Friday, 21st June 2024

ಅಷ್ಟಕ್ಕೂ ಮೋದಿ ಕಾಲಿಗೆ ಅಲ್ಲಿನ ಪ್ರಧಾನಿ ಬಿದ್ದಿದ್ದೇಕೆ ?

ಅಭಿವ್ಯಕ್ತ

ಮಾರುತೀಶ್ ಅಗ್ರಾರ

ಚೀನಾದ ಕಣ್ಣು ಪಪುವಾ ನ್ಯೂಗಿನಿಯಾದಲ್ಲಿ ಪತ್ತೆಯಾಗಿದ್ದ ಚಿನ್ನದ ನಿಕ್ಷೇಪ, ಖನಿಜ ಸಂಪತ್ತುಗಳ ಮೇಲೆ ಬಿದ್ದ ಮೇಲೆ ಚೀನಾ ಪಪುವಾ ನ್ಯೂಗಿನಿಯಕ್ಕೆ ಮತ್ತಷ್ಟು ಹತ್ತಿರವಾಯಿತು. ಇದರಿಂದಾಗಿ ಉಭಯ ದೇಶಗಳು ಅನೇಕ ದ್ವೀಪಕ್ಷಿಯ ಒಪ್ಪಂದಗಳಿಗೆ ಒಳಗಾದವು. ಚೀನಾ ಸಹ ಅನೇಕ ಹೂಡಿಕೆಗಳನ್ನು ಪಪುವಾ ನ್ಯೂಗಿನಿಯಾದಲ್ಲಿ ಮಾಡಿತು.

ಬಹುಶಃ ಭಾರತದಲ್ಲಿ ಮೋದಿಯವರಷ್ಟು ಟೀಕೆ, ನಿಂದನೆಗಳನ್ನು ಎದುರಿ ಸಿದ ಮತ್ತೊಬ್ಬ ನಾಯಕ ಹುಡುಕಿದರೂ ಸಿಗಲಾರ! ಯಾಕೆಂದರೆ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುವ ಬಹುದೊಡ್ಡ ಪಡೆಯೇ ಇದೆ. ಈ ಕಾರಣ ಕ್ಕಾದರೂ ಮೋದಿ ವಿರೋಧಿಗಳು ಖುಷಿ ಪಡಬಹುದು.

ಬಿಡಿ ಭಾರತದಲ್ಲಿ ಇದೆಲ್ಲ ಇದ್ದದ್ದೇ. ಆದರೆ, ಜಾಗತಿಕವಾಗಿ ಮೋದಿಯವರ ಜನಪ್ರಿಯತೆ ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೇ ಖುದ್ದು, ಮೋದಿಯವರೇ ನನಗೆ ನಿಮ್ಮ ಆಟೋಗ್ರಾಫ್ ಬೇಕು ಎಂದು ಕೇಳುವ ಹಂತಕ್ಕೆ ಮೋದಿಯವರ ಇಮೇಜ್ ವೃದ್ಧಿಸಿದೆ! ಇಷ್ಟೇ ಅಲ್ಲ ಆಸ್ಟ್ರೇಲಿಯಾ ಪ್ರಧಾನಿ ತಮ್ಮ ನೆಲದ ನಿಂತು ‘ಮೋದಿ ಬಾಸ್’ ಎನ್ನುತ್ತಾರೆ. ಇದೆಲ್ಲವುದಕ್ಕಿಂತ ಭಾವನಾತ್ಮಕ ಘಟನೆಯೆಂದರೆ ಪಪುವಾ ನ್ಯೂಗಿನಿಯಾ ಪ್ರಧಾನಿಯೊಬ್ಬರು ಭಾರತದ ಪ್ರಧಾನಮಂತ್ರಿ ನರೇಂದ್ರಮೋದಿಯವರ ಕಾಲಿಗೆರಗಿ ನಮಸ್ಕರಿಸುವುದನ್ನು ನೋಡಿದಾಗ ಭಾರತವನ್ನು ವಿಶ್ವಸಮುದಾಯ ಇಂದು ಯಾವ ರೀತಿ ಕಾಣುತ್ತಿದೆ ಎನ್ನುವುದು ಗೊತ್ತಾಗುತ್ತದೆ.

