Saturday, 27th July 2024

ಮೊದಲು ರಾಜಕೀಯ ಪರಿಷ್ಕರಣೆಯಾಗಲಿ

ರಾವ್ ಭಾಜಿ

journocate@gmail.com

ನನ್ನ ಮಾತೃಭಾಷೆಯಾದ ಕನ್ನಡವನ್ನು ಸ್ಪಷ್ಟವಾಗೇ ಓದಬನಾದರೂ, ನಾಡಗೀತೆಯನ್ನು ಕುಮಾರಸ್ವಾಮಿ ಓದಿದ ರೀತಿಯಲ್ಲಿ ನನಗೆ ಓದಲು ಬರುವುದಿಲ್ಲ. ಮಲಯಾಳಿಗಳಂತೆ ಇಂಗ್ಲಿಷ್ ಮಾತನಾಡಲೂ ನನಗೆ ಬಾರದು.

ಬೆಂಗಳೂರಿನ ಹಳೆಯ ಬಡಾವಣೆಗಳಂದಾದ ಗುಟ್ಟಹಳ್ಳಿಯಲ್ಲಿ ಚಿಕ್ಕಂದಿನಲ್ಲಿ ಕಂಡದ್ದು. ಅಲ್ಲಿಯ ತರುಣಿಯೊಬ್ಬಳ ಕಡೆ ನೋಟ ಬೀರಿದ್ದಕ್ಕೆ ಹೊರಗಡೆಯಿಂದ ಅಲ್ಲಿಗೆ ಬಂದಿದ್ದ ಯುವಕನಿಗೆ ಸ್ಥಳೀಯ ಪುಂಡರು ಧಮ್ಕಿ ಹಾಕಿದ್ದರು. ಆಕೆ ಅಪೇಕ್ಷಿಸ ದೆಯೇ ಆಕೆಯ ರಕ್ಷಣೆಯ ಜವಾಬ್ದಾರಿ ಹೊರುವ ಕಾಯಕ. ಆಕೆಗೆ ಯಾವುದೇ ಅಪಾಯ ಸಂಭವಿಸಿರದಿದ್ದರೂ ಅಪಾಯವಾಗ ಬಹುದೆಂದು ಊಹಿಸಿ ಆಕೆಯ ಬೆನ್ನಿಗೆ ನಿಲ್ಲುವುದು. ಆಗಂತುಕ ಕೆಟ್ಟ ದೃಷ್ಟಿಯಿಂದ  ಕೆಯನ್ನು ನೋಡಿದಂತೆ ಆ ರೌಡಿಗಳ ಭ್ರಮೆಯಷ್ಟೆ ಇದ್ದಿರಬಹುದು.

ಭ್ರಮೆಯಿಂದ ಜನಿಸಿದ ಅಪನಂಬಿಕೆಯ ಕಾರಣಕ್ಕೆ ಹೊರಗಿನವ ಬೈಗುಳ ತಿನ್ನುವ ಪರಿಸ್ಥಿತಿ. ಅದೇ ಬಡಾವಣೆಯ ಹುಡುಗಿ ಯಾದರೂ ಅವಳ ಪರಿಚಯವೇನೂ ಅವರಿ ಗಿರುವುದಿಲ್ಲ. ಆಗಂತುಕ ಅವಳತ್ತ ದೃಷ್ಟಿ ಹಾಯಿಸಿದ್ದು ನಿಜವಾಗಿದ್ದರೂ, ಅದು ಅವಳ ಗಮನಕ್ಕೇ ಬಂದಿರದೆ ಅವಳ ಪಾಡಿಗೆ ಅವಳು ತಲೆಬಗ್ಗಿಸಿ ನಡೆಯುತ್ತಿರುತ್ತಾಳೆ.

