Thursday, 12th December 2024

ಯುವನಿಧಿ: ಕಣ್ಗಾವಲು ಅಗತ್ಯ

ವರ್ಷದಿಂದ ವರ್ಷಕ್ಕೆ ಉದ್ಯೋಗಗಳು ಇಳಿಮುಖವಾಗುತ್ತಾ, ನಿರುದ್ಯೋಗಿಗಳ ಸಂಖ್ಯೆ ಏರಿಕೆಯಾಗುತ್ತಾ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರವು ಯುವ ನಿಽ ಯೋಜನೆ ಜಾರಿಗೊಳಿಸಿದ್ದು ಶ್ಘಾಘನೀಯ. ಆದರೆ ಈ ಯೋಜನೆ ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ಅನುಷ್ಠಾನಗೊಳ್ಳುತ್ತದೆ ಎನ್ನುವುದರ ಆಧಾರದ ಮೇಲೆ ಈ ಯೋಜನೆಯ ಸೋಲು-ಗೆಲುವು ನಿಂತಿದೆ. ಉಳಿದೆಲ್ಲ ಗ್ಯಾರಂಟಿಗಳಿಗೆ ಹೋಲಿಸಿದರೆ ಈ ಯೋಜನೆ ದುರ್ಬಳಕೆ ಯಾಗುವ ಸಾಧ್ಯತೆಗಳು ಹೆಚ್ಚಿವೆ.

ಮುಖ್ಯವಾಗಿ ಯಾರು ನಿರುದ್ಯೋಗಿಗಳು ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸುವುದರಲ್ಲಿಯೇ ಗೊಂದಲಗಳಿವೆ. ಅರ್ಹ ಯುವಕರು ತಮ್ಮ ಮುಂದಿನ ಕಲಿಕೆಗೆ ಈ ನಿಧಿಯನ್ನು ಪೂರಕವಾಗಿ ಬಳಸಿಕೊಂಡರೆ ಯುವನಿಧಿ ಯುವಕರ ಭವಿಷ್ಯಕ್ಕೆ ಅಮೃತಜಲ ಹರಿಸಲಿದೆ. ಆದರೆ ನಕಲಿ ಪದವೀಧರರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ. ಆದ್ದರಿಂದ, ಯುವನಿಽಯ ಅನುಷ್ಠಾನ ಸಂದರ್ಭದಲ್ಲಿ ಹೆಚ್ಚಿನ ಕಣ್ಗಾವಲು ಅತ್ಯಗತ್ಯವಿದೆ. ಇನ್ನೊಂದೆಡೆ ರಾಜ್ಯ ಸರಕಾರ ಅಧೀನದ ಇಲಾಖೆಗಳು, ಸಂಸ್ಥೆಗಳು, ನಿಗಮ, ಮಂಡಳಿಗಳಲ್ಲಿ ೨,೫೮,೭೦೯ ಹುದ್ದೆಗಳು ಖಾಲಿ ಇವೆ.

ಅಂದರೆ, ಮೂರನೇ ಒಂದರಷ್ಟು ಭಾಗ ಹುದ್ದೆಗಳು ಖಾಲಿ ಇವೆ. ಕಳೆದ ಎರಡು ದಶಕಗಳಿಂದ ಚುನಾವಣಾ ಸಂದರ್ಭದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದರೆ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂಬ ಖಾಲಿ ಭರವಸೆಗಳನ್ನೇ ನೀಡುತ್ತಾ ಬಂದಿವೆ. ಆದರೆ ಅಧಿಕಾರ ಬಂದ ನಂತರ ವರಸೆಯೇ ಬೇರೆ ಆಗಿದೆ. ಭರ್ತಿ ಮಾಡಿದರೂ ಅಲ್ಪ ಪ್ರಮಾಣದ ಸಂಖ್ಯೆಗಳನ್ನು ಭರ್ತಿ ಮಾಡಲಾಗುತ್ತದೆ. ಆದರೆ ಮೂರನೇ ಒಂದು ಭಾಗದಲ್ಲಿ ಸ್ವಲ್ಪವೂ ಕಡಿಮೆ ಆಗಿಲ್ಲ. ಈ ಹುದ್ದೆಗಳ ಭರ್ತಿ ಮಾಡಿದರೆ ೨೦೨೩-೨೪ನೇ ಹಣಕಾಸು ವರ್ಷದಲ್ಲಿ ಅಂದಾಜು ೨೫ ಸಾವಿರ ಕೋಟಿಯನ್ನು ವೇತನಕ್ಕಾಗಿ ಹೊಂದಿಸ ಬೇಕಾಗುತ್ತದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಘೋಷಿಸಿದಂತೆ ನಿಗದಿತ ಕಾಲಾವಧಿಯಲ್ಲೇ ಎಲ್ಲ ಗ್ಯಾರಂಟಿ ಯೋಜನೆಗಳನ್ನೂ ಜಾರಿಗೊಳಿಸಿ ನುಡಿದಂತೆ ನಡೆದ ಸರಕಾರವು ಇದೀಗ ಈ ಖಾಲಿ ಹುzಗಳನ್ನು ಭರ್ತಿ ಮಾಡಬೇಕಿದೆ. ಆ ನಿರುದ್ಯೋಗ ಪ್ರಮಾಣ ಕಡಿಮೆ ಮಾಡಬೇಕಿದೆ.