Tuesday, 28th May 2024

ಸೇವಿಸುವ ಆಹಾರ ಹೇಗಿರಬೇಕು ?

ಸ್ವಾಸ್ಥ್ಯ ಸಂಪದ

yoganna55@gmail.com

(ಭಾಗ -೧ )

ಗರ್ಭಧಾರಣೆ ದಿನದಿಂದ ಹಿಡಿದು ಗರ್ಭಕೂಸಿನ ಅಂಗಾಂಗಗಳ ಬೆಳವಣಿಗೆ ಮತ್ತು ಹುಟ್ಟಿದ ನಂತರ ಸಾವಿನ ವರೆವಿಗೂ ದೇಹದ ಅಂಗಾಅಗಗಳ ಬೆಳೆವಣಿಗೆ ಮತ್ತು ದೈನಂದಿನ ಕಾರ್ಯಚಟುವಟಿಕೆಗಳಿಗೆ ಆಹಾರ ಅತ್ಯವಶ್ಯಕ. ದೇಹದಲ್ಲಿ ಪ್ರತಿನಿತ್ಯ ಉಪಯೋಗಿಸಲ್ಪಟ್ಟ ಅಂಗಾಅಶಗಳು ಸಾವಿಗೀಡಾ ಗುತ್ತಿದ್ದು, ಅವುಗಳ ಪುನರೋತ್ಪತ್ತಿ ಮತ್ತು ಪ್ರತಿನಿತ್ಯ ಜರುಗುವ ಅಸಂಖ್ಯಾತ ರಾಸಾಯನಿಕ ಕ್ರಿಯೆಗಳಿಗೆ ಬೇಕಾಗುವ ಹಾರ್ಮೋನು ಗಳು, ಕಿಣ್ವಗಳು ಮತ್ತಿತರ ರಾಸಾಯನಿಕ ವಸ್ತುಗಳ ಉತ್ಪತ್ತಿಗೆ ಪೌಷ್ಠಿಕಾಂಶಗಳು ಅತ್ಯವಶ್ಯಕವಾಗಿದ್ದು, ಅವುಗಳು ದಿನನಿತ್ಯದ ಆಹಾರದಿಂದಲೇ ಸರಬರಾಜಾಗಬೇಕು.

ಆದುದರಿಂದ ಪ್ರತಿನಿತ್ಯ ದೇಹಕ್ಕೆ ಅವಶ್ಯಕತೆ ಇರುವ ವಿವಿಧ ಪೌಷ್ಠಿಕಾಂಶಗಳ ಅರಿವು, ಅವು ಲಭ್ಯವಿರುವ ಆಹಾರ ಪದಾರ್ಥಗಳು ಮತ್ತು ಯಾವ ಯಾವ ಪೌಷ್ಠಿಕಾಂಶಗಳನ್ನು ಎಷ್ಟು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬ ಅರಿವು ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಹಸಿವು ಮತ್ತು ರುಚಿಗಳ ಪೂರೈಕೆಗಾಗಿ ಆಹಾರವಲ್ಲ, ದೇಹದ ಉಳಿವಿಗಾಗಿ ಆಹಾರ ಎಂಬುದು ವೈಜ್ಞಾನಿಕ ಸತ್ಯ. ವೈಜ್ಞಾನಿಕವಾಗಿ ಆಹಾರ ನಿಯಮಗಳನ್ನು ರೂಪಿಸಿಕೊಳ್ಳ ದಿದ್ದಲ್ಲಿ ಹಲವಾರು ಕಾಯಿಲೆಗಳ ಉಗಮಕ್ಕೆ ನಾಂದಿಯಾಗುತ್ತದೆ. ಈ ಕಾರಣಕ್ಕಾಗಿಯೇ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ವೈಜ್ಞಾನಿಕವಾದ ನಾಣ್ಣುಡಿ ಜನ್ಮತಾಳಿದೆ.

