Wednesday, 19th June 2024

ಬಿಜೆಪಿ ಜೋಡೆತ್ತಿನ ಗುರಿ ದಕ್ಷಿಣ ಭಾರತ

ಅಶ್ವತ್ಥಕಟ್ಟೆ

ranjith.hoskere@gmail.com

ಬಿಜೆಪಿ ವರಿಷ್ಠರ ಕಣ್ಣು ದಕ್ಷಿಣ ಭಾರತದ ಮೇಲೆ ಬಿದ್ದಿದೆ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆಯೆಂದರೆ ಇತ್ತೀಚಿಗೆ ರಾಜ್ಯಸಭೆಗೆ ನಡೆದ ನಾಲ್ಕು ನಾಮನಿರ್ದೇಶನ. ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ನಾಲ್ವರ ಪೈಕಿ ನಾಲ್ವರೂ, ದಕ್ಷಿಣ ಭಾರತದವರೇ ಆಗಿದ್ದಾರೆ.

ದೇಶದಲ್ಲಿರುವ 4120 ಶಾಸಕರ ಪೈಕಿ 1387 ಮಂದಿ ಕಮಲದ ಚಿಹ್ನೆಯಡಿಯೇ ಆರಿಸಿ ಬಂದವರು. 28 ರಾಜ್ಯಗಳ ಪೈಕಿ ಬಿಜೆಪಿ
ಅಥವಾ ಬಿಜೆಪಿ ಮಿತ್ರಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳ ಸಂಖ್ಯೆ 17. 2013ರಲ್ಲಿ ಕೇವಲ ಐದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಎಂಟು ವರ್ಷದ ಅವಽಯಲ್ಲಿ ಅದರ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದೆ. ಈ ಅಂಕಿ- ಅಂಶವನ್ನು ನೋಡಿದರೆ ಬಿಜೆಪಿ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ತನ್ನ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ಆದರೆ ‘ದಕ್ಷಿಣ ಭಾರತ’ವೊಂದನ್ನು ಮಾತ್ರ ಈ ತನಕವೂ ಭೇದಿಸಲು ಸಾಧ್ಯವಾಗಿಲ್ಲ ಎನ್ನುವ ಕೊರತೆಯೊಂದು ಇದ್ದೇ ಇದೆ. ಹೌದು, ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ ಗುಜರಾತ್ ಬಿಟ್ಟು ರಾಷ್ಟ್ರ ರಾಜಕೀಯಕ್ಕೆ ಬಂದಾಗಿನಿಂದ, ಬಿಜೆಪಿ ಏರುಗತಿ ಯಲ್ಲಿಯೇ ಸಾಗಿದೆ. ಸಂಘಟನೆಗೆ ಜನರೇ ಇಲ್ಲ ಎನ್ನುವ ಸ್ಥಿತಿಯಲ್ಲಿದ್ದ ಹಲವು ರಾಜ್ಯ ಗಳಲ್ಲಿ, ಪ್ರಚಂಡ ಬಹುಮತದೊಂದಿಗೆ ಅಽಕಾರಿ ಅನುಭವಿಸುತ್ತಿದೆ.

ಸ್ವಾತಂತ್ರ ಪೂರ್ವದಿಂದಲೂ ಕಮ್ಯೂನಿಸ್ಟರ, ಎಡಪಂಥೀಯರ ಹಿಡಿತದಲ್ಲಿಯೇ ಇದ್ದ ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿ ಮೇನಿಯಾ ಶುರುವಾಗಿದೆ. ಇಷ್ಟೆಲ್ಲ ಸಾಧನೆ ಮಾಡಿದ್ದರೂ, ದಕ್ಷಿಣ ಭಾರತದಲ್ಲಿ ಮಾತ್ರ ಬಿಜೆಪಿ ಈ ಹಂತದಲ್ಲಿಯೂ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ. ದಕ್ಷಿಣ ಭಾರತದ ಐದು ರಾಜ್ಯಗಳ ಪೈಕಿ ಕರ್ನಾಟಕ ಹೊರತುಪಡಿಸಿದರೆ ಉಳಿದೆಡೆ ಈಗಲೂ ಬಿಜೆಪಿ ಸಂಘಟನೆ ಹೇಳಿಕೊಳ್ಳುವಂತಿಲ್ಲ. ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳೇ ಹಿಡಿತ ಸಾಽಸುತ್ತಿವೆ.

