Thursday, 25th April 2024

ಆಹಾರದಲ್ಲಿ ಕೊಬ್ಬಿನ ಉಪಯೋಗಗಳು, ವಿಧಗಳು

ಸ್ವಾಸ್ಥ್ಯ ಸಂಪದ

Yoganna55@gmail.com

ಮನುಷ್ಯ ಸೇವಿಸುವ ಪ್ರತಿನಿತ್ಯದ ಆಹಾರದಲ್ಲಿ ಕೊಬ್ಬು ಸಹ ಒಂದು. ಸಮುದಾಯದಲ್ಲಿ ಹೆಚ್ಚುತ್ತಿರುವ ಅಧಿಕ ರಕ್ತದೊತ್ತಡ ಹೃದಯಾಘಾತ, ಸ್ಟ್ರೋಕ್
ಇತ್ಯಾದಿ ಕಾಯಿಲೆಗಳಿಗೆ ಅಧಿಕವಾಗಿ ಸೇವಿಸುತ್ತಿರುವ ಜಿಡ್ಡಿನ ಆಹಾರ ಪದಾರ್ಥಗಳೇ ಕಾರಣ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದ್ದು, ಜಿಡ್ಡನ್ನು ಸೇವಿಸಬೇಕೇ? ಬೇಡವೇ? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ಜಿಡ್ಡನ್ನು ಸಂಪೂರ್ಣ ನಿರ್ಬಂಽಸಬೇಕೇ?  ಇತ್ಯಾದಿ ಹಲವಾರು ಪ್ರಶ್ನೆಗಳು ಜನರಲ್ಲಿ ಉದ್ಭವಿಸಿ ಜಿಡ್ಡಿನ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ.

ಜಿಡ್ಡಿನಿಂದ ದೇಹಕ್ಕಾಗುವ ಪ್ರಯೋಜನಗಳೇನು? ಕೊರತೆಯಿಂದ ಮತ್ತು ಅಽಕ ಪ್ರಮಾಣದಲ್ಲಿ ಸೇವಿಸಿದಲ್ಲಿ ಉಂಟಾಗಬಹುದಾದ ಅವಘಡಗಳೇನು? ಯಾವ ಯಾವ ಆಹಾರ ಪದಾರ್ಥಗಳಲ್ಲಿ ಎಷ್ಟೆಷ್ಟು ಜಿಡ್ಡಿದೆ? ದೇಹದಲ್ಲಿ ಜಿಡ್ಡಿನ ಪ್ರಮಾಣವನ್ನು ನಿಯಂತ್ರಿಸುವುದು ಹೇಗೆ? ಎಂಬಿತ್ಯಾದಿ ವಿಚಾರಗಳ ಮೇಲೆ ಅರಿವು ಮೂಡಿಸುವ ಲೇಖನವಿದು.