ಹಾಗಿದ್ದೂ, ಅವಳ ಸಂರಕ್ಷಣೆಗೆ ಅಯಾಚಿತ ವಾಗಿ ಮುಂದಾಗುವುದಕ್ಕೆ ಆಕೆ ಅಬಲೆ ಯೆನ್ನುವ ಅವರ ಪೂರ್ವ ನಿರ್ಧಾರ ಮುಖ್ಯ ಕಾರಣ. ಆಕೆಯ ಮೇಲೆ ಸ್ವಾಮ್ಯ ಸಾಧಿಸುವ ಉತ್ಕಟ ಬಯಕೆ ಮತ್ತೊಂದು ಕಾರಣ. ಹಾಗಂತ ಅದೇ ಹೆಣ್ಣಿನ ಬಗ್ಗೆ ಅವರು ಅದೇ ಸಂದರ್ಭದ ಮತ್ತೊಂದು ಸಂದರ್ಭದ ವಕ್ರದೃಷ್ಟಿ ಬೀರಲಾರರೆಂಬ ವಾರೆಂಟಿ ಕೊಡಲಾ ಗದು. ಸಂದರ್ಭ ಬೇಡಿದರೆ ಆಕೆಯನ್ನು ಅವರ ಸುಪರ್ದಿಗೆ ತಾತ್ಕಾಲಿಕವಾ ಗಿಯೂ ಒಪ್ಪಿಸಲಾಗದು.

ಇಂತಹ ಪ್ರಸಂಗ ಮಾವಳ್ಳಿಯಲ್ಲೂ ಆಗಬಹುದು, ಪೈಪ್‌ಲೈನ್ ಅಥವಾ ಬೇರಾವುದೇ ಪ್ರದೇಶದಲ್ಲೂ ಸಂಭವಿಸಬಹುದು. ಕುವೆಂಪು ವಿರಚಿತ ನಾಡಗೀತೆಗೆ ರೋಹಿತ್ ಚಕ್ರ ತೀರ್ಥರಿಂದ ಉಂಟಾಯಿತೆನ್ನಲಾದ ಅಪಚಾರಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಧಮ್ಕಿ ಹಾಕಿದ್ದನ್ನು ಜನ ನೋಡಿದ್ದಾರೆ. ರಾಷ್ಟ್ರ ಕವಿಗೆ ಮಾಡಿದ ಅವಮಾನ ಅವರಲ್ಲಿ ಉದ್ವೇಗದ ಜ್ವಾಲೆ ಯನ್ನೆಬ್ಬಿಸಿದೆ. ಅವರನ್ನು ಬೇರೊಂದು ವಿಷಯ ಕೆರಳಿಸುವವರೆಗೂ ರೋಹಿತ್ ಅವರಿಂದ ದೂರವಿರುವುದು ಒಳಿತು. ಎಂದಿನ ಮಾತು ಹೊರಡಲಾರದಷ್ಟು ಕೋಪ. ಆ ಕೋಪದಿಂದಲೇ, ನಾರಿಕೇಳ ಪಾಕದಷ್ಟು ಸರಳವಾದ ನಾಡಗೀತೆಯನ್ನೂ ಅವರು ಹಾಡುವುದಿರಲಿ, ಓದಲಾಗದೆ ತಡವರಿಸಿದ್ದು. ಅವರ ಉದ್ವಿಗ್ನತೆ ಶಮನವಾಗುವವರೆಗೂ ಸುಮ್ಮನಿದ್ದು, ನಂತರ ಅವರಿಗೆ ಓದಲು ಅವಕಾಶ ಕೊಡಬಹುದಿತ್ತೇನೊ! ಆದರೆ, ಅವರು ತೊದಲಿದ್ದೇ ತಡ ವೀಡಿಯೋ ವೈರಲ್ ಮಾಡಿದರು.

ಒಂದು ವೇಳೆ, ಕೋಪ ಇಳಿದ ನಂತರವೂ ‘ಜಯಭಾರತ ಜನನಿಯ ತನುಜಾತೆ’ ಎಂದು ಓದಲಿಕ್ಕಾಗದಿದ್ದರೆ? ಆ ಸಂಭವನೀಯತೆ ನನ್ನನ್ನು ಚಿಂತೆಯ ಚಿತೆಗೆ ದೂಡುತ್ತದೆ. ನನಗೂ ನಾಲಗೆ ಹೊರಳದ ಸಂದರ್ಭಗಳು ಎದುರಾಗಿವೆ. ಉದಾಹರಣೆಗೆ, ಅವರನ್ನು ಅನುಕರಣೆ ಮಾಡಲು ನನಗೆ ಬರುವುದಿಲ್ಲ. ಅವರು ಓದಿದಂತೆ ನನಗೆ ಓದಲಿಕ್ಕೆ ಸಾಧ್ಯವಿಲ್ಲ.

