Saturday, 27th July 2024

ಮೂಲೆಯಿಂದ ಕೊಟ್ಟಳು ಸ್ಮೈಲು, ಡೆಸ್ಕ್ ಡೆಸ್ಕ್ ಗಳೇ ಫೇಲು !

ಪರಿಶ್ರಮ

ಪ್ರದೀಪ್ ಈಶ್ವರ್‌

parishramamd@gmail.com

ಬೆಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು ಸಿಂಗಾಪೂರ ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆ ಕಾಲೇಜಿನ
ಬಹಳಷ್ಟು ಮಂದಿಯ ಲೈಫ್ ಸ್ಟೈಲ್ ಸಿಂಗಾಪುರನ್ನೂ ಮೀರಿಸುವಂತಿತ್ತು. ಮೂರನೇ ವರ್ಷದ ಎಂಜಿನಿಯರಿಂಗ್, ಕಲರ್ ಫುಲ್ ಸೆಳೆತ ಗಳಲ್ಲಿ ಮೈ ಮರೆತಿದ್ದ ಕೆಲವು ಭವಿಷ್ಯದ ಎಂಜಿನಿಯರ್‌ಗಳು, ಅಂತಹ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚಂದವಾದ ಯುವತಿ ಯೊಬ್ಬಳಿದ್ದಳು.

ಸೌಂದರ್ಯ ದೇವತೆಗೂ ಹೊಟ್ಟೆಕಿಚ್ಚು ಪಡುವಷ್ಟು ಅಂದ, ಮೊನಾಲಿಸಾಗೂ ಟ್ಯೂಷನ್ ಮಾಡುವಷ್ಟು ಚಂದ, ಲಿಯೋನಾರ್ಡ್ ಡಾವಿಂಚಿ ಕೂಡಾ ಇಂತವಳ ಚಿತ್ರ ಬಿಡಿಸುವ ಅವಕಾಶ ಸಿಗಲಿಲ್ಲವೇ ಎಂದು ವ್ಯಥೆ ಪಡುವಷ್ಟು ಸೌಂದರ್ಯ ಅವಳದ್ದು. ಕವಿಗಳ ಕಲ್ಪನೆ, ಬರಹಗಾರರ ಬರಹಕ್ಕೆ, ವಿಮರ್ಷಕರ ವಿಶ್ಲೇಷಣೆಗೆ ಸಿಗದಷ್ಟು ಅದ್ಭುತವಾದ ಬ್ಯೂಟಿ ಅವಳದ್ದು. ಕಾಲೇಜಿನ ಪ್ರಾರಂಭದಲ್ಲಿ, ಅದೂ ಎಂಜಿನಿಯರಿಂಗ್ ಲೈಫಿನಲ್ಲಿ ಹುಡುಗಿಗೆ ಬಾಯ್ ಪ್ರೆಂಡ್ ಅನಿವಾರ್ಯ, ಹುಡುಗನಿಗೆ ಗರ್ಲ್ ಪ್ರೆಂಡ್ ಅವಶ್ಯಕತೆ. ಆ ಚಂದದ ಬೆಡಗಿಗೂ ಒಂದು ಪುಟ್ಟ ಸ್ನೇಹಿತರ ಸರ್ಕಲ್ ಇತ್ತು. ಆ ಗುಂಪಿನಲ್ಲಿದ್ದ ನಾಲ್ಕೈದು ಮಂದಿ ಹುಡುಗರು ಅವಳನ್ನ ಇಷ್ಟಪಟ್ಟರು.