ತುಪ್ಪ ಮತ್ತು ಎಣ್ಣೆಗಳು ಉಪಯೋಗಿಸುವ ಆಹಾರ ಪದಾರ್ಥದ ಪ್ರಮುಖ ಜಿಡ್ಡುಗಳು. ಇವು ಕಾರ್ಬನ್(ಇದ್ದಿಲು), ಹೈಡ್ರೋಜನ್(ಜಲಜನಕ)
ಮತ್ತು ಆಮ್ಲಜನಕಗಳಿಂದ ರಚಿತವಾಗಿವೆ. ಇವು ಸಸ್ಯಜನ್ಯ ಅಥವಾ ಪ್ರಾಣಿಜನ್ಯವಾಗಿರಬಹುದು. ಇವು ಅತಿ ಹೆಚ್ಚಿನ ಪ್ರಮಾಣದ ಶಕ್ತಿಯುಳ್ಳ ಆಹಾರ
ಪದಾರ್ಥಗಳು. ಇವುಗಳನ್ನು ದೇಹ ಶಕ್ತಿಗಾಗಿ ೨ ನೇ ಆದ್ಯತೆಯ ವಸ್ತುವನ್ನಾಗಿ ಉಪಯೋಗಿಸುತ್ತದೆ. ಜಿಡ್ಡು ದೇಹಕ್ಕೆ ಅತ್ಯವಶ್ಯಕ ಪೌಷ್ಠಿಕಾಂಶ ಗಳಲ್ಲೊಂದು. ಪ್ರತಿನಿತ್ಯ ವಯಸ್ಕರಿಗೆ ಕನಿಷ್ಠ ೧೫-೩೦ ಗ್ರಾಂ ಜಿಡ್ಡಿನ ಸೇವನೆ ಅತ್ಯವಶ್ಯಕ. ಪ್ರತಿನಿತ್ಯ ದೇಹಕ್ಕೆ ಅವಶ್ಯಕತೆ ಇರುವ ಒಟ್ಟಾರೆ ಶಕ್ತಿಯ ಪ್ರಮಾಣದಲ್ಲಿ ಶೇ ೧೫-೨೫ರಷ್ಟು ಪ್ರಮಾಣ ಜಿಡ್ಡಿನಿಂದ ಲಭಿಸಬೇಕು, ಲಭಿಸಿದರೆ ಆರೋಗ್ಯಕರ. ದೇಹದಲ್ಲಿ ತಯಾರಾಗುವ ಹಾರ್ಮೋನ್‌ಗಳಿಗೆ, ಪ್ರೋಟೀನ್ ತಯಾರಿಕೆಗೆ ಜಿಡ್ಡು ಅತ್ಯವಶ್ಯಕ.

ವಿಟಮಿನ್ ಎ,ಡಿ,ಇ ಮತ್ತು ಕೆಗಳನ್ನು ಜೀರ್ಣಾಂಗದಲ್ಲಿ ರಕ್ತಕ್ಕೆ ಹೀರುವ ಪ್ರಕ್ರಿಯೆಗೆ ಜಿಡ್ಡು ಬೇಕೇ ಬೇಕು. ಹಾಗೂ ಈ ವಿಟಮಿನ್‌ಗಳು ಕೊಬ್ಬಿ
ನೊಂದಿಗೆ ಜೊತೆಗೂಡಿರುತ್ತವೆ. ಚರ್ಮದಡಿ ಶೇಖರಣೆಯಾಗುವ ಜಿಡ್ಡಿನ ಅಂಗಾಂಶ ದೇಹದ ಉಷ್ಣತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ಕೊಬ್ಬು
ವಹಿಸುತ್ತದೆ. ದೇಹದ ಒಳಾಂಗಗಳ ಸುತ್ತ ಇರುವ ಒಳಾಂಗದ ಜಿಡ್ಡಿನ ಅಂಗಾಂಶ(ವಿಸರಲ್ -ಟ್) ಅವುಗಳಿಗೆ ರಕ್ಷಾಕವಚವನ್ನೊದಗಿಸುತ್ತವೆ. ಪ್ರಾಣಿಜನ್ಯ ಜಿಡ್ಡುಗಳಾದ ಮೀನು, ತುಪ್ಪ, ಬೆಣ್ಣೆ, ಲಿವರ್ ಆಯಿಲ್ ಗಳು ವಿಟಮಿನ್ ಎ ಯನ್ನು ಒದಗಿಸುತ್ತವೆ.

