ಇಂದಿನಿಂದ ಮೇ ೬ರವರೆಗೆ ೮೦ ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಆಯೋಗದ ಈ ಹೊಸ ಪ್ರಯೋಗ ಸ್ವಾಗತಾರ್ಹವೇ. ಆದರೆ ಇದರಿಂದ ಮತದಾನದ ಗೋಪ್ಯತೆ ಉಳಿಯುವುದೇ ಎಂಬುದು ಪ್ರಶ್ನೆ.
ಮತಪತ್ರಗಳನ್ನು ಡೌನ್ ಲೌಡ್ ಮಾಡಿ ಮತ ಚಲಾಯಿಸುವ ಪ್ರಕ್ರಿಯೆಯಲ್ಲಿ ಭಾಗ ವಹಿಸಲು ೮೦ ವರ್ಷ ಮೇಲ್ಪಟ್ಟವರಿಗೆ ಹೇಗೆ ಸಾಧ್ಯ? ಇಂತಹ ಮತಗಳು ಸಲೀಸಾಗಿ ತಂತ್ರಜ್ಞಾನ ಬಲ್ಲ ಹಾಗೂ ಆಸಕ್ತಿ ವಹಿಸುವ ಯಾವುದೋ ಒಂದು ಪಕ್ಷದ ಪಾಲಾಗುವ ಅಪಾಯ ಇದೆ. ಅಥವಾ ಪಕ್ಷಗಳ ಕಾರ್ಯಕರ್ತರು ಕುಟುಂಬದ ಸದಸ್ಯರ ಮೇಲೆ ಪ್ರಭಾವ ಬೀರಿ ಅವರ ಮೂಲಕವೇ ತಮಗೆ ಬೇಕಾದ ಅಭ್ಯರ್ಥಿಗೆ ಮತ ಚಲಾಯಿಸುವ ಸಾಧ್ಯತೆ ಬಹಳಷ್ಟಿದೆ.
ಪ್ರತಿ ಕ್ಷೇತ್ರಗಳಲ್ಲಿ ಇಂತಹ ಮತದಾರರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದ್ದರೂ ಒಂದೇ ಮತದಿಂದ ಆಯ್ಕೆ ಸಾಧ್ಯತೆ ಇರುವು ದರಿಂದ ಇದನ್ನು ಗಂಭೀರವಾಗಿಯೇ ಪರಿಗಣಿಸ ಬೇಕಾಗುತ್ತದೆ. ಹಾಗಾಗಿ ಈ ಹೊಸ ಪ್ರಯೋಗವು ಗೌಪ್ಯ ಮತದಾನಕ್ಕೆ ಮಾರಕ ಆಗುವ ಸಾಧ್ಯತೆ ಇದೆ. ಅಲ್ಲದೆ, ಮತದಾನಕ್ಕೆ ಮೇ ೧೦ರ ಬುಧವಾರವನ್ನು ಚುನಾವಣಾ ಆಯೋಗ ನಿಗದಿ ಮಾಡಿದೆ. ವಾರಾಂತ್ಯದ ದಿನಗಳಾದರೆ ಚುನಾವಣಾ ದಿನಾಂಕದ ರಜೆಯನ್ನು ಇನ್ನಿತರ ರಜೆಗಳ ಜತೆ ಸೇರಿಸಿಕೊಂಡು ಪ್ರವಾಸ, ಮೋಜು- ಮಸ್ತಿಗಾಗಿ ಹೊರಟುಬಿಡಬಹುದು, ಅಂತಹ ಮತ ದಾರರು ಮತದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲವಾದ್ದರಿಂದ, ಮತ ಪ್ರಮಾಣ ಏರಿಸಲು ಆಯೋಗ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಆದರೆ ಕಂಪನಿಗಳ ಕೆಲಸಗಾರರು, ಕೆಲ ಸರಕಾರಿ ನೌಕರರು, ನಗರಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಬೆಂಗಳೂರು, ಮೈಸೂರಿ
ನಂತಹ ನಗರ ಪ್ರದೇಶಗಳಲ್ಲಿರುವ ವಲಸೆ ಕೆಲಸಗಾರರು ಮತದಾನದಲ್ಲಿ ಭಾಗವಹಿಸಲು ದೂರದ ಊರುಗಳಿಗೆ, ಕರ್ನಾಟಕದ ಅಂಚಿನಲ್ಲಿರುವ ಗ್ರಾಮಗಳಿಗೆ ತೆರಳಬೇಕಾಗಿರುತ್ತದೆ. ಅಂತಹವರು ಒಂದೇ ದಿನದಲ್ಲಿ ಹೋಗಿಬರಲು ಸಾಧ್ಯವೇ? ಸಮಾ ಧಾನಚಿತ್ತರಾಗಿ ಹೋಗಿ ಬರಲು ಕನಿಷ್ಠ ಎರಡು ದಿನಗಳಾದರೂ ರಜೆ ಹಾಕಬೇಕಾಗಿರುತ್ತದೆ. ಹೀಗಾಗಿ, ಚುನಾವಣಾ ದಿನಾಂಕ ನಿಗದಿ ಮಾಡುವಾಗ ಇಂತಹ ವಿಷಯವನ್ನೂ ಆಯೋಗವು ಗಣನೆಗೆ ತೆಗೆದುಕೊಳ್ಳಬೇಕಿತ್ತು.