Friday, 12th July 2024

ತಮ್ಮದೇ ಸರ್ಕಾರದಲ್ಲಿ ‘ನಡುಗಡ್ಡ’ ಅದರಾ ಯಡಿಯೂರಪ್ಪ

ರಂಜಿತ್ ಎಚ್. ಅಶ್ವತ್ಥ

ಯಡಿಯೂರಪ್ಪ ಅವರ ಹಿಡಿತ ರಾಜ್ಯ ಬಿಜೆಪಿಯಲ್ಲಿ ಕಡಿತವಾಗುತ್ತಿಿದ್ದಂತೆ, ಅಷ್ಟೇ ವೇಗದಲ್ಲಿ ಇಲ್ಲಿ ತಮ್ಮ ಅದಿಪತ್ಯ ಸ್ಥಾಾಪಿಸಿಕೊಳ್ಳಲು ಸಂತೋಷ್ ಓಡಾಡುತ್ತಿಿದ್ದಾಾರೆ. ಕೇಂದ್ರ ಬಿಜೆಪಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು, ರಾಜ್ಯದಲ್ಲಿ ತಮ್ಮ ಆಪ್ತರನ್ನು ಆಯಕಟ್ಟಿಿನ ಸ್ಥಳದಲ್ಲಿ ಕೂರಿಸಲು ತವಕಿಸುತ್ತಿಿದ್ದಾಾರೆ.

‘ಈ ರಾಜ್ಯದ ಮುಖ್ಯಮಂತ್ರಿಿಯಾಗಿ ಯಾಕಾದರೂ ಅಧಿಕಾರ ಸ್ವೀಕರಿಸಿದೆನೋ…’
ಈ ಮಾತನ್ನು ಹೇಳಿದ್ದು ಕರ್ನಾಟಕದಲ್ಲಿ ಬಿಜೆಪಿಯ ಅಸ್ವಿಿತ್ಥವೇ ಇಲ್ಲದಿರುವಾಗ, ಪಕ್ಷದ ಬಾವುಟ ಕಟ್ಟಿಿ ಬಿಜೆಪಿಯನ್ನು ಅಧಿಕಾರಕ್ಕೆೆ ತಂದ ಬಿ.ಎಸ್. ಯಡಿಯೂರಪ್ಪ ಅವರು. ರಾಜ್ಯದಲ್ಲಿ ಬಿಜೆಪಿ ಮತ್ತೊೊಮ್ಮೆೆ ಅಧಿಕಾರಕ್ಕೆೆ ಬಂದು ಯಡಿಯೂರಪ್ಪನವರೇ ಮುಖ್ಯಮಂತ್ರಿಿಯಾಗಿದ್ದಾಾರೆ. ಇಷ್ಟಾಾದರೂ ರಾಜ್ಯ ಬಿಜೆಪಿಯಲ್ಲಿ ಬಿಎಸ್‌ವೈ ಒಂದು ರೀತಿ ‘ದ್ವೀಪ’ವಾಗುತ್ತಿಿದ್ದಾಾರೆಯೇ ಎನ್ನುವ ಪ್ರಶ್ನೆೆ ಶುರುವಾಗಿದೆ.

ಹೌದು, ಬಿಜೆಪಿ ಎಂದರೆ ಉತ್ತರ ಭಾರತ ಎನ್ನುವ ಕಾಲದಲ್ಲಿ ದಕ್ಷಿಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆೆ ತರುವಲ್ಲಿ, ಯಡಿಯೂರಪ್ಪ ಹಾಗೂ ಅನಂತಕುಮಾರ ಅವರ ಶ್ರಮದ ಬಗ್ಗೆೆ ಪ್ರತಿಯೊಬ್ಬ ಬಿಜೆಪಿಗರಿಗೂ ಗೊತ್ತಿಿದೆ. ಲಿಂಗಾಯತ ಸಮುದಾಯವನ್ನು ಬೆನ್ನಿಿಗೆ ಇಟ್ಟುಕೊಂಡಿದ್ದರಿಂದ ಬಿಎಸ್‌ವೈ ಬಿಜೆಪಿಯಲ್ಲಿ ‘ಮಾಸ್‌ಲೀಡರ್’ ಆಗಿಯೂ ಮುಂದುವರಿದಿದ್ದಾಾರೆ. ಇಷ್ಟಾಾದರೂ ಬಿಜೆಪಿಯನ್ನು ಅಧಿಕಾರಕ್ಕೆೆ ತಂದ ಹೋರಾಟಗಾರ ಯಡಿಯೂರಪ್ಪ ಅವರಲ್ಲಿದ್ದ ‘ಪವರ್’, ಇಂದಿನ ನೂರು ದಿನದ ಸಿಎಂ ಯಡಿಯೂರಪ್ಪ ಅವರಲ್ಲಿ ಉಳಿದಿಲ್ಲ.