-ಸೋಲಿಪಿಡ್‌ಗಳು ನರ ವ್ಯವಸ್ಥೆ ಮತ್ತು ಜೀವಕೋಶ ಪದರದ ರಚನೆಗೆ ಅತ್ಯವಶ್ಯಕ. ಕೊಲೆಸ್ಟ್ರಾಲ್, ಸ್ಟೀರಾಯ್ಡ್ ಹಾರ್ಮೋನ್‌ಗಳ ಮತ್ತು ಬೈಲ್ ಆಮ್ಲಗಳ ಉತ್ಪತಿ, ಜೀವಕೋಶಗಳ ಪದರ ಮತ್ತು ನರ ಅಂಗಾಂಶದ ಉತ್ಪತ್ತಿಗೆ ಅತ್ಯವಶ್ಯಕ.ಉಪವಾಸ ಮತ್ತು ಕಾರ್ಬೋಹೈಡ್ರೇಟ್‌ಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ (ಸಕ್ಕರೆಕಾಯಿಲೆ) ದೇಹಕ್ಕೆ ಶಕ್ತಿಯನ್ನೊದಗಿಸುತ್ತದೆ.

ಇದಲ್ಲದೇ ದೇಹಕ್ಕೆ ಅತ್ಯವಶ್ಯಕ ಜಿಡ್ಡಿನಾಮ್ಲಗಳನ್ನೊದಗಿಸುತ್ತದೆ. ದೇಹದಲ್ಲೇ ತಯಾರಾಗುವ ಹಲವಾರು ರಾಸಾಯನಿಕ ವಸ್ತುಗಳಿಗೆ ಜಿಡ್ಡು
ಅತ್ಯವಶ್ಯಕ. ಎದೆ ಹಾಲಿನಲ್ಲಿರುವ ಜಿಡ್ಡಿನಾಮ್ಲಗಳು ಮಗುವಿನ ಮೆದುಳಿನ ಬೆಳವಣಿಗೆಗೆ ಅತ್ಯವಶ್ಯಕವಾದುದರಿಂದ ದೀರ್ಘಕಾಲ ಸ್ತನಪಾನ ಅತ್ಯಗತ್ಯ.ಮೆದುಳಿನ ಬೆಳವಣಿಗೆಗೆ ಕೊಬ್ಬು ಅವಶ್ಯಕವಾದುದರಿಂದ ಪ್ರಾರಂಭಿಕ ೫-೬ ವರ್ಷಗಳಲ್ಲಿ ವಿವಿಧ ಬಗೆಯ ಕೊಬ್ಬುಗಳನ್ನು ಮಕ್ಕಳಿಗೆ ತುಸು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಜಿಡ್ಡಿನ ಜೀವಕೋಶಗಳಿಂದ ಲೆಪ್ಟಿನ್ ಎಂಬ ಹಾರ್ಮೋನ್ ಉತ್ಪತ್ತಿಯಾಗಿ ದೇಹದ ಜೀವರಸಕ್ರಿಯೆಯನ್ನು ನಿಯಂತ್ರಿಸುತ್ತದೆ.

ಜಿಡ್ಡುಗಳ ವರ್ಗೀಕರಣ
ಯಾವ ಯಾವ ಜಿಡ್ಡಿನ ಆಹಾರ ಪದಾರ್ಥಗಳನ್ನು ಪ್ರತಿನಿತ್ಯ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ಮತ್ತು ಯಾವ ಜಿಡ್ಡನ್ನು ಮಿತಿಯಾಗಿ ಸೇವಿಸ ಬೇಕು, ಯಾವ ಜಿಡ್ಡು ಅತಿಯಾದರೆ ಕಾಯಿಲೆಗಳಿಗೆ ಕಾರಣ ವಾಗುತ್ತದೆ ಎಂಬುದನ್ನು ಅರಿಯಲು ಜಿಡ್ಡಿನ ರಾಸಾಯನಿಕ ರಚನೆಯನ್ನು ಅರಿಯುವುದು ಅತ್ಯವಶ್ಯಕ. ಜಿಡ್ಡುಗಳು ರಾಸಾಯನಿಕವಾಗಿ ಕಾರ್ಬನ್, ಹೈಡ್ರೋಜನ್ ಮತ್ತು ಆಮ್ಲಜನಕಗಳಿಂದ ರಚಿತವಾಗಿವೆ.

