Sunday, 15th December 2024

ಮತದಾನವು ವ್ಯವಹಾರೀಕರಣ ಆಗುತ್ತಿರುವುದು ಆತಂಕಕಾರಿ

ವಿಧಾನಸಭೆಯ ಚುನಾವಣೆ ಹೊಸ್ತಿಲಲ್ಲಿ ನಿಂತಿರುವ ನಮ್ಮ ರಾಜಕಾರಣಿಗಳು ತಮ್ಮ ಮತದಾರರಿಗೆ ಸೀರೆ, ಹಣ, ಫ್ರಿಜ್ಡ್ ಅಷ್ಟೆ ಅಲ್ಲದೆ ನಿವೇಶನಗಳನ್ನೂ ಕೊಡಲು ಸಜ್ಜಾಗಿರುವುದನ್ನು ನೋಡಿದರೆ ಎಂತಹವರಿಗೂ ಅಚ್ಚರಿ ಯಾಗುತ್ತದೆ. ಸಕ್ರಿಯ ರಾಜಕಾರಣ ಇಂದು ಎಲ್ಲ ತಾತ್ವಿಕ ನಿಲುವುಗಳನ್ನೂ ಕಳಚಿ ಕೊಂಡು ಶುದ್ಧ ವ್ಯಾವಹಾ ರಿಕ ರಾಜಕೀಯದತ್ತ ಸರಿಯತೊಡಗಿದೆ. ರಾಜಕಾರಣ ಎಂಬುದು ಕೇವಲ ಚುನಾವಣೆಯ ವ್ಯವಹಾರ ಆಗತೊಡಗಿದೆ.

ಪ್ರಜಾಪ್ರಭುತ್ವದ ಶಕ್ತಿಯಾಗಬೇಕಾಗಿದ್ದ ಮತದಾನವು ವ್ಯವಹಾರೀಕರಣ ಆಗುತ್ತಿರುವುದು ಬಹುದೊಡ್ಡ ಆತಂಕಕಾರಿ ಬೆಳವಣಿಗೆಯಾಗಿದೆ. ಪೂಜೆ, ಹುಟ್ಟುಹಬ್ಬ, ಮದುವೆಯ ವಾರ್ಷಿಕೋತ್ಸವದ ನೆಪ ಮಾಡಿಕೊಂಡು ರಾಜಕಾರಣಿಗಳು ಮತದಾರರ ಮನೆ ಮನೆಗೆ ತೆರಳಿ ಗಿ- ಕೊಡುವುದು ಬಹಳಷ್ಟು ಮತಕ್ಷೇತ್ರಗಳಲ್ಲಿ ಬಹಿರಂಗ ವಾಗಿ ನಡೆಯುತ್ತಿದೆ. ಕೊಡುವ ವಸ್ತುಗಳು ಬೇರೆ ಬೇರೆ ಆಗಿರಬಹುದು, ಕೊಡುವ ವಿಧಾನ ಕೂಡ ಭಿನ್ನವಾಗಿರ ಬಹುದು, ಆದರೆ ಉದ್ದೇಶ ಮಾತ್ರ ಒಂದೇ ಆಗಿದೆ. ಒಬ್ಬರು ? 1000 ಬೆಲೆಯ ಸೀರೆ ಕೊಟ್ಟರೆ ಅದೇ ಕ್ಷೇತ್ರದ ಇನ್ನೊಬ್ಬ ಸ್ಪರ್ಧಿ ? ೩,೦೦೦ ಬೆಲೆಯ ಸೀರೆ ವಿತರಿಸುತ್ತಾನೆ.

ಮತ್ತೊಬ್ಬ ಬೆಲೆಬಾಳು ಬಂಗಾರದ ಉಂಗುರ ಕೊಟ್ಟರೆ, ಇನ್ನೊಬ್ಬ ಖಾಲಿ ನಿವೇಶನ ಕೊಡುವುದಾಗಿ ಆಮಿಷ ಒಡ್ಡುತ್ತಿದ್ದಾನೆ. ಉಡುಗೊರೆ ಕೊಡುವು ದರಲ್ಲೂ ರಾಜಕಾರಣಿಗಳ ಮಧ್ಯೆ ಮೇಲಾಟ ನಡೆದಿದೆ. ಇಷ್ಟೊಂದು ಬೆಲೆಬಾಳುವ ಉಡುಗೊರೆ ಕೊಟ್ಟು ಮತ ಪಡೆದು ಗೆದ್ದು ಹೋಗಿರುವವರು ವಾಪಸ್ ಅದನ್ನು ಜನರ ತೆರಿಗೆ ದುಡ್ಡಿನಿಂದಲೇ ಪಡೆಯುತ್ತಾನೆ ಎಂಬುದನ್ನು ಕೂಡ ಜನರು ಯೋಚಿಸದೆ, ನಾ ಮುಂದು, ತಾ ಮುಂದು ಎಂಬಂತೆ ಉಡುಗೊರೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಬೆಳಗಾವಿ, ಕಲಬುರಗಿ ಜಿಗಳ ಮಹಿಳಾ ಸಂಘಟನೆಗಳ ಸದಸ್ಯರು ಸಾಮೂಹಿಕವಾಗಿ ಉಡುಗೊರೆಗಳನ್ನು ನಿರಾಕರಿಸುವ ಮೂಲಕ ಸ್ವಾಭಿಮಾನ ಮೆರೆದಿದ್ದಾರೆ. ನಿಮ್ಮ ಉಡುಗೊರೆ ಬೇಡ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಂದು ಆಕಾಂಕ್ಷಿಗಳಿಗೆ ಹೇಳಿ ಕಳಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮತದಾರರೊಬ್ಬರು ಉಡುಗೊರೆ ಕೊಟ್ಟ ಸೀರೆಯನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಯ ಸಂದರ್ಭದಲ್ಲಿ ಇಂತಹ ಮನೋಭಾವ ಎಲ್ಲ ಕಡೆ ಬೆಳೆಯಬೇಕಿದೆ. ಆ ಮೂಲಕ ಆಸೆ, ಆಮಿಷಗಳಿಲ್ಲದ ಚುನಾವಣೆ ನಡೆಯಬೇಕಿದೆ.

Read E-Paper click here