Friday, 21st June 2024

ವರ್ಷ ತುಂಬುವ ಹೊತ್ತಗೆ ಹೊತ್ತಗೆ ಬರುತ್ತಿರುವ ಹರ್ಷ

ಪರಿಶ್ರಮ

parishramamd@gmail.com

‘ವಿಶ್ವವಾಣಿ’ ಪತ್ರಿಕೆಯಲ್ಲಿ ಅಂಕಣಕರಾನಾಗಿ ಒಂದು ವರ್ಷ. ನಾನು ತುಂಬಾ ಗೌರವಿಸುವ ಮತ್ತು ಅಭಿಮಾನಿಸುವ ಶ್ರೀಯುತ ವಿಶ್ವೇಶ್ವರ ಭಟ್ಟರವರ ಸಾರಥ್ಯದಲ್ಲಿ ಮತ್ತು ಅವರ ಅಂಕಣದ ಜತೆಯಲ್ಲೇ, ಅವರ ಅಂಕಣ ಪ್ರಕಟವಾಗುವ ದಿನವೇ ನಾನೂ ಅಂಕಣ ಬರೆಯುವುದು ನನ್ನ ಸೌಭಾಗ್ಯ. ಕಳೆದ 20 ವರ್ಷಗಳಿಂದ ನಾನು ವಿಶ್ವೇಶ್ವರ ಭಟ್ಟರ ಅತಿ ದೊಡ್ಡ ಅಭಿಮಾನಿ, ಅವರು ‘ವಿಜಯ ಕರ್ನಾಟಕ’ ಪತ್ರಿಕೆ ಮತ್ತು ‘ಕನ್ನಡಪ್ರಭ’ದಲ್ಲಿದ್ದಾಗ ಪ್ರತಿವಾರ ಕಚೇರಿಗೆ ಭೇಟಿ ನೀಡಿ ಅವರನ್ನು ಮಾತಾನಾಡಿಸಿ ಕೊಂಡು ಬಂದರೇ ಒಂದು ರೀತಿಯ ಸಮಾಧಾನ.

ಅವರ ಅಕ್ಷರಗಳ ಮೋಡಿಗೆ, ಅವರ ಬರಹಗಳ ತೀವ್ರತೆಗೆ ನಾನು ಫಿದಾ ಆಗಿದ್ದೇನೆ. ಬದುಕನ್ನು ಹೊಸ ರೀತಿಯಲ್ಲಿ ನೋಡುವ ಧೈರ್ಯವನ್ನು ಒಂದು ತಲೆಮಾರಿಗೆ ಕೊಟ್ಟ ಯಶಸ್ಸು ಭಟ್ಟರದ್ದು. ನನ್ನಂತಹ ಕರ್ನಾಟಕದ ನೂರಾರು ಯುವ ಬರಹಗಾರರು ಅವರ ಸೂರ್ತಿಯಿಂದಲೇ ಮೇಲೆ ಬಂದವರು. ಅವರೊಂದಿಗೆ ಅಂಕಣ ಬರೆಯಬೇಕೆಂಬ ಆಸೆ ಮತ್ತು ಬಯಕೆ ನನಗೆ 5-10 ವರ್ಷಗಳಿಂದ ಇತ್ತು. ಆದರೆ, ಅಂಕಣ ಕೇಳುವಷ್ಟು ಧೈರ್ಯ ನನಗಿರಲಿಲ್ಲ. ಒಂದು ವರ್ಷದ ಹಿಂದೆ ‘ವಿಶ್ವವಾಣಿ’ ಕಚೇರಿಗೆ ಭೇಟಿ ನೀಡಿದ್ದೆ. ಅಂದು ಭಟ್ಟರನ್ನು ಮಾತಾನಾಡಿಸುವಾಗ ಅವರೇ ಸ್ವತಃ ‘ಒಂದು ಸೂರ್ತಿದಾಯಕ ಅಂಕಣ ಬರೆಯಿರಿ ಪ್ರದೀಪ್’ ಎಂದು ಹೇಳಿದರು.