ಇದೆಲ್ಲವೂ ನಡೆದಿರುವುದು ಜಿ೭ ಶೃಂಗಸಭೆ ಸೇರಿದಂತೆ ನರೇಂದ್ರ ಮೋದಿಯವರ ಆರು ದಿನಗಳ ಈ ವಿದೇಶ ಪ್ರವಾಸದಲ್ಲಿ.
ಈ ಸಂಗತಿಗಳು ನಿಜಕ್ಕೂ ಭಾರತೀಯರಿಗೆ ಹೆಮ್ಮೆ ತರುವಂತಹದ್ದು. ಆದರೆ ಇಲ್ಲಿ ಹೇಳಬೇಕಾಗಿರುವ ವಿಷಯ ಇದಲ್ಲ.
ಜಪಾನ್, ಪಪುವಾ, ನ್ಯೂಗಿನಿಯಾ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೋದಿಯವರು ಜಾಗತಿಕವಾಗಿ ಅನೇಕ ವಿಚಾರಗಳ ಕುರಿತು ಮಾತನಾಡಿzರೆ ಹಾಗೂ ಚೀನಾವನ್ನು ಪರೋಕ್ಷವಾಗಿ ಕುಟುಕಿzರೆ. ಜತೆಗೆ ಮೋದಿಯವರು ವಿಶ್ವಸಂಸ್ಥೆಯ ಸುಧಾ ರಣೆಯ ಬಗ್ಗೆ ಮಾತನಾಡುತ್ತ, ವಿಶ್ವಸಂಸ್ಥೆಯ ಸ್ಥಾಪನೆ ಉದ್ದೇಶ ಈಡೇರಿದೆಯೇ? ಎಂದು ತರಾಟೆಗೆ ತೆಗೆದು ಕೊಂಡಿದ್ದಾರೆ.

ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಇಂದಿಗೂ ದೃಢ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿದೆ. ಹಾಗಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯೂ ೨೧ನೇ ಶತಮಾನದ ಕಾಲಕ್ಕೆ ತಕ್ಕಂತೆ ನಿರ್ಣಯಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಮೋದಿ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಜಪಾನಿನ ಹಿರೋಶಿಮಾ ದಲ್ಲಿ ನಿಂತು ಸಲಹೆ ನೀಡಿದ್ದಾರೆ.

ಇದು ಉಗ್ರರಿಗೆ ಬೆನ್ನೇಲುಬಾಗಿ ನಿಂತಿರುವ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಕೊಟ್ಟ ಛಡಿ ಏಟು ಎಂದು ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ ಕಾಶ್ಮೀರದಲ್ಲಿ ನಡೆಯುತ್ತಿರುವ ಜಿ೨೦ ಕಾರ್ಯಕಾರಿ ಸಭೆ ಮೇಲೆ ಉಗ್ರರ ಕರಿನೆರಳು ಬಿದ್ದಿತ್ತು. ಏನಾದರೂ ಕಿತಾಪತಿ ಮಾಡಿ ಕಾಶ್ಮೀರದ ಸಭೆಯನ್ನು ರದ್ದು ಗೊಳಿಸಬೇಕೆಂದು ಹೊಂಚು ಹಾಕಿದ್ದ ಪಾಕಿಸ್ತಾನ, ಉಗ್ರರ ಮೂಲಕ ಅದನ್ನು ಸಾಽಸಲು ಹೊರಟಿತ್ತು. ಆದರೆ, ಪಾಕಿಸ್ತಾನದ ಯಾವ ಗೊಡ್ಡು ಬೆದರಿಕೆಗೂ ಬಗ್ಗದ ಭಾರತ ಕಾಶ್ಮೀರದಲ್ಲಿ ಜಿ೨೦ ಸಭೆಯನ್ನು ಮಾಡಿಯೇ ಸಿದ್ಧ ಎಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಪಾಕಿಸ್ತಾನ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ದೂರ ಉಳಿಯಿತು.