ನನ್ನ ಮಾತೃಭಾಷೆಯಾದ ಕನ್ನಡವನ್ನು ಸ್ಪಷ್ಟವಾಗೇ ಓದಬನಾದರೂ, ನಾಡಗೀತೆಯನ್ನು ಕುಮಾರಸ್ವಾಮಿ ಓದಿದ ರೀತಿಯಲ್ಲಿ ನನಗೆ ಓದಲು ಬರುವುದಿಲ್ಲ. ಮಲಯಾಳಿಗಳಂತೆ ಇಂಗ್ಲಿಷ್ ಮಾತನಾಡಲೂ ನನಗೆ ಬಾರದು. ಬಾಳೆಹಣ್ಣಿಗೆ ತಮಿಳಿನಲ್ಲಿ ವಾಳಪಳ ಎನ್ನುತ್ತಾರೆ. ಅದನ್ನು ತಮಿಳರಂತೆ ಉಚ್ಚರಿಸಲು ನನ್ನ ನಾಲಗೆ ಬಾಬಾ ರಾಮ ದೇವರ ಬಾಡಿಯಂತೆ ಅಷ್ಟದಿಕ್ಕು ಗಳಲ್ಲಿ ತಿರುಗಬೇಕು.

ವಿವಿಧ ಭಾಷೆಗಳಲ್ಲಿನ ಕೆಲವು ಶಬ್ದಗಳ ಉಚ್ಚಾರಣೆಗೆ ಸಂಬಂಧಪಟ್ಟಂತೆ ನನ್ನ ನ್ಯೂನತೆಗಳು ಅನೇಕ. ಯಾರದ್ದೇ ಉಚ್ಚಾರಣಾ ಸಂಬಂಧಿತ ಸಮಸ್ಯೆಗಳನ್ನು ಆಡಿಕೊಳ್ಳುವುದು ಸಾಧುವಲ್ಲ. ಆದರೆ, ಅಂತಹ ಸಮಸ್ಯೆ ಇರುವವರನ್ನು ಸಲ್ಲದ ಜಾಗದಲ್ಲಿ ಕೂಡಿ ಸುವುದು ತಪ್ಪು. ಆಸ್ಟ್ರೇಲಿಯಾ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ನಿನಲ್ಲಿ ವಾರ್ತಾವಾಚಕನನ್ನಾಗಿ ನನ್ನನ್ನು ನಾನು ಊಹಿಸಿ ಕೊಳ್ಳಲೂ ಸಾಧ್ಯವಾಗದು.

ಅಂತಹ ಸಾಹಸಕ್ಕೆ ನಾನು ಬಿಲ್ಕುಲ್ ಕೈ ಹಾಕಲಾರೆ. ಅಂದರೆ, ಆ ಕೆಲಸಕ್ಕೆ ನಾನು ಅರ್ಹನಲ್ಲವೆಂದಲ್ಲ. ಆ ಉದ್ಯೋಗಕ್ಕೆ ಬೇಕಾದ ಸಾಮರ್ಥ್ಯವನ್ನು ನಾನು ಪಡೆದಿಲ್ಲ. ಕುಮಾರಸ್ವಾಮಿಯಾದಿಯಾಗಿ ನಮ್ಮ ವಿವಿಧ ಪಕ್ಷಗಳ ಬಹುತೇಕ ನಾಯಕರುಗಳಿಗ್ಯಾರಿಗೂ ಆ ಅರಿವಿಲ್ಲ. ಆ ಅರಿವು ಮೂಡುವವರೆಗೂ ಅವರೆಲ್ಲರನ್ನೂ ಅನುಭವಿಸಬೇಕಾದ ಕೆಟ್ಟ ಕರ್ಮ ಪ್ರಜೆಗಳದ್ದು. ನ್ಯಾಯಯುತ ವಲ್ಲದ್ದನ್ನೂ, ನಮಗೆ ಸಮ್ಮತವಲ್ಲದ್ದನ್ನೂ ಅನುಭವಿಸಬೇಕಾದ ಒತ್ತಡಕ್ಕೆ ನಾವೆಲ್ಲ ಸಿಕ್ಕಿದ್ದೇವೆ.