ವಾಹನಗಳಿಗೆ ಇಂಧನ ಹಾಕಿಸುವ ಬಗ್ಗೆ ಬಹಳಷ್ಟು ಯೋಚಿಸುತ್ತೇವೆ. ದೇಹವೂ ಕೂಡ ಒಂದು ಜೈವಿಕ ಯಂತ್ರ. ಅದಕ್ಕೆ ಬೇಕಾಗುವ ಆಹಾರದ ರೀತಿ ನೀತಿಗಳ ಬಗ್ಗೆ ಬಹುಪಾಲರು ಯೋಚಿಸುವುದೇ ಇಲ್ಲ. ಬೇಕು ಬೇಡವುಗಳ ಬಗ್ಗೆ ಚಿಂತಿಸುವುದಿಲ್ಲ. ಹಸಿವು ನೀಗಿಸಿ ಕೊಂಡು ಹೊಟ್ಟೆ ತುಂಬಿಸಿ ಕೊಳ್ಳಲು ಯಾವುದಾದರೊಂದು ಆಹಾರವಾಯಿತು ಎಂಬ ಧೋರಣೆ ಇರುವವರೇ ಹೆಚ್ಚು. ದೇಹದ ಆರೋಗ್ಯಕ್ಕಾಗಿ ಆಹಾರ ಸೇವಿಸುವವರಿಗಿಂತ ರುಚಿಗಾಗಿಯೇ ಆಹಾರ ಸೇವಿಸುವವರು ಅಧಿಕ.

ವೈಜ್ಞಾನಿಕವಲ್ಲದ ಆಹಾರ ಸೇವನೆಯಿಂದ ಸಮಾಜದಲ್ಲಿ ಹಲವಾರು ಹೊಸ ಹೊಸ ಕಾಯಿಲೆಗಳು ಉತ್ಪತ್ತಿಯಾಗುತ್ತಿವೆ. ಆಹಾರ ಕೊರತೆಯಿಂದ ಉಂಟಾಗುವ ಕಾಯಿಲೆಗಳಿಗಿಂತ ಅವೈಜ್ಞಾನಿಕವಾಗಿ ಸೇವಿಸುವ ಹೆಚ್ಚು ಆಹಾರದಿಂದಲೇ ಇಂದು ಕಾಯಿಲೆಗಳು ಅಧಿಕವಾಗುತ್ತಿವೆ. ಸಕ್ಕರೆ ಕಾಯಿಲೆ, ಏರು ರಕ್ತ ಒತ್ತಡ, ಹೃದಯಾಘಾತ, ಕ್ಯಾನ್ಸರ್ ಕಾಯಿಲೆಗಳಿಗೆ ಅವೈಜ್ಞಾನಿಕ ಆಹಾರ ಪದ್ಧತಿಯೇ ಪ್ರಮುಖ ಕಾರಣವಾಗಿದೆ. ನನ್ನ ೪೦ ವರ್ಷಗಳ ವೈದ್ಯಕೀಯ ವೃತ್ತಿಯ ಅನುಭವದಲ್ಲಿ ಅವಿದ್ಯಾವಂತರಿರಲಿ, ವಿದ್ಯಾವಂತರು ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿರುವವರಿಗೂ ಸಹ ವೈeನಿಕ ಆಹಾರ ಪದ್ಧತಿಯ ಅರಿವಿಲ್ಲ, ಅರಿವಿದ್ದರೂ ಶಿಸ್ತುಬದ್ಧವಾಗಿ ಪಾಲನೆಯಿಲ್ಲ.

ಈ ಎಲ್ಲ ಅರಿವಿನ ಹಿನ್ನೆಲೆಯಲ್ಲಿ ಆಹಾರದ ಪ್ರಾಮುಖ್ಯತೆಯನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಆಹಾರದ ಬಗೆಗಿನ ಎಲ್ಲ ವೈಜ್ಞಾನಿಕ ಮಜಲುಗಳನ್ನು ಸರಣಿ ಲೇಖನಮಾಲೆಯಲ್ಲಿ ಬರೆಯಲು ತೀರ್ಮಾನಿಸಿದ್ದೇನೆ. ಓದುಗರು ಈ ಲೇಖನಗಳನ್ನು ಸಂಗ್ರಹಿಸಿಟ್ಟು ಕೊಂಡು ಪ್ರತಿನಿತ್ಯ ಇದರ ಬಗ್ಗೆ ಕಣ್ಣಾಡಿಸಿ ವೈಜ್ಞಾನಿಕ ಆಹಾರ ನಿಯಮಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆಂಬ ಆಶಯ ನನ್ನದು.

ಆಹಾರ ಎಂದರೇನು?