ಒಂದೆಡೆ ಕಟ್ಟಿಿ ಬೆಳೆಸಿದ ಪಕ್ಷದ ಹಿಡಿತ ತಮ್ಮ ಕೈಯಿಂದ ತಪ್ಪುುತ್ತಿಿದೆ ಎನ್ನುವ ಆತಂಕ, ಅಧಿಕಾರದಲ್ಲಿದ್ದರೂ ಯಾವುದೇ ಪ್ರಮುಖ ನಿರ್ಧಾರಗಳನ್ನು ತಗೆದುಕೊಳ್ಳಲು ಆಗುತ್ತಿಿಲ್ಲ ಎನ್ನುವ ಬೇಸರ. ತನ್ನ ಆಪ್ತರಿಗೆ ಸಿಗಬೇಕಿದ್ದ ಎಲ್ಲ ಹುದ್ದೆೆಗಳು ಮತ್ತೊೊಬ್ಬರ ಪಾಲಾಗುತ್ತಿಿವೆ ಎನ್ನುವ ಅಸಮಾಧಾನ. ಈ ಎಲ್ಲದರ ಮಿಶ್ರಣವೆನ್ನುವಂತೆ ಹುಬ್ಬಳ್ಳಿಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ ಅವರ ‘ಈ ರಾಜ್ಯದ ಮುಖ್ಯಮಂತ್ರಿಿಯಾಗಿ ಯಾಕಾದರೂ ಅಧಿಕಾರ ಸ್ವೀಕರಿಸಿದೆನೋ’ ಎನ್ನುವ ಈ ಹೇಳಿಕೆ.

ರಾಜ್ಯದಲ್ಲಿ ಮೈತ್ರಿಿ ಸರಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆೆ ಬರುವುದು ಖಚಿತವಾಗುತ್ತಿಿದ್ದಂತೆ, ಮುಖ್ಯಮಂತ್ರಿಿ ಯಡಿಯೂರಪ್ಪ ಅವರಿಗಿಂತ ಹೆಚ್ಚಾಾಗಿ ಅವರೊಂದಿಗೆ ಕಾಣಿಸಿಕೊಳ್ಳುತ್ತಿಿದ್ದ ಆಪ್ತರು ಹೆಚ್ಚು ಕನಸು ಕಂಡಿದ್ದರು. 2006ರ ಕೇಂದ್ರದ ಹೈಕಮಾಂಡ್‌ಗೂ ಇಂದಿನ ಹೈಕಮಾಂಡ್‌ಗೂ ಬಹಳ ವ್ಯತ್ಯಾಾಸವಿದೆ ಎನ್ನುವುದು ಯಡಿಯೂರಪ್ಪ ಆಪ್ತರಿಗೆ ಗೊತ್ತಿಿದ್ದರೂ, ಬಿಎಸ್‌ವೈ ಮನಸು ಮಾಡಿದರೆ ಸಚಿವ ಸ್ಥಾಾನ ಅಥವಾ ಪಕ್ಷದ ಆಯಕಟ್ಟಿಿನ ಸ್ಥಾಾನ ಸಿಗುವುದು ಖಚಿತ ಎನ್ನುವ ಲೆಕ್ಕಾಾಚಾರದಲ್ಲಿದ್ದರು. ಯಡಿಯೂರಪ್ಪ ಅವರು ಸಹ, ತಮ್ಮ ಎಲ್ಲ ಆಪ್ತರಿಗೆ ಅಲ್ಲದಿದ್ದರೂ ಕೆಲವರಿಗೆ ಕೊಡಿಸುವ ಮೂಲಕ ತಮ್ಮ ತಂಡ ಉಳಿಸಿಕೊಳ್ಳಬಹುದು ಎನ್ನುವ ಲೆಕ್ಕಾಾಚಾರವನ್ನು ಹಾಕಿದ್ದರು.

