ಡ್ರೋಣ್ ಮೂಲಕ ಪಾಕಿಸ್ತಾಾನ ಅಪಾಯಕಾರಿ ಶಸ್ತ್ರಗಳನ್ನು ಭಾರತಕ್ಕೆೆ ಕಳುಹಿಸುತ್ತಿರುವ ವಿದ್ಯಮಾನ ನಮಗೆ ಒಂದು ಎಚ್ಚರಿಕೆಯ ಗಂಟೆ.
ಮಾನವರಹಿತ ಪುಟ್ಟ ವಿಮಾನಗಳ ರೂಪದಲ್ಲಿ ಹಾರಾಡುವ ಡ್ರೋೋಣ್ ಗಳನ್ನು ನೆರೆ ರಾಷ್ಟ್ರ ಪಾಕಿಸ್ತಾನವು ನಮ್ಮ ದೇಶದ ವಿರುದ್ಧ ಶಸ್ತ್ರಾಸ್ತ್ರ ಸಾಗಿಸಲು ಉಪಯೋಗಿಸುತ್ತಿರುವ ವಿಚಾರ ನಿನ್ನೆೆ ಬೆಳಕಿಗೆ ಬಂದಿದ್ದು, ಅಲ್ಲಿ ಉಪಯೋಗಿಸಿರುವ ಕಾರ್ಯತಂತ್ರ ರಕ್ಷಣಾ ತಜ್ಞರನ್ನು ಕಳವಳಕ್ಕೆೆ ಈಡುಮಾಡಿದೆ. ಡ್ರೋೋಣ್‌ಗಳ ಮೂಲಕ ಕಳುಹಿಸಿದ ಎಕೆ 47, ಪಿಸ್ತೂಲು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವ ರಕ್ಷಣಾ ಪಡೆಗಳು, ಪಾಕಿಸ್ತಾಾನದ ಈ ಹೀನ ಕಾರ್ಯತಂತ್ರದ ವಿವರಗಳನ್ನು ಬಿಚ್ಚಿಿಟ್ಟಿಿದ್ದಾಾರೆ. ಪಾಕಿಸ್ತಾಾನದ ಗಡಿಯೊಳಗೆ 2 ಕಿಮೀ ದೂರದಿಂದ ಹಾರಿ ಬಿಡುವ ಈ ಡ್ರೋೋಣ್‌ಗಳಲ್ಲಿ ಶಸ್ತ್ರಾಾಸ್ತ್ರಗಳನ್ನುಕಳುಹಿಸಲಾಗುತ್ತಿಿದ್ದು, ಗಡಿದಾಟಿ ಬಂದ ಈ ಡ್ರೋೋಣ್‌ಗಳು ಪಂಜಾಬಿನಲ್ಲಿ ಅವುಗಳನ್ನು ಬೀಳಿಸುತ್ತಿಿದ್ದವು. ಅದನ್ನು ಖಲಿಸ್ತಾಾನ್ ಉಗ್ರಗಾಮಿಗಳು ಸಂಗ್ರಹಿಸುವ ಪರಿಪಾಠವಿದ್ದುದನ್ನು ರಕ್ಷಣಾ ಸಿಬ್ಬಂದಿ ಪತ್ತೆೆ ಹಚ್ಚಿಿದ್ದಾಾರೆ.
ಜಿಪಿಎಸ್ ನೆರವಿನಿಂದ ಶಸ್ತ್ರಾಾಸ್ತ್ರಗಳನ್ನು ಎಲ್ಲಿಗೆ ತಲುಪಿಸಬೇಕೆಂದು ಡ್ರೋೋಣ್‌ಗೆ ಫೀಡ್ ಮಾಡಿ ಕಳುಹಿಸಲಾಗುತ್ತಿಿದ್ದು, ತನ್ನ ಕೆಲಸ ಮುಗಿಸಿದ ನಂತರ ಆ ಡ್ರೋೋಣ್‌ಗಳು ಪುನಃ ಪಾಕಿಸ್ತಾಾನಕ್ಕೆೆ ವಾಪಸಾಗುವಂತೆಯೂ ಯೋಜಿಸಲಾಗುತ್ತಿಿತ್ತು. ಖಲಿಸ್ತಾಾನ್ ಜಿಂದಾಬಾದ್ ಫೋರ್ಸ್ ಎಂಬ ಉಗ್ರಗಾಮಿ ಸಂಸ್ಥೆೆಯು ಪಾಕಿಸ್ತಾಾನ ಮತ್ತು ಜರ್ಮನಿಯಲ್ಲಿ ಸಕ್ರಿಿಯವಾಗಿದ್ದು, ಅದರ ಸದಸ್ಯರು ಡ್ರೋೋಣ್ ಮೂಲಕ ಶಸ್ತ್ರಾಾಸ್ತ್ರ ಕಳುಹಿಸಲು ಪಾಕಿಸ್ತಾಾನದ ಐಎಸ್‌ಐ ಸಹಕರಿಸುತ್ತಿಿತ್ತು ಎಂಬ ವಿಚಾರ ಸಹ ಬಯಲಾಗಿದೆ. ಐಎಸ್‌ಐ ಸಹಕಾರದಿಂದ, ರಂಜಿತ್ ಸಿಂಗ್ ಎಂಬಾತ ಪಾಕಿಸ್ತಾಾನದ ಲಾಹೋರ್‌ನ ಒಂದು ಗೆಸ್‌ಟ್ ಹೌಸ್‌ನಲ್ಲಿ ಆಶ್ರಯ ಪಡೆದು, ವಿವಿಧ ರೀತಿಯ ಅತ್ಯಾಾಧುನಿಕ ಶಸ್ತ್ರಾಾಸ್ತ್ರಗಳನ್ನು ಡ್ರೋೋಣ್ ಮೂಲಕ ಕಳುಹಿಸುವ ವ್ಯವಸ್ಥೆೆ ಮಾಡುತ್ತಿಿದ್ದ. ಚೀನಾ ನಿರ್ಮಿತ ಬೃಹತ್, ಆಧುನಿಕ ಡ್ರೋೋಣ್‌ಗಳಲ್ಲಿ ಶಸ್ತ್ರಾಾಸ್ತ್ರಗಳ ಜತೆಯಲ್ಲೇ, ನಮ್ಮ ದೇಶದ ನಕಲಿ ನೋಟುಗಳನ್ನು ಸಹ ಕಳುಹಿಸಲಾಗುತ್ತಿಿತ್ತು ಎಂದು ಭದ್ರತಾ ಪಡೆ ಬಹಿರಂಗಗೊಳಿಸಿದೆ. ಇವನ್ನು ಖಲಿಸ್ತಾಾನ್ ಜಿಂದಾಬಾದ್ ಫೋರ್ಸ್‌ನ ಉಗ್ರಗಾಮಿಗಳು ಪಂಜಾಬಿನ ನಿರ್ಜನ ಪ್ರದೇಶದಿಂದ ಸಂಗ್ರಹಿಸಿ, ದೇಶದ ವಿವಿಧ ನಗರಗಳಿಗೆ ಸಾಗಿಸುತ್ತಿಿದ್ದರು.
ಈ ನಡುವೆ, ಪಾಕಿಸ್ತಾಾನದಿಂದ ಹಾರಿಬಂದು, ಎಕೆ 47 ನಂತಹ ಅಪಾಯಕಾರಿ ಶಸ್ತ್ರಗಳನ್ನು ಬೀಳಿಸಿ, ವಾಪಸಾಗುವಲ್ಲಿ ವಿಫಲಗೊಂಡ ಒಂದು ಡ್ರೋೋಣ್ ಭಾರತದ ನೆಲದಲ್ಲೇ ಉರುಳಿಬಿತ್ತು. ಅದರ ಜಿಪಿಎಸ್ ಲೊಕೇಶನ್‌ನ್ನು ಸ್ಥಳೀಯ ಏಜೆಂಟರು ಪಡೆದು, ಆ ಡ್ರೋೋಣ್ ಅವಶೇಷಗಳನ್ನು ನಾಲೆಯಲ್ಲಿ ಮುಳುಗಿಸಿ ಮತ್ತು ಸುಟ್ಟು ನಾಶಮಾಡಲಾಗುತ್ತಿಿತ್ತು. ಇದರ ಸುಳಿವರಿತ ಭದ್ರತಾ ಸಿಬ್ಬಂದಿ ನಾಲ್ವರು ಉಗ್ರಗಾಮಿಗಳನ್ನು ಬಂಧಿಸಿ, ಅವರಿಂದ ಅಪಾಯಕಾರಿ ಶಸ್ತ್ರಾಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾಾರೆ. ಭದ್ರತಾ ಸಿಬ್ಬಂದಿ ಕಣ್‌ತಪ್ಪಿಿಸಿ ಈಗಾಗಲೇ ಹಲವು ಡ್ರೋೋಣ್ ಸವಾರಿಗಳು ಅಪಾಯಕಾರಿ ಶಸ್ತ್ರಗಳನ್ನು ಭಾರತದ ಗಡಿಯೊಳಗೆ ಬೀಳಿಸಿದ್ದು, ಅವು ಕಾಶ್ಮೀರದ ಉಗ್ರಗಾಮಿಗಳಿಗೂ ತಲುಪಿರುವ ಸಾಧ್ಯತೆ ಇರುವುದರಿಂದ ಹಲವು ನಗರಗಳಲ್ಲಿ ಎಚ್ಚರಿಕೆಯನ್ನೂ ನೀಡಲಾಗಿದೆ.
ಡ್ರೋಣ್ ಮೂಲಕ ಪಾಕಿಸ್ತಾಾನವು ಅಪಾಯಕಾರಿ ಶಸ್ತ್ರಗಳನ್ನು ಭಾರತಕ್ಕೆೆ ಕಳುಹಿಸುತ್ತಿಿರುವ ವಿದ್ಯಮಾನವು ನಮ್ಮ ದೇಶಕ್ಕೆೆ ಒಂದು ಎಚ್ಚರಿಕೆಯ ಗಂಟೆಯೇ ಸರಿ. ನಮ್ಮ ರಕ್ಷಣಾ ಪಡೆ ಇನ್ನಷ್ಟು ಎಚ್ಚರಿಕೆ ವಹಿಸಿ, ಡ್ರೋೋಣ್ ಮೂಲಕ ಗಡಿಯಾಚೆಯಿಂದ ಹಾರಿಬರುತ್ತಿಿರುವ ಈ ಅಪಾಯವನ್ನು ತಡೆಯುವಲ್ಲಿ ಸಕ್ರಿಿಯವಾಗಬೇಕಾಗಿದೆ.