ಇದು ನಿರ್ಲಕ್ಷ್ಯವೋ, ಕಡೆಗಣನೆಯೋ, ಹಠಮಾರಿತನವೋ, ಉದ್ದೇಶಪೂರ್ವಕ ನಡೆಯೋ, ರಾಜಕೀಯ ತಂತ್ರವೋ… ಏನೆಂಬುದೂ ಸ್ಪಷ್ಟವಾಗುತ್ತಿಲ್ಲ.
ಸ್ಪಷ್ಟಪಡಿಸಬೇಕಾದವರು ಸ್ಪಷ್ಟಪಡಿಸುತ್ತಿಲ್ಲ. ದಿನದಿಂದ ದಿನಕ್ಕೆ ಕ್ರೀಡಾಪಟುಗಳು ನಡೆಸುತ್ತಿರುವ ಪ್ರತಿಭಟನೆ ಎಲ್ಲೋ ಒಂದು ಕಡೆ ಈ ಹಿಂದೆ ಕೃಷಿ ಕಾಯಿದೆ ವಿರೋಧಿಸಿ ರೈತರು ನಡೆಸಿದ್ದ ಪ್ರತಿಭಟನೆ (ರಾಜಕೀಯ)ಯ ಸ್ವರೂಪವನ್ನೇ ಪಡೆದುಕೊಂಡು, ಪರಿಸ್ಥಿತಿ ತಿಳಿಯಾಗುವ ಬದಲು ಇನ್ನಷ್ಟು ಬಿಗಡಾಯಿಸುತ್ತಿದೆ. ಅಥವಾ ಹಾಗೆ ಮಾಡಲು ಪ್ರಯತ್ನಿಸ ಲಾಗುತ್ತಿದೆ. ಮಹಿಳಾ ಕುಸ್ತಿಪಟುಗಳಿಗೆ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂಬುದು ಪ್ರಮುಖ ಆರೋಪ.
ಇದಕ್ಕಾಗಿ ಅವರ ವಜಾ ಹಾಗೂ ಬಂಧನಕ್ಕೆ ಒತ್ತಾಯಿಸಿ, ಕಳೆದ ಜನವರಿ ಯಿಂದಲೇ ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ಡಬಲ್ ವಲ್ಡ ಚಾಂಪಿಯನ್ ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಭಾರತದ ಅಗ್ರ ಕುಸ್ತಿಪಟುಗಳುದನಿ ಎತ್ತಿದ್ದರು. ಕಳೆದ ಏಪ್ರಿಲ್ ೨೩ರಿಂದ ಜಂತರ್ ಮಂತರ್ ನಲ್ಲಿ ನಿರಂತರ ಪ್ರತಿಭಟಗೂ ಇಳಿದು, ಗಮನ ಸೆಳೆಯಲು ನಾನಾ ಕಸರತ್ತು ನಡೆಸುತ್ತಲೇ ಬರುತ್ತಿದ್ದಾರೆ.
ಇದರ ಭಾಗವಾಗಿ, ಮೊನ್ನೆ ನೂತನ ಸಂಸತ್ತಿನ ಉದ್ಘಾಟನಾ ಸಮಾರಂಭದ ವೇಳೆ ಸೆಂಟ್ರಲ್ ವಿಸ್ತಾದ ಆವರಣಕ್ಕೆ ತಮ್ಮ
ಪ್ರತಿಭಟನೆಯನ್ನು ಸ್ಥಳಾಂತರಿಸಲು ಪ್ರತ್ನಿಸಿ, ಮೊಕದ್ದಮೆಯೂ ದಾಖಲಾಗಿದೆ. ಪ್ರತಿಭಟನಾ ನಿರತರ ಈಗಿನ ಹೊಸ ವರಸೆ ಗೆದ್ದ ಪದಕಗಳನ್ನು ಗಂಗೆಗೆ ಎಸೆಯುವುದು! ಅಷ್ಟಕ್ಕೂ ಈ ಪ್ರತಿಭಟನೆಯ ಹಿಂದಿನ ಉದ್ದೇಶ ನೈಜತೆ ಎಷ್ಟು, ಕುಸ್ತಿ ಪಟುಗಳು ಇಷ್ಟೊಂದು ಹಠಕ್ಕೆ ಬಿದ್ದು ಕುಳಿತಿರುವುದಾದರೂ ಏಕೆ, ಇಷ್ಟಾದರೂ ಸರಕಾರ ಸುಮ್ಮನಿರುವುದೇಕೆ ಎಂಬೆಲ್ಲ ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿದೆ.