ಒಬ್ಬನು ಮಾತ್ರ ಧೈರ್ಯ ಮಾಡಿ ಪ್ರಪೋಸ್ ಮಾಡಿಬಿಟ್ಟಿದ್ದ. ಉಳಿದ ಸ್ನೇಹಿತರು ಇರ್ಲಿ ಬಿಡು ಮಗ, ಒಳ್ಳೆ ಚಾ ನಿನ್ನದು ಎಂದು ಒಳಗೊಳಗೇ ಕೊರಗುತ್ತಿದ್ದರು. ಇಷ್ಟಪಟ್ಟ ಹುಡುಗಿಗಾಗಿ ಅವನು ಪಡಬಾರದ ಕಷ್ಟಪಟ್ಟಿದ್ದ. ಪ್ರಾರಂಭದಲ್ಲಿ ಅವಳನ್ನ ಒಲಿಸಿಕೊಳ್ಳು ವುದೇ ದೊಡ್ಡ ಸಾಹಸವಾಗಿದ್ದ ಅವನಿಗೆ, ನಂತರ ಅವಳು ಇನ್ನೊಬ್ಬನಿಗೆ ಬೀಳದಂತೆ ನೋಡಿಕೊಳ್ಳುವುದೇ ಸವಾಲಾಗಿತ್ತು. ಮೊದಲೆ ಅವಳ ಫೋನ್ ನಂಬರ್ ಪಡೆಯಲು, ಒzಡಿದ ಅವನಿಗೆ, ನಂತರ ನಂಬರ್ ಸಿಕ್ಕಮೇಲೆ ಆ ನಂಬರಿಗೆ ರೀಚಾರ್ಜ್ ಮಾಡಿಸಲು ಸಾಲ ಮಾಡಿ ಗೆಲ್ಲುವುದೇ ದೊಡ್ಡ ಅಚೀವ್ ಮೆಂಟ್ ಆಗಿತ್ತು.

ಆ ಹುಡುಗಿಗೂ ಅಷ್ಟೇ, ನನ್ನವನು ಚೆನ್ನಾಗಿ ಓದಬೇಕು, ಮೆಚ್ಚುವಂತ ಕೆಲಸ ಪಡೆಯಬೇಕು, ಲಕ್ಷಗಟ್ಟಲೆ ಸಂಪಾದಿಸಬೇಕು, ರಾಣಿಯಂತೆ ನೋಡಿಕೊಳ್ಳಬೇಕು ಎಂಬ ಬಯಕೆ ಅವಳದ್ದು. ಆದರೆ ಹುಡುಗನ ಪರಿಸ್ಥಿತಿ ವಿಭಿನ್ನ. ಅವಳ ನೆನಪು ರಾತ್ರಿ ಹಗಲು ಕಾಡುತ್ತಿರುತ್ತದೆ. ಅವಳು ಅವನ ಜೀವನಕ್ಕೆ ಬಂದಮೇಲೆ ಏಕಾಗ್ರತೆ ಡೈವರ್ಸ್ ಕೊಟ್ಟಿರುತ್ತೆ, ಮನಸ್ಸಿನೊಂದಿಗೆ ಘರ್ಷಣೆ, ಭಾವನೆಗಳೊಂದಿಗೆ ಆಕ್ಸಿಡೆಂಟ್ ಮಾಡಿಕೊಂಡು ಬದುಕುವ ಎಂಜಿನಿಯರಿಂಗ್ ಜೀವನದಲ್ಲಿ ಬಹಳಷ್ಟು ಪ್ರೇಮಕಥೆಗಳಂತೆ ಅವರ ಕಥೆಯೂ ನಡೆಯುತ್ತಿತ್ತು.
ಎಂಜಿನಿಯರಿಂಗ್ ಕಾಲೇಜಿನ ಬಹಳಷ್ಟು ಹುಡುಗಿಯರ ಸಮಸ್ಯೆ, ಪಿಯುಸಿ ಯಲ್ಲಿ ಇಷ್ಟಪಟ್ಟವನನ್ನ ಮರೆತು, ರೋಡ್ ರೋಮಿಯೊಗಳ ವಿಮರ್ಶೆಗಳನ್ನ ಸಹಿಸಿಕೊಂಡು, ಸಿನೀಯರ್ ಗಳ ವಕ್ರ ದೃಷ್ಟಿ, ಜೂನಿಯರ್ ಗಳ ಆರ್ಟಿಫಿಷಿಯಲ್ ಪ್ರೀತಿ, ಬಹಳಷ್ಟು ಸ್ನೇಹಿತರ ಅವಕಾಶವಾದಿತನ, ಜೊತೆಯಲ್ಲಿರುವ ಗೆಳತಿಯರ ಹೊಟ್ಟೆಕಿಚ್ಚು, ನನ್ನ ಮಾನ ಮರ್ಯಾದೆ ಹರಾಜಿಗೆ ಹಾಕಬೇಡ ಎಂದು ಅಪ್ಪ-ಅಮ್ಮನ ಕಂಡೀಷನ್ ನಡುವೆ ಬದುಕುತ್ತಿರುತ್ತಾರೆ.