ಚೀನಾ ಕೂಡ ಪಾಕಿಸ್ತಾನ ಬೇಜಾರು ಮಾಡಿಕೊಳ್ಳುತ್ತೆ ಎಂಬ ಕಾರಣಕ್ಕೆ ಸಭೆಯಿಂದ ಹಿಂದೆ ಸರಿಯಿತು. ಈ ಹಿಂದೆ ಅರುಣಾಚಲ ಪ್ರದೇಶದಲ್ಲಿ ನಡೆದಿದ್ದ ಜಿ೨೦ ಕಾರ್ಯಕಾರಿ ಸಭೆಯಿಂದಲೂ ಚೀನಾ ಅಂತರ ಕಾಯ್ದುಕೊಂಡಿತ್ತು. ಇಂಥ ಸನ್ನಿವೇಶದಲ್ಲೇ ಮೋದಿಯವರು ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ವಿಚಾರವನ್ನು ಜಿ೭ ಶೃಂಗಸಭೆಯ ಮೂಲಕ ವಿಶ್ವಸಂಸ್ಥೆಗೆ ಮತ್ತೊಮ್ಮೆ ಮನದಟ್ಟು ಮಾಡಿದರು.

ಅಲ್ಲಿಗೆ ಕಾಶ್ಮೀರದ ಸಭೆಯನ್ನು ಉಗ್ರರ ದಾಳಿಯಿಂದ ಧ್ವಂಸಗೊಳಿಸಿ ಭಾರತದ ವರ್ಚಸ್ಸನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ
ಹಾಳುಮಾಡಬೇಕೆಂದು ಕೊಂಡಿದ್ದ ಪಾಕಿಸ್ತಾನದ ಕನಸನ್ನು ಮೋದಿ ಧ್ವಂಸಗೊಳಿಸಿ ಬಿಟ್ಟರು! ಇನ್ನು ಹಿರೋಶಿಮಾದಲ್ಲಿ ನಡೆದ ಜಿ೭ ಶೃಂಗಸಭೆಯ ನಂತರ ಮೋದಿ ಹೊರಟಿದ್ದು ದ್ವೀಪ ರಾಷ್ಟ್ರ ಪಪುವಾ ನ್ಯೂಗಿನಿಯಾ ಕಡೆ. ಇದು ಭಾರತದ ಪ್ರಧಾನಿ ಯೊಬ್ಬರು ಮೊದಲ ಬಾರಿಗೆ ಆ ದ್ವೀಪ ರಾಷ್ಟ್ರಕ್ಕೆ ಕಾಲಿಟ್ಟ ಐತಿಹಾಸಿಕ ಕ್ಷಣಕ್ಕೆ ಮೋದಿ ಸಾಕ್ಷಿಯಾದರು. ಸ್ವತಃ ಅಲ್ಲಿನ ಪ್ರಧಾನಿ ಜೇಮ್ಸ ಮರಾಪೆ ಅವರೇ ತಮ್ಮ ಶಿಷ್ಟಚಾರಗಳನ್ನೆಲ್ಲ ಬದಿಗೊತ್ತಿ ಮೋದಿಯವರ ಸ್ವಾಗತಕ್ಕೆ ತುದಿಗಾಲಿನಲ್ಲಿ ನಿಂತಿದ್ದರಲ್ಲದೇ ಸ್ವತಃ ಮೋದಿಯವರ ಕಾಲಿಗೆ ನಮಸ್ಕರಿಸಿ ಅವರನ್ನು ಆತ್ಮೀಯವಾಗಿ ನ್ಯೂಗಿನಿಯಾಕ್ಕೆ ಬರಮಾಡಿಕೊಂಡ ದೃಶ್ಯವಂತೂ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಅಷ್ಟಕ್ಕೂ ಪಪುವಾ ನ್ಯೂಗಿನಿಯಾ ಭಾರತ ದೇಶದ ಪ್ರಧಾನಿಯೊಬ್ಬರಿಗೆ ಈ ಪರಿಯ ಗೌರವ ಕೊಡುವುದಕ್ಕೆ ಕಾರಣವೇನು? ಒಂದು ದೇಶದ ಪ್ರಧಾನಿ ಮತ್ತೊಂದು ದೇಶದ ಪ್ರಧಾನಿಯವರ ಕಾಲಿಗೆರಗಿ ನಮಸ್ಕರಿಸುವ ದೃಶ್ಯ ಅನೇಕರನ್ನು ಹುಬ್ಬೇರಿಸು ವಂತೆ ಮಾಡಿದೆ. ಆದರೆ ಅದಕ್ಕೂಂದು ಕಾರಣವೂ ಇದೆ. ಕರೋನಾ ಮಹಾಮಾರಿ ಇಡೀ ಜಗತ್ತನ್ನು ಆವರಿಸಿಕೊಂಡು ಲಕ್ಷಾಂತರ ಜನರ ಸಾವು-ನೋವುಗಳಿಗೆ ಜಾಗತಿಕ ಸಮುದಾಯ ತುತ್ತಾಗಿತ್ತಲ್ಲ, ಅದರಲ್ಲಿ ಈ ಪಪುವಾ ನ್ಯೂಗಿನಿಯಾ ಎನ್ನುವ ದ್ವೀಪ ರಾಷ್ಟ್ರ ಕೂಡ ಒಂದು. ಕರೋನಾ ಸೊಂಕು ವ್ಯಾಪಕವಾಗಿ ಹರಡಿದ ಸಮಯದಲ್ಲಿ ಅನೇಕ ಬಡ ರಾಷ್ಟ್ರಗಳು ಕೋವಿಡ್ ಲಸಿಕೆ ತಯಾರಿಸುವ ದೇಶಗಳ ಮುಂದೆ ಲಸಿಕೆಗಾಗಿ ಕೈಚಾಚಿ, ದುಂಬಾಲು ಬಿದ್ದಿದ್ದವು.