ಸಕಲ ಜನರ ಶ್ರೇಯಸ್ಸಿಗೂ ಶ್ರಮಿಸಬೇಕಾದ ಶಾಸಕಾಂಗ- ಕಾರ್ಯಾಂಗ ಜೋಡಿ ತನ್ನ ಮೂಲೋದ್ದೇಶವನ್ನೇ ಮರೆತು ಸಾರ್ವ ಜನಿಕರೆಲ್ಲರಿಗೂ ಸೇರಿದ ವಿವಿಧ ಸಂಪನ್ಮೂಲಗಳನ್ನು ಕೊಳ್ಳೆಹೊಡೆಯುತ್ತಾ ತಮ್ಮ ವೈಯಕ್ತಿಕ ಭಂಡಾರವನ್ನು ತುಂಬಿಕೊಳ್ಳುವು ದನ್ನೇ ನಿತ್ಯಕಾಯಕವನ್ನಾಗಿ ಮಾಡಿಕೊಂಡಿರುವುದು ಅತ್ಯಾಚಾರದ ಪರಮಾವಧಿ.

ರೇಪನ್ನು ತಪ್ಪಿಸಿಕೊಳ್ಳಲಿಕ್ಕಾಗದಿದ್ದರೆ ಅದನ್ನು ಆನಂದಿಸಬೇಕೆಂಬ ಹಳೆಯ ಮಾತನ್ನೇ ವಿಧಾನಸಭಾ ಸಭಾಧ್ಯಕ್ಷರ ಪೀಠವನ್ನು ಬೆಚ್ಚಗೆ ಮಾಡೆದ್ದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಬಾಯಲ್ಲೂ ಕೇಳಿದ್ದೇವೆ. ಅದು ರೇಪ್ ಸಂತ್ರಸ್ತರಿಗೆ ಕಾನೂನಿನ ನೆರವು ಸಿಗಲಾರದೆಂಬ ಒಂದು ಬಗೆಯ ಉದ್ಘೋಷಣೆ!

ಸಾರ್ವಜನಿಕರನ್ನೂ ಸೇರಿದಂತೆ ಅವರ ಉಳಿದೆಲ್ಲ ಸಂಪನ್ಮೂಲಗಳನ್ನು ಕಾಮುಕರ ಉನ್ಮಾದದಲ್ಲಿ ಭೋಗಿಸುವವರನ್ನು
ರೋಗಗ್ರಸ್ತರಲ್ಲ ಎನ್ನದಾದೀತೇ? ವಿಖ್ಯಾತ ಸಾಮಾಜಿಕ ಮನಶಾಸಜ್ಞ ಎರಿಕ್ ಫೇಮ್ ಹೇಳುವಂತೆ ಕೆಲವು ರೋಗಗಳನ್ನು ಸಮಾಜ ರೋಗಗಳೆಂದೇ ಪರಿಗಣಿಸುವುದಿಲ್ಲ. ಹಾಗೆಂದು ರೋಗವಿಲ್ಲವೆಂತಲ್ಲ. ಚಿಕಿತ್ಸೆಯ ಮೂಲಕವಷ್ಟೇ ರೋಗದ ಇರುವಿಕೆಯನ್ನು ಧೃಢಪಡಿಸಬಹುದು. ಮೋಜಿಗಾಗಿ ಸಿಂಗಪೂರ್‌ಗೆ ಹಾರುವ ಕುಮಾರಸ್ವಾಮಿಯೇ ಆಗಲಿ, ಬಾಣಂತನಕ್ಕೆ ಕಬಿನಿ ಹಿನ್ನೀರಿಗೆ ಹೊರಡುವ ಸಿದ್ದರಾಮಯ್ಯರೇ ಆಗಲಿ, ವೃದ್ಧಾಪ್ಯದ ನೆರಳಿನಿಂದ ಬೇರ್ಪಡಲು ಜಿಂದಾಲ್‌ನಲ್ಲಿ ಆಶ್ರಯ ಪಡೆಯುವ
ಯಡಿಯೂರಪ್ಪನವರೇ ಆಗಲಿ ತಮ್ಮನ್ನು ತಾವು ಸ್ವಸ್ಥರೆಂದೇ ಭಾವಿಸಿಕೊಂಡಿದ್ದಾರೆ.