ಆಹಾರವೆಂದರೆ ಮನುಷ್ಯನ ದೈನಂದಿನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವ ಜೀವಕೋಶಗಳ ಕಾರ್ಯನಿರ್ವಹಣೆಗೆ ಅವಶ್ಯಕವಿರುವ ಎಲ್ಲಾ ಪೌಷ್ಠಿಕಾಂಶಗಳನ್ನು ಒದಗಿಸುವ ಹಲವಾರು ಆಹಾರ ಪದಾರ್ಥಗಳ ಮಿಶ್ರಣ.

ಇವುಗಳ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದ ಮಿಗ್ರಾಂ ನಿಂದ ಗ್ರಾಂಗಳವರೆವಿಗೆ, ಕೆಲವು ನೂರಾರು ಗ್ರಾಂಗಳಲ್ಲಿ ಬೇಕಾಗಬಹುದು. ಆಹಾರ ವಾಗಿ ಉಪಯೋಗಿಸಲಾಗುವ ಯಾವುದೇ ಆಹಾರ ವಸ್ತುವನ್ನು ಆಹಾರ ಪದಾರ್ಥ(-ಡ್ ಸ್ಟ-) ಎನ್ನಲಾಗುತ್ತದೆ. (ಉದಾರಾಗಿ, ಅಕ್ಕಿ, ಸೇಬು ಇತ್ಯಾದಿ). ಪೌಷ್ಠಿಕಾಂಶ (ನ್ಯೂಟ್ರಿಯಂಟ್) ಎಂದರೆ ಆಹಾರ ಪದಾರ್ಥದಲ್ಲಿರುವ ಜೀವಕೋಶಗಳ ದೈನಂದಿನ ಕ್ರಿಯೆಗೆ ಅವಶ್ಯಕವಿರುವ
ಜೀವರಸಕ್ರಿಯೆಯಲ್ಲಿ ಬಳಸಲಾಗುವ ವಸ್ತು.

ಪೌಷ್ಠಿಕಾಂಶಗಳ ಪೋಷಣೆ (ನ್ಯೂಟ್ರಿಷನ್) ಎಂದರೆ ಸೇವಿಸುವ ಆಹಾರವನ್ನು ದೇಹ ಉಪಯೋಗಿಸಿಕೊಳ್ಳುವ ಕ್ರಿಯಾತ್ಮಕ ಜೀವ ರಾಸಾಯನಿಕ
ವಿಧಿ ವಿಧಾನ. ಪೌಷ್ಠಿಕಾಂಶಗಳ ಪೋಷಣೆ ಈ ಕ್ರಿಯೆಯಲ್ಲಿ ಸೇವಿಸಿದ ಆಹಾರ ಜೀರ್ಣಾಂಗದಲ್ಲಿ ಜೀರ್ಣವಾಗಿ ರಕ್ತಕ್ಕೆ ಹೀರಿಕೆಯಾಗುವಿಕೆ ಮತ್ತು ಜೀವಕೋಶಗಳಲ್ಲಿ ಪೌಷ್ಠಿಕಾಂಶಗಳು ಉಪಯೋಗಿಸಿಕೊಳ್ಳುವ ರೀತಿ ನೀತಿಗಳನ್ನು ಒಳಗೊಂಡಿದೆ. ದೇಹದ ರಚನೆ ಮತ್ತು ಕಾರ್ಯಗಳನ್ನು ನಿರ್ವಹಿಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟು ನಿಯಂತ್ರಿಸಲು, ಕಾಯಿಲೆಗಳನ್ನು ತಡೆಗಟ್ಟಲು ಅತ್ಯವಶ್ಯಕ. ಪೌಷ್ಠಿಕಾಂಶಗಳು ಪ್ರತಿನಿತ್ಯ ಹೆಚ್ಚಿನ
ಪ್ರಮಾಣದಲ್ಲಿ ಅಥವಾ ಕಡಿಮೆ ಪ್ರಮಾಣದಲ್ಲಿ ಬೇಕಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ಬೇಕಾದ ಆಹಾರ ಪದಾರ್ಥಗಳಾದ ಕಾರ್ಬೋಹೈಡ್ರೇಟ್, ಜಿಡ್ಡು, ಪ್ರೋಟೀನ್ ಇತ್ಯಾದಿಗಳನ್ನು ಹೆಚ್ಚಿನ ಪ್ರಮಾಣದ ಪೌಷ್ಠಿಕಾಂಶಗಳು (ಮ್ಯಾಕ್ರೋನ್ಯೂಟ್ರಿಯಂಟ್ಸ್) ಎಂದು ಅತ್ಯಲ್ಪ ಪ್ರಮಾಣದಲ್ಲಿ ಬೇಕಾಗುವ ಪೌಷ್ಠಿಕಾಂಶಗಳನ್ನು ಅತ್ಯಲ್ಪ ಪ್ರಮಾಣದ ಪೌಷ್ಠಿಕಾಂಶಗಳು (ಮೈಕ್ರೋನ್ಯೂಟ್ರಿಯಂಟ್ಸ್) ಎನ್ನಲಾಗುತ್ತದೆ.