ಆದರೆ ಬಿಜೆಪಿ ರಾಷ್ಟ್ರಾಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಯಡಿಯೂರಪ್ಪ ಅವರ ಈ ಲೆಕ್ಕಾಾಚಾರವನ್ನು ತಲೆಕೆಳಗೆ ಮಾಡುವ ಮೂಲಕ, ಅವರನ್ನು ಒಬ್ಬಂಟಿಯಾಗಿಸಿದ್ದಾಾರೆ. ಇಂದಿಗೂ ಬಿಎಸ್‌ವೈ ಜತೆ ಆಪ್ತರು ಉತ್ತಮ ಸಂಬಂಧ ಹೊಂದಿದ್ದರೂ, ಆಪ್ತರಿಗೆ ಯಾವುದೇ ಸ್ಥಾಾನ ಸಿಗದೇ ಇರುವುದರಿಂದ ‘ರೆಕ್ಕೆೆ ಇಲ್ಲದ ಹಕ್ಕಿಿಯ ಪರಿಸ್ಥಿಿತಿ’ ರೀತಿ ಯಡಿಯೂರಪ್ಪ ಆಪ್ತ ಬಳಗದ್ದಾಾಗಿದೆ.

ಸಚಿವ ಸಂಪುಟ ವಿಸ್ತರಣೆ ವೇಳೆ ಯಡಿಯೂರಪ್ಪ ಅವರು ತಮ್ಮ ಲಿಸ್‌ಟ್‌ ನೀಡಿದ್ದರೂ, ಅದನ್ನು ಹೆಚ್ಚು ಗಣನೆಗೆ ತಗೆದುಕೊಳ್ಳದೇ ಪಕ್ಷದ ವರಿಷ್ಠರು ಪಕ್ಷಕ್ಕೆೆ ಬೇಕಾದ ಶಾಸಕರಿಗೆ ಸಚಿವ ಸ್ಥಾಾನದ ಪಟ್ಟ ನೀಡಿತ್ತು. ಬಳಿಕ ಯಡಿಯೂರಪ್ಪ ಅವರು ತಮಗೆ ಬೇಕಾದವರಿಗೆ ಆಯಕಟ್ಟಿಿನ ಇಲಾಖೆ ನೀಡಲು ಸಿದ್ಧತೆ ನಡೆಸಿಕೊಂಡಿದ್ದರೂ, ಪಕ್ಷದ ವರಿಷ್ಠರು ಇದಕ್ಕೆೆ ಕೊಕ್ಕೆೆ ಹಾಕಿ ಯಾರಿಗೆ ಯಾವ ಖಾತೆ ನೀಡಬೇಕೆಂದು ತಾವೇ ನಿರ್ಧರಿಸಿ, ‘ಇಮೇಲ್’ ಮೂಲಕ ಯಡಿಯೂರಪ್ಪ ಅವರ ಸಚಿವ ಸಂಪುಟ ಸಹೋದ್ಯೋೋಗಿಗಳಿಗೆ ಖಾತೆಯನ್ನು ಹಂಚಿದ್ದರು. ದೆಹಲಿ ನಾಯಕರ ಈ ನಡೆ ಯಡಿಯೂರಪ್ಪ ಹಾಗೂ ಅವರ ಆಪ್ತ ಬಳಗಕ್ಕೆೆ ಸುತಾರಾಂ ಇಷ್ಟವಿಲ್ಲದಿದ್ದರೂ, ಅನಿವಾರ್ಯವಾಗಿ ಒಪ್ಪಿಿಕೊಳ್ಳಬೇಕಾಯಿತು.