ಸ್ವಪರಿವಾರದ ಉಲ್ಬಣಿತ ಲಾಲಸೆಯೂ ಮನೋರೋಗವೆಂದು ಅವರಿಗೆ ಹೇಳುವವರಾರು? (ಈ ಮೂವರೂ ಮಾಜಿಯಾಗ ಲೊಲ್ಲದ ಹಾಲಿಗಳನ್ನು ಮೀರಿಸುವಂತೆ ಹಾಲಿ ಮುಖ್ಯಮಂತ್ರಿಯೂ ವರ್ತಿಸುತ್ತಿರುವುದರಿಂದಲೇ ಪಕ್ಷದ ಮುಖಂಡರು ಅವರನ್ನೆಲಿಡಬೇಕೋ ಅಲ್ಲಿಟ್ಟಿದ್ದಾರೆ ಎಂಬುದು ಗೋಡೆಯೊಳಗಿಂದ ತೂರಿಬಂದ ಸುದ್ದಿ.) ಮಾಜಿಗಳು ಶಾಶ್ವತವಾಗಿ ಮಾಜಿ ಯಾಗಿ, ಹಾಲಿಯೂ ಮಾಜಿಯಾಗಿ, ಹೊಸ ನೀರು ಹರಿದು ಬಂದರಷ್ಟೆ ನಿತ್ಯ ರೇಪ್‌ನಿಂದ ನರಳುತ್ತಿರುವ, ಮೈತ್ರಿಕೂಟದಿಂದ ಹೊರಗುಳಿದ ಸಾರ್ವಜನಿಕರಿಗೆ ತುಸುವಾದರೂ ನೆಮ್ಮದಿ.

ನನ್ನ ಸ್ನೇಹಿತರೊಬ್ಬರು ವೃತ್ತಿಯಲ್ಲಿ ಎಂಜಿನಿಯರ್. ಅಮೆರಿಕದ ಫ್ಲೋರಿಡಾದಲ್ಲಿ ಸಂಸ್ಕೃತ ಆನ್‌ಲೈನ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ. ಆಯುರ್ವೇದದಲ್ಲಿ ಅವರಿಗೆ ಪರಿಶ್ರಮವಿದೆ. ಆಯುರ್ವೇದ ಶಾಸ್ತ್ರದಲ್ಲಿ ರೋಗನಿದಾನ ಕ್ರಮಕ್ಕೆ ವ್ಯವಸ್ಥಿತ ರೂಪ ಕೊಡುವ ನಿಟ್ಟಿನಲ್ಲಿ ಕಾರ್ಯ ನಿರತರಾಗಿದ್ದಾರೆ. ಚಿಕಿತ್ಸೆಗಾಗಿ ಬರುವ ರೋಗಿಗೆ ‘ಅ’ ಶಬ್ದ ಉಚ್ಚರಿಸಲು ಹೇಳಿ ಆತ/ಆಕೆ ಅದನ್ನು ಉಚ್ಚರಿಸುವುದರ ಮೇರೆಗೆ ಅವರ ಅನಾರೋಗ್ಯದ ಮೂಲವನ್ನು ಪತ್ತೆಹಚ್ಚುವ ಮಾರ್ಗವದು.