ಉದಾ: ವಿಟಮಿನ್‌ಗಳು, ಲವಣಗಳು. ಪ್ರತಿಯೊಂದು ಪೌಷ್ಠಿಕಾಂಶವನ್ನು ಪ್ರತಿನಿತ್ಯ ನಿರ್ದಿಷ್ಟ ಪ್ರಮಾಣದಲ್ಲಿ ಅವರವರ ವಯಸ್ಸು, ದೈಹಿಕ ಚಟುವಟಿಕೆಗಳ ಪ್ರಮಾಣ ಮತ್ತು ಇರಬಹುದಾದ ಕಾಯಿಲೆಗಳಿಗನುಗುಣವಾಗಿ ಸೇವಿಸಬೇಕು.

ಪೌಷ್ಠಿಕಾಂಶದ ಅತಿಸೇವನೆ (ಓರ್ವ ನ್ಯೂಟ್ರಿಷನ್) ಅಥವಾ ಪೌಷ್ಠಿಕಾಂಶದ ಕಡಿಮೆ ಸೇವನೆ (ಅಂಡರ್ ನ್ಯೂಟ್ರಿಷನ್) ಗಳೆರಡರಿಂದಲೂ ಅನಾರೋಗ್ಯ ಸಮಸ್ಯೆಗಳುಂಟಾಗುತ್ತವೆ. ಅತಿಸೇವನೆ ಅಥವಾ ಕಡಿಮೆ ಆಹಾರ ಸೇವನೆಯನ್ನು ಅಸಹಜ ಆಹಾರಸೇವನೆ (ಮಾಲ್ ನ್ಯೂಟ್ರಿಷನ್) ಎನ್ನಲಾಗುತ್ತದೆ. ಅಸಹಜ ಆಹಾರ ಸೇವನೆಯಲ್ಲಿ ನಿರ್ದಿಷ್ಟ ಪೌಷ್ಠಿಕ ಮತ್ತು ಪೌಷ್ಠಿಕಾಂಶಗಳ ಕೊರತೆ ಇರಬಹುದು.

ಪೌಷ್ಠಿಕಾಂಶಗಳು (ನ್ಯೂಟ್ರಿಯಂಟ್ಸ್)
ದೇಹಕ್ಕೆ ಅಗತ್ಯವಿರುವ ಹಲವಾರು ಪೌಷ್ಠಿಕಾಂಶಗಳಿದ್ದು, ಅವುಗಳನ್ನು ಹೀಗೆ ವರ್ಗೀಕರಿಸಲಾಗಿದೆ. ಶಕ್ತಿ (ಕ್ಯಾಲೊರಿ), ಕಾರ್ಬೋಹೈಡ್ರೇಟ್,
ಪ್ರೋಟೀನ್, ಜಿಡ್ಡು, ವಿಟಮಿನ್‌ಗಳು, ಲವಣಗಳು, ನಾರು. ಪ್ರತಿಯೊಂದು ಆಹಾರ ಪದಾರ್ಥದಲ್ಲೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪೌಷ್ಠಿಕಾಂಶ ಗಳಿದ್ದು, ಒಂದೊಅದು ಆಹಾರ ಪದಾರ್ಥದಲ್ಲಿ ಒಂದೊಂದು ಪೌಷ್ಠಿಕಗಳು ಅತಿ ಹೆಚ್ಚಿನ ಪ್ರಮಾಣದಲ್ಲಿರಬಹುದು. ಇದನ್ನಾಧರಿಸಿ ಆಹಾರ ಪದಾರ್ಥ ಗಳನ್ನು ಕಾರ್ಬೋಹೈಡ್ರೇಟ್ ಉಳ್ಳ, ಪ್ರೋಟೀನ್ ಉಳ್ಳ, ಜಿಡ್ಡುಳ್ಳ, ವಿಟಮಿನ್ ಇರುವ, ಲವಣವಿರುವ ಮತ್ತು ನಾರುಳ್ಳ ಆಹಾರ ಪದಾರ್ಥಗಳೆಂದು ವರ್ಗೀಕರಿಸಲಾಗಿದೆ.

