Thursday, 7th December 2023

ಅಪ್ಪು ಡ್ರೀಮ್ ಪ್ರಾಜೆಕ್ಟ್ ‘ಗಂಧದಗುಡಿ’ ಟೀಸರ್ ಬಿಡುಗಡೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿರುವ ‘ಗಂಧದಗುಡಿ’ ಟೀಸರ್ ಬಿಡುಗಡೆ ಯಾಗಿದೆ.

ಸಿನಿಮಾ ಅನುಭವ ನಿಮ್ಮ ಮುಂದೆ ಪಿ.ಆರ್.ಕೆ. ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ಗಂಧದಗುಡಿ’ ಹೆಸರಿನ ಡಾಕ್ಯುಮೆಂಟರಿ ಕನ್ನಡ ರಾಜ್ಯೋತ್ಸವದ ದಿನ ನವೆಂಬರ್ 1 ರಂದು ಬಿಡುಗಡೆಯಾಗಬೇಕಿತ್ತು. ಅದು ಅಪ್ಪು ಕನಸು ಕೂಡ ಆಗಿತ್ತು. ಆದರೆ, ಅ.29 ರಂದು ಅಕಾಲಿಕವಾಗಿ ಅಪ್ಪು ಅಗಲಿದ್ದಾರೆ. ಅವರ ಕನಸನ್ನು ನನಸು ಮಾಡಲು ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಗಿದ್ದಾರೆ.

ಟೀಸರ್ ನಲ್ಲಿ ಡಾ. ರಾಜಕುಮಾರ್ ಅವರು ‘ಗಂಧದ ಗುಡಿ’ ಚಿತ್ರದಲ್ಲಿ ಹೇಳುವ ‘ನಿನ್ನ ಕೈಮುಗಿದು ಕೇಳ್ಕೋತಿನಿ ಗಂಧದಗುಡಿ ಉಳಿಸು’ ಎನ್ನುವ ಡೈಲಾಗ್ ಇದೆ. ರಾಜ್ಯದ ಅರಣ್ಯ, ಸಮುದ್ರ, ಜಲಪಾತ ಸೇರಿ ಅಪರೂಪದ ದೃಶ್ಯಗಳು ಕುತೂಹಲಕಾರಿಯಾಗಿ ಮೂಡಿಬಂದಿವೆ.

error: Content is protected !!