ಪಪುವಾ ನ್ಯೂಗಿನಿಯಾ ಕೂಡ ಚೀನ ಅಮೆರಿಕ, ರಷ್ಯಾ, ಬ್ರಿಟನ್ ಸೇರಿದಂತೆ ಅನೇಕ ರಾಷ್ಟ್ರಗಳೆದುರು ಕೇಳಿಕೊಂಡಿತ್ತು. ಆದರೆ ಯಾರೂ ಲಸಿಕೆ ಕೊಡಲಿಲ್ಲ. ಭಾರತ ಮಾತ್ರ ಹೆಚ್ಚೂ ಕಡಿಮೆ ೧.೫ ಲಕ್ಷ ಕೋವಿಡ್ ಲಸಿಕೆಯನ್ನು ಕೊಟ್ಟು ಮಾನವೀ ಯತೆ ಪ್ರದರ್ಶಿಸಿತ್ತು. ಆ ಸಂಕಷ್ಟಮಯ ಸನ್ನಿವೇಶದಲ್ಲಿ ಭಾರತ ಸಹಾಯ ಹಸ್ತ ಮಾಡಿದ್ದಕ್ಕಾಗಿ ಲಕ್ಷಾಂತರ ಪಪುವಾ ನ್ಯೂಗಿನಿಯಾ ಜನರು ಕೊರೊನಾ ಸೋಂಕಿನಿಂದ ಪಾರಾಗಿದ್ದರು. ಅದರ ಅಭಿಮಾನದ ಸಂಕೇತವಾಗಿ ಇಂದು ಪಪುವಾ ನ್ಯೂಗಿನಿ ಯಾದ ಸರಕಾರ ಈ ರೀತಿ ಕೃತಜ್ಞತೆ ಸಲ್ಲಿಸಿದೆ.