ಆಹಾರ ಪದಾರ್ಥಗಳು ಸಸ್ಯ ಜನ್ಯ ಅಥವಾ ಪ್ರಾಣಿ ಜನ್ಯ ಆಹಾರ ಪದಾರ್ಥಗಳಾಗಬಹುದು. ಲಭ್ಯವಿರುವ ಆಹಾರ ಪದಾರ್ಥಗಳಲ್ಲಿ ಅತಿ ಹೆಚ್ಚಿನ ಪೌಷ್ಠಿಕಾಂಶಗಳಿರುವ ಆಹಾರ ಪದಾರ್ಥಗಳು ಹೀಗಿವೆ.

ದೇಹಕ್ಕೆ ಶಕ್ತಿ ಹೇಗೆ?

ದೈನಂದಿನ ಕಾರ್ಯಚಟುವಟಿಕೆಗಳಿಗೆ ಜೀವಕೋಶಗಳಿಗೆ ಶಕ್ತಿ ಅವಶ್ಯಕವಿದ್ದು, ಇದು ಆಹಾರ ಪದಾರ್ಥಗಳಿಂದ ಲಭಿಸುತ್ತದೆ. ಅವಶ್ಯಕವಿರುವ ಶಕ್ತಿ ಯನ್ನು ಕಿಲೋ ಕ್ಯಾಲೊರಿ ಅಳತೆಯಲ್ಲಿ ಅಳೆಯಲಾಗುತ್ತದೆ. ೧ ಕಿ.ಗ್ರಾಂ ನೀರಿನ ಶಾಖವನ್ನು ೧ ಡಿಗ್ರಿ ಸೆಂಟಿಗ್ರೇಡ್‌ಗೆ ಏರಿಸಲು ಅವಶ್ಯಕವಿರುವ ಶಾಖದ ಪ್ರಮಾಣವನ್ನು ೧ಕಿಲೋ ಕ್ಯಾಲೊರಿ ಎನ್ನಲಾಗುತ್ತದೆ. ಇದನ್ನು ಜೌಲ್ ಲೆಕ್ಕದಲ್ಲೂ ಹೇಳಲಾಗುತ್ತದೆ. ೧ ಕಿಲೋ ಕ್ಯಾಲೊರಿ ೧೮೪ ಕೆಜೆ (ಜೌಲ) ಗೆ ಸಮಾನ.

ದೇಹ ಶಕ್ತಿಗಾಗಿ ಕಾರ್ಬೋಹೈಡ್ರೇಟ್‌ಗಳನ್ನು ಮೊದಲನೆಯ ಆದ್ಯತೆಯ ಪೌಷ್ಠಿಕಾಂಶವಾಗಿ ಉಪಯೋಗಿಸುತ್ತದೆ. ಇದು ಲಭ್ಯವಿಲ್ಲದಿzಗ ಜಿಡ್ಡನ್ನು
ಎರಡನೇ ಆದ್ಯತೆಯಾಗಿ ಮತ್ತು ಇವೆರಡೂ ಲಭ್ಯವಿಲ್ಲದಿದ್ದಾಗ ಪ್ರೋಟೀನನ್ನು ಕೊನೆಯ ಆದ್ಯತೆಯಾಗಿ ಉಪಯೋಗಿಸಲ್ಪಡುತ್ತದೆ. ಆಹಾರದಲ್ಲಿರುವ ಪ್ರತಿ ಗ್ರಾಂನ ಕಾರ್ಬೋಹೈಡ್ರೇಟ್ನಿಂದ ೪ ಕಿಲೋ ಕ್ಯಾಲೊರಿ ಮತ್ತು ಜಿಡ್ಡಿನಿಂದ ೯ ಕಿಲೋ ಕ್ಯಾಲೊರಿ ಮತ್ತು ಪ್ರೋಟೀನ್‌ನಿಂದ ೪ ಕಿಲೋ
ಕ್ಯಾಲೊರಿ ಶಕ್ತಿ ಲಭಿಸುತ್ತದೆ. ಪ್ರತಿ ಮನುಷ್ಯನಿಗೂ ಪ್ರತಿನಿತ್ಯ ಅವಶ್ಯಕವಿರುವ ಶಕ್ತಿಯ ಪ್ರಮಾಣ ಅವನ ವಯಸ್ಸು, ಲಿಂಗ, ದೈಹಿಕ ಚಟುವಟಿಕೆಗಳು,
ಇರಬಹುದಾದ ಕಾಯಿಲೆಗಳು ಇತ್ಯಾದಿ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.