ಎಷ್ಟೇ ಪ್ರಯತ್ನ ಪಟ್ಟರೂ ಮನೆಯ ಮರ್ಯಾದೆ ಉಳಿಸಲೇಬೇಕು ಎಂದು ತೀರ್ಮಾನಿಸಿದರೂ, ಯಾವುದೊ ಒಂದು ಹೃದಯಕ್ಕೆ ಫಿದಾ ಆಗಿರುತ್ತಾರೆ. ನನಗೆ ಇವೆ ಇಷ್ಟ ಆಗಲ್ಲ ಅಂತ ಹೇಳಿದರೂ, ಇಷ್ಟಪಟ್ಟವನ ಜೊತೆ ಸುತ್ತಾಡುತ್ತಲೇ ಇರುತ್ತಾರೆ. ಇನ್ನು ಹುಡುಗರು ಪ್ರಪೋಸ್ ಮಾಡುವ ಪ್ರತಿ ಸಲವೂ ಯೂವರ್ ಮೈ – ಲವ್ ಅಂತ ಸುಂದರವಾದ ಸುಳ್ಳನ್ನ ಹೇಳುತ್ತಾ, ಹೈಸ್ಕೂಲ್‌ನ, ಪಿಯುಸಿ ಯ ಇಷ್ಟ ಪಟ್ಟವಳ ಮೊಬೈಲ್ ನಂಬರ್ ಹುಡುಕುತ್ತಲೇ ಇರುತ್ತಾರೆ. ಇವೆಲ್ಲ ಇರ್ಲಿ, ಆ ಚೆಲುವೆಯ ಬಗ್ಗೆ ಹೇಳ್ತೀನಿ ಕೇಳಿ.

ಸೌಂದರ್ಯ ದೇವತೆಗೆ ಫೋಟೋ ಫ್ರೇಮ್‌ನಂತೆ ಇದ್ದ ಅವಳ ಮತ್ತು ಸಾಲಗಾರರಿಗೆ ರೋಲ್ ಮಾಡಲ್ ತರಹ ಇದ್ದ ಅವನ ಸ್ಟೋರಿ ಪ್ರಾರಂಭದಲ್ಲಿ ಚೆನ್ನಾಗೆ ಇತ್ತು. ಸಹಜವಾಗಿ ಪ್ರೀತಿಯಲ್ಲಿದ್ದಾಗ ಅವಳನ್ನ ಒಲಿಸಿಕೊಳ್ಳಲು ಇಲ್ಲ ಸಲ್ಲದ ಸುಳ್ಳುಗಳನ್ನ, ಎಂದಿಗೂ ನನಸು ಮಾಡಲು ಸಾಧ್ಯವೇ ಆಗದಂತಹ ಭವಿಷ್ಯದ ಕಲ್ಪನೆಗಳನ್ನ, ಗಾಳಿಯಲ್ಲಿ ಗೋಪುರಗಳನ್ನ ಹುಡುಗ ಕಟ್ಟಿರುತ್ತಾನೆ. ಇನ್ನೂ ಹುಡುಗಿಯೂ ಅಷ್ಟೇ, ಅವಶ್ಯಕತೆಗಿಂತ ಜಾಸ್ತಿ ಪ್ರೀತಿ ತೋರಿಸಿರುತ್ತಾಳೆ, ನನಗೆ ಅದು ಬೇಡ, ಇದು ಬೇಕು, ನನಗೆ ಅದು ಇಷ್ಟ ಇಲ್ಲ, ಇದೆ ಇಷ್ಟ
ಅಂತ ಅತಿಯನ್ನ ತುಂಬಾ ಅತಿಯಾಗೇ ಮಾಡಿರುತ್ತಾಳೆ.