ಯಡಿಯೂರಪ್ಪ ಅವರ ವಿರೋಧ ನಡುವೆಯೂ ಕೆಲವರನ್ನು ಸಂಪುಟದಲ್ಲಿ ಸೇರಿಸಲು ಪ್ರಮುಖವಾಗಿ, ಬಿಎಸ್‌ವೈ ಅವರನ್ನು ಪಕ್ಷದ ವರಿಷ್ಠರ ಹಿಡಿತಕ್ಕೆೆ ತಗೆದುಕೊಳ್ಳಬೇಕು ಎನ್ನುವ ಕಾರಣಕ್ಕೆೆ. ವರಿಷ್ಠರ ಈ ಪ್ಲಾಾನ್, ಇದೀಗ ಒಂದು ಹಂತಕ್ಕೆೆ ಯಶಸ್ವಿಿಯೂ ಆಗಿದೆ. ಪ್ರಮುಖವಾಗಿ ರಾಜ್ಯದಲ್ಲಿ 17 ಸಚಿವರಿದ್ದೂ, ಬಹುತೇಕ ಸಚಿವರು ಯಡಿಯೂರಪ್ಪ ಅವರಿಗಿಂತ ಹೆಚ್ಚಾಾಗಿ ಕೇಂದ್ರದ ವರಿಷ್ಠರ ಅಥವಾ ರಾಜ್ಯ ಬಿಜೆಪಿಯನ್ನು ತಮ್ಮ ಹಿಡಿತಕ್ಕೆೆ ಪಡೆಯುವ ನಿಟ್ಟಿಿನಲ್ಲಿ ತಂತ್ರ ರೂಪಿಸುತ್ತಿಿರುವ ಸಂತೋಷ್ ಜಿ ಅವರ ಒಡನಾಟ ಹೊಂದಿದ್ದಾಾರೆ. ರಾಜ್ಯದಲ್ಲಿ ನೆರೆ ಬಂದಾಗ ಇಳಿ ವಯಸ್ಸಿಿನಲ್ಲಿಯೂ ಯಡಿಯೂರಪ್ಪ ಸತತ ಪ್ರವಾಸ ನಡೆಸಿದರೂ, ಅವರೊಂದಿಗೆ ಯಾವೊಬ್ಬ ಸಚಿವರು ಸಾಥ್ ನೀಡಲಿಲ್ಲ. ಈಗಲೂ ರಾಜ್ಯ ಸರಕಾರ ನೆರೆಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆೆಸ್ ನಾಯಕರು ಮುಗಿಬಿದ್ದರೂ, ಮುಖ್ಯಮಂತ್ರಿಿಗಳ ನೆರವಿಗೆ ಪಕ್ಷದ ಯಾವ ನಾಯಕರು ಬಾರದಿರುವುದು ಯಡಿಯೂರಪ್ಪ ಅವರು ಏಕಾಂಗಿಯಾಗಿರುವುದನ್ನು ಸಾಬೀತುಪಡಿಸಲು ಮತ್ತಷ್ಟು ಪುಷ್ಟಿಿ ನೀಡುತ್ತಿಿದೆ.