ದೇಹದಲ್ಲಿ ಜರುಗುವ ಹಲವಾರು ರಾಸಾಯನಿಕ ಕ್ರಿಯೆಗಳಿಗೆ ಶಕ್ತಿ ಅವಶ್ಯಕ. ಪ್ರತಿನಿತ್ಯ ಸೇವಿಸುವ ಆಹಾರದಿಂದ ಲಭಿಸುವ ಒಟ್ಟು ಶಕ್ತಿಯ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‌ಗಳಿಂದ ಶೇ ೬೫-೮೦, ಜಿಡ್ಡಿನಿಂದ ಶೇ ೧೦-೩೦ ಮತ್ತು ಪ್ರೋಟೀನ್‌ಗಳಿಂದ ಶೇ ೧-೧೫ರಷ್ಟು ಶಕ್ತಿಯ ಪ್ರಮಾಣ ಲಭಿಸುತ್ತದೆ. ಪ್ರತಿನಿತ್ಯ ಅವಶ್ಯಕವಿರುವ ಕ್ಯಾಲೊರಿ ಪ್ರಮಾಣ ಕುಳಿತು ಕೆಲಸ ಮಾಡುವವರಿಗೆ-೨೪೦೦ ಕಿಲೋ ಕ್ಯಾಲೊರಿ ೨೦೦೦ಕಿಲೋ ಕ್ಯಾಲೊರಿ ಅತಿಯಾದ ದೈಹಿಕ ಶ್ರಮದವರಿಗೆ-೨೮೦೦ ಕಿಲೋ ಕ್ಯಾಲೊರಿ ೨೩೦೦ ಕಿಲೋ ಕ್ಯಾಲೊರಿ ಬಸಿರಿಯರಿಗೆ ೨೩೦೦ ಕಿಲೋ ಕ್ಯಾಲೊರಿ
ಬಾಣಂತಿಯರಿಗೆ-೨೭೦೦ ಕಿಲೋ ಕ್ಯಾಲೊರಿ ಕನಿಷ್ಟ ಚಯಾಪಚಯ ಪ್ರಮಾಣ (ಬೇಸಲ್ ಮೆಟಬಾಲಿಕ್ ರೇಟ್) ಎಚ್ಚರವಾಗಿರುವ, ಹಿಂದಿನ ೧೨-೧೪ ಗಂಟೆಗಳ ಕಾಲ ಆಹಾರ ಸೇವಿಸದ ಮತ್ತು ದೈಹಿಕ, ಮಾನಸಿಕವಾಗಿ ಸಂಪೂರ್ಣ ವಿಶ್ರಾಂತಿಯಲ್ಲಿರುವ ಮನುಷ್ಯನಿಗೆ ಬೇಕಾಗುವ ಶಕ್ತಿಯ ಪ್ರಮಾಣವಿದು.

ಇದನ್ನು ದೇಹದ ಪ್ರತಿ ಮೇಲ್ಮೈ ಮೀಟರ್ ದೇಹದ ಆವರಣಕ್ಕೆ ೧ ಗಂಟೆಗೆ ಬೇಕಾಗುವ ಶಕ್ತಿಯ ಪ್ರಮಾಣದಲ್ಲಿ ಅಳೆಯಲಾಗುತ್ತದೆ. ಇದರ ಪ್ರಮಾಣ
ಪುರುಷರಿಗೆ ೪೦ ಕ್ಯಾಲೊರಿ/ಗಂಟೆ/ಎಂ೨ ಮತ್ತು ಸೀಯರಿಗೆ ೩೦ ಕ್ಯಾಲೊರಿ/ಗಂಟೆ/ಎಂ೨. ಇದು ಹಲವಾರು ಅಂಶಗಳಿಂದ ನಿರ್ಧಾರಿತ ವಾಗುತ್ತದೆ.