ಇಂತಹ ಎರಡು ವಿಚಿತ್ರ ಹೃದಯಗಳು ಪ್ರೀತಿಯಲ್ಲಿ ಇದ್ದಾಗ ಕಾಲ ಬದಲಾಗುತ್ತದೆ. ಹತ್ತಿರವಾದಷ್ಟು ಗೊತ್ತಿಲ್ಲದಂತೆ ದೂರ ಹೋಗುವ ಪ್ರೀತಿಯ ಭಾವನೆಗಳ ನಡುವೆ ನಡೆಯುತ್ತಿದ್ದ ಆ ಲವ್ ಸ್ಟೋರಿಯಲ್ಲಿ ಚಿಕ್ಕ ಬಿರುಕು ಮೂಡಲು ಪ್ರಾರಂಭವಾಯಿತು. ಏಕೆ ನನಗೆ ಕಾಲ್ ಮಾಡ್ತಿಲ್ಲ ಎಂದು ಹುಡುಗಿ, ಇಲ್ಲ ಬ್ಯುಸಿ ಇದ್ದೇ ಎಂದು ಹುಡುಗ, ನನಗಿಂತ ಬ್ಯುಸಿ ನಾ ಎಂದು ಹುಡುಗಿ, ನನಗೆ ನಿನಗಿಂತ ಕೆರಿಯರ್ ಮುಖ್ಯ ಎಂದು ಹುಡುಗ, ಈ ರೀತಿ ಪ್ರಾರಂಭವಾದ ಜಗಳ ಆ ಜೋಡಿಗಳನ್ನ ಬ್ರೇಕಪ್‌ಗೆ ಆಹ್ವಾನ ಮಾಡಿತು.

ಮೂರು ವರ್ಷಗಳ ಸುದೀರ್ಘ ಪ್ರೀತಿ ಶವಯಾತ್ರೆಗೆ ಸಿದ್ದವಾಗಿತ್ತು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಎರಡು ಜೀವಗಳು ಪರಸ್ಪರ ತೇಜೋವದೆ ಬಿದ್ದರು. ದೂರವಾದ ಅವಳ ನೋವನ್ನ ಮರೆಯಲಾಗದೆ, ಅವಳ ಬಗ್ಗೆ ಕನ್ನಡ ಪತ್ರಿಕೋದ್ಯಮವೂ ಬಳಸದಂತಹ, ಸಾಹಿತ್ಯ ಪ್ರೇಮಿಗಳು ಕನ್ಯೂಸ್ ಆಗುವಂತಹ ಪದಗಳನ್ನ ಅವನು ಬಳಸುತ್ತಿದ್ದ. ಇನ್ನು ಅವನ ವಿಮರ್ಶೆಗೆ ಸವಾಲಾಕಲು ಸಾಧ್ಯವಾಗದೆ, ಇಷ್ಟಪ ಟ್ಟವನ ಸ್ನೇಹಿತರೊಂದಿಗೆ ಸಂಕಟವನ್ನು ಹೇಳಿಕೊಂಡಳು. ಅವಳ ಸ್ನೇಹಿತರು ಅವನೊಂದಿಗೆ ಜಗಳಕ್ಕೆ ಬಿದ್ದು, ಮಾರ್ನಿಂಗ್‌ ಯಿಂದ ಇವನಿಂಗ್ ವರೆಗೂ ಬರಿ ವಾರ್ನಿಂಗ್‌ಗಳ ಕಳೆದುಹೋದರು.