ಅಂದು ನನಗೆ ಪ್ರಪಂಚವೇ ಗೆದ್ದ ಸಂಭ್ರಮ. ಬರೆಯಲು ಪ್ರಾರಂಭಿಸಿದೆ. ಸಹಜವಾಗಿ ಮಾತಿನಲ್ಲಿ ಜನರನ್ನು ತಲುಪಿದವನು ನಾನು. ‘ಪರಿಶ್ರಮ ನೀಟ್ ಅಕಾಡೆಮಿ’ಯ ಮುಖಾಂತರ ಸಾವಿರಾರು ವೈದ್ಯ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ಮಾಡುತ್ತಿರುವ ನನ್ನಂಥವರಿಗೆ ಅಂಕಣ ಬರೆಯುವುದು ಸವಾಲೇ ಸರಿ. ಆದರೂ ಒಂದಷ್ಟು ಶ್ರದ್ಧೆ ಮತ್ತು ಏಕಾಗ್ರತೆ ಬರಹದ ಮೇಲೆ ವಿನಿಯೋಗಿಸಿದ ಪರಿಣಾಮ ಆ ಅಂಕಣ ಬರಹ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ.

‘ಪರಿಶ್ರಮ’ ಎಂಬ ಹೆಸರಲ್ಲೇ ಪ್ರಕಟವಾಗುವ ಈ ಅಂಕಣ ಕರ್ನಾಟಕದ ಮೂಲೆ ಮೂಲೆ ತಲುಪಿದೆ ಎಂಬ ನಂಬಿಕೆ ನನ್ನದು. ಸಾವಿರಾರು ಯುವಕರಿಗೆ ಈ ಅಂಕಣ ದಾರಿದೀಪವಾಗಿದೆ ಎಂಬ ಪ್ರಶಂಸೆಯ ಮಾತುಗಳು ಎಲ್ಲೆಡೆಯಿಂದ ಕೇಳಿ ಬಂದಿದೆ. ಪ್ರತಿವಾರ ಅಂಕಣ ಬಂದ ನಂತರ ಜನರಿಂದ ಬರುವ, ಬರುತ್ತಿರುವ ಪ್ರತಿಕ್ರಿಯೆ ಅದ್ಭುತವಾದದ್ದು. ಮಾತುಗಾರನ ಕೈಯಲ್ಲಿ, ಪೆನ್ನನ್ನು ಹಿಡಿಸಿ ಬರೆಯಿಸಿದ ಯಶಸ್ಸು ಶ್ರೀಯುತ ವಿಶ್ವೇಶ್ವರ ಭಟ್ಟರದ್ದು.

ಇದೀಗ ‘ಪರಿಶ್ರಮ’ವೆಂಬ ಅಂಕಣ ಬರಹಗಳ ಸಂಗ್ರಹ, ಅದೇ ಹೆಸರಿನಲ್ಲಿ ಪುಸ್ತಕವಾಗಿ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಪುಸ್ತಕಕ್ಕೆ ಹೆಚ್ಚು ಬೇಡಿಕೆ ಬಂದಿದೆ. ನಾಡಿನೆಲ್ಲೆಡೆಯಿಂದ ಸರಿಸುಮಾರು ಮೂರು ಸಾವಿರ ಪುಸ್ತಕಗಳಿಗೆ ಮುಂಗಡ ಬುಕಿಂಗ್ ಆಗಿದೆ. ಬಿಡುಗಡೆಗೂ ಮುನ್ನ ಒಂದು ಪುಸ್ತಕಕ್ಕೆ ಈಮಟ್ಟಿಗಿನ ಬೇಡಿಕೆ ಬಂದಿರುವುದು ಜನರು ನನ್ನ ಮೇಲೆ ಇಟ್ಟಿರುವ
ಪ್ರೀತಿಗೆ ಸಾಕ್ಷಿ ಎಂಬುದು ನನ್ನ ಆಶಯ, ಬಯಕೆ ಮತ್ತು ನಂಬಿಕೆ.