ಜಿಡ್ಡಿನಾಮ್ಲಗಳು (-ಟಿಆಸಿಡ್ಸ್) ಜಿಡ್ಡುಗಳು ಮೂಲವಸ್ತುವಾದ ಜಿಡ್ಡಿನಾಮ್ಲಗಳಿಂದ(-ಟಿಆಸಿಡ್ಸ್) ರಚಿತವಾಗಿವೆ. ಸೇವಿಸುವ ಆಹಾರದಲ್ಲಿ ಸುಮಾರು ೨೦ ಜಿಡ್ಡಿನಾಮ್ಲಗಳಿದ್ದು, ಇವುಗಳನ್ನು ಅತ್ಯವಶ್ಯಕ ಜಿಡ್ಡಿನಾಮ್ಲಗಳು (ಎಸೆನ್ಷಿಯಲ್ -ಟಿಆಸಿಡ್ಸ್) ಮತ್ತು ಅತ್ಯವಶ್ಯಕವಲ್ಲದ ಜಿಡ್ಡಿನಾಮ್ಲಗಳು (ನಾನ್ ಎಸೆನ್ಷಿಯಲ್ -ಟಿಆಸಿಡ್ಸ್) ಎಂದು ವಿಂಗಡಿಸಲಾಗಿದೆ.

ಅತ್ಯವಶ್ಯಕ ಜಿಡ್ಡಿನಾಮ್ಲಗಳು(ಲಿನೋಲೀಯಿಕ್ ಆಮ್ಲ, ಲಿನೋಲಿನಿಕ್ ಆಮ್ಲ, ಒಮೆಗಾ೩ ಜಿಡ್ಡಿ ನಾಮ್ಲ, ಈಕೋಸಪೆಂಟಾಈ ನೋಯಿಕ್ ಆಮ್ಲ)
ದೇಹದೊಳಗೆ ತಯಾರಾಗುವುದಿಲ್ಲವಾದ್ದರಿಂದ ಇವುಗಳನ್ನು ಆಹಾರದ ಮೂಲಕವೇ ಸೇವಿಸಬೇಕು. ಈ ಜಿಡ್ಡಿನಾಮ್ಲಗಳು ಮೀನು, ಸಸ್ಯಜನ್ಯ ಎಣ್ಣೆಗಳು (ಸೊಯಾಬೀನ್ ಎಣ್ಣೆ, -ಕ್ಸ್ ಬೀಜಗಳು) ಸೊಪ್ಪು ಮತ್ತು ಕಾಳುಗಳಲ್ಲಿ ಯಥೇಚ್ಛವಾಗಿ ಲಭಿಸುತ್ತವೆ. ಈ ಆಹಾರ ಪದಾರ್ಥಗಳ ಸೇವನೆ ಅತ್ಯವಶ್ಯಕ. ಈ ಆಹಾರ ಪದಾರ್ಥಗಳನ್ನು ಸೇವಿಸದಿದ್ದಲ್ಲಿ ಈ ಜಿಡ್ಡಿ ನಾಮ್ಲಗಳ ಕೊರತೆಯುಂಟಾಗುತ್ತದೆ.

ಅವಶ್ಯಕವಲ್ಲದ ಜಿಡ್ಡಿನಾಮ್ಲಗಳನ್ನು ಆಹಾರದ ಮೂಲಕ ಸೇವಿಸದಿದ್ದರೂ ಅವು ಸೇವಿಸಿದ ಕಾರ್ಬೋಹೈಡ್ರೇಟ್, ಪ್ರೋಟೀನ್ ಆಹಾರ ಪದಾರ್ಥಗಳಿಂದ ದೇಹದೊಳಗೆ ತಯಾರಾಗುತ್ತವೆ.