ಅವುಗಳೆಂದರೆ, ಅ. ದೇಹದ ಮೇಲ್ಮೈ ಆವರಣ (ಸ-ಸ್ ಏರಿಯಾ ಆಫ್ ದಿ ಬಾಡಿ) ದೇಹದ ಮೇಲ್ಮೈ ಆವರಣ ಹೆಚ್ಚಾಗಿದ್ದಲ್ಲಿ ದೇಹದಿಂದ ಶಾಖ ನಷ್ಟ ಹೆಚ್ಚಾಗುವುದರಿಂದ ಇವರಿಗೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಉದ್ದವಾಗಿರುವವರು ಗಿಡ್ಡವಾಗಿರುವವರಿಗಿಂತ ಹೆಚ್ಚಿನ ದೇಹದ ಮೇಲ್ಮೈ ಆವರಣವನ್ನು ಹೊಂದಿದ್ದು, ಅವರಿಗೆ ಅತಿ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಈ ಕಾರಣಕ್ಕಾಗಿ ಒಂದೇ ದೇಹ ತೂಕವಿರುವ ತೆಳ್ಳನೆ ಉದ್ದವಾಗಿರುವವರು ಕುಳ್ಳಾಗಿ
ಬೊಜ್ಜಿರುವವರಿಗಿಂತ ಹೆಚ್ಚು ಆಹಾರವನ್ನು ಸೇವಿಸುತ್ತಾರೆ.

ಆ. ಲಿಂಗ: ಪುರುಷರಲ್ಲಿ ಸೀಯರಿಗಿಂತ ಇದು ಹೆಚ್ಚು.
ಇ. ಮಾನಸಿಕ ಒತ್ತಡ: ಮಾನಸಿಕ ಒತ್ತಡ ಅತಿಯಾಗಿರುವವರಲ್ಲಿ ಇದು ಹೆಚ್ಚಾಗಿರುತ್ತದೆ.

ಈ. ಪೌಷ್ಠಿಕಗಳ ಪೋಷಣೆ: ದೀರ್ಘಕಾಲೀಕ ಕಡಿಮೆ ಪೌಷ್ಠಿಕ ಇರುವವರಲ್ಲಿ ಇದು ಕಡಿಮೆಯಾಗುತ್ತದೆ.
ಉ. ಕಾಯಿಲೆಗಳು: ಥೈರಾಯಿಡ್ ಕಾಯಿಲೆಯಲ್ಲಿ ಕಡಿಮೆ ಅಥವಾ ಹೆಚ್ಚಾಗಬಹುದು. ಜ್ವರ ಇರುವವರಲ್ಲಿ ಹೆಚ್ಚಾಗುತ್ತದೆ.

ಶಕ್ತಿದಾಯಕ ಆಹಾರ ಪದಾರ್ಥಗಳು
ಅಽಕ ಪ್ರಮಾಣದಲ್ಲಿ ಶಕ್ತಿಯುಳ್ಳ ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸುವ ಆಹಾರ ಪದಾರ್ಥಗಳಿವು. ಕಾರ್ಬೋಹೈಡ್ರೇಟ್, ಜಿಡ್ಡು ಮತ್ತು
ಪ್ರೋಟೀನ್ ಉಳ್ಳ ಆಹಾರ ಪದಾರ್ಥಗಳು ದೇಹಕ್ಕೆ ಆದ್ಯತೆಯ ಮೇಲೆ ಶಕ್ತಿಯನ್ನೊದಗಿಸುತ್ತವೆ.

ಕಾರ್ಬೋಹೈಡ್ರೇಟ್‌ಗಳು: ಅಕ್ಕಿ, ಅವಲಕ್ಕಿ, ರವೆ, ರಾಗಿ, ಜೋಳ, ಗೋಧಿ, ನವಣೆ, ಸಜ್ಜೆ, ಸಕ್ಕರೆ, ಜೇನು, ಬೆಲ್ಲ, ಆಲೂಗೆಡ್ಡೆ, ಗೆಣಸು, ಮೂಲಂಗಿ, ಇವು ಸಾಮಾನ್ಯವಾಗಿ ಲಭ್ಯವಿರುವ ಸೇವಿಸುವ ಕಾರ್ಬೋಹೈಡ್ರೇಟ್‌ಯುಕ್ತ ಆಹಾರ ಪದಾರ್ಥಗಳು.