ಕರ್ನಾಟಕದ ಬಹಳಷ್ಟು ಯುವ ಪತ್ರಕರ್ತರಿಗೆ ಹಾಗೂ ನನ್ನಂತಹ ಬರಹಗಾರನಿಗೆ ವೇದಿಕೆ ಕೊಟ್ಟು ಭಟ್ಟರು ಆಧುನಿಕ ಪತ್ರಿ ಕೋದ್ಯಮದ ಪಿತಾಮಹರು. ಅವರ ಬೆಂಬಲವೇ ನನ್ನಂತಹ ಬಹಳಷ್ಟು ವ್ಯಕ್ತಿಗಳಿಗೆ ಸೂರ್ತಿ. ಈ ಒಂದು ವರ್ಷ ನನ್ನ ಪಯಣ ಬರಹಗಾರನಾಗಿ ಅದ್ಭುತವಾದದ್ದು. ಪರಿಶ್ರಮ ನೀಟ್ ಅಕಾಡೆಮಿಯ ಮುಖಾಂತರ ನಾಲ್ಕು ವರ್ಷಗಳ ಹಿಂದೆ ಸಂಸ್ಥೆ ಪ್ರಾರಂಭಿಸಿ ದಾಗ ಧೈರ್ಯವೊಂದೇ ಬಂಡವಾಳ; ಗೆಲ್ಲುತ್ತೇನೆಂಬ ಭರವಸೆಯೇ ನಮ್ಮ bank balance ಮತ್ತೆ ಯಾವುದೂ ನಮ್ಮೊಂದಿಗೆ ಇರಲಿಲ್ಲ.

ಮೊದಲನೆಯ ವರ್ಷ 60 ವಿದ್ಯಾರ್ಥಿಗಳಲ್ಲಿ, 48 ವಿದ್ಯಾರ್ಥಿಗಳು ತೇರ್ಗಡೆಯಾದಾಗ, ವೈದ್ಯಕೀಯ ಪ್ರವೇಶಗಳಿಸಿದಾಗ, ಕೋಚಿಂಗ್ ಸೆಂಟರ್ ಇತಿಹಾಸದಲ್ಲೇ ಒಂದು ಇತಿಹಾಸವನ್ನು ಸೃಷ್ಟಿ ಮಾಡಿದ್ದೆವು. ನಂತರ 130 ವಿದ್ಯಾರ್ಥಿಗಳಲ್ಲಿ, 88 ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಪಡೆದಾಗ ಮತ್ತೊಂದು ದಾಖಲೆಗೆ ನಾವು ಸಾಕ್ಷಿಯಾಗಿದ್ದೆವು. ನಂತರ 240 ವಿದ್ಯಾರ್ಥಿಗಳಲ್ಲಿ 217 ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಲಭಿಸಿತು. ಈ ಸಾಲಿನಲ್ಲಿ 530 ವಿದ್ಯಾರ್ಥಿಗಳು ದೇಶದ ನಾನಾ ಕಾಲೇಜುಗಳಲ್ಲಿ ವೈದ್ಯಕೀಯ ಪ್ರವೇಶ ಪಡೆದಿದ್ದಾರೆ.