ಜಿಡ್ಡಿನಾಮ್ಲಗಳ ವಿಧಗಳು
ಜಿಡ್ಡಿನಾಮ್ಲಗಳಲ್ಲಿರುವ ಬಾಂಡುಗಳು ಮತ್ತು ಹೈಡ್ರೋಜನ್ ಅಯಾನುಗಳ ಸಂಖ್ಯೆಯನ್ನು ಆಧರಿಸಿ ಇವುಗಳನ್ನು ಸಂತೃಪ್ತ ಜಿಡ್ಡಿನಾಮ್ಲಗಳು
(ಸ್ಯಾಚ್ಯುರೇಟೇಡ್ -ಟಿಆಸಿಡ್ಸ್ ಮತ್ತು ಅಸಂತೃಪ್ತ ಜಿಡ್ಡಿನಾಮ್ಲಗಳು(ಅನ್ ಸ್ಯಾಚ್ಯುರೇಟೇಡ್ -ಟಿಆಸಿಡ್ಸ್) ಎಂದು ರಾಸಾಯನಿಕವಾಗಿ ವರ್ಗೀಕರಿಸಲಾಗಿದೆ. ಸಂತೃಪ್ತ ಜಿಡ್ಡಿನಾಮ್ಲಗಳಲ್ಲಿ ಹೈಡ್ರೋಜನ್ ಅಯಾನುಗಳು ಪೂರ್ಣಪ್ರಮಾಣದಲ್ಲಿರುತ್ತವೆ. ಈ ಜಿಡ್ಡಿನಾಮ್ಲಗಳು ಅಧಿಕ ವಾದಲ್ಲಿ ದೇಹದಲ್ಲಿ ಅಲ್ಪ ಸಾಂದ್ರತೆಯ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಉತ್ಪತ್ತಿ ಹೆಚ್ಚಾಗುವುದರಿಂದ ಇವುಗಳ ಅಧಿಕ ಸೇವನೆ ಹಾನಿಕಾರಕ.

ಸಂತೃಪ್ತ ಜಿಡ್ಡಿನಾಮ್ಲಗಳು ಅಲ್ಪ ಸಾಂದ್ರತೆಯ ಜಿಡ್ಡಿನ ಪ್ರೋಟೀನ್‌ಗಳ ಗ್ರಾಹಕಗಳ ಕ್ರಿಯೆಯನ್ನು ಕಡಿಮೆ ಮಾಡುವುದರಿಂದ ಅಲ್ಪ ಸಾಂದ್ರತೆಯ ಕೊಲೆಸ್ಟ್ರಾಲ್ ಪ್ರಮಾಣ ರಕ್ತದಲ್ಲಿ ಏರಿಕೆಯಾಗುತ್ತದೆ. ಸೇವಿಸುವ ಬಹುಪಾಲು ಎಲ್ಲ ಆಹಾರ ಪದಾರ್ಥಗಳಲ್ಲೂ ಈ ಜಿಡ್ಡಿನಾಮ್ಲಗಳು ಇರುತ್ತವೆಯಾದರೂ ಮಾಂಸದ ಕೊಬ್ಬು ಮತ್ತಿತರ ಪ್ರಾಣಿಜನ್ಯ ಆಹಾರ ಪದಾರ್ಥಗಳಲ್ಲಿ(ಹಾಲು, ಮೊಟ್ಟೆ, ಚರ್ಬಿ, ತುಪ್ಪ, ಬೆಣ್ಣೆ) ಇವು ಅಧಿಕ ಪ್ರಮಾಣದಲ್ಲಿರುತ್ತವೆ.