ಬಂದು ಕಟ್ಟಿದಳು ರಾಖಿ ಜೀವನವೆಲ್ಲ ಫೀಲಿಂಗ್ಸ್ ಮಾತ್ರ ಬಾಕಿ ಕಾಲೇಜಿನ ಜೀವನ ತುಂಬಾ ಥ್ರಿಲ್ಲಿಂಗ್ ಆಗಿರುತ್ತದೆ. ಅರ್ಥವಾಗದ ಭಾವನೆಗಳು, ವಿನಾಕಾರಣ ಪ್ರೀತಿಸುವ ಗೆಳೆಯರು, ಸುಮ್ ಸುಮ್ನೆ ನೋಟದಿಂದಲೇ ಕೆಣಕುವ ಗೆಳತಿ ಯರು, ವರ್ಷವೆಲ್ಲ ಮುಗುಳ್ನಗೆ ಯಿಂದ ನಿzಗೆಡಿಸಿ ಕೊನೆಯಲ್ಲಿ ಜಸ್ಟ್ ಪ್ರೆಂಡ್ಸ್ ಎಂದು ಹೇಳಿ ಹೊರಟು ಹೋಗುವ ಗೆಳತಿ, ಚಿಕ್ಕ ಪುಟ್ಟ ವಿಚಾರಕ್ಕೂ ತಕರಾರೂ ತೆಗೆಯುವ ಕೆಲವು ಉಪನ್ಯಾಸಕರು, ಕೋಪ ಬಾರದಿದ್ದರೂ ಕೋಪ ಬಂದಂತೆ ಕೋಪವನ್ನ ಸಾಧನೆಯೆಂಬಂತೆ ತೋರಿಸಿಕೊಳ್ಳುವ ಕೆಲವು ಉಪ ನ್ಯಾಸಕಿಯರು, ಸಿಕ್ಕಾಪಟ್ಟೆ ಸ್ಟ್ರಿಕ್ಟ್  ಎಂಬಂತೆ ಪೋಸ್ ಕೊಟ್ಟು ಒಳಗೊಳಗೆ ಸಂತೋಷ ಪಡುವ ಪ್ರಾಂಶುಪಾಲರು. ಹೇಳುತ್ತಾ ಹೋದರೆ ಪುಸ್ತಕವೆಲ್ಲ ಇಂಟ್ರಡಕ್ಷನ್‌ನ ಕಳೆದು ಹೋಗುತ್ತೆ.

ಕಾಲೇಜಿನ ಜರ್ನಿಯಲ್ಲಿ ಹುಡುಗರ ಮನಸ್ಥಿತಿ, ಅವರ ನಡುವಳಿಕೆ, ಯಾಮಾರಿದರೆ ಕಾಲೇಜನ್ನ ಮುತ್ತುಟ್ ಫೈನಾನ್ಸ್ ಗೆ ಸಾಲ ಕೊಟ್ಟಿ ಬಿಡುವ ಧೈರ್ಯ, ಅಷ್ಟೇನು ಗ್ಲಾಮರ್ ಇಲ್ಲದಿದ್ದರೂ ಪದೇ ಪದೇ ಮಿರರ್ ನೋಡಿಕೊಂಡು ಹೀರೋತರ ಫೋಸ್ ಕೊಡುವ ಗುಣ, ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿ ಯೊಬ್ಬನ ಕಥೆಯು ಹೀಗೂ ಉಂಟೆ ಕಾರ್ಯಕ್ರಮದ ವಿಶೇಷ ಎಪಿಸೋಡ್ ಆಗುತ್ತೆ.

ತರ್ಕವು ತಲೆಕೆಡಿಸಿಕೊಳ್ಳುವ ವ್ಯಕ್ತಿತ್ವ ಹುಡುಗರದ್ದು. ಏನೇ ಇದ್ದರೂ, ಇಲ್ಲದಿದ್ದರೂ, ಪ್ರತಿ ಹುಡುಗನು ಸುಂದರವಾದ ಮೀನಿಗೆ ಬಲೆ ಹಾಕಲು ಬಲೆಯನ್ನ ಸಿದ್ಧಪಡಿಸಿಕೊಂಡು ತಯಾರಾಗಿರುತ್ತಾನೆ. ಇಷ್ಟಪಟ್ಟವಳು ಬಿದ್ದರು ಬೀಳದಿದ್ದರೂ ಅನುಕ್ಷಣ, ಅನುದಿನ ಶ್ರದ್ಧೆಯಿಂದ ಅವಳನ್ನ ಒಲಿಸಿಕೊಳ್ಳುವ ಪ್ರಯತ್ನ ಜಾರಿ ಯಲ್ಲಿರುತ್ತೆ. ಆಸೆ ಪಟ್ಟವಳು, ಮನಸ್ಸಿಗೆ ಬಂದು ಬಿಡದೇ ಕಾಡಿ ದವಳು, ಪುಟ್ಟ ಸ್ಮೈಲ್ ಕೊಟ್ಟು ದಿನವೆಲ್ಲ ಸಂಭ್ರಮಕ್ಕೆ ಕಾರಣಳಾದವಳು ಸಡನ್ ಆಗಿ ಶಾಕ್ ಕೊಟ್ಟರೇ ದೇವರೇ ಗತಿ!? ರಾಖಿ ಹಬ್ಬ ಅಂತ ಬಂದಿರುತ್ತೆ. ಕಾಲೇಜಿನ ಹುಡುಗರು ಕಾರಿಡಾರ್‌ನಲ್ಲಿ ಓಡಾಡಲು ಹೆದರುವ ದಿನ. ಪ್ರತಿದಿನ ಕಾರಿಡಾರ್ ಗಳಲ್ಲಿ ಹೀರೋಗಳ ತರ ಬಿಲ್ಡಪ್ ಕೊಡುತ್ತಿದ್ದವರು ಆ ದಿನ ಮಾತ್ರ ಜೀರೋ.