‘ಅ’ಕಾರ ‘ಹ’ಕಾರಗಳಿಗೇನು ವ್ಯತ್ಯಾಸವಿದೆ, ಅಡಗೂರು ವಿಶ್ವನಾಥರನ್ನು ನಾನು ಹಡಗೂರು ವಿಶ್ವನಾಥ್ ಎಂದೇ ಕರೆಯುತ್ತೇನೆ, ಮಹದೇವ, ಮಗದೇವನಾದರೇನು, ಮೋದಿಯನ್ನು ಮೋಡಿ ಎನ್ನಲಿಕ್ಕೇನು ಅಡ್ಡಿ, ನನ್ನ ಬಾಯಿಂದ ಅವನು ಹಿಬ್ರಾಯಿಮ್ ಆಗಿಯೇ ಹೊರಬೀಳುತ್ತಾನೆ, ಏನಂತೆ ಎಂದೆಲ್ಲ ವಾದಿಸುವವರ ಜತೆ ನನ್ನ ತಕರಾರೇನೂ ಇಲ್ಲ, (ಮತ್ತಿನಲ್ಲಿಲ್ಲದೆ) ಹಾಗೆ ಉಚ್ಚರಿ ಸುವವರನ್ನು (ಖಾಸಗಿಯಾಗೂ) ಗೇಲಿಮಾಡಹೋಗುವುದಿಲ್ಲ. ಆದರೆ ಎಲ್ಲಿ ಮೂಲ ಶಬ್ದಗಳ ಅರ್ಥಬದ್ಧ ಉಚ್ಚಾರಣೆ ತಪ್ಪಾದರೆ ಎಡವಟ್ಟಾದೀತೋ ಅಂತಹ ಕಡೆಗಳಲ್ಲಿ ಅವರನ್ನು ನೇಮಕ ಮಾಡುವುದನ್ನು ವಿರೋಧಿಸುತ್ತೇನೆ.

ಸಾಂಸ್ಕೃತಿಕ-ಸಂಸ್ಕಾರಿಕ ಕಾರಣಗಳಿಗೆ ತಪ್ಪಾಗಿ ಉಚ್ಛರಿಸುವವರ ಸಮಸ್ಯೆಯನ್ನು ಬಗೆಹರಿಸಲು ಮಾರ್ಗಗಳಿವೆ. ಅವುಗಳಲ್ಲಿ ಸಂಸ್ಕೃತ ಕಲಿಕೆಯೂ ಒಂದು. ಆದರೆ, ಮನೋರೋಗಿ ನಾಯಕರಿಗೆ ಅದು ಅಪಥ್ಯ. ಸಂಸ್ಕೃತದಿಂದ ಕಡಿಮೆ ಖರ್ಚಿನಲ್ಲಿ ಆರೋಗ್ಯವನ್ನೂ ಸಂಪಾದಿಸಬಹುದು. ಆದರೆ ಅದಕ್ಕೂ ರೋಗಿಷ್ಠರಿಂದಲೇ ಅಡ್ಡಿ. ಸಂಸ್ಕೃತದಿಂದ ಸಂಸ್ಕೃತ-ವಂಚಿತರನ್ನು ದೂರವಿಡುವುದಕ್ಕೆ ಸಂಸ್ಕೃತ ಕಲಿತವರು ಕಾರಣರಲ್ಲ. ಸಂಸ್ಕೃತವನ್ನು ನೈಜ ಅದಕ್ಕೆ ಕಾರಣ. ಬಡವರ್ಗದ ಜನ ಅಗ್ಗದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಂಸ್ಕೃತ ಸಹಾಯಕ. ಅದನ್ನು ವಿರೋಧಿಸುತ್ತಿರುವವರು ಜನಸಾಮಾನ್ಯರನ್ನು ಅಕ್ಷರ-ಆರೋಗ್ಯಗಳೆರಡರಿಂದಲೂ ದೂರವಿಡುತ್ತಿದ್ದಾರೆ.

ಸಂಸ್ಕೃತ ಕಲಿಕೆಯೆಂದರೆ ವಿದ್ಯಾಭ್ಯಾಸದ ಕೇಸರೀಕರಣವೆಂಬ ವ್ಯವಸ್ಥಿತ ಅಪಪ್ರಚಾರ ಬೇರೆ. ಹಾಗೆಂದು ಇವರಲ್ಲಿ ಬಹುತೇಕರು ಕನ್ನಡವನ್ನೂ ನೆಟ್ಟಗೆ ಬಳಸುವ ಸಾಮರ್ಥ್ಯವಿರುವವರಲ್ಲ. ಕುಮಾರಸ್ವಾಮಿಯಂತೂ ತಮ್ಮ ಭದ್ರಕೋಟೆಯೆಂದು ಅವರು ಭಾವಿಸಿರುವ ಮೂರೂ-ಮತ್ತೊಂದು ಜಿಲ್ಲೆಗಳಿಗೆ ಕುವೆಂಪು ಚಿಂತನೆಯನ್ನು ಸೀಮಿತಗೊಳಿಸಲು ನೋಡುತ್ತಿದ್ದಾರೆ.