ತೆಂಗಿನ ಕಾಯಿಯ ಎಣ್ಣೆ, ಪಾಮ್ ಎಣ್ಣೆ, ಚಾಕೋಲೆಟ್, ಐಸ್‌ಕ್ರೀಂ, ಫಿಸ್ಸಾ, ಬೇಕರಿ ಆಹಾರ ಪದಾರ್ಥಗಳು, ಕೃತಕವಾಗಿ ತಯಾರಿಸಲಾದ ಎಲ್ಲ ಆಹಾರ ಪದಾರ್ಥಗಳಲ್ಲಿ ಸಂತೃಪ್ತ ಜಿಡ್ಡಿನಾಮ್ಲಗಳು ಹೆಚ್ಚಾಗಿರುವುದರಿಂದ ಇವುಗಳನ್ನು ಅತ್ಯಂತ ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಅಸಂತೃಪ್ತ
ಜಿಡ್ಡಿನಾಮ್ಲಗಳಿಂದ ರಕ್ತದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು ಅಷ್ಟೊಂದು ಹೆಚ್ಚಾಗದೆ ಇರುವುದರಿಂದ ಇವುಗಳನ್ನುಳ್ಳ ಕೊಬ್ಬಿನ ಆಹಾರ ಪದಾರ್ಥಗಳನ್ನು ಅವಶ್ಯಕ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.

ಸಸ್ಯಜನ್ಯ ಕೊಬ್ಬಿನಲ್ಲಿ ಅಸಂತೃಪ್ತ ಜಿಡ್ಡಿನಾಮ್ಲಗಳು ಅಽಕ ಪ್ರಮಾಣದಲ್ಲಿರುತ್ತವೆ. ಸೂರ್ಯಕಾಂತಿ ಎಣ್ಣೆ, ಆಲೀವ್ ಎಣ್ಣೆ, ಪೀನಟ್ ಎಣ್ಣೆ ಇವುಗಳಲ್ಲಿ ಅಸಂತೃಪ್ತ ಜಿಡ್ಡಿನಾಮ್ಲಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಇವುಗಳಲ್ಲದೆ ಟ್ರಾನ್ಸ್ ಕೊಬ್ಬುಗಳ ಅಧಿಕ ಸೇವನೆಯೂ ಸಹ ಹಾನಿಕಾರಕ. ಕೃತಕ ಕರಿದ ಆಹಾರ ಪದಾರ್ಥಗಳನ್ನು ತಯಾರಿಸುವಾಗ ಕೆಡದಂತಿಡಲು ಈ ಟ್ರಾನ್ಸ್ ಕೊಬ್ಬುಗಳನ್ನು ಉಪಯೋಗಿಸುವುದರಿಂದ ಕೃತಕ ಆಹಾರ ಪದಾರ್ಥಗಳ ಅಧಿಕ ಸೇವನೆ ಹಾನಿಕಾರಕ. ಸೇವಿಸುವ ಪ್ರತಿಯೊಂದು ಕೊಬ್ಬಿನ ಆಹಾರ ಪದಾರ್ಥದಲ್ಲೂ ಸಂತೃಪ್ತ ಮತ್ತು ಅಸಂತೃಪ್ತ ಜಿಡ್ಡಿನಾಮ್ಲಗಳು ಇರುತ್ತವೆ. ಆದರೆ ಇವುಗಳ ಪ್ರಮಾಣ ಒಂದೊಂದರಲ್ಲಿ ಅಧಿಕವಾಗಿಯೂ ಮತ್ತೊಂದರಲ್ಲಿ ಕಡಿಮೆಯಾಗಿಯೂ ಇರುತ್ತವೆ. ದೇಹಕ್ಕೆ ಇವೆರಡೂ ಬಗೆಯ ಜಿಡ್ಡಿನಾಮ್ಲಗಳು ಅತ್ಯವಶ್ಯಕವಾಗಿದ್ದು, ಪ್ರತಿಯೊಂದನ್ನೂ ಅವಶ್ಯಕವಿರುವಷ್ಟು ಪ್ರಮಾಣದಲ್ಲಿ ಸೇವಿಸಬೇಕು.