ಲಂಚ್ ಬ್ರೇಕ್‌ನಲ್ಲಿ ಕ್ಲಾಸಿನಿಂದ ಹೊರಬರದೆ ಮುಗ್ಧರಂತೆ, ವರ್ಷದ ಸಿಲಬಸ್ ಪೂರ್ತಿ ಒಂದೇ ದಿನಕ್ಕೆ ಓದಿ ಮುಗಿಸುವಂತೆ ಪೋಸ್ ಕೊಟ್ಟು ಸಂಜೆಗಾಗಿ ಕಾದುಕುಳಿತಿರುತ್ತಾರೆ. ಇನ್ನು ಹುಡುಗಿಯರ ವಿಚಾರಕ್ಕೆ ಬರೋಣ, ಬಹಳಷ್ಟು ಹುಡುಗಿಯರು ತುಂಬಾ ಜಾಣೆಯರು. ರಾಖಿಗೆ ಹತ್ತು ರುಪಾಯಿ ಬಂಡವಾಳ ಹಾಕಿ ಆರಾಽಸುತ್ತಿದ್ದ ಹೃದಯದ ಪ್ರೀತಿಗೆ ಅಂತ್ಯವಾಡಿಬಿಡುತ್ತಾರೆ. ಮೇರೇ ಜಾನ್ ಎಂದು ಹೇಳಲು
ಸಿದ್ಧವಿದ್ದವನ ಬಾಯ ಮೇರೇ ಬೆಹನ್ ಎನ್ನಿಸಿಬಿಡುತ್ತಾರೆ. ಇನ್ನೇನು ಕಾಲೇಜಿನಲ್ಲಿ ರೂಮರ್ ಬಂದಿದೆ ಪ್ರಪೋಸ್ ಮಾಡಿ ಬಿಡೋಣ ಎನ್ನುವಷ್ಟರ ಅವಳು ಕಟ್ಟಿದ ರಾಖಿಯಿಂದ ಬಾಹುಬಲಿಯ ದೇವಾಸೇನಾ ಆಗಬೇಕಾದವಳು ಕಟ್ಟಪ್ಪನಂತೆ ಅನ್ನಿಸಿಬಿಡ್ತಾಳೆ.

ಪ್ರೀತಿಸಿದವಳು ಈಗ ತಂಗಿಯಾದಳು, ಮುಂದೆ ತಂಗಿಯ ಗೆಳತಿಯರನ್ನ ಕದ್ದುಮುಚ್ಚಿ ನೋಡಲು ಪ್ರಾರಂಭಿಸುತ್ತಾನೆ. ಮತ್ತೊಂದು ಮೀನಿಗೆ ಬಲೆ ಹಾಕಲು ಪ್ರಯತ್ನ ಪಡುತ್ತಾನೆ. ಕೈಗೆ ದಾರ ಹೃದಯಕ್ಕೆ ಭಾರವಾದ ತಂಗಿಯಂತೆ ಪ್ರೇಯಸಿ ಯನ್ನ ಹ್ಯಾಂಡಲ್ ಹೇಗೆ ಮಾಡಬೇಕು ಎಂದು ಗೊತ್ತಾಗದೆ ತಬ್ಬಿಬ್ಬಾಗ್ತಾರೆ, ಹುಡುಗರ ಜೀವನ ಅಚಿದ್ರೆ ಹೀಗೆ ಇರುತ್ತೆ. ಹೌದು ಹೇಳೋದು ಮರೆತೆ, ಮುಂದಿನ ರಾಖಿ ಹಬ್ಬಕ್ಕೆ ಶುಭವಾಗಲಿ.