ಈ ಹಂತದಲ್ಲಿಯೂ ಬಿಜೆಪಿಯ ಪ್ರಭುತ್ವ ಸಾಧನೆಗೆ ಪ್ರಾದೇಶಿಕ ಪಕ್ಷಗಳು ಸವಾಲುವೊಡ್ಡುತ್ತಿವೆ. ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೂ, ಅವುಗಳನ್ನು ಪಶ್ಚಿಮ ಭಾಗ ಎಂದು ಕರೆಯುವುದರಿಂದ, ದಕ್ಷಿಣ ಭಾರತವೆನ್ನು ವುದು ಈಗಲೂ ಬಿಜೆಪಿಗೆ ಕಬ್ಬಿಣದ ಕಡಲೆಯೇ. ಕೇವಲ ರಾಜ್ಯಗಳ ಅಧಿಕಾರವಲ್ಲ. ಲೋಕಸಭಾ ಚುನಾವಣೆಯನ್ನು ಗಮನಿಸಿದರೂ, ಬಿಜೆಪಿಗೆ ದಕ್ಷಿಣ ಭಾರತ ಆಗಿ ಬರುತ್ತಿಲ್ಲ. ದಕ್ಷಿಣ ಭಾರತದಿಂದ ಒಟ್ಟು 129 ಲೋಕಸಭಾ ಕ್ಷೇತ್ರಗಳಿವೆ. ಆದರೆ ಈ 129ರಲ್ಲಿ ಬಿಜೆಪಿಯ ಸಂಸದರು ಇರುವುದು 29 ಕ್ಷೇತ್ರದಲ್ಲಿ ಮಾತ್ರ (ಕರ್ನಾಟಕದಿಂದ 25, ತೆಲಂಗಾಣದಿಂದ 4). ಅಂದರೆ ಇನ್ನುಳಿದ ಮೂರು ರಾಜ್ಯಗಳಲ್ಲಿ ಬಿಜೆಪಿಯ ಸಾಧನೆ ‘ಶೂನ್ಯ’ವಾಗಿದೆ.

ಆದ್ದರಿಂದ ಇದನ್ನು ಗಮನದಲ್ಲಿರಿಸಿಕೊಂಡೇ ಇದೀಗ ಬಿಜೆಪಿ ‘ಆಪರೇಷನ್ ದಕ್ಷಿಣ ಭಾರತ’ ಆರಂಭಿಸಿದ್ದಾರೆ. ಇದಕ್ಕೆ ಮೊದಲ ಹೆಜ್ಜೆ ಯನ್ನಾಗಿ ತೆಲಂಗಾಣದಲ್ಲಿ ಬಿಜೆಪಿ ತನ್ನ ರಾಷ್ಟ್ರೀಯ ಕಾರ್ಯಕಾರಣಿ ಹಮ್ಮಿಕೊಂಡಿತ್ತು. ಕೆಲ ದಿನಗಳ ಹಿಂದೆ ನಡೆದ ಈ ಸಭೆಯಲ್ಲಿ, ಬಿಜೆಪಿಯ ಮುಖ್ಯ ಅಜೆಂಡಾ ದಕ್ಷಿಣ ಭಾರತದಲ್ಲಿ ಕಮಲ ಅರಳಿಸುವುದು ಹೇಗೆ ಎನ್ನುವುದು ಮಾತ್ರವೇ ಆಗಿತ್ತು. ಈ ಕಾರ್ಯಕಾರಿಣಿಯಲ್ಲಿ
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ನಡ್ಡಾ ಆದಿಯಾಗಿ ಎಲ್ಲರೂ ಮುಂದಿನ ಒಂದು ದಶಕದಲ್ಲಿ ದಕ್ಷಿಣ ಭಾರತದ ರಾಜ್ಯ ಗಳಲ್ಲಿಯೂ ಬಿಜೆಪಿ ತನ್ನ ಅಧಿಕಾರ ಸ್ಥಾಪಿಸಬೇಕು ಎನ್ನುವ ಬಗ್ಗೆ ಚರ್ಚಿಸಿದರು. ಈ ಗುರಿಯನ್ನು ಮುಟ್ಟುವ ಸಲುವಾಗಿಯೇ ಮೋದಿ ಹಾಗೂ ಅಮಿತ್ ಶಾ ಹೆಚ್ಚು ಒತ್ತನ್ನು ದಕ್ಷಿಣ ಭಾರತದತ್ತ ನೀಡುತ್ತಿದ್ದಾರೆ ಎನ್ನುವ ಮಾತುಗಳೂ ಇದೆ.