ಟ್ರೈಗ್ಲಿಸರೈಡ್‌ಗಳು
ಆಹಾರದಲ್ಲಿರುವ ಬಹುಪಾಲು ಕೊಬ್ಬು ಮತ್ತು ದೇಹದೊಳಗೆ ಶೇಖರಣೆಯಾಗುವ ಕೊಬ್ಬು ಟ್ರೈಗ್ಲಿಸರೈಡ್ ರೂಪದಲ್ಲಿ ಇರುತ್ತವೆ. ಜಿಡ್ಡಿನಾಮ್ಲಗಳು ಗ್ಲಿಸರಾಲ್ ಜತೆಗೂಡಿ ಟ್ರೈಗ್ಲಿಸರೈಡ್ ಉತ್ಪತ್ತಿಯಾಗುತ್ತದೆ. ಆಹಾರದಲ್ಲಿರುವ ಟ್ರೈಗ್ಲಿಸರೈಡ್ ಸಣ್ಣ ಕರುಳಿನಲ್ಲಿ ಜಿಡ್ಡಿನಾಮ್ಲ ಮತ್ತು ಗ್ಲಿಸರಾಲ್ ಆಗಿ
ಬೇರ್ಪಟ್ಟು ಹೀರಿಕೆಯಾದ ನಂತರ ಕರುಳಿನ ಜೀವಕೋಶಗಳಲ್ಲಿಯೇ ಇವೆರಡು ಪುನರ್ಮಿಲನವಾಗಿ ಟ್ರೈಗ್ಲಿಸರೈಡ್ ಉತ್ಪತ್ತಿಯಾಗಿ ರಕ್ತಕ್ಕೆ
ಕೈಲೋ ಮೈಕ್ರಾನ್ ಆಗಿ ಮತ್ತು ಜಿಡ್ಡಿನ ಪ್ರೋಟೀನ್ ಗಳ ಜೊತೆ ಸಂಯೋಜನೆಗೊಂಡು ರಕ್ತದಲ್ಲಿ ಅಂಗಾಂಶಗಳಿಗೆ ರವಾನೆಯಾಗುತ್ತದೆ.

ರಕ್ತದಲ್ಲಿ ಇದರ ಸಹಜ ಪ್ರಮಾಣ ೧೨೦-೧೫೦ ಮಿ.ಗ್ರಾಂ/ ಡಿ.ಎಲ್. ೨೦೦ಮಿ.ಗ್ರಾಂ/ಡಿ.ಎಲ್‌ಗಿಂತ ಹೆಚ್ಚಾದಲ್ಲಿ ಹಾನಿಕಾರಕ ಪರಿಣಾಮ ಗಳುಂಟಾಗುತ್ತವೆ. ಅನಿಯಂತ್ರಿತ ಸಕ್ಕರೆಕಾಯಿಲೆಯವರಲ್ಲಿ ದೇಹದಲ್ಲಿಯೇ ಇದರ ಉತ್ಪತ್ತಿ ಅಧಿಕವಾಗುತ್ತದೆ. ಇದೂ ಕೂಡ ಹೃದಯ ಮತ್ತು ಮೆದುಳಿನ ರಕ್ತನಾಳಗಳ ಕಾಯಿಲೆಗೆ ಕಾರಣವಾಗುತ್ತದೆ.