ಯಡಿಯೂರಪ್ಪ ಅವರಿಗೆ ಇದೀಗ ಇಡೀ ಸರಕಾರವನ್ನು ನಿಯಂತ್ರಿಿಸುವುದು ಕಷ್ಟಸಾಧ್ಯ ಎನ್ನುವ ಸಬೂಬು ನೀಡಿ ಮೂರು ಉಪಮುಖ್ಯಮಂತ್ರಿಿ ಸ್ಥಾಾನವನ್ನು ಪಕ್ಷದ ವರಿಷ್ಠರು ಸೃಷ್ಟಿಿಸಿದರು. ಡಿಸಿಎಂ ಹುದ್ದೆೆ ಸೃಷ್ಟಿಿ ಯಡಿಯೂರಪ್ಪ ಅವರಿಗೆ ಇಷ್ಟವಿಲ್ಲದಿದ್ದರೂ, ಶಾ ಅವರು ಪಟ್ಟು ಹಿಡಿದು ಸೃಷ್ಟಿಿಸಿದರು. ಒಂದು ಹಂತದಲ್ಲಿ ಯಡಿಯೂರಪ್ಪ ಅವರು ಹುದ್ದೆೆ ಸೃಷ್ಟಿಿ ಸಾಧ್ಯವೇ ಇಲ್ಲ ಎಂದಾಗ, ಡಿಸಿಎಂ ಹುದ್ದೆೆಯಾಗುವ ತನಕ ಖಾತೆ ಹಂಚಿಕೆಯಿಲ್ಲವೆಂದು ಸುಮಾರು 20 ದಿನ ಖಾತೆ ಹಂಚಿಕೆ ಪ್ರಕ್ರಿಿಯೆಯನ್ನು ತಡೆ ಹಿಡಿದಿತ್ತು. ಇಷ್ಟೆೆಲ್ಲ ಪ್ರಹಸನದ ಬಳಿಕ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಹಾಗೂ ಅಶ್ವತ್ಥನಾರಾಯಣ ಅವರಿಗೆ ಡಿಸಿಎಂ ಹುದ್ದೆೆ ನೀಡಲಾಗಿದೆ. ಆದರೆ ಇದೀಗ ಮೂವರು ಡಿಸಿಎಂಗಳಿದ್ದರೂ, ಯಾರೊಬ್ಬರು ಯಡಿಯೂರಪ್ಪ ಅವರಿಗೆ ಸಹಾಯ ಮಾಡುವ ಮನಸ್ಥಿಿತಿಯಲ್ಲಿಲ್ಲ. ಈ ಮೂವರು ಮೂರು ದಿಕ್ಕಿಿನಲ್ಲಿ ಹೋಗುವ ಮೂಲಕ ಯಡಿಯೂರಪ್ಪ ಅವರಿಗೆ ಮತ್ತಷ್ಟು ತಲೆಬಿಸಿ ಹೆಚ್ಚಿಿಸಿದ್ದಾಾರೆ.

ಸಚಿವ ಸಂಪುಟ, ಡಿಸಿಎಂ ಹುದ್ದೆೆ ಸೃಷ್ಟಿಿಯಲ್ಲಿ ತಮ್ಮ ಮಾತು ನಡೆಯಲಿಲ್ಲ. ಕಡೇ ಪಕ್ಷದ ರಾಜ್ಯಾಾಧ್ಯಕ್ಷ ಹುದ್ದೆೆಗಾದರೂ ತಮ್ಮ ಕಡೆಯವರನ್ನು ನೇಮಿಸಬೇಕೆಂದು ಮನವಿ ಮಾಡಿದರು. ಆದರೆ ಈ ಮಾತು ಕಿವಿ ಮೇಲೆಯೂ ಹಾಕಿಕೊಳ್ಳದ ದೆಹಲಿ ನಾಯಕರು, ಸಂತೋಷ್ ಜಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಮಹತ್ತರ ಹುದ್ದೆೆ ನೀಡುವ ಮೂಲಕ ಮತ್ತಷ್ಟು ನಿರಾಶೆ ಮಾಡಿದೆ.

ಅಂದಹಾಗೇ ಇತ್ತೀಚಿನ ದಿನದಲ್ಲಿ ಯಡಿಯೂರಪ್ಪ ಅವರ ಹಿಡಿತ ರಾಜ್ಯ ಬಿಜೆಪಿಯಲ್ಲಿ ಕಡಿತವಾಗುತ್ತಿಿದ್ದಂತೆ, ಅಷ್ಟೇ ವೇಗದಲ್ಲಿ ಇಲ್ಲಿ ತಮ್ಮ ಅದಿಪತ್ಯವನ್ನು ಸ್ಥಾಾಪಿಸಿಕೊಳ್ಳಲು ಸಂತೋಷ್ ಓಡಾಡುತ್ತಿಿದ್ದಾಾರೆ. ಕೇಂದ್ರ ಬಿಜೆಪಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು, ರಾಜ್ಯದಲ್ಲಿ ತಮ್ಮ ಆಪ್ತರನ್ನು ಆಯಕಟ್ಟಿಿನ ಸ್ಥಳದಲ್ಲಿ ಕೂರಿಸಲು ತವಕಿಸುತ್ತಿಿದ್ದಾಾರೆ.