ಬ್ರಿಜ್ ಭೂಷಣ್ ಮೂರು ಅವಧಿಯಿಂದಲೂ ಫೆಡರೇಷನ್ ನ ಅಧ್ಯಕ್ಷರು. ಹೀಗಿದ್ದೂ ಈಗ ಏಕಾಏಕಿ ಆರೋಪ ಎದುರಿಸುತ್ತಿರುವ ಹಿಂದೆ ರಾಜಕೀಯ ಉದೇಶಗಳಿವೆ ಎಂಬ ಮಾತೂ ಕೇಳಿ ಬರುತ್ತಿವೆ. ೨೦೨೨ರ ಕೇಂದ್ರ ಕುಸ್ತಿ ಫೆಡರೇಷನ್‌ನ ಹೊಸ ನಿಯಮಗಳೇ ಇದಕ್ಕೆ ಕಾರಣ ಎಂಬ ದೂರೂ ಇದೆ. ಹೊಸ ನಿಯಮದನ್ವಯ ಒಲಿಂಪಿಕ್‌ನಲ್ಲಿ ಸ್ಪರ್ಧಿಸಿದ ಮತ್ತು ಭಾಗವ
ಹಿಸಿದ ಸ್ಪರ್ಧಿಗಳು ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಉತ್ತಮ ನಿರ್ವಹಣೆ ತೋರಿದರೆ ಮಾತ್ರ ಪುನಃ ಒಲಿಂಪಿಕ್‌ಗೆ ಅರ್ಹತೆ ಪಡೆಯುತ್ತಾರೆ.
ಇನ್ನು ದೇಶಕ್ಕಾಗಿ ಆಡುವಾಗ ಕುಸ್ತಿ ಪಟುಗಳ ಖಾಸಗಿ ಸ್ಪಾನ್ಸರ್‌ಗಳು ಮತ್ತು ಖಾಸಗಿ ಕೋಚ್‌ಗಳಿಗೆ ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಟೋಕಿಯೊ ಒಲಿಂಪಿಕ್‌ನಲ್ಲಿ ವಿನೀಶಾ ಫೋಗಾಟ್ ದೇಶದ ಸಮವಸದ ಬದಲು ಖಾಸಗಿ ಸ್ಪಾನ್ಸರ್
ಸಮವಸ ಮತ್ತು ಶೂ ಧರಿಸಿದ್ದಕ್ಕೆ ೫ ವರ್ಷಗಳ ಕಾಲ ಅಮಾನತಿಗೊಳಗಾಗಿದ್ದಾರೆ. ಮಾತ್ರವಲ್ಲ, ಖಾಸಗಿ ಕುಸ್ತಿ ಚಟುವಟಿಕೆ ಗಳಿಗೆ ಕೇಂದ್ರ ಕುಸ್ತಿ ಅಕಾಡೆಮಿ ಡುತ್ತಿದ್ದ ಹಣಕಾಸು ನೇರವನ್ನು ಸ್ಥಗಿತಗೊಳಿಸಿ ಕೇಂದ್ರ ಕುಸ್ತಿ ಅಕಾಡೆಮಿಯಲ್ಲಿ ಕಡ್ಡಾಯವಾಗಿ ತರಬೇತಿ ಪಡೆಯುವಂತೆ ಸೂಚಿಸಲಾಗಿದೆ. ಜತೆಗೆ ಪ್ರತಿ ರಾಜ್ಯಕ್ಕೆ ಕೋಟಾ ನಿಗದಿಪಡಿಸಲಾಗಿದೆ.
ಇದರಿಂದ ಹರಿಯಾಣ ಲಾಬಿಗೆ ಕಡಿವಾಣ ಹಾಕಿದ್ದೂ ಕ್ರೀಡಾಪಟುಗಳ ಆಕ್ರೋಶದ ಹಿಂದಿನ ಕಾರಣ ಎಂಬ ಮಾತು ವ್ಯಾಪಕವಾಗಿದೆ. ಏನೇ ಇರಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವೊಂದರ ಕೀರ್ತೀ ಪತಾಕೆಯನ್ನು ಎತ್ತಿ ಹಿಡಿಯಬೇಕಿರುವ ಕ್ರೀಡಾಪಟುಗಳು ಬೇರೊಂದು ಕಾರಣಕ್ಕೆ ಸುದ್ದಿ ಪತ್ರಿಕೆಗಳ ಹೆಡ್‌ಲೈನ್‌ಗಳಾಗುವುದು ತರವಲ್ಲ. ಆದಷ್ಟು ಬೇಗ ಇದಕ್ಕೊಂದು ಕೊನೆ ಹಾಡುವ ಅಗತ್ಯವಿದೆ.