ಭಾರತಕ್ಕೆ ಇದಕ್ಕಿಂತ ಗೌರವ ಇನ್ನೇನು ಬೇಕು ಅಲ್ವಾ? ಇನ್ನು ಪಪುವಾ ನ್ಯೂಗಿನಿಯಾ ದೇಶ ಮೊದಲಿನಿಂದಲೂ ಅನೇಕ ವಿಚಾರಗಳಿಗೆ ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿದ್ದ ದ್ವೀಪ ರಾಷ್ಟ್ರ. ಚೀನಾದ ಕಣ್ಣು ಪಪುವಾ ನ್ಯೂಗಿನಿಯಾದಲ್ಲಿ ಪತ್ತೆಯಾಗಿದ್ದ ಚಿನ್ನದ ನಿಕ್ಷೇಪ, ಖನಿಜ ಸಂಪತ್ತುಗಳ ಮೇಲೆ ಬಿದ್ದ ಮೇಲೆ ಚೀನಾ ಪಪುವಾ ನ್ಯೂಗಿನಿಯಕ್ಕೆ ಮತ್ತಷ್ಟು ಹತ್ತಿರವಾಯಿತು. ಇದರಿಂದಾಗಿ ಉಭಯ ದೇಶಗಳು ಅನೇಕ ದ್ವೀಪಕ್ಷಿಯ ಒಪ್ಪಂದಗಳಿಗೆ ಒಳಗಾದವು.

ಚೀನಾ ಸಹ ಅನೇಕ ಹೂಡಿಕೆಗಳನ್ನು ಪಪುವಾ ನ್ಯೂಗಿನಿಯಾದಲ್ಲಿ ಮಾಡಿತು. ಇದರಿಂದಾಗಿ ಚೀನಾ ತನ್ನನ್ನು ತಾನು
ವಿಶ್ವ ದಕ್ಷಿಣದ ಬಲಾಢ್ಯ ದೇಶವೆಂದು ಬಿಂಬಿಸಿಕೊಳ್ಳುತ್ತ ಪಪುವಾ ನ್ಯೂಗಿನಿಯಾ ಸೇರಿದಂತೆ ೧೪ ಪೆಸಿಫಿಕ್ ದ್ವೀಪ ರಾಷ್ಟ್ರಗಳ ಮೇಲೆ ವ್ಯಾವಹಾರಿಕ ಹಿಡಿತ ಸಾಽಸಿತ್ತು. ಸಾಲದ್ದಕ್ಕೆ ಅನೇಕ ದಶಕಗಳಿಂದ ಇಡೀ ದಕ್ಷಿಣ ಸಮುದ್ರವೇ ತನ್ನದೆಂದು ರೆದುಕೊಳ್ಳುತ್ತ ಅದರ ಮೇಲೆ ಹಿಡಿತ ಸಾಧಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.

ಹೀಗಾಗಿ ಅಗತ್ಯ ಬಿದ್ದಾಗ ಪೆಸಿಫಿಕ್ ದ್ವೀಪರಾಷ್ಟ್ರ ಗಳು ತನ್ನ ನೆರವಿಗೆ ನಿಲ್ಲಲಿ ಎನ್ನುವ ದುರುದ್ದೇಶದಿಂದ ಚೀನಾ ಜನತಾಂತ್ರಿಕ ನೆರವು, ಆರ್ಥಿಕ ಸಹಕಾರ ಮಾಡುವ ನೆಪದಲ್ಲಿ ಆ ರಾಷ್ಟ್ರಗಳ ಮೇಲೆ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ಇದರ ಜತೆಗೆ ಚೀನಾ, ಭಾರತ ಮತ್ತು ಇತರೆ ಅನೇಕ ದೇಶಗಳೊಂದಿಗೆ ತನ್ನ ಗಡಿ ಹಂಚಿಕೊಂಡಿದ್ದು ಗಡಿ ಸುತ್ತಮುತ್ತಲಿನ ಪ್ರದೇಶಗಳ ಭೂ-ಭಾಗಗಳನ್ನು ತನ್ನದೆಂದು ಸದಾ ಒಂದಿಂದು ತಕರಾರು ತೆಗೆದು ಗಡಿ ಪ್ರದೇಶಗಳಲ್ಲಿ ಯುದ್ಧೋನ್ಮಾದ ಸೃಷ್ಟಿಸುವುದು ಚೀನಾದ ಕುತಂತ್ರಗಳಲ್ಲಿ ಒಂದು.

ಇದರಿಂದಾಗಿ ಚೀನಾದ ಜತೆ ಗಡಿ ಹಂಚಿಕೊಂಡಿರುವ ಸಣ್ಣಪುಟ್ಟ ರಾಷ್ಟ್ರಗಳು ರೋಸಿ ಹೋಗಿವೆ. ತೈವಾನ್ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದ್ದರು ಚೀನಾ ಮಾತ್ರ ತೈವಾನ್ ತಮಗೆ ಸೇರಿದ್ದು ಎಂದು ವಾದಿಸುತ್ತಲೇ ಸದಾ ಕಾಲವೂ ಅಲ್ಲಿ ಯುದ್ಧದ ವಾತಾವರಣವನ್ನು ಚೀನಾ ಸೃಷ್ಟಿಸುತ್ತಿದೆ. ನಮ್ಮ ಅರುಣಾಚಲ ಪ್ರದೇಶಗಳಲ್ಲಿನ ಅನೇಕ ಜಾಗಗಳನ್ನು ತನ್ನದೆಂದು ಹೇಳಿಕೊಳ್ಳುವ ಚೀನಾ ಅನೇಕ ಬಾರಿ ಭಾರತದ ಜತೆಗೆ ಕಾಲು ಕೆರೆದುಕೊಂಡು ಜಗಳಕ್ಕೆ  ಬಂದು ನಂತರ ಸುಮ್ಮನಾಗಿದೆ. ದಕ್ಷಿಣ ಸಮುದ್ರದಲ್ಲಿ ಒಂದಿಂದು ನೆಪವೊಡ್ಡಿ ತನ್ನ ನೌಕಾಸೇನೆಯನ್ನು ಯೋಜಿಸುವ ಮೂಲಕ ಇಡೀ ದಕ್ಷಿಣ ಸಮುದ್ರವನ್ನು
ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ದಶಕಗಳಿಂದ ಮಾಡುತ್ತಲೇ ಬರುತ್ತಿದೆ.

ಈಗ ಪ್ರಧಾನಿ ನರೇಂದ್ರ ಮೋದಿಯವರು ಪೆಸಿಫಿಕ್ ದ್ವೀಪ ರಾಷ್ಟ್ರಗಳ ಸಹಕಾರ ಒಕ್ಕೂಟದ ಸಭೆಯಲ್ಲಿ ನಿಂತು, ‘ಪೆಸಿಫಿಕ್
ದ್ವೀಪ ರಾಷ್ಟ್ರಗಳು ಸಂಕಷ್ಟದಲ್ಲಿzಗ ನಂಬಿದವರು ಯಾರು ಕೂಡ ಅವರ ನೆರವಿಗೆ ಬರಲಿಲ್ಲ’ ಎನ್ನುವ ಮೂಲಕ ಚೀನಾಗೆ
ಮಾತಿನ ತಿವಿದಿzರೆ. ಇದರ ಜತೆಗೆ ಪಪುವಾ ನ್ಯೂಗಿ ನಿಯಾ ಪ್ರಧಾನಿ ಜೇಮ್ಸ ಮರಾಪೆ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿ, ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಆರೋಗ್ಯ, ಕೌಶಲ್ಯಾಭಿವೃದ್ಧಿ, ಐಟಿ ಕ್ಷೇತ್ರಗಳ ಪಾಲು ದಾರಿಕೆಯನ್ನು ಬಲಪಡಿಸುವ ಕುರಿತಂತೆ ಸಾಕಷ್ಟು ಚರ್ಚೆ ಗಳನ್ನು ಮೋದಿಯವರು ಮಾಡಿದ್ದಾರೆ ಎನ್ನಲಾಗುತ್ತಿದೆ.

ಜಾಗತಿಕ ವೇದಿಕೆಗಳಲ್ಲಿ ಭಾರತ ಇಂದು ದೈತ್ಯ ಶಕ್ತಿಯಾಗಿ ಬೆಳೆದು ನಿಂತಿದೆ. ಹಾಗೂ ವಿಶ್ವದ ದಕ್ಷಿಣ ದ್ವೀಪ ರಾಷ್ಟ್ರಗಳ
ಪರ ಧ್ವನಿಯಾಗಿರುವುದು ನಮಗೆ ಸಾಕಷ್ಟು ಬಲ ಬಂದಂತಾಗಿದೆ ಎಂದು ಮರಾಪೆ ಹೇಳಿರುವುದು ಚೀನಾದ ಪಿತ್ತವನ್ನು ನೆತ್ತಿಗೇರಿಸಿದೆ. ಯಾಕೆಂದರೆ ಇತ್ತೀಚಿಗಂತೂ ಚೀನಾ ನಿಯಂತ್ರಣ ಸಾಽಸಿದ ಕಡೆಯಲ್ಲ ಭಾರತ ತನ್ನ ಪ್ರಭುತ್ವವನ್ನು ಸ್ಥಾಪಿಸುತ್ತ ಚೀನಾಗೆ ಸವಾಲೊಡ್ಡುತ್ತಿದೆ. ಜತೆಗೆ ಭಾರತ ಜಾಗತಿಕವಾಗಿ ಬಲಾಢ್ಯ ಶಕ್ತಿಯಾಗಿ ಬೆಳೆಯುತ್ತಿರುವುದನ್ನು ಸಹಿಸದ ಚೀನಾ ಒಳಗೊಳಗೆ ಭಾರತದ ವಿರುದ್ಧ ನಿಗಿನಿಗಿ ಕೆಂಡ ಕಾರುತ್ತಿದೆ.

ಸಾಲದ್ದಕ್ಕೆ ಪಪುವಾ ನ್ಯೂಗಿನಿಯಾ ಸರಕಾರ ಪ್ರಧಾನಿ ಮೋದಿಯವರಿಗೆ ತನ್ನ ಅತ್ಯುನ್ನತ ಪ್ರಶಸ್ತಿ ಯಾದ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಲೊಗ್ಹೊ’ ಪುರಸ್ಕಾರ ನೀಡಿ ಗೌರವಿಸಿದೆ. ಮತ್ತೊಂದು ದ್ವೀಪ ರಾಷ್ಟ್ರ ಫಿಜಿ ಸಹ ತಮ್ಮ ದೇಶದ ಅತ್ಯುನ್ನತ ಗೌರವವಾದ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ಫಿಜಿ’ ಪದಕ ನೀಡಿ ಗೌರವಿಸಿದೆ. ಹಾಗಾಗಿ ಸದಾ ಕಾಲ ಭಾರತದ ವಿರುದ್ಧ ಕತ್ತಿ ಮಸೆಯುವ ಡ್ರ್ಯಾಗನ್ ದೇಶಕ್ಕೆ ಪೆಸಿಫಿಕ್ ದ್ವೀಪ ರಾಷ್ಟ್ರಗಳಲ್ಲಿ ಭಾರತಕ್ಕೆ ಸಿಕ್ಕಿರುವ ಗೌರವ, ಸಹಕಾರ ಆ ದೇಶದ ನಿzಗೆಡಿಸಿದೆ!

error: Content is protected !!