ಬಿಜೆಪಿ ವರಿಷ್ಠರ ಕಣ್ಣು ದಕ್ಷಿಣ ಭಾರತದ ಮೇಲೆ ಬಿದ್ದಿದೆ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆಯೆಂದರೆ ಇತ್ತೀಚಿಗೆ ರಾಜ್ಯಸಭೆಗೆ ನಡೆದ ನಾಲ್ಕು ನಾಮನಿರ್ದೇಶನ. ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ನಾಲ್ವರ ಪೈಕಿ ನಾಲ್ವರೂ, ದಕ್ಷಿಣ ಭಾರತದವರೇ ಆಗಿದ್ದಾರೆ. ಕನ್ನಡಿಗರಾದ ವಿರೇಂದ್ರ ಹೆಗ್ಡೆ, ಕೇರಳ ಮೂಲದ ಪಿ.ಟಿ. ಉಷಾ, ತಮಿಳು ನಾಡಿನ ಇಳಯರಾಜ ಹಾಗೂ ಆಂಧ್ರ ಪ್ರದೇಶ ಮೂಲದ ವಿಜಯ ಪ್ರಸಾದ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಮೂಲಕ ಆ ರಾಜ್ಯಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವ ಸಾಽಸುವ ಲೆಕ್ಕಾಚಾರ ದಲ್ಲಿದೆ.

ಮೋದಿ ಹಾಗೂ ಶಾ ಅವರು ಉತ್ತರ ಭಾರತದಲ್ಲಿ ಮಾಡಿದ್ದ ಯೋಜನೆಯನ್ನೇ ದಕ್ಷಿಣ ಭಾರತದಲ್ಲಿಯೂ ಮಾಡುವ ಮೂಲಕ, ಅಽಕಾರದ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ದಕ್ಷಿಣ ಭಾರತ, ಅದರಲ್ಲಿಯೂ ತಮಿಳುನಾಡು, ಅಖಂಡ ಆಂಧ್ರಪ್ರದೇಶ ಮತದಾ ರರ ಮನಃಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಉತ್ತರ ಪ್ಲಾನ್‌ಗಳು ವರ್ಕ್ ಔಟ್ ಆಗುವುದಿಲ್ಲ ಎನಿಸುತ್ತದೆ. ಆದ್ದರಿಂದ ಇಲ್ಲಿನ ಮತದಾರರನ್ನು ಯಾವ ರೀತಿ ಸೆಳೆದುಕೊಳ್ಳುತ್ತಾರೆ ಎನ್ನುವ ಕಾತರ ಬಿಜೆಪಿಯ ಪ್ರಮುಖರಲ್ಲಿಯೇ ಇದೆ.

