Friday, 26th July 2024

ಅಂತಃಸಂಬಂಧ: ಇನ್ ಬ್ರೀಡಿಂಗ್

ಶಿಶಿರ ಕಾಲ

ಶಿಶಿರ ಹೆಗಡೆ

shishirh@gmail.com

Inbreeding ಅಂತಃಸಂಬಂಧ ಸಂತಾನೋತ್ಪತ್ತಿ; ರಕ್ತಸಂಬಂಧಿಗಳು ಕೂಡಿ ಆಗುವ ಸಂತಾನೋತ್ಪತ್ತಿ ಯನ್ನು ‘ಇನ್ ಬ್ರೀಡಿಂಗ್ ’ ಎನ್ನಲಾಗುತ್ತದೆ. ನಮ್ಮ ಸನಾತನ ಧರ್ಮದಲ್ಲಿ ಗೋತ್ರದ ಬಳಕೆಯಿದೆಯಲ್ಲ; ಹಾಗೆ. ಏಕ ಗೋತ್ರದವರು ಮದುವೆ ಯಾಗುವುದು ನಿಷಿದ್ಧ, ಶಾಸ್ತ್ರಕ್ಕೆ ವಿರುದ್ಧವೆನ್ನುವುದಕ್ಕಿಂತ ಹೆಚ್ಚಾಗಿ ಅದೊಂದು ಅಲಿಖಿತ ಕಾನೂನು, ರೂಢಿ. ಇವತ್ತಿಗೂ ನಿಶ್ಚಯಿಸುವ ಮದುವೆಗಳಲ್ಲಿ ಗೋತ್ರ ಯಾವುದೆನ್ನುವುದೇ ಮೊದಲ ಪ್ರಶ್ನೆ.

ಏಕಗೋತ್ರವೆಂದರೆ  ದುವರಿಯುವುದಿಲ್ಲ. ಈ ಗೋತ್ರದ ಕಲ್ಪನೆ ಮತ್ತು ಬಳಕೆಯನ್ನು ಸ್ವಲ್ಪ ಸಮಯಕೊಟ್ಟು ವಿಚಾರಮಾಡಬೇಕು. ಇದು ಜಾತಿ, ಪ್ರತ್ಯೇಕತೆ ಇವೆಲ್ಲವನ್ನೂ ಮೀರಿದ ಒಂದು ವಿಚಾರ. ಅಂಗೀರಸ, ಅತ್ರಿ, ಗೌತಮ, ಭಾರದ್ವಾಜ, ಗೌತಮ, ಕಶ್ಯಪ, ವಸಿಷ್ಠ ಮತ್ತು ವಿಶ್ವಾಮಿತ್ರ. ಅಗಸ್ತ್ಯ ಮತ್ತು ಕುತ್ಸ ಗೋತ್ರಗಳು ಅನಂತರದಲ್ಲಿ ಸೇರಿ ಕೊಂಡಿದ್ದು ಎನ್ನುವುದು ಎಲ್ಲಿಯೋ ಓದಿದ ನೆನಪು. ಗೋತ್ರಗಳೆಂದರೆ ಏನು? ಇಂದಿನ ವಿಜ್ಞಾನದ ಮಸೂರದಲ್ಲಿ ಇಟ್ಟು ಹೇಳುವುದಾದರೆ ಅದು ವಂಶವಾಹಿನಿ ಗೊಂದು ಹೆಸರು.