ಚೆಂದಕ್ಕೆ ಚೆಕ್ ಬೌ ಹಾಗಬಾರದು ಅಂದಕ್ಕೆ ಅಡ್ಡ ದಾರಿ ಅಡ್ಡೆಯಾಗಬಾರದು ಹುಡುಗಿಯರಿಗೆ ಸೌಂದರ್ಯ ಅನಿವಾರ್ಯ ಹೆಣ್ಣಿಗೆ ಗುಣ ಮತ್ತು ಚೆಂದ ಆಕೆಯನ್ನ ನೆಮ್ಮದಿಯೆಂಬ ರಸ್ತೆಗೆ ಕರೆದುಕೊಂಡು ಹೋಗುತ್ತೆ. ಸೌಂದರ್ಯವನ್ನ ಉಳಿಸಿಕೊಳ್ಳುವುದು ಮತ್ತು ಕಾಪಾಡಿಕೊಳ್ಳುವುದು ಪ್ರತಿ ಹುಡುಗಿಗೂ ಅನಿವಾರ್ಯ ಏಕೆಂದರೆ ಗುಣದ ಜೊತೆ ಚೆಂದ ವಿದ್ದರೆ ಗೌರವಿಸುವರ ಸಂಖ್ಯೆ ಜಾಸ್ತಿ ಇರುವ ಸಮಾಜ ನಮ್ಮದು. ಅಂದ ಚೆಂದವನ್ನ ಅವರವರ ಅವಶ್ಯಕತೆಗೆ ತಕ್ಕಂತೆ ಹುಡುಗಿಯರು ಕಾಪಾಡಿಕೊಳ್ತಾರೆ ಅದು ಜವಾಬ್ದಾರಿ. ನಾನು
ಹೇಳೋದನ್ನ ನೇರವಾಗಿ ಹೇಳ್ತಿನಿ ಕೇಳಿ, ಕೆಲವೂ ಹುಡುಗಿಯರಿರುತ್ತಾರೆ ಎಷ್ಟು ಬೇಕೋ ಅಷ್ಟು ಸಿಂಗರಿಸಿಕೊಂಡು, ಬ್ಯೂಟಿಯನ್ನ ಜವಾಬ್ದಾರಿಯಿಂದ ನಿರ್ವಹಿಸಿ ಬದುಕುವವರು. ಅವರ ಬಗ್ಗೆ ಖಂಡಿತವಾಗಲೂ ನನ್ನ ತಕರಾರಿಲ್ಲ.

ಇನ್ನೂ ಕೆಲವೇ ಕೆಲವು ಹುಡುಗಿಯರಿರುತ್ತಾರೆ ಅವಶ್ಯಕತೆಗಿಂತ ಜಾಸ್ತಿ ಮೇಕಪ್ ಮಾಡ್ತಾರೆ, ದಿನಕ್ಕೆ ಎರಡು ಅಥವಾ ಮೂರು ಸಲ ಹಾಕಬೇಕಾದ ಫೇಸ್ ವಾಶ್ ಮತ್ತು ಫೇಸ್ ಕ್ರೀಮ್ ಗಳನ್ನ ಗಂಟೆಗೊಮ್ಮೆ ಭಿಕ್ಷೆಯಂತೆ ಹಾಕ್ತಾರೆ. ಇದು ಅವರ ವೈಯಕ್ತಿಕ ವಿಚಾರ, ಅವರ ಹಿತದೃಷ್ಟಿಯಿಂದ ಒಂದು ಮಾತು ಹೇಳ್ತಿನಿ ಕೇಳಿ. ಪ್ರೀತಿಯಲ್ಲಿ ಬಿzಗ ಕೆಲವು ಹುಡುಗಿಯರು ಹುಡುಗ ನನ್ನೇ ಇಂಪ್ರೆಸ್ ಮಾಡಲು ಪ್ರತಿದಿನ ಪ್ರಯತ್ನಿಸುತ್ತಾರೆ. ಆರ್ಟಿಫಿಷಿಯಲ್ ಬ್ಯೂಟಿಯನ್ನ ಹುಡುಗನ ಮುಂದೆ ಪ್ರಸೆಂಟ್ ಮಾಡ್ತಾರೆ. ತಪ್ಪಲ್ಲ ಬಟ್ ಪಾಯಿಂಟ್ ಇಸ್ ನೀವು ಇಷ್ಟಪಡುವ ಹುಡುಗ ಕೇವಲ ನಿಮ್ಮ ಅಂದಕ್ಕಷ್ಟೇ ಫಿದಾ ಆಗಿದ್ದರೆ ಮಾತ್ರ ಹುಷಾರಾಗಿರಬೇಕು.

