Sunday, 15th December 2024

ಕೋರ್ಟ್ ಆದೇಶಕ್ಕೆ ವಿರೋಧ ಸಲ್ಲ

ಹೈಕೋರ್ಟ್ ಮಂಗಳವಾರವಷ್ಟೇ, ಶೈಕ್ಷಣಿಕ ಸಂಘ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವಂತಿಲ್ಲ. ಸಮವಸ ನಿಯಮ ಪಾಲಿಸಬೇಕು ಎಂದು ತೀರ್ಪು ನೀಡುವ ಮೂಲಕ ಹಿಜಾಬ್ ವಿವಾದಕ್ಕೆ ಪೂರ್ಣ ಪ್ರಮಾಣದ ತೆರೆ ಎಳೆದಿದೆ.

ಜತೆಗೆ ಹಿಜಾಬ್ ಏಕೆ ಬೇಡ ಎಂಬುದಕ್ಕೆ ತನಗೆ ತಾನೇ ಪ್ರಶ್ನೆಗಳನ್ನು ಹಾಕಿಕೊಂಡು, ಸವಿವರವನ್ನೂ ನೀಡಿದೆ. ಅಲ್ಲದೇ ಸಂವಿಧಾನವನ್ನು ಒಪ್ಪಿಕೊಂಡಿರುವ ನಾವೆಲ್ಲರೂ ಹೈಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳಬೇಕು. ಆದರೂ ಕೆಲ ವಿದ್ಯಾರ್ಥಿನಿಯರು ತಮ್ಮ ಪಟ್ಟು ಸಡಿಲಿಸದೇ ಹಿಜಾಬ್ ನಮ್ಮ ಹಕ್ಕು, ನಾವು ತೆಗೆಯುವುದಿಲ್ಲ ಎನ್ನುತ್ತಿದ್ದಾರೆ. ತೀರ್ಪು ವಿರೋಧಿಸಿ ಮುಸ್ಲಿಮ್ ಸಂಘಟನೆಗಳು ಬುಧವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಕೋರ್ಟ್ ಕೂಡ ವಿದ್ಯಾರ್ಥಿನಿಯರ ಹಿಂದ ಕಾಣದ ಕೈಗಳ ಕೈವಾಡವಿದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದೆ. ಕೋರ್ಟ್ ವ್ಯಕ್ತಪಡಿಸಿರುವ ಅನುಮಾನವನ್ನು ನೋಡಿದರೆ, ಈ ವಿವಾದದ ಹಿಂದೆ ದೊಡ್ಡ ಹುನ್ನಾರವಿದ್ದಂತೆ ಕಾಣುತ್ತಿದೆ.

ಅಲ್ಲದೇ ಇದು ಸಮುದಾಯವನ್ನು ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ದಾರಿ ತಪ್ಪಿಸುವಂತಹ ಕೆಲಸವಾಗಿದೆ. ಹೀಗಾಗಿ ವಿದ್ಯಾರ್ಥಿನಿಯರು, ತಮ್ಮ ಶಿಕ್ಷಣ ಹಾಗೂ ಭವಿಷ್ಯಕ್ಕೆ ಒತ್ತು ನೀಡಬೇಕೇ ಹೊರತು ವಿವಾದಗಳನ್ನು ಮೈಮೇಲೆಳೆದುಕೊಂಡು ಜೀವನ ಹಾಳು ಮಾಡಿಕೊಳ್ಳಬಾರದು. ಇಷ್ಟಕ್ಕೂ ಸಾಧ್ಯವೇ ಇಲ್ಲವೆಂದರೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ತೀರ್ಪು ಬರುವವ ರೆಗೂ ಕಾಯಬೇಕು. ಅಲ್ಲಿವರೆಗೂ ಹೈಕೋರ್ಟ್ ನೀಡಿರುವ ತೀರ್ಪನ್ನು ಪಾಲಿಸಬೇಕು. ಹೀಗಾಗಿ ಹೈಕೋರ್ಟ್ ಆದೇಶವನ್ನು ವಿರೋಧಿ ಸುವುದಾಗಲಿ ಅಥವಾ ಖಂಡಿಸುವುದಾಗಲಿ ಸಲ್ಲ.

ಜತೆಗೆ ಹೈಕೋರ್ಟ್ ತೀರ್ಪು ನೀಡಿರುವ ಬೆನ್ನಲ್ಲೇ ಸಮುದಾಯದ ನಾಯಕರು, ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೀರ್ಪನ್ನು ಒಪ್ಪಿಕೊಂಡು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು. ರಾಜ್ಯದ ಹಲವೆಡೆ ವಿದ್ಯಾರ್ಥಿಗಳು ಪರೀಕ್ಷೆಗಳಿಂದ ಹೊರಗುಳಿದ ಪ್ರಕರಣಗಳು ವರದಿಯಾಗಿವೆ. ಇಂಥ ಮೊಂಡುತನದ ವರ್ತನೆ ಬಿಟ್ಟು ವಿದ್ಯಾರ್ಥಿಗಳು ಪರೀಕ್ಷೆಗಳಿಗೆ, ತರಗತಿಗಳಿಗೆ ಹಾಜರಾಗಬೇಕು. ಯಾವುದೇ ಧರ್ಮದ ಮಕ್ಕಳಾ ದರೂ ಶಿಕ್ಷಣಕ್ಕೆ ಆದ್ಯ ಗಮನ ಕೊಟ್ಟು, ಉಜ್ವಲ ಭವಿಷ್ಯವನ್ನು ರೂಪಿಸಿ ಕೊಳ್ಳುವುದರ ಕಡೆಗೆ ಗಮನ
ಕೊಡಬೇಕು. ಯಾವುದೇ ಧಾರ್ಮಿಕ ವಸಗಳತ್ತ ಅನಗತ್ಯ ಆದ್ಯತೆ ನೀಡುವ ಮೂಲಕ ಬದುಕಿನ ಸದವಕಾಶಗಳನ್ನು ವ್ಯರ್ಥ ಮಾಡಿಕೊಳ್ಳ ಬಾರದು. ಮಕ್ಕಳ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಲು ಎಲ್ಲರೂ ಚಿಂತಿಸಬೇಕಿದೆ.