ಚುನಾವಣೆ ಸಮೀಪಿಸಿದಂತೆ ಆ ಕೋಟೆಯ ಬಿರುಕುಗಳನ್ನು ಮುಚ್ಚಲು ಕುವೆಂಪು ಅವರನ್ನು ಬಳಸಿಕೊಳ್ಳುವ ವಿಫಲ ಯತ್ನ ಕುಮಾರಸ್ವಾಮಿಯದ್ದು. ಪುಟ್ಟಪ್ಪನವರಿಗೆ ಅಪಚಾರ, ಅವರನ್ನು ಜಾತಿ-ಪ್ರದೇಶಗಳ ಸೀಮಿತತೆಗೆ ಒಳಪಡಿಸುವುದರಲ್ಲಿದೆ. ಕಲುಷಿತವಾಗುತ್ತಿರುವ ಸಾಹಿತ್ಯಕ್ಷೇತ್ರವನ್ನು ಒದ್ದು ಒಳಗೆ ಹಾಕಬೇಕು ಎನ್ನುವಂಥ ಧೂರ್ತನುಡಿಗಗಳ ಮೂಲಕ ಮತ್ತಷ್ಟು ಕಲುಷಿತಗೊಳಿಸುವ ಸ್ವಾಮಿಯ ಪ್ರಯತ್ನವನ್ನು ನೈಜ ಜಾತ್ಯತೀತರೆಲ್ಲರೂ ಖಂಡಿಸಬೇಕು.

ಜಯಭಾರತ ಜನನಿಯ ತನುಜಾತೆ ಎಂಬ ಉದಾತ್ತ ನುಡಿಗಳನ್ನು ಹೇಳುವಾಗ ತ್ರಾಸಪಡುವ ಕುಮಾರಸ್ವಾಮಿಯವರ ಬಾಯಿಂದ ಬೈಗುಳಗಳು ಪಟಪಟನೆ ಉದುರುವುದು ನೋಡಿದರೆ ಅವರ ಆರೋಗ್ಯದ ಬಗ್ಗೆ ನಾವೆಲ್ಲರೂ ಆತಂಕ ಪಡಬೇಕಾಗಿದೆ. ನಾಲಗೆ ಯನ್ನು ನೋಡಿ ಜ್ವರವನ್ನು ಪತ್ತೆಹಚ್ಚುವುದು ಹಳೆಯ ಕ್ರಮ. ನಾಲಗೆಯಿಂದ ಉದುರಿ(ರ)ದ ಮಾತುಗಳನ್ನು ನೋಡಿ ಅನಾ ರೋಗ್ಯವನ್ನು ಪತ್ತೆ ಮಾಡುವುದು ಇನ್ನೂ ಹಳೆಯ ಪದ್ಧತಿ.

ಪಕ್ಷಾತೀತವಾಗಿ, ಅನಾರೋಗ್ಯಕ್ಕೊಳಗಾದ ನಾಯಕರೆಲ್ಲರನ್ನೂ ಕಡ್ಡಾಯ ನಿವೃತ್ತಿಗೊಳಿಸಬೇಕಾದ ಆದ್ಯ ಕರ್ತವ್ಯ ನಾಡಿನ ಜನತೆಯ ದ್ದಾಗಿದೆ. ಪಠ್ಯದ ಪರಿಷ್ಕರಣೆ ಸುಸೂತ್ರವಾಗಿ ನೆರವೇರಲು ರಾಜಕೀಯದ ಪರಿಷ್ಕರಣೆಯಾಗಬೇಕಿದೆ

error: Content is protected !!