ನಿಮ್ಮ ಸೌಂದರ್ಯವನ್ನ, ನಿಮ್ಮ ಮುಗುಳ್ನಗೆಯನ್ನ, ನಿಮ್ಮ ನೋಟದ ತೀವ್ರತೆಯನ್ನ ಬಿಟ್ಟು ನಿಮ್ಮನ್ನ ಅನ್ ಕಂಡೀಷನಲ್ ಆಗಿ ಹುಡುಗ ಪ್ರೀತಿಸಿದರೆ ಅಂತಹ ಪ್ರೀತಿಗೆ ಎಕ್ಸ್‌ಪೇರಿ ಡೇಟ್ ಲೇಟ್ ಇರುತ್ತೆ. ಗೌರವಾನ್ವಿತ ಹುಡುಗಿಯರೇ, ನೀವು ಇಷ್ಟಪಡುವ ಹುಡುಗನ ಪ್ರೀತಿ ನೈಜ್ಯವಾದರೆ, ನಿಮ್ಮನ್ನ ಇಷ್ಟ ಪಡುವುದು ಪ್ರಾಮಾಣಿಕವಾಗಿದ್ದರೆ, ನೀವು ಅದೃಷ್ಟವಂತರು. ನಿಮ್ಮ ಹಿನ್ನಲೆಯೊಂದಿಗೆ ಸಂಭದವಿಲ್ಲದೆ, ನಿಮ್ಮ ಬದುಕಿನ ಪಾನಲ್ಲಿ ನಡೆದ ಘಟನೆಗಳನ್ನ ಕ್ಷಮಿಸುವ ದೊಡ್ಡ ಗುಣ, ಕೇರಿಂಗ್ ಜೊತೆ ನಿಮ್ಮನ್ನ ಕಾಪಾಡಿಕೊಳ್ಳುವ ಮೊಡುತನ , ನಿಮ್ಮ ಕ್ಯಾರೆಕ್ಟರ್ ನಿನ್ನ ಸ್ನೇಹಿತರು ಶಂಕಿಸಿದಾಗ ತಲೆ ಕೆಡಿಸಿಕೊಳ್ಳದೆ ನಿಮ್ಮನ್ನ ನಂಬುವ ಹೃದಯವಂತ ಹುಡುಗ ಸಿಕ್ಕರೇ, ನೀವು ಅದೃಷ್ಟವಂತರು ಏಕೆಂದರೆ ಬುದ್ಧಿವಂತ ಹುಡುಗರು ಸಿಗೋದು ತುಂಬಾ ಈಸಿ ಆದರೆ ಹೃದಯವಂತರು ಸಿಗುವುದು ತುಂಬಾ ಕಷ್ಟ.

ನಿಮ್ಮ ಬ್ಯೂಟಿಗೆ ಮಾತ್ರವಲ್ಲದೇ ನಿಮ್ಮ ವೀಕ್ ನೆಸ್ , ನಿಮ್ಮ ಮುಗ್ಧತೆ, ಕಣ್ಣಿರಾದಾಗ ಸಹನೆಯಿಂದ ಸಮಾಧಾನಪಡಿಸುವ ಒಳ್ಳೆಯತನ, ಅರ್ಥವಾಗದೇ ಮನಸ್ಸು ಖಿನ್ನತೆಗೆ ಒಳಪಟ್ಟಾಗ ಧೈರ್ಯ ತುಂಬುವ ವ್ಯಕ್ತಿತ್ವ ಇರುವ ಹುಡುಗ ಸಿಕ್ಕರೇ ನಿಮ್ಮ ಬಾಳಿನ ಪಯಣ ಯಶಸ್ವಿಯಾಗಿರುತ್ತದೆ. ಗುಡ್ ಲಕ್ !

error: Content is protected !!