ರಾಜ್ಯ ಬಿಜೆಪಿ ಹಾಗೂ ಕೇಂದ್ರಕ್ಕೂ ಕೊಂಡಿಯ ಹಾಗೇ ಕಾರ್ಯನಿರ್ವಹಿಸುತ್ತಿಿರುವ ಬಿ.ಎಲ್ ಸಂತೋಷ್ ಅವರು ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ಮತ್ತಷ್ಟು ಹೆಚ್ಚಾಾಯಿತು ಎಂದರೆ ತಪ್ಪಾಾಗುವುದಿಲ್ಲ. ಕೆಜೆಪಿಯಿಂದ ಮಾತೃಪಕ್ಷಕ್ಕೆೆ ಯಡಿಯೂರಪ್ಪ ವಾಪಾಸಾದ ಕ್ಷಣದಿಂದ, ಬಿಜೆಪಿ ರಾಜಕೀಯ ಯಡಿಯೂರಪ್ಪ ಅವರ ಸುತ್ತಲೇ ಗಿರಕ್ಕಿಿ ಹೊಡೆಯುತ್ತಿಿದೆ ಎನ್ನುವಾಗ ಬಿ.ಎಲ್ ಸಂತೋಷ್‌ಗೆ ಸಿಕ್ಕ ಸ್ಥಾಾನ, ಯಡಿಯೂರಪ್ಪರನ್ನು ಒಂದು ಹಂತಕ್ಕೆೆ ಮೂಲೆಗುಂಪು ಮಾಡಿತು ಎಂದರೆ ತಪ್ಪಾಾಗಲಿಕ್ಕಿಿಲ್ಲ.

ಮೈತ್ರಿಿ ಸರಕಾರ ಪತನಗೊಂಡ ಬಳಿಕ ರಾಜ್ಯದ ಮುಖ್ಯಮಂತ್ರಿಿಯಾಗಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಿಿದ್ದಂತೆ, ಪಕ್ಷದಲ್ಲಿರುವ ‘ಒಬ್ಬ ವ್ಯಕ್ತಿಿ ಒಂದು ಹುದ್ದೆೆ’ ನಿಯಮದಂತೆ ಯಡಿಯೂರಪ್ಪ ಅವರಿಂದ ರಾಜ್ಯಾಾಧ್ಯಕ್ಷ ಸ್ಥಾಾನ ಕೈಜಾರುವುದು ಖಚಿತವಾಗುತ್ತಿಿದ್ದಂತೆ ಈ ಸ್ಥಾಾನಕ್ಕೆೆ ತಮ್ಮ ಆಪ್ತರನ್ನು ತರಬೇಕೆಂದು ಭಾರಿ ಪ್ರಯತ್ನ ಪಟ್ಟರು. ಆದರೆ ಸಂಘಟನಾ ಕಾರ್ಯದರ್ಶಿಯಾಗಿ ದೆಹಲಿಯಲ್ಲಿ ತಮ್ಮದೇಯಾದ ಪ್ರಭಾವ ಬೆಳೆಸಿಕೊಂಡಿರುವ ಸಂತೋಷ್ ಅವರು ಈ ಸ್ಥಾಾನಕ್ಕೆೆ ತಮ್ಮ ಆಪ್ತರನ್ನು ಕೂರಿಸುವ ಪ್ರಯತ್ನದಲ್ಲಿ ಸಫಲರಾದರು. ಅಧಿಕಾರ ಪಡೆಯುವ ವೇಳೆ, ಕಟೀಲ್ ಅವರು ಯಡಿಯೂರಪ್ಪ ಅವರ ‘ಪ್ರತಿ ಸಲಹೆಯನ್ನು ಶಿರಾಸಾವಹಿಸಿ ಪಾಲಿಸುವೆ’ ಎನ್ನುವ ಮಾತನ್ನು ಹೇಳಿದರೂ, ಅದು ಭಾಷಣಕ್ಕೆೆ ಮಾತ್ರ ಸೀಮಿತವಾದ ಹೇಳಿಕೆ ಎನ್ನುವುದು ಇಡೀ ಬಿಜೆಪಿಗೆ ಚೆನ್ನಾಾಗಿ ತಿಳಿದಿತ್ತು.