ಏಳು ಅಥವಾ ಎಂಟೇ ವಂಶವಾಹಿನಿಯ ವಿಂಗಡಣೆ ಏಕಾಯಿತು? ಮನುಷ್ಯನ ಡಿಎನ್‌ಎ ಯಲ್ಲಿ ವಂಶವಾಹಿನಿಯ ಎಲ್ಲ ವಿಚಾರ ಗಳೂ ಶೇಖರಣೆಯಾಗಿರುತ್ತವೆ ಎನ್ನುವುದು ನಿಮಗೆ ತಿಳಿದದ್ದೇ. ಈ ಜೀವಕೋಶದಲ್ಲಿರುವುದು 23 ಜೋಡಿ ಕ್ರೋಮೋ ಸೋಮ್ ಗಳು. ಅದರ ಲೆಕ್ಕದ ಪ್ರಕಾರ ಅದರ ಒಂದು ಮೂರಾಂಶ ಎಂದರೆ ಶೇ.33ಕ್ಕಿಂತ ಜಾಸ್ತಿ ವಂಶ ವಿಂಗಡಣೆಯಿದ್ದರೆ ಈ  ರೀತಿ ಅಂತಃ ಸಂಬಂಧ ವಿವಾಹವಾಗುವುದು ತಪ್ಪುತ್ತದೆ ಎನ್ನುವ ಲೆಕ್ಕವಿರಬಹುದು. ಅಂತಃಸಂಬಂಧ ಸಂತಾನೋತ್ಪತ್ತಿಯಾಗುವಾಗ ಮೂರಕ್ಕೆ ಒಂದರಷ್ಟು ಮಕ್ಕಳು, ಅಥವಾ ಆ ಮಕ್ಕಳ ಸಂತತಿಯಲ್ಲಿ ಏನಾದರೊಂದು ಹುಟ್ಟು ವೈಕಲ್ಯ, ತೊಂದರೆ ಇರುತ್ತದೆ ಎನ್ನುವ ಸರಾಸರಿ.

ಎಂಟೇ ಗೋತ್ರ ವಿಂಗಡಣೆಗೆ ಏನೋ ಒಂದು ಕಾರಣವಿದೆ ಎನ್ನುವ ಊಹೆಯೊಂದಿಗೆ ಅದನ್ನು ಅಲ್ಲಿಯೇ ಬಿಡೋಣ.ಏನೇ ಹೇಳಿ – ಈ ಗೋತ್ರ ಕಲ್ಪನೆ ಬಹಳ ವೈeನಿಕ. ಅದ್ಯಾವ ಕಾಲದಲ್ಲಿ ಯಾರು ಇದನ್ನು ಗ್ರಹಿಸಿದರೋ, ಇಂಥದ್ದೊಂದು ಇಡೀ ಸಮಾಜಕ್ಕೆ ಬೇಕೆಂದು ಅರಿತು ಅದು ಹೇಗೆ ನಂತರದಲ್ಲಿ ಸರ್ವವ್ಯಾಪಿಯಾಗಿ ಜಾರಿಗೆ ಯಾರು ತಂದರೋ ಎಂದು ಈಗ ಕೇಳಿ ಕೊಂಡರೆ ಆಶ್ಚರ್ಯವೆನ್ನಿಸುತ್ತದೆ. ವಿಜ್ಞಾನ ಓದುವಾಗ ಮೆಂಡಲೀನ್‌ನ ಬಟಾಣಿ ಕಾಳಿನ ವೈಜ್ಞಾನಿಕ ಅಭ್ಯಾಸ, ಜೆನೆಟಿಕ್ಸ್‌ನ ಬಗ್ಗೆ ನೀವು ತಿಳಿದುಕೊಂಡಿರಬಹುದು.

ಅದಕ್ಕಿಂತ ಮೊದಲು ಅರಿಸ್ಟಾಟಲ್ ಇದನ್ನು ಗ್ರಹಿಸಿದ್ದ. ಅದೆಲ್ಲ ಬಿಡಿ – ಚರಕ ಸಂಹಿತೆಯಲ್ಲಿಯೂ ಮತ್ತು ಕೆಲವು ಆದಿ ಗ್ರಂಥ ಗಳಲ್ಲಿ ಸುಮಾರು ಎರಡೂವರೆಯಿಂದ ಮೂರು ಸಾವಿರ ವರ್ಷ ಅಥವಾ ಅದಕ್ಕೂ ಹಿಂದೆಯೇ ಸನಾತನಿಗಳಿಗೆ ಈ ಜೀನ್ಸ್‌ನ
ಪರಿಜ್ಞಾನ ಇದ್ದೇ ಇತ್ತು. ನೀವೇ ಗ್ರಹಿಸಿದರೆ, ಈ ಗೋತ್ರವೆನ್ನುವ ವಿಚಾರ ಇಡೀ ಭಾರತಾದ್ಯಂತ ಇದೆ. ಉತ್ತರದಲ್ಲಿ ಗುರ್ಜರ್, ಝಾಟ್, ರಜಪೂತರಲ್ಲಿ ಸುಮಾರು ಮೂರು ಸಾವಿರ ಗೋತ್ರಗಳಿವೆಯಂತೆ. ತಂದೆಯ ಗೋತ್ರವನ್ನು ಮಗ, ಮಗಳು ಪಡೆಯು ತ್ತಾಳೆ.

ಇನ್ನು ಅಳಿಯ ಸಂತಾನವಿರುವಲ್ಲಿ ತಾಯಿಯ ಗೋತ್ರವನ್ನು ಮಕ್ಕಳು ಪಡೆಯುವ ಪದ್ಧತಿಯಿದೆ. ಈ ರೀತಿ ತಾಯಿಯ ಗೋತ್ರ ವನ್ನು ಪಡೆಯುವುದು ಕರಾವಳಿಯ ತುಳುವರ ಕೆಲ ಉಪವರ್ಗಗಳಲ್ಲಿ ಕಾಣಬಹುದು. ಇರಲಿ. ನಾವು ಇಂಥದ್ದೆಲ್ಲ ಇಂದು ಮೂಢನಂಬಿಕೆ ಎಂದು ಬಿಡುತ್ತೇವೆ. ಕೆಲವೊಮ್ಮೆ ಹಾಗೆ ಹೇಳುವಷ್ಟು ಮೌಢ್ಯತೆ ಇನ್ನೊಂದಿಲ್ಲವೆನ್ನಿಸುತ್ತದೆ. ಇದನ್ನು ಮೂಢ ನಂಬಿಕೆಯೆಂದುಕೊಳ್ಳುತ್ತ ನಂತರದಲ್ಲಿ ಅದರ ವೈeನಿಕ ಹಿನ್ನೆಲೆ ಸಿಕ್ಕರೆ ಇದೆಲ್ಲ ನಮ್ಮಲ್ಲಿ ಮೊದಲೇ ಇತ್ತು ಎಂದು ಹಲ್ಲು ಗಿಂಜುತ್ತೇವೆ.

ಇಂದು ಮನುಷ್ಯ ಜಗತ್ತಿನಲ್ಲಿ ಈ ಇನ್ ಬ್ರೀಡಿಂಗ್‌ನ ಸಮಸ್ಯೆಯಿಂದಾಗಿ ಆಗುತ್ತಿರುವ ಹುಟ್ಟು ವೈಕಲ್ಯದ ಲೆಕ್ಕಾಚಾರ ಸಣ್ಣ
ದಲ್ಲ. ಈ ಲೆಕ್ಕವನ್ನು ಹೇಳುವುದಕ್ಕಿಂತ ಕತಾರಿನ ಒಂದು ಕಾನೂನಿನ ಬಗ್ಗೆ ನಿಮಗೆ ಹೇಳಬೇಕು. ಕತಾರ್ ಇರಬಹುದು ಅಥವಾ ಯಾವುದೇ ಮುಸ್ಲಿಂ ರಾಷ್ಟ್ರಗಳಿರಬಹುದು, ಅಲ್ಲ ಅಂತಃಸಂಬಂಧ ವಿವಾಹ ಸಾಮಾನ್ಯ, ಅದು ಹಿಂದಿನಿಂದ ನಡೆದುಕೊಂಡು ಬಂದ ರೂಢಿ. 2003 ಇರಬೇಕು – ಕತಾರ್ ನಲ್ಲಿ ಜಾರಿಗೆ ಬಂದ ಹೊಸ ಕಾನೂನು ಅಂತಾರಾಷ್ಟ್ರೀಯ ಮತ್ತು ಮುಸ್ಲಿಂ ಜಗತ್ತಿ ನಲ್ಲಿ ಬಹು ಚರ್ಚಿತವಾಗಿತ್ತು. ಈ ಕಾನೂನಿನ ಅನ್ವಯ ಮದುವೆಯಾಗುವ ಮೊದಲು ಗಂಡು ಮತ್ತು ಹೆಣ್ಣು ವಂಶವಾಹಿನಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಈ ಕಾನೂನು 2009ರಲ್ಲಿ ಕಡ್ಡಾಯ ಮಾಡಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಯಾರದೇ ಮದುವೆಗೆ ಜಾತಕ ನೋಡಿದಂತೆ ಅಲ್ಲಿ ಈ ಜೀನ್ಸ್ ಹೊಂದಾಣಿಕೆಯ ಟೆಸ್ಟ್ ಆಗಲೇಬೇಕು. ಇದಕ್ಕೆ ಕಾರಣ ಇತ್ತೀಚಿನ ತಲೆಮಾರಿನ ಕತಾರೀ ಸಮಾಜದಲ್ಲಿ ಅಂತಃ ಸಂಬಂಧ ಮದುವೆ ಹಿಂದೆ ಶೇ.20 ಇದ್ದದ್ದು ಬರೋಬ್ಬರಿ ಶೇ.54ಕ್ಕೆ ಏರಿದ್ದು. ಇದರಿಂದಾಗಿ ಅಲ್ಲಿನ ಹುಟ್ಟುವ ಮಕ್ಕಳಲ್ಲಿ ವಂಶ ವಾಹಿನಿಯಿಂದಾಗಿ ಬರುವ ವೈಕಲ್ಯ, ಥಲಸ್ಸೆಮಿಯಾ, ಸಿಸ್ಟಿಕ್ -ಬ್ರೋಸಿಸ್, ಡೌನ್ ಸಿಂಡ್ರೋಮ್ ಮೊದಲಾದವುಗಳು ಅದಕ್ಕನು ಗುಣವಾಗಿ ಶೇ.30 ಹೆಚ್ಚಿದ್ದು. ಅಂತಃಸಂಬಂಧ ವಿವಾಹಕ್ಕೆ ಇಸ್ಲಾಮ್ ಕಾನೂನಿನಲ್ಲಿ ಅವಕಾಶವಿರುವುದರಿಂದ ಈ ರೀತಿಯ ದ್ದೊಂದು ಪರ್ಯಾಯ ಕಾನೂನನ್ನೇ ತರಬೇಕಾಯಿತು.

ಟರ್ಕಿ, ಸುಡಾನ್, ಸಿರಿಯಾ, ಯುಎಇ… ಹೀಗೆ ಎಲ್ಲ ಇತರ ಇಸ್ಲಾಮಿಕ್ ದೇಶಗಳಲ್ಲಿ ರೀತಿ ಅಂತಃಸಂಬಂಧ ಮದುವೆಗಳ ಪ್ರಮಾಣ ಅತಿ ಹೆಚ್ಚು. ಪಕ್ಕದ ಪಾಕಿಸ್ತಾನದಲ್ಲಿ ಇದರ ಪ್ರಮಾಣ ಶೇ.60 ಇದೆ ಮತ್ತು ಅದಕ್ಕನುಗುಣವಾಗಿ ವಂಶವಾಹಿನಿ ಅಂಗವೈಕಲ್ಯದ ಪ್ರಮಾಣವೀ ಇದೆ. ಎಲ್ಲಿ ಬುಡಕಟ್ಟು ಪದ್ಧತಿ ತೀರಾ ಇತ್ತೀಚಿನವರೆಗೂ ಇತ್ತೋ ಅಲ್ಲ ಈ ಅಂತಃಸಂಬಂಧ ಸಾಮಾನ್ಯ.

Pedigree collapse ಎನ್ನುವ ವೈಜ್ಞಾನಿಕ ಪದವನ್ನು ಮೊದಲು ಬಳಸಿದ್ದು ಅಮೆರಿಕದ ವಂಶಪರಂಪರಾಶಾಸ್ತ್ರಜ್ಞ ರಾಬರ್ಟ್ ಗಂಡರ್ಸನ್. ಇದರರ್ಥ ಮೂರ್ನಾಲ್ಕು ತಲೆಮಾರಿನ ನಂತರ ಆಗುವ ವಂಶಾವಳಿಯಲ್ಲಿ ರಕ್ತಸಂಬಂಧಿಗಳು, ಸಂಬಂಧದಲ್ಲಿ ಅಣ್ಣ ತಂಗಿ ಆಗಿರುವವರು ಮದುವೆ ಯಾಗುವುದು, ಮಕ್ಕಳನ್ನು ಪಡೆಯುವುದು. ಇದನ್ನೇ ತಪ್ಪಿಸಲು ನಮ್ಮಲ್ಲಿರು ವುದು ಈ ಗೋತ್ರ ಪದ್ಧತಿ. ಏಳು ಅಥವಾ ಎಂಟನೇ ತಲೆಮಾರಿನವರು ಮದುವೆಯಾದರೆ ಈ Pedigree collapse ತಪ್ಪುತ್ತದೆ ಎನ್ನುವುದು ಈಗ ವೈಜ್ಞಾನಿಕವಾಗಿ ಸಿದ್ಧವಾಗಿರುವುದು.

ಅದನ್ನು ಸ್ಮೃತಿಗಳಲ್ಲಿ ಅದೆಷ್ಟೋ ಸಾವಿರ ವರ್ಷದ ಹಿಂದೆ ಹೇಳಲಾಗಿದೆ. ಈಗ ನೀವು ಒಂದು ಸಮಾನಾಂತರ ರೇಖೆಯನ್ನು ನಮ್ಮ ಮತ್ತು ಅವರ ಇತಿಹಾಸಕ್ಕೆ, ಇಂದಿನ ಸ್ಥಿತಿಗೆ ಎಳೆದು ನೋಡಬೇಕು – ಉಳಿದದ್ದು ನಿಮ್ಮ ವಿವೇಚನೆಗೆ, ಗ್ರಹಿಕೆಗೆ ಬಿಡುತ್ತೇನೆ.
ಇದನ್ನೆಲ್ಲ ಗ್ರಹಿಸುವಾಗ ಹಿಂದೆ ಆದಿ ಮಾನವ – ಸಣ್ಣ ಪ್ರತ್ಯೇಕ ಗುಂಪುಗಳಲ್ಲಿ ಬದುಕುತ್ತಿದ್ದಾಗ ಈ ರೀತಿಯ ಸಮಸ್ಯೆಯಿರಲಿಲ್ಲವೇ ಎನ್ನುವ ಪ್ರಶ್ನೆ ಏಳುತ್ತದೆ. ಆಗ ಕೂಡ ಈ ಸಮಸ್ಯೆ ಇತ್ತು ಎನ್ನುವುದು ಈಗೀಗ ತಿಳಿದುಬಂದಿದೆ.

ಯುರೇಷಿಯಾದಲ್ಲಿ ಸುಮಾರು 1.3 ಲಕ್ಷ ವರ್ಷಗಳ ಹಿಂದೆ ಬಾಳಿದ ಮತ್ತು ಸುಮಾರು ನಲವತ್ತು ಸಾವಿರ ವರ್ಷ ಹಿಂದೆ ಸಂಪೂರ್ಣ ನಶಿಸಿ ಹೋದವರು ನಿಯಾಂಡ್ರಥಾಲ್ ಗಳು. ಅಲ್ಲಿಯೂ ಪೂರ್ಣಪ್ರಮಾಣದಲ್ಲಿ ಅಂತಃಸಂಬಂಧ ಕೂಡುವಿಕೆ ನಡೆಯುತ್ತಿತ್ತು. ಪಳೆಯುಳಿಕೆಗಳ ಪ್ರಕಾರ ಹೀಗೆ ಗುಂಪಿನಲ್ಲಿದ್ದ ನಿಯಾಂಡ್ರಥಾಲ್‌ಗಳ ಜೀನ್ಸಗಳಲ್ಲಿ ಒಂದೇ ತೆರನಾದ ದೋಷ ಗಳು ಕಾಣಿಸಿಕೊಂಡಿದ್ದು, ಇಂದಿನ ವಿಜ್ಞಾನಿಗಳ ಪ್ರಕಾರ ಹೀಗೊಂದು ಆದಿಮಾನವನ ತಳಿಯ ಸಂಪೂರ್ಣ ನಾಮಾವ ಶೇಷಕ್ಕೆ ಈ ಇನ್ ಬ್ರೀಡಿಂಗ್ ಕಾರಣ ಎನ್ನಲಾಗುತ್ತದೆ.

ಅಂತಃಸಂಬಂಧ ಆದಿಮಾನವನ ಕಾಲದಲ್ಲಿ ಸಾಮಾನ್ಯವಾಗಿದ್ದರೂ  ಅಲ್ಲಿ ಇಂದಿನಂತೆ ವೈದ್ಯಕೀಯ ಸೌಲಭ್ಯಗಳಿರಲಿಲ್ಲ. ಹಾಗಾಗಿ ಸಾಮಾನ್ಯವಾಗಿ ಯಾವುದೇ ವೈಕಲ್ಯವಿದ್ದ ಮನುಷ್ಯ ಹರೆಯಕ್ಕೆ ಬರುವ ಮೊದಲೇ ಸತ್ತು ವೈಕಲ್ಯವಾಹಿನಿ ಅಲ್ಲಿಗೇ ನಿಂತುಬಿಡುತ್ತಿತ್ತು. ಆ ಕಾರಣಕ್ಕೆ – survival of fittest ನಿಂದಾಗಿ ಆ ರೀತಿಯ ವಂಶವಾಹಿನಿ ಮುಂದುವರಿಯುತ್ತಿರಲಿಲ್ಲ. ಸ್ವಲ್ಪ ಇತಿಹಾಸ ಗ್ರಹಿಸಿದರೆ, ಎಲ್ಲಿ ವೈಜ್ಞಾನಿಕವಾಗಿ ಮನುಷ್ಯ ಮುಂದುವರಿದಿದ್ದನೋ ಅಲ್ಲ ಈ ಅಂತಃಸಂಬಂಧ ವಿವಾಹಕ್ಕೆ ಕಡಿ ವಾಣ ಹಾಕಲಾಗಿದೆ, ಅಲ್ಲ ವೈಕಲ್ಯದ ಪ್ರಮಾಣ ಕಡಿಮೆಯಿದೆ.

ಇತಿಹಾಸದಲ್ಲಿ ಅದರಲ್ಲೂ ರಾಜಮನೆತನಗಳಲ್ಲಿ ಮಾತ್ರ ಯಜಮಾನಿಕೆ, ಆಳ್ವಿಕೆ ಮೊದಲಾದ ಕಾರಣಗಳಿಂದ ಈ ಅಂತಃ ಸಂಬಂಧ ವಿವಾಹಗಳಿದ್ದವು. ಇದು ಈಜಿಪ್ಟ್ ರಾಜಮನೆತನಗಳಲ್ಲಿ ಇತ್ತು ಎನ್ನುವುದಕ್ಕೆ ಪುರಾವೆಗಳಿವೆ. ರಾಜಮನೆತನದವರ ಎತ್ತರ ಮತ್ತು ಬಣ್ಣ ಉಳಿದ ಈಜಿಪ್ಟ್ ಜನರಿಗಿಂತ ವಿಭಿನ್ನವಾಗಿತ್ತು, ಹೆಚ್ಚೂಕಡಿಮೆ ಹೋಲಿಕೆಯ ಜೀನ್ಸ್‌ಗಳಿದ್ದವು ಎನ್ನುವುದನ್ನು 2015ರಲ್ಲಿ ನಡೆಸಿದ 259 ಮಮ್ಮಿಗಳ ಪರೀಕ್ಷೆಯಲ್ಲಿ ದ್ರಢಪಟ್ಟಿದೆ. ಹೀಗೆ ಬೇಕಷ್ಟು ಉದಾಹರಣೆಗಳು  ಸಿಗುತ್ತವೆ. ಅಂತೆಯೇ ಅಲ್ಲ ಒಂದಿಂದು ವೈಕಲ್ಯ ಸಮಸ್ಯೆಯೂ ಇತಿಹಾಸದಲ್ಲಿ ನಮೂದಾಗಿದೆ. ಉದಾಹರಣೆಗೆ ಸ್ಪೇನಿನ ರಾಜಮನೆತನ ಹೌಸ್ ಆ ಹಾಸ್ಬರ್ಗ್‌ನ ಕೊನೆಯ ರಾಜ ಚಾರ್ಲ್ಸ್ 2. ಆತ ಹುಟ್ಟುತ್ತಲೇ ವೈಕಲ್ಯವನ್ನು ಹೊಂದಿದ್ದ.

ಆತನ ಹಿಂದಿನ ಐದಾರು ತಲೆಮಾರಿನವರು ಅಂತಃಸ್ಸಂಬಂಧ ವಿವಾಹವಾಗಿದ್ದರು. ನಂತರದಲ್ಲಿ ವಂಶವೃಕ್ಷ ಹಾಕಿ ನೋಡಿದರೆ ಆತನ ತಂದೆ ತಾಯಿ ಸಂಬಂಧದಲ್ಲಿ ನಾಲ್ಕನೆಯ ತಲೆಮಾರಿನ ಅಣ್ಣ ತಂಗಿಯರಾಗಿದ್ದರು. ಆತನ ವೈಕಲ್ಯದಿಂದಾಗಿ ನಂತರದಲ್ಲಿ ಆ ವಂಶವೇ ಅಂತ್ಯಗೊಂಡಿದ್ದು ಇತಿಹಾಸ. ಹಾಗಾದರೆ ಇದು ಕೇವಲ ಮನುಷ್ಯನಲ್ಲಷ್ಟೇ ಸಮಸ್ಯೆಯೇ ಎನ್ನುವ ಪ್ರಶ್ನೆ ಈಗ ಮೂಡುತ್ತದೆ. ವೈಜ್ಞಾನಿಕ ಲ್ಯಾಬ್‌ಗಳಲ್ಲಿ ಇಲಿಗಳ ಬಳಕೆಯಾಗುತ್ತದಲ್ಲ, ಅಲ್ಲಿ ಸಾಮಾನ್ಯವಾಗಿ ಬೆಳೆಸುವ ಇಲಿಗಳು ಇನ್‌ಬ್ರೀಡ್‌ ಗಳೇ. ಅದಕ್ಕೆ ಕಾರಣ ಅವುಗಳ ಮೇಲೆ ನಡೆಸುವ ಪರೀಕ್ಷೆಯಲ್ಲಿ ಅವೆಲ್ಲ ಒಂದೇ ಜೀನ್ಸ್ ಹೊಂದಿದ್ದರೆ ಮಾತ್ರ ಒಂದು ಸತ್ತ ನಂತರ ಇನ್ನೊಂದನ್ನು ಪ್ರಯೋಗಕ್ಕೆ ಬಳಸಬಹುದು.

ಜರ್ಸಿ ಆಕಳು ನಿಮಗೆ ಗೊತ್ತೇ ಇದೆ. ಹಾಲು ಹೆಚ್ಚುಕೊಡುತ್ತದೆಂದು ಒಂದೇ ಜೀನ್ಸ್‌ನ ವೀರ್ಯವನ್ನು ಕೃತಕ ಗರ್ಭಧಾರಣೆಯಲ್ಲಿ ಉದ್ದಕ್ಕೂ ಬಳಸಲಾಗುತ್ತದೆ. ಇದೇ ಕಾರಣಕ್ಕೆ ಜರ್ಸಿ ದನಗಳಲ್ಲಿ ರೋಗಗಳ ಪ್ರಮಾಣ ಜಾಸ್ತಿ, ಅದಕ್ಕೆ ಹುಟ್ಟುವ ಕರುಗಳಲ್ಲಿ ಅಂಗವೈಕಲ್ಯ ಕೂಡ ಜಾಸ್ತಿ. ಇನ್ನು ಡೈರಿ ಪ್ರಾಣಿಗಳಲ್ಲಿ, ಚಿಕನ್, ಹಂದಿ – ಮಾಂಸಕ್ಕಾಗಿ ಆಧುನಿಕ ಫಾರ್ಮ್‌ಗಳಲ್ಲಿ ಈ ಇನ್ ಬ್ರೀಡಿಂಗ್ ಪ್ರಮಾಣ, ಸಮಸ್ಯೆ ಜಾಸ್ತಿ. ಈ ಕಾರಣಕ್ಕೆ ಸ್ವೀಡನ್‌ನಲ್ಲಿ ಗಂಡು ಪ್ರಾಣಿ ತಳಿಯನ್ನು ಪ್ರತ್ಯೇಕವಾಗಿ ಬೆಳೆಸುವ ಮತ್ತು
ಅದನ್ನು ಫಾರ್ಮ್‌ಗಳ ನಡುವೆ ಅದಲಿಬದಲಿ ಮಾಡುವ ಒಂದು ವ್ಯವಸ್ಥೆಯನ್ನೇ ಬೆಳೆಸಿತ್ತು.

ಯಾವ್ಯಾವ ಪ್ರಾಣಿವರ್ಗ ಇಂದು ಅವಸಾನಕ್ಕೆ ಬಂದು ಮನುಷ್ಯನ ಸ್ಪೆಷಲ್ ಕೇರ್‌ನಲ್ಲಿ ಮೃಗಾಲಯಗಳಲ್ಲಿ ಇಡಲಾಗಿದೆಯೋ ಅಲ್ಲ ಈ ಇನ್ ಬ್ರೀಡಿಂಗ್ ಅನಿವಾರ್ಯ. ಉದಾಹರಣೆಗೆ ಪಾಂಡಾ – ಇಂದು ಜಗತ್ತಿನಲ್ಲಿರುವ ಪಾಂಡಾಗಳ ಸಂಖ್ಯೆ ಎರಡು ಸಾವಿರಕ್ಕಿಂತ ಕಡಿಮೆ. ಆದರೆ ಇಂದು ಅದರ ವಂಶವನ್ನು ಬದುಕಿಸಿಕೊಳ್ಳಲು ಹೊರಟಾಗ ಎದಿರಿಗಿರುವ ಸಮಸ್ಯೆಯೆಂದರೆ ಈ ಅಂತಃಸಂಬಂಧವನ್ನು ತಪ್ಪಿಸುವುದು. ಏಕೆಂದರೆ ಒಂದು ಕಾಲದಲ್ಲಿ ಅವಿನ್ನೇನು ನಶಿಸಿಯೇ ಹೋಗಿಬಿಡುತ್ತವೆ ಎಂದಾಗ ಕೆಲವೇ ಕೆಲವನ್ನು ಸಂರಕ್ಷಿಸಲಾಯಿತು. ಈಗ ಅವುಗಳಲ್ಲಿ ಹೆಚ್ಚಿನವು ಒಂದೇ ವಂಶವಾಹಿನಿಯನ್ನು ಹೊಂದಿವೆ. ಆ ಕಾರಣಕ್ಕೆ ಅವು ನಶಿಸದಿರಲು ಇನ್ನೊಂದೆರಡು ತಲೆಮಾರಿನ ಮನುಷ್ಯ ಜಾಗ್ರತೆಯ ಅವಶ್ಯಕತೆಯಿದೆ.

ಅಂತಃಸಂಬಂಧ ಪ್ರಾಣಿವರ್ಗಗಳು ಇಲ್ಲವೆಂದಲ್ಲ. ಆದರೆ ಆ ರೀತಿ ಅಂತಃಸಂಬಂಧವನ್ನು ಬಳಸುವ ಪ್ರಾಣಿಗಳನ್ನು ಗುಂಪು ಮಾಡಿ ಅವುಗಳ ಇಂದಿನ ಜಾಗತಿಕ ಸಂಖ್ಯೆಯನ್ನು ನೋಡಿದರೆ ನಿಮಗೆ ಎಲ್ಲ ಅಂದಾಜಾದೀತು. ಇದಕ್ಕೆಲ್ಲ ಒಂದು ಅಪವಾದ ವೆಂದರೆ ಮನೆ ನೊಣ.

error: Content is protected !!