ಕೊಲೆಸ್ಟ್ರಾಲ್
ಕೊಲೆಸ್ಟ್ರಾಲ್ ಜೀವಕೋಶಗಳ ರಚನೆ, ಹಾರ್ಮೋನುಗಳ ತಯಾರಿಕೆ, ವಿಟಮಿನ್ ಡಿ ತಯಾರಿಕೆ, ಬೈಲ್ ಆಮ್ಲಗಳ ತಯಾರಿಕೆ ಮತ್ತು ಆಹಾರ ಜೀರ್ಣವಾಗಲು ಅತ್ಯವಶ್ಯಕ. ಇದು ಆಹಾರ ಪದಾರ್ಥಗಳಿಂದ ಲಭಿಸಬಹುದು ಅಥವಾ ದೇಹದಲ್ಲಿಯೇ ಇನ್ನಿತರ ರಾಸಾಯನಿಕ ವಸ್ತುಗಳಿಂದ ಈಲಿಯಲ್ಲಿ ಉತ್ಪತ್ತಿಯಾಗುತ್ತದೆ. ಆಹಾರ ಪದಾರ್ಥಗಳಲ್ಲಿರುವ ಕೊಲೆಸ್ಟ್ರಾಲ್ ಬೈಲ್ ಆಮ್ಲಗಳಿಂದ ರಕ್ತಕ್ಕೆ ರವಾನೆಯಾಗುತ್ತದೆ.

ಅತಿಯಾದ ಕೊಲೆಸ್ಟ್ರಾಲ್ ಬೈಲ್ ಆಮ್ಲಗಳ ಮೂಲಕ ಮಲದಲ್ಲಿ ವಿಸರ್ಜನೆಯಾಗುತ್ತದೆ. ದೇಹದೊಳಗೆ ಉತ್ಪತ್ತಿಯಾಗುವ ಕೊಲೆಸ್ಟ್ರಾಲ್ ವಂಶವಾಹಿಗಳಿಂದ ನಿಯಂತ್ರಿತವಾಗಿದ್ದು, ಇದರ ನ್ಯೂನತೆ ಇರುವವರಲ್ಲಿ ಆಹಾರದಲ್ಲಿ ಕೊಲೆಸ್ಟ್ರಾಲ್‌ಅನ್ನು ಸೇವಿಸದಿದ್ದರೂ ದೇಹದೊಳಗೆ ಅಽಕ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ರಕ್ತದಲ್ಲಿ ಇದು ಜಿಡ್ಡಿನ ಪ್ರೋಟೀನ್ ಗಳಿಂದ ಸಂಯುಕ್ತಗೊಂಡು ವಿವಿಧ ಭಾಗಗಳಿಗೆ ರವಾನೆಯಾಗುತ್ತದೆ. ಪ್ರತಿನಿತ್ಯ ೨೦೦ಮಿ.ಗ್ರಾಂ ಗಿಂತಲೂ ಹೆಚ್ಚು ಕೊಲೆಸ್ಟ್ರಾಲ್ ಅನ್ನು ಸೇವಿಸಬಾರದು.

ಅಧಿಕ ಕೊಲೆಸ್ಟ್ರಾಲ್ ಇರುವವರು ಇದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಹಾಲು, ಮೊಟ್ಟೆ, ಗಿಣ್ಣು, ಮಾಂಸಾಹಾರದಲ್ಲಿ
ಅಂಗಾಂಗ ಗಳ ಸೇವನೆ(ಈಲಿ, ಬೋಟಿ, ಮೆದುಳು) ಇವುಗಳಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಅಧಿಕವಾಗಿರುತ್ತದೆ.

ಕೊಬ್ಬಿನ ಜೀರ್ಣಿಕೆ
ಆಹಾರದಲ್ಲಿ ಸೇವಿಸುವ ಕೊಬ್ಬುಗಳು ಟ್ರೈಗ್ಲಿಸರೈಡ್ ಮತ್ತು ಕೊಲೆಸ್ಟ್ರಾಲ್ ರೂಪದಲ್ಲಿರುತ್ತವೆ. ಸಣ್ಣ ಕರುಳಿನಲ್ಲಿ ಈಲಿಯ ರಸ ಮತ್ತು
ಪ್ಯಾಂಕ್ರಿ ಯಾಸಿನ ಲೈಪೇಸ್‌ನಿಂದ ಟ್ರೈಗ್ಲಿಸರೈಡ್‌ಗಳು ಜಿಡ್ಡಿನ ಆಮ್ಲಗಳಾಗಿ ಮ

error: Content is protected !!