ಕಾರ್ಬೋಹೈಡ್ರೇಟ್‌ಗಳ ವಿಧಗಳು 
ಕಾರ್ಬೋಹೈಡ್ರೇಟ್‌ಗಳನ್ನು ರಾಸಾಯನಿಕವಾಗಿ ೩ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.
೧. ಏಕ ಸಾಕರೈಡ್‌ಗಳು ಅಥವಾ ಸಾಮಾನ್ಯ ಸಕ್ಕರೆಗಳು(ಮಾನೋ ಸಾಕರೈಡ್‌ಗಳು) ಅ. ಗ್ಲುಕೋಸ್( ದ್ರಾಕ್ಷಿ, ಬೇರುಗಳು ಇತ್ಯಾದಿಗಳಲ್ಲಿದೆ),
ಆ. -ಕ್ಟೋಸ್ (ಜೇನುತುಪ್ಪ, ಮಾಗಿದ ಹಣ್ಣುಗಳು ಮತ್ತು ತರಕಾರಿಗಳು) ಮತ್ತು ಇ. ಗ್ಯಾಲಕ್ಟೋಸ್ (ಹಾಲಿನಲ್ಲಿರುವ ಲ್ಯಾಕ್ಟೋಸ್‌ನಲ್ಲಿದೆ).
೨. ದ್ವಿ ಸಾಕರೈಡ್‌ಗಳು ಅಥವಾ ಸಂಯುಕ್ತ ಸಕ್ಕರೆಗಳು (ಡೈ ಸಾಕರೈಡ್‌ಗಳು) -ಇವುಗಳಲ್ಲಿ ಅ.ಸುಕ್ರೋಸ್ (ಕಬ್ಬಿನ ಹಾಲು, ಸಕ್ಕರೆ, ಹಣ್ಣುಗಳು
ಮತ್ತು ತರಕಾರಿಗಳಲ್ಲಿದೆ. ಆ. ಲ್ಯಾಕ್ಟೋಸ್ (ಇದು ಪ್ರಾಣಿಗಳ ಹಾಲಿನಲ್ಲಿದೆ). ಇ. ಮಾಲ್ಟೋಸ್ (ಇದು ೨ ಗ್ಲುಕೋಸ್ ಅಣುಗಳಿಂದ ರಚಿತವಾಗಿದೆ.
ಜೇನುತುಪ್ಪ, ಬೇಯಿಸಿದ ಸಿಹಿ ಆಲೂಗೆಡ್ಡೆ, ಬೀರ್, ಬ್ರೆಡ್ ಹಾಗೂ ಹಣ್ಣುಗಳಲ್ಲಿದೆ).

೩. ಬಹು ಸಾಕರೈಡ್‌ಗಳು (ಪಾಲಿ ಸಾಕರೈಡ್ ಗಳು) ಅ. ಪಿಷ್ಟ (ಸ್ಟಾರ್ಚ್- ಅಕ್ಕಿ, ಗೋಧಿ, ಜೋಳ, ರಾಗಿ, ಬೇರುಗಳು, ಬೀಜಗಳು, ಬಾಳೆಕಾಯಿ) ಆ. ಗ್ಲೈಕೋಜನ್ ( ಪ್ರಾಣಿಗಳ ಈಲಿಯಲ್ಲಿದೆ) ಇ. ಸೆಲ್ಯೂಲೋಸ್ (ಜೀರ್ಣವಾಗದ ಪೆಂಟೋಸ್ ಮತ್ತು ಹೆಕ್ಸೋಸ್ ಎಂಬ ೨ ಸಕ್ಕರೆಗಳಿವೆ. ಎಲ್ಲ
ತರಕಾರಿಗಳು ಮತ್ತು ಧಾನ್ಯಗಳ ಹೊಟ್ಟಿನಲ್ಲಿದೆ).

(ಮುಂದುವರೆಯುತ್ತದೆ)

Read E-Paper click here

error: Content is protected !!