ವಿಶೇಷವೇನೆಂದರೆ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಸಾತ್ವಿಕ್ ಎಂಬ ವಿದ್ಯಾರ್ಥಿ AIIMS, Delhi ಯಲ್ಲಿ ಪ್ರವೇಶ ಪಡೆದಿ ದ್ದಾರೆ. ದೇಶದ ನಂಬರ್ 1 ವೈದ್ಯಕೀಯ ಕಾಲೇಜಗಳಾಗಿರುವ AIIMSನಲ್ಲಿ ಪ್ರವೇಶ ಪಡೆಯುವುದು ಅಷ್ಟು ಸುಲಭದ ವಿಷಯ ವಲ್ಲ. ನಮ್ಮ ದೇಶದ ಎರಡನೆಯ Top ಮೆಡಿಕಲ್ ಕಾಲೇಜು JIPMER, Pondicherry ಯಲ್ಲಿ ನಮ್ಮ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳಾದ ಪ್ರಜ್ವಲ್ ಮತ್ತು ಸಮರ್ಥ ಪ್ರವೇಶ ಪಡೆದಿದ್ದಾರೆ.

ನಮ್ಮ ದೇಶದ ಮೂರನೆ Top ಮೆಡಿಕಲ್ ಕಾಲೇಜಾಗಿರುವ JIPMER, Karaikal ನಲ್ಲಿ ಇಬ್ಬರು ವಿದ್ಯಾರ್ಥಿಗಳಾದ ವಿನಾಯಕ ಬಂಡಾ ಮತ್ತು ಪ್ರಜ್ವಲ್‌ರವರು ಪ್ರವೇಶ ಪಡೆದಿದ್ದಾರೆ. ರಮೇಶ ಎಂಬ ವಿದ್ಯಾರ್ಥಿಯೂ Guwahat ಯಲ್ಲಿ ಪ್ರವೇಶ ಪಡೆದಿದ್ದಾರೆ. ಇಂದುಶ್ರೀ ಮತ್ತು ಸಂಜನಾ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ AIIMS, Mangalagiri ಯಲ್ಲಿ ಪ್ರವೇಶ ದಾಖಲಾಗಿದ್ದಾರೆ ಮತ್ತು ಸೌಹಾರ್ದ ಎಂಬ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿದ್ದಾರೆ.

AIIMS, Patna ದಲ್ಲಿ ಚಂದನ್ ಎಂಬ ವಿದ್ಯಾರ್ಥಿ, AIIMS, Nagpur ನಲ್ಲಿ, ಲಿಖಿತ್ ಎಂಬ ವಿದ್ಯಾರ್ಥಿ ಪ್ರವೇಶ ಪಡೆದಿದ್ದಾರೆ. ಸರಿಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ ಮತ್ತು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ನಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇಷ್ಟೆಲ್ಲ ಏಕೆ ಹೇಳಿದೆನೆಂದರೆ, ಕೋಚಿಂಗ್ ಸೆಂಟರ್ ಮುಖ್ಯಸ್ಥ ನಾಗಿ ಮತ್ತು ಒಬ್ಬ ಅಂಕಣಕಾರನಾಗಿ ಇಷ್ಟೊಂದು ವ್ಯಕ್ತಿಗಳಿಗೆ ನೆರವಾಗಬಲ್ಲೆನಲ್ಲಾ ಎಂಬ ಬಗ್ಗೆ ನನ್ನೊಳಗೇ ಸಾರ್ಥಕ ಭಾವ ಮೂಡುತ್ತಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.

ದಯವಿಟ್ಟು ಯಾರು ಅನ್ಯಥ ಭಾವಿಸಬೇಡಿ.ಕರ್ನಾಟಕ ಜನತೆಯ ಮನದಲ್ಲಿ ನಾನು already build ಆಗಿದ್ದೇನೆ ಎಂಬ ನಂಬಿಕೆ ನನ್ನದು. Buildup ಕೊಡುವ ಅವಶ್ಯಕತೆ ಇಲ್ಲವೆಂದು ಭಾವಿಸಿದೆ. ಏನೇ ಆಗಲಿ, ನಿಮ್ಮ ಪ್ರೀತಿ ಮುಂದುವರಿಯಲಿ ಅಷ್ಟೆ.

 
Read E-Paper click here

error: Content is protected !!