ಇದೀಗ ಸರಕಾರ ಹಾಗೂ ರಾಜ್ಯ ಬಿಜೆಪಿ ನಡುವಿನ ಸಮನ್ವಯ ಕೊರತೆ ಪ್ರತಿನಿತ್ಯ ಕಾಣುತ್ತಿಿದೆ. ಕಟೀಲ್ ಆಯ್ಕೆೆಯಾದ ಬಳಿಕ ಮೊದಲಿಗೆ ಎದುರಾದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಎಂದಿನಂತೆ, ತಮ್ಮ ನೇತೃತ್ವದಲ್ಲಿ ಬೆಂಗಳೂರು ಶಾಸಕರ ಸಭೆ ನಡೆಸಿ, ರಘು ಅವರ ಅಧ್ಯಕ್ಷತೆಯಲ್ಲಿ ಮೇಯರ್ ಆಯ್ಕೆೆ ಸಮಿತಿಯನ್ನು ರಚಿಸಿದ್ದರು. ಆಯ್ಕೆೆ ಸಮಿತಿ ರಚನೆಯಾಗಿರುವ ಬಗ್ಗೆೆ ಮಾಧ್ಯಮಗಳಲ್ಲಿ ಬಿತ್ತರವಾದ ಕೆಲವೇ ಗಂಟೆಯಲ್ಲಿ ಇದೇ ವಿಚಾರವಾಗಿ ರಾಜ್ಯಾಾಧ್ಯಕ್ಷರು ಪತ್ರಿಿಕಾ ಪ್ರಕಟಣೆ ಹೊರಡಿಸಿ, ಮೇಯರ್ ಆಯ್ಕೆೆಗೆ ಸಂಬಂಧಿಸಿದಂತೆ ಬಿಜೆಪಿ ಯಾವುದೇ ಸಮಿತಿಯನ್ನು ರಚಿಸಿಲ್ಲ. ಒಂದು ವೇಳೆ ಈ ರೀತಿಯ ಸಮಿತಿ ರಚನೆಯಾಗಿದ್ದರೂ, ಅದನ್ನು ಕೂಡಲೇ ‘ಬರ್ಖಾಸ್ತು’ ಮಾಡಲು ಅದೇಶಿಸುವುದಾಗಿ ಹೇಳಿದರು. ಕಟೀಲ್ ಅವರ ಈ ನಡೆ ಯಡಿಯೂರಪ್ಪ ಹಾಗೂ ಅವರ ಆಪ್ತರಿಗೆ ತೀವ್ರ ಮುಜುಗರ ಉಂಟುಮಾಡಿದರೂ, ತಮ್ಮ ಆಕ್ರೋೋಶ ಹೊರಹಾಕದ ಸನ್ನಿಿವೇಶ ನಿರ್ಮಾಣವಾಗಿದ್ದರಿಂದ ಮೌನಕ್ಕೆೆ ಶರಣಾದರು.

ಕಳೆದ ವಾರವಷ್ಟೇ ವೈರಲ್ ಆಗಿರುವ ಯಡಿಯೂರಪ್ಪ ಅವರ ಆಡಿಯೊ ಪ್ರಕರಣದಲ್ಲಿ ಇಡೀ ಕಾಂಗ್ರೆೆಸ್ ಮುಖ್ಯಮಂತ್ರಿಿಗಳ ವಿರುದ್ಧ ಮುಗಿಬಿದ್ದು, ರಾಜ್ಯಪಾಲರಿಗೆ ದೂರು ಸಲ್ಲಿಸಿದರು. ಅನರ್ಹರ ವಿಚಾರಕ್ಕೆೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ಮಾತುಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಾಕ್ಷ್ಯ ಮಾಡಿದರು. ಇಷ್ಟೆೆಲ್ಲ ರದ್ಧಾಾಂತ ನಡೆದರೂ, ಬಿಜೆಪಿ ರಾಜ್ಯಾಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಯಾವೊಬ್ಬ ನಾಯಕರು ಯಡಿಯೂರಪ್ಪ ಅವರ ಬೆಂಬಲಕ್ಕೆೆ ನಿಲ್ಲಲಿಲ್ಲ. ಅಂತಿಮವಾಗಿ ಪಕ್ಷದ ವರಿಷ್ಠರೇ ಯಡಿಯೂರಪ್ಪ ಅವರ ಬೆಂಬಲಕ್ಕೆೆ ನಿಲ್ಲಬೇಕೆಂದು ಸೂಚನೆ ನೀಡಿದ್ದರಿಂದ, ಕಟೀಲ್ ಅವರು ಒಂದು ಪತ್ರಿಿಕಾ ಪ್ರಕಟಣೆ ಹೊರಡಿಸಿ ತಮ್ಮ ಕೆಲಸವಾಯಿತು ಎಂದು ಸುಮ್ಮನಾದರು.

ಯಡಿಯೂರಪ್ಪ ಅವರನ್ನು ಈ ರೀತಿ ಇಕ್ಕಟ್ಟಿಿಗೆ ಸಿಲುಕಿಸುವ ಕೆಲಸವಾಗುತ್ತಿಿರುವುದು ಪಕ್ಷದಲ್ಲಿ ಹೊಸದಾಗಿ ಬೆಳೆಯುತ್ತಿಿರುವ ಇನ್ನೊೊಂದು ಗುಂಪಿನಿಂದ ಎನ್ನುವುದು ನಗ್ನಸತ್ಯ. ಸಂತೋಷ್ ಜಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ ನಾಯಕರು ಈ ರೀತಿ ಅಸಹಕಾರ ನೀಡುತ್ತಿಿದ್ದಾಾರೆ ಎಂದು ಸ್ವತಃ ಯಡಿಯೂರಪ್ಪ ಅವರಿಗೂ ಗೊತ್ತಿಿದೆ. ಅವರಿಗೆ ಟಕ್ಕರ್ ನೀಡಲು ಯಡಿಯೂರಪ್ಪ ಅವರು ಸಿದ್ಧವಿದ್ದರೂ, ಅವರಿಗೆ ಈ ಹಿಂದೆ ಇದ್ದ ಆಪ್ತರ ಬಲ ಇದೀಗ ಉಳಿದಿಲ್ಲ. ಕಳೆದೊಂದು ದಶಕದ ಹಿಂದೆ ರಾಜ್ಯ ಬಿಜೆಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಾಜೆ, ಮುರುಗೇಶ್ ನಿರಾಣಿ ಸೇರಿದಂತೆ ಅನೇಕ ಯಡಿಯೂರಪ್ಪ ಆಪ್ತ ನಾಯಕರು ಆಯಕಟ್ಟಿಿನ ಸ್ಥಳದಲ್ಲಿದ್ದರು. ಆದರೀಗ ಈ ಎಲ್ಲ ಪ್ರಮುಖರು ಕೇವಲ ತಮ್ಮ ಕ್ಷೇತ್ರಕ್ಕೆೆ ಸೀಮಿತವಾಗಿದ್ದಾಾರೆ.

‘ಯಡಿಯೂರಪ್ಪ ಗುಡುಗಿದರೆ, ವಿಧಾನಸೌಧ ನಡಗುವುದು’ ಎನ್ನುವ ಮಾತು ಇಂದಿನ ದಿನಮಾನದಲ್ಲಿ ಕಾಣೆಯಾಗುವುದರೊಂದಿಗೆ, ಅವರ ಆಪ್ತರಿಗೆ ಯಾವುದೇ ಪ್ರಮುಖ ಹುದ್ದೆೆ ನೀಡದೇ ಹೈಕಮಾಂಡ್ ಕಡೆಗಣಿಸುತ್ತಿಿದ್ದಂತೆ ಯಡಿಯೂರಪ್ಪ ಸುತ್ತ ನಿರ್ಮಿಸಿಕೊಂಡಿದ್ದ ಪ್ರಭಾವವೂ ಕಳೆಗುಂದುತ್ತಾಾ ಸಾಗಿದೆ. ಇಡೀ ಪಕ್ಷದ ಜವಾಬ್ದಾಾರಿ ಹೊತ್ತು ಸ್ಟಾಾರ್ ನಾಯಕನಾಗಿದ್ದ ಬಿಎಸ್‌ವೈ ರಾಜ್ಯದ ನಾಡದೊರೆಯಾಗಿದ್ದರೂ, ಏನು ಮಾಡಲಾಗದ ಪರಿಸ್ಥಿಿತಿ ನಿರ್ಮಾಣಗೊಂಡು ಏಕಾಂಗಿಯಾಗಿದ್ದಾಾರೆ ಎನ್ನುವುದು ಬಿಡಿಸಿ ಹೇಳಬೇಕಿಲ್ಲ.

error: Content is protected !!