರುವ ಪ್ರದೇಶ ಗಳಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಒಂದು ಬೆಳೆಯು ಒಂದು ಪ್ರದೇಶ ದಲ್ಲಿ ವಿಫಲವಾದರೆ, ಇನ್ನೊಂದೆಡೆ ಅದು ಅಗತ್ಯ ಪ್ರಮಾಣದಲ್ಲಿ ಲಭ್ಯವಾಗಿ ದೇಶದ ಮಾರುಕಟ್ಟೆಗಳಲ್ಲಿ ಸ್ಥಿರ ಪೂರೈಕೆ ಇರುವಂತೆ ನೋಡಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಸರಕು ಸಾಗಣೆ ಹಾಗೂ ದಾಸ್ತಾನು ವ್ಯವಸ್ಥೆಯು ಚೆನ್ನಾಗಿರಬೇಕು.
Read E-Paper click here

ಆದರೆ ದೇಶದ ಬಹುತೇಕ ಪ್ರದೇಶಗಳಲ್ಲಿ ಈ ಕೃಷಿ ಮೂಲಸೌಕರ್ಯದ ಕೊರತೆ ಇದೆ. ಆಯಾಯ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಶೈತ್ಯಗೃಹಗಳ ಅಗತ್ಯ ತೀರಾ ಇದೆ. ಅಗತ್ಯಕ್ಕಿಂತ ಹೆಚ್ಚಿನ ಉತ್ಪಾದನೆ ಇರುವ ಸಂದರ್ಭಗಳಲ್ಲಿ ಅವುಗಳನ್ನು ಕೆಡದಂತೆ ಇರಿಸಿಕೊಳ್ಳಬೇಕಾಗುತ್ತದೆ. ಆಗ ಈ ಉತ್ಪನ್ನಗಳನ್ನು ಕೆಡದಂತೆ ರಕ್ಷಿಸಿಕೊಳ್ಳಲು ಹಾಗೂ ಅವುಗಳ ಬೆಲೆಯಲ್ಲಿ ಸ್ಥಿರತೆ ಕಾಯ್ದು ಕೊಳ್ಳಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಅತಿ ಹೆಚ್ಚು ಟೊಮೇಟೊ ಪೂರೈಕೆ ಮಾಡುವ ಕೋಲಾರ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಎಲೆ ಸುರುಳಿ ರೋಗದಿಂದ ಟೊಮೇಟೊ ಇಳುವರಿಯಲ್ಲಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಾಗಿದೆ.

ಕೆ.ಸಿ.ವ್ಯಾಲಿಯಿಂದ ಸಂಸ್ಕರಣೆಯಾಗದ ನೀರು ಪೂರೈಕೆಯಿಂದ ಕೋಲಾರದ ಭಾಗದಲ್ಲಿ ಟೊಮೇಟೊಗೆ ಕೀಟಬಾಧೆ ಹಾಗೂ ರೋಗ ಹೆಚ್ಚಾಗುತ್ತಿದೆ ಎನ್ನಲಾಗಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರವೊಂದನ್ನು ಕಂಡುಕೊಳ್ಳಬೇಕಿದೆ.