ಇನ್ನು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ‘-ವರ್’ ಆಗಿರುವ ಏಕೈಕ ರಾಜ್ಯವೆಂದರೆ ಅದು ಕರ್ನಾಟಕ. ಆದ್ದರಿಂದ ತೆಲಂಗಾಣದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿಯೂ, ಕರ್ನಾಟಕದಲ್ಲಿ ಮುಂದಿನ ವರ್ಷ ಎದುರಾಗಲಿರುವ ವಿಧಾನಸಭಾ ಚುನಾವಣೆಯ  ತಯಾರಿ ಯನ್ನು ಪ್ರಮುಖವಾಗಿ ರಾಜ್ಯ ನಾಯಕರೊಂದಿಗೆ ವರಿಷ್ಠರು ಚರ್ಚಿಸಿದ್ದಾರೆ. ಈ ವೇಳೆ ರಾಜ್ಯ ನಾಯಕರಿಗೆ ಹೊಸ ಟಾಸ್ಕ್ ನೀಡುವು ದಕ್ಕಿಂತ ಹೆಚ್ಚಾಗಿ ‘ನಾವು ಹೇಳಿದಂತೆ ಚುನಾವಣೆ ನಡೆಸಿ’. ‘ಯೋಜನೆ ನಮ್ಮದ್ದಾಗಿರುತ್ತದೆ, ನೀವು ಅದನ್ನು ಜಾರಿ ಮಾಡಬೇಕಷ್ಟೇ’ ಎನ್ನುವ ಮೂಲಕ ಮುಂಬರಲಿರುವ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ನಾಯಕರನ್ನು ನೆಚ್ಚಿಕೊಳ್ಳದೇ, ಕೇಂದ್ರದ ನಾಯಕರೇ ಪ್ರಮುಖ ಪಾತ್ರವಹಿಸುವ ಸಂದೇಶವನ್ನು ರವಾನಿಸಿದ್ದಾರೆ.

ಮೂಲಗಳ ಪ್ರಕಾರ ಕರ್ನಾಟಕ ಚುನಾವಣಾ ಉಸ್ತುವಾರಿಯನ್ನು ಸ್ವತಃ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಗಲಿಗೆ ಹಾಕಿಕೊಂಡಿದ್ದಾರೆ. ಇದೇ ಸಮಯದಲ್ಲಿ ಗುಜರಾತ್‌ನಲ್ಲಿ ಚುನಾವಣೆ ನಡೆದರೂ, ಅಲ್ಲಿಗೆ ಬೇರೊಬ್ಬರನ್ನು ಉಸ್ತುವಾರಿಯನ್ನು ನೇಮಿಸಿ ಕರ್ನಾಟಕದಲ್ಲಿ ಮೋದಿ ಆಂಡ್ ಟೀಂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿ ಕೊಳ್ಳುವುದನ್ನು ಗಮನಿಸಿದರೆ ಇಲ್ಲಿನ ಚುನಾವಣೆಯ ಗಂಭೀರತೆ ತಿಳಿಯಲಿದೆ.

ಬಿಜೆಪಿಯು ತನ್ನ ಸಂಘಟನಾ ಬಲವನ್ನು ಈ ಹಿಂದೆ ಬಹುತೇಕ ರಾಜ್ಯಗಳಲ್ಲಿ ಹೆಚ್ಚಿಸಿಕೊಳ್ಳಲು ಮಾಡಿದ್ದು, ‘ಆಪರೇಷನ್ ಕಮಲ’ದ ದಾರಿ. ದಕ್ಷಿಣ ಭಾರತದಲ್ಲಿಯೂ ಅದೇ ದಾರಿಯನ್ನು ಮುಂದುವರಿಸುವ ಸಾಧ್ಯತೆಯೇ ದಟ್ಟವಾಗಿದೆ. ಆದ್ದರಿಂದ ಪ್ರಾದೇಶಿಕ ಪಕ್ಷಗಳ ಪ್ರಮುಖ ನಾಯಕರನ್ನು ಬಿಜೆಪಿಯತ್ತ ಸೆಳೆಯುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ. ಈಗಾಗಲೇ ಇತರ ಪಕ್ಷಗಳಿಂದ ಕರೆದಿರುವ ಐವರನ್ನು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿದ್ದು, 16 ಕೇಂದ್ರ ಸಚಿವರು ವಲಸಿಗರೇ ಆಗಿದ್ದಾರೆ. ‘ಅಧಿಕಾರ’ ಆಸೆಯನ್ನು ತೋರಿಸಿ, ಪಕ್ಷದತ್ತ ಸೆಳೆದುಕೊಂಡು ಬಳಿಕ ತಮ್ಮ ಪಕ್ಷ ಸಂಘಟನೆಯನ್ನು ಹೆಚ್ಚಿಸಿಕೊಳ್ಳುವ ರಣನೀತಿ ಬಿಜೆಪಿಯದ್ದು ಎಂದರೆ ತಪ್ಪಾಗುವುದಿಲ್ಲ. ಒಮ್ಮೆ ಈ ರೀತಿ ಪ್ರಾದೇಶಿಕ ಪಕ್ಷಗಳ ಪ್ರಮುಖರು ವಲಸೆ ಬಂದರೆ, ಆ ಪಕ್ಷಗಳು ತಮ್ಮ ಬಲವನ್ನು ಕಳೆದುಕೊಳ್ಳುತ್ತವೆ. ಬಿಜೆಪಿ ಆ ಭಾಗದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತದೆ.

ಆದರೆ ‘ಪ್ರಬಲ’ ನಾಯಕ ಎನಿಸಿಕೊಂಡವರು, ತನ್ನ ಪ್ರಾಬಲ್ಯವನ್ನು ಬಳಸಿಕೊಂಡು ಪಕ್ಷವನ್ನು ಸಂಘಟಿಸಿದರೂ, ಅದಾದ ಬಳಿಕ ‘ಪಕ್ಷದ ವರಿಷ್ಠ’ರ ತೀರ್ಮಾನವನ್ನು ಕೇಳಲೇಬೇಕು ಎನ್ನುವ ಮೂಲಕ ಆ ರಾಜ್ಯಗಳಲ್ಲಿಯೂ ತಮ್ಮ ಹಿಡಿತವನ್ನು ಸಾಽಸುತ್ತ ಹೋಗುತ್ತದೆ ಎನ್ನುವುದು ಸ್ಪಷ್ಟ. ದೇಶದ 17 ರಾಜ್ಯಗಳಲ್ಲಿ ನೇರ ಅಥವಾ ಮಿತ್ರಪಕ್ಷಗಳೊಂದಿಗೆ ಅಽಕಾರ ನಡೆಸುತ್ತಿರುವ ಬಿಜೆಪಿ ಪಾಲಿಗೆ ದಕ್ಷಿಣ
ಭಾರತ ಎನ್ನುವುದು ಈಗ ಹಂತದಲ್ಲಿಯೂ ‘ಗಗನ ಕುಸುಮ’ ವಾಗಿಯೇ ಉಳಿದಿರುವುದು ಬಿಜೆಪಿ ವರಿಷ್ಠರ ಚಿಂತೆಗೆ ಕಾರಣವಾಗಿದೆ. ಆದ್ದರಿಂದ ಇದೀಗ ಉತ್ತರ ಭಾರತಕ್ಕಿಂತ ಹೆಚ್ಚಾಗಿ ದಕ್ಷಿಣ ಭಾರತದಲ್ಲಿಯೇ ತನ್ನ ಸಂಘಟನಾ ಬಲವನ್ನು ಪ್ರಯೋಗಿಸಲು ತೀರ್ಮಾನಿಸಿ ಈ ಹೆಜ್ಜೆಯನ್ನು ಇಟ್ಟಿರುವುದು ಸ್ಪಷ್ಟ.

ಈ ಬಗ್ಗೆ ಈ ಹಂತದಲ್ಲಿಯೇ ಕಾಂಗ್ರೆಸ್ ಎಚ್ಚೆತ್ತುಕೊಳ್ಳದಿದ್ದರೆ, ದಕ್ಷಿಣ ಭಾರತದಲ್ಲಿಯೂ ಕಾಂಗ್ರೆಸ್ ಸ್ಥಿತಿ ಹೀನಾಯವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಉತ್ತರ ಭಾರತದ ರಾಜ್ಯಗಳ ಚುನಾವಣಾ ‘ತಂತ್ರಗಾರಿಕೆ’ ದಕ್ಷಿಣ ಭಾರತದ ಮತದಾರರನ್ನು ಒಲೈಸುವುದಕ್ಕೆ
ಆಗುವುದಿಲ್ಲ ಎನ್ನುವುದು ಬಿಜೆಪಿ ಅರ್ಥ ಮಾಡಿಕೊಳ್ಳಬೇಕಿದೆ